40 ವರ್ಷದ ನಂತರ ಗರ್ಭ ಧರಿಸೋದಾದ್ರೆ ಈ ವಿಚಾರಗಳು ಗೊತ್ತಿರಲಿ!

ಇತ್ತೀಚಿನ ಜೀವನ ಶೈಲಿಯಿಂದಾಗಿ ಮಹಿಳೆಯರು ಗರ್ಭ ಧರಿಸೋದು ಕಷ್ಟವಾಗ್ತಿದೆ. ಹೀಗಾಗಿ 30 ವರ್ಷದೊಳಗಡೆ ಗರ್ಭ ಧರಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ. ಆದರೆ ಇತ್ತೀಚಿಗೆ ಮಹಿಳೆಯರು ತಮ್ಮ ವೃತ್ತಿ ಜೀವನದ ಬಗ್ಗೆ ಹೆಚ್ಚಿನ ಕಾಳಜಿ ಮಾಡ್ತಿರೋದ್ರಿಂದ ತಡವಾಗಿ ಗರ್ಭ ಧರಿಸುತ್ತಿದ್ದಾರೆ.

ಅದ್ರಲ್ಲೂ ಸೆಲೆಬ್ರಿಟಿಗಳು 40 ವರ್ಷದ ನಂತರ ಗರ್ಭ ಧರಿಸುತ್ತಿದ್ದಾರೆ. ಸಾಮಾನ್ಯ ಜನರು ಕೂಡ ಇದನ್ನೇ ಫಾಲೋ ಮಾಡ್ತಿದ್ದಾರೆ. ಇದ್ರಿಂದ ಯಾವ ರೀತಿಯ ಸಮಸ್ಯೆ ಎದುರಾಗುತ್ತೆ? ಈ ರೀತಿಯ ಗರ್ಭಧಾರಣೆ ಸುರಕ್ಷಿತನಾ? ಮಗು ಹಾಗೂ ತಾಯಿಯ ಆರೋಗ್ಯದ ಮೇಲೆ ಏನಾದರೂ ಪರಿಣಾಮ ಬೀಳುತ್ತಾ ಅನ್ನೋದನ್ನು ತಿಳಿಯೋಣ.

Having a Baby at 40: Explore the Benefits, Risks and Common Things to Expect in Kannada

ಯಾವ ವಯಸ್ಸಿನಲ್ಲಿ ಗರ್ಭ ಧರಿಸಿದರೆ ಉತ್ತಮ?

ತಜ್ಞರ ಪ್ರಕಾರ 20 ರಿಂದ 30 ವಯಸ್ಸಿನ ಒಳಗಡೆ ಗರ್ಭ ಧರಿಸಿದರೆ ಉತ್ತಮ. ಈ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿದ್ರೆ ಮಕ್ಕಳು ಆರೋಗ್ಯಕರವಾಗಿ ಇರುತ್ತಾರಂತೆ. 30 ರ ನಂತರ ಗರ್ಭ ಧರಿಸುವುದು ತುಂಬಾನೇ ಕಷ್ಟ. ಮಹಿಳೆಯರಲ್ಲಿ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.

ಎರಡು ಗರ್ಭಧಾರಣೆಯ ನಡುವೆ ಎಷ್ಟು ತಿಂಗಳ ಅಂತರವಿರಬೇಕು?

ಇನ್ನೂ ಕೆಲವರು ಮೊದಲನೇ ಗರ್ಭಧಾರಣೆಯ ನಂತರ ಹೆಚ್ಚಿನ ಅಂತರ ಕೊಟ್ಟು ಎರಡನೇ ಗರ್ಭ ಧಾರಣೆಗೆ ಸಿದ್ಧವಾಗುತ್ತಾರೆ. ಈ ರೀತಿ ಮಾಡುವುದು ತಪ್ಪು. ಹಾಗಂತ ಮೊದಲ ಗರ್ಭಧಾರಣೆಯಿಂದ ಚೇತರಿಸಿಕೊಳ್ಳದ ಹೊರತು ಎರಡನೇ ಗರ್ಭಧಾರಣೆಗೆ ಸಿದ್ಧವಾಗಬಾರದು. ಎರಡು ಗರ್ಭಧಾರಣೆಯ ನಡುವೆ 18-23 ತಿಂಗಳ ಅಂತರ ಇರಲೇಬೇಕು. ಯಾಕಂದ್ರೆ ಮೊದಲ ಗರ್ಭಧಾರಣೆಯಿಂದ ಚೇತರಿಸಿಕೊಂಡು. ಮತ್ತೊಂದು ಗರ್ಭಧಾರಣೆಗೆ ಮರುಪೂರಣಗೊಳ್ಳಲು ತಾಯಿಗೆ ಸಾಕಷ್ಟು ಸಮಯ ಬೇಕಾಗುತ್ತದೆ.

ವಯಸ್ಸು ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತಾ?

ಹೆಣ್ಣು ಮಕ್ಕಳು ಜನಿಸುವ ಸಂದರ್ಭದಲ್ಲಿ ಅವರ ಅಂಡಾಶಯದಲ್ಲಿ ಸೀಮಿತ ಪ್ರಮಾಣದ ಅಂಡಾಣುಗಳು ಮಾತ್ರ ಬಿಡುಗಡೆಯಾಗುತ್ತದೆ. ಅದು ಫ್ರಾಢಾವಸ್ಥೆಗೆ ಬರುವಷ್ಟು ಹೊತ್ತಿಗೆ 3,00,000 ಲಕ್ಷ ಅಂಡಾಣುಗಳು ಮಾತ್ರ ಬಿಡುಗಡೆಯಾಗುತ್ತದೆ. ಅಂಡಾಣುಗಳ ಸಂಖ್ಯೆ ನಮಗೆ ವಯಸ್ಸಾದಂತೆ ಕಡಿಮೆಯಾಗುತ್ತಾ ಸಾಗುತ್ತದೆ. 35 ವರ್ಷ ವಯಸ್ಸಿನ ನಂತರ ಗರ್ಭಧರಿಸುವ ಸಾಧ್ಯತೆಗಳು ತುಲನಾತ್ಮಕವಾಗಿ ಕಡಿಮೆಯಾಗುತ್ತವೆ.

35 ವರ್ಷ ವಯಸ್ಸಿನ ನಂತರ, ಗರ್ಭಧರಿಸುವ ಸಾಧ್ಯತೆಗಳು ತುಲನಾತ್ಮಕವಾಗಿ ಕಡಿಮೆಯಾಗುತ್ತವೆ. ಮತ್ತು ತಡವಾದ ಗರ್ಭಧಾರಣೆಯು ಗರ್ಭಧಾರಣೆಗೆ ಸಂಬಂಧಿತ ತೊಡಕುಗಳ ಅಪಾಯವನ್ನು ಉಂಟುಮಾಡುತ್ತದೆ. ವಯಸ್ಸಾದ ನಂತರ ಗರ್ಭಿಣಿಯಾಗಲು ಬಯಸುವ ಮಹಿಳೆಯರು ವೈದ್ಯರನ್ನು ಸಂಪರ್ಕಿಸಬೇಕು. ಒಂದು ವೇಳೆ ಆಗಲೂ ಗರ್ಭ ಧರಿಸೋದು ಕಷ್ಟ ಎಂದಾದರೆ IVF ಅಥವಾ ಬಾಡಿಗೆ ತಾಯ್ತನದಂತಹ ವಿಧಾನಗಳಿಂದ ಮಕ್ಕಳನ್ನು ಪಡೆಯಬಹುದು.

ತಡವಾಗಿ ಗರ್ಭ ಧರಿಸೋದ್ರಿಂದ ಆಗುವ ಅಪಾಯಗಳೇನು?

ತಡವಾಗಿ ಗರ್ಭ ಧರಿಸೋದ್ರಿಂದ ಗರ್ಭಪಾತದ ಅಪಾಯವನ್ನು ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಜನಿಸಿದ ಶಿಶುಗಳಲ್ಲಿ ಕೂಡ ಕೆಲವೊಂದು ಸಮಸ್ಯೆಗಳು ಕಂಡು ಬರುತ್ತದೆ. ಮಕ್ಕಳು ಅವಧಿಗೂ ಮೊದಲು ಹುಟ್ಟುವುದು ಅಥವಾ ಮಕ್ಕಳು ಕಡಿಮೆ ತೂಕ ಹೊಂದಿರುತ್ತಾರೆ. ಇನ್ನೂ ತಾಯಿಯಲ್ಲಿಯೂ ಕೂಡ ಗರ್ಭಧಾರಣೆಯ ಸಮಯದಲ್ಲಿ ಕೆಲವೊಂದು ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

40 ವರ್ಷ ವಯಸ್ಸಿನಲ್ಲಿ ಸುರಕ್ಷಿತವಾಗಿ ಗರ್ಭ ಧರಿಸೋದು ಹೇಗೆ?

40 ವರ್ಷದ ನಂತರ ಗರ್ಭ ಧರಿಸೋದ್ರಿಂದ ಕೆಲವೊಂದು ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಆದರೂ ಕೂಡ ಆರೋಗ್ಯಕರ ಮಗುವನ್ನು ಹೊಂದುವ ಸಾಧ್ಯತೆ ಹೆಚ್ಚಿದೆ. ನೀವು ಆದಷ್ಟು ಜಾಗರೂಕರಾಗಿರಬೇಕು. ಹಾಗೂ ಆಗಾಗ್ಗೆ ವೈದ್ಯರ ಸಲಹೆಯನ್ನು ಪಡೆಯುತ್ತಿರಬೇಕು.

ಒಂದು ವೇಳೆ ನೀವು ಗರ್ಭಿಣಿಯಾಗೋದಕ್ಕೆ ಪ್ರಯತ್ನಿಸುತ್ತಿದ್ದರೂ ಕೂಡ ಅದು ಸಾಧ್ಯವಾಗದಿದ್ದರೆ ವೈದ್ಯರ ಬಳಿ ಫಲವತ್ತತೆಯ ಪರೀಕ್ಷೇ ಮಾಡುವುದು. ತಜ್ಞರ ಪ್ರಕಾರ ಒಂದು ವೇಳೆ ನಿಮಗೆ 45 ವರ್ಷಗಳು ದಾಟಿದ್ದರೆ ನೈಸರ್ಗಿಕವಾಗಿ ಗರ್ಭಿಣಿಯಾಗಲು ಸಾಧ್ಯವಿಲ್ಲ.

ಇದು ನೈಸರ್ಗಿಕ ಗರ್ಭಧಾರಣೆಗಿಂತ ಭಿನ್ನ ಹೇಗೆ?

40 ವರ್ಷದ ನಂತರ ಗರ್ಭ ಧರಿಸೋದು ಸವಾಲಿನ ಸಂಗತಿಯೇ ಸರಿ. ಈ ಸಂದರ್ಭದಲ್ಲಿ ಗರ್ಭ ಧರಿಸಿದಾಗ ಅನೇಕ ಸಮಸ್ಯೆ ಎದುರಾಗುತ್ತದೆ. ಅದು ದೈಹಿಕ ಹಾಗೂ ಮಾನಸಿಕವಾಗಿಯೂ ಇರಬಹುದು. ವಯಸ್ಸಾದಂತೆ ಸ್ನಾಯುವಿನ ದ್ರವ್ಯರಾಶಿಯ ನಷ್ಟದಿಂದಾಗಿ ನೀವು ಕೀಲುಗಳಲ್ಲಿ ಹೆಚ್ಚು ನೋವು ಕಾಣಿಸಿಕೊಳ್ಳುತ್ತದೆ. ನಿಮ್ಮಲ್ಲಿ ಅಧಿಕ ರಕ್ತದೊತ್ತಡ ಹಾಗೂ ಮಧುಮೇಹ ಸಮಸ್ಯೆ ಕಾಣಿಸಿಕೊಳ್ಳಬಹುದು.

ಯಾವ ವಯಸ್ಸಿನಲ್ಲಿ ಗರ್ಭ ಧರಿಸಿದರೂ ಕೂಡ ನಿಮ್ಮ ಹಾಗೂ ಹೊಟ್ಟೆಯಲ್ಲಿರುವ ಮಗುವಿನ ಕಾಳಜಿ ಮಾಡುವುದು ತುಂಬಾನೇ ಮುಖ್ಯವಾಗುತ್ತದೆ. ನಾವು ಎಷ್ಟು ಕಾಳಜಿ ತೆಗೆದುಕೊಳ್ಳುತ್ತೇವೆ ಅನ್ನೋದ್ರ ಮೇಲೆ ಎಲ್ಲವೂ ನಿರ್ಧಾರವಾಗುರುತ್ತದೆ.

English summary

Having a Baby at 40: Explore the Benefits, Risks and Common Things to Expect in Kannada

Having a Baby at 40: Explore the Benefits, Risks and Common Things to Expect. Read more.
Story first published: Wednesday, July 12, 2023, 15:47 [IST]
X
Desktop Bottom Promotion