ಮಕ್ಕಳಲ್ಲಿ ಮಾಂಸ ಖಂಡ ಬೆಳವಣಿಗೆಗೆ ಈ 5 ಫುಡ್ ನೀಡಿ..! ಯಾವುದೆಲ್ಲಾ ನೋಡಿ..!

ಮಕ್ಕಳು ಒಂದಷ್ಟು ವರ್ಷ ಬೆಳೆಯುವವರೆಗೂ ಅವರ ಆರೋಗ್ಯದ ಮೇಲೆ ಸಿಕ್ಕಾಪಟ್ಟೆ ಕಾಳಜಿ ವಹಿಸಬೇಕು. ಏಕೆಂದರೆ ಮಕ್ಕಳು 5ರಿಂದ 6 ವರ್ಷ ಬೆಳೆಯುವವರೆಗೂ ಬಹಳ ಕಷ್ಟಪಟ್ಟು ಸಾಕಬೇಕಾಗುತ್ತದೆ. ಅಲ್ಲಿಯವರೆಗೆ ಅವರ ಆಹಾರದ ಮೇಲೆ, ಆವರ ಆರೋಗ್ಯದ ಮೇಲೆ ನಿಗಾ ಇಡಬೇಕಾಗುತ್ತದೆ. ಈ ಸಮಯದಲ್ಲಿ ಆರೈಕೆಯಲ್ಲಿ ಕೊರತೆಯಾದರೆ ಅಥವಾ ನ್ಯೂನತೆ ಕಂಡುಬಂದರೆ ಭವಿಷ್ಯದಲ್ಲಿ ಸಮಸ್ಯೆ ಕಂಡುಬರುತ್ತದೆ.

ಅದರಲ್ಲೂ ಮಕ್ಕಳ ಆಹಾರ ಹಾಗೂ ಆರೋಗ್ಯದ ಕಡೆ ಬಹಳ ಜಾಗರೂಕರಾಗಿರಬೇಕಾಗುತ್ತದೆ. ಎಷ್ಟು ಪೌಷ್ಟಿಕ ಆಹಾರ ನೀಡಬೇಕು. ವಿಟಮಿನ್ ನೀಡಬೇಕು, ಚುಚ್ಚು ಮದ್ದು ನೀಡಬೇಕು ಎಂಬುದು ಮುಖ್ಯವಾಗುತ್ತದೆ. ಇನ್ನು ಮಕ್ಕಳ ಪಾಲನೆ ಪೋಷಣೆಯಲ್ಲಿ ಅವರು ಸೇವಿಸುವ ಆಹಾರ ಬಹಳ ಮುಖ್ಯ. ಇತ್ತೀಚಿಗೆ ಪೋಷಕರು ಮಕ್ಕಳೂ ಊಟ ಮಾಡಲ್ಲ ಎಂಬ ದೂರು ಹೇಳುವುದು ಸಾಮಾನ್ಯವಾಗಿದೆ.

Give These 5 Foods For Muscle Gowth In Children

ಹೀಗಾಗಿ ಮಕ್ಕಳು ಕಡಿಮೆ ತೂಕ ಹೊಂದಿರುವುದು, ಮಾಂಸ ಖಂಡ ಬೆಳವಣಿಗೆಯಾಗದೆ ಇರುವುದು, ಮೂಳೆಗಳ ಬೆಳವಣಿಗೆಯಾಗದೆ ಇರುವುದು ನೋಡಬಹುದು. ಆದ್ರೆ ಇದಕ್ಕೆ ಮನೆಯಲ್ಲಿ ಸುಲಭವಾದ ಪರಿಹಾರವಂತೂ ಇದೆ. ಮಕ್ಕಳು ಅಗತ್ಯ ವಯಸ್ಸಿನಲ್ಲಿ ತೂಕ ಬೆಳವಣಿಗೆಯಾಗದೆ ತೆಳುವಾದ ದೇಹ ಅಥವಾ ಕಡಿಮೆ ತೂಕ ಹೊಂದಿದ್ದರೆ ಅನಾರೋಗ್ಯ ಸಮಸ್ಯೆಗಳು ಕಂಡುಬರುತ್ತದೆ.

ಮಾಂಸ ಖಂಡಗಳ ಬೆಳವಣಿಗೆ ಆಗದಿದ್ದರೆ ಆಟ, ಪಾಠ, ಓಡಾಟ ಇದೆಲ್ಲವೂ ಅವರಿಗೆ ಕಷ್ಟವಾಗಲು ಆರಂಭವಾಗುತ್ತದೆ. ವಯಸ್ಸಿಗೆ ತಕ್ಕಂತೆ ಅವರ ತೂಕ ಹಾಗೂ ಮಾಂಸ ಖಂಡಗಳ ಬೆಳವಣಿಗೆಯೂ ಆಗಬೇಕಿರುತ್ತದೆ. ಹೀಗಾಗಿ ಮಕ್ಕಳಲ್ಲಿ ಮಾಂಸ ಖಂಡ ಬೆಳವಣಿಗೆಗೆ ಏನು ಮಾಡಬೇಕು? ಪೋಷಕರು ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ದ್ವಿದಳ ಧಾನ್ಯಗಳು

ಮಕ್ಕಳ ಆಹಾರ ಕ್ರಮದಲ್ಲಿ ಅವರಿಗೆ ದ್ವಿದಳ ಧಾನ್ಯಗಳ ನೀಡಬೇಕಾಗುತ್ತದೆ. ಅಂದರೆ ಬೇಳೆ ಕಾಳುಗಳು ಅವರು ಸೇವಿಸುವ ಆಹಾರದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಈ ಕಾಳುಗಳಲ್ಲಿ ಪ್ರೋಟೀನ್ ಅಂಶ ಇರುವುದರಿಂದ ದೇಹಕ್ಕೆ ಬಹಳ ಉತ್ತಮವಾಗುತ್ತದೆ. ಇದರಿಂದ ಅವರಲ್ಲಿ ರೋಗ ನಿರೋಧಕ ಶಕ್ತಿ ಸಹ ವೃದ್ಧಿಯಾಗುತ್ತದೆ.

ಡೈರಿ ಪ್ರೋಡಕ್ಟ್‌

ಮಕ್ಕಳ ಆಹಾರ ಕ್ರಮದಲ್ಲಿ ನಿತ್ಯವು ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಸೇರಿಸಿ. ಅಂದರೆ ಹಾಲು, ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ಸೇರಿ ಹಲವು ಉತ್ಪನ್ನಗಳ ಸೇರಿಸುವುದು ಉತ್ತಮ. ಇದು ಅವರ ಮೂಳೆಗಳ ಬೆಳವಣಿಗೆಗೆ ಬಹಳ ಉಪಕಾರಿಯಾಗಲಿದೆ. ಆದರೆ ಹೆಚ್ಚು ಹಾಲಿನ ಉತ್ಪನ್ನವನ್ನ ನೀಡದೆ ನಿಯಮಿತವಾಗಿ ನೀಡಬೇಕಾಗುತ್ತದೆ.

ಡ್ರೈ ಫ್ರೂಟ್ಸ್‌

ಮಕ್ಕಳಲ್ಲಿ ಮಾಂಸ ಖಂಡ ಬೆಳವಣಿಗೆಯಾಗಬೇಕಾದರೆ ನಿಯಮಿತವಾಗಿ ಡ್ರೈ ಫ್ರೂಟ್ಸ್‌ ನೀಡುವುದು ಬಹಳ ಉತ್ತಮ. ಏಕೆಂದರೆ ಆಹಾರದಿಂದ ಯಾವುದಾದರು ಪೋಷಕಾಂಶ ಅಥವಾ ವಿಟಮಿನ್ ಕೊರತೆ ಉಂಟಾಗುತ್ತಿದ್ದರೆ ಡ್ರೈ ಫ್ರೂಟ್ಸ್‌ ಸವಿಯುವುದರಿಂದ ಈ ಕೊರತೆ ನಿವಾರಣೆಯಾಗಲಿದೆ. ಇದರಲ್ಲಿ ಒಮೆಗಾ 3 ಫ್ಯಾಟ್ಸ್ ಇರುವ ಕಾರಣ ಮಕ್ಕಳ ಮಾಂಸ ಖಂಡ ಬೆಳವಣಿಗೆಗೆ ಸಹಕಾರಿಯಾಗಲಿದೆ.

ಹಣ್ಣು ಮತ್ತು ತರಕಾರಿ

ಮಕ್ಕಳ ಊಟದಲ್ಲಿ ಯಾವಾಗಲು ಮೊಸರು ಅಥವಾ ಮಜ್ಜಿಗೆ ಬಳಸುವುದನ್ನು ನಾವು ನೋಡಿದ್ದೇವೆ. ಆದ್ರೆ ಮಕ್ಕಳಿಗೆ ಹಣ್ಣು ಮತ್ತು ತರಕಾರಿಯನ್ನು ನಿಯಮಿತವಾಗಿ ನೀಡಬೇಕಾಗುತ್ತದೆ. ಊಟ ಬಳಿಕ ಇಲ್ಲವೆ ಮನೆಯಲ್ಲಿ ಯಾವುದಾದರು ಹಣ್ಣು ನೀಡುತ್ತಾ ಇರಬೇಕು. ಸೇಬು, ಕಿವಿ, ಬಾಳೆಹಣ್ಣು, ಪಪ್ಪಾಯ ಹೀಗೆ ಕೆಲವು ಹಣ್ಣುಗಳ ನೀಡುವುದು, ಸೊಪ್ಪಿನ ತರಕಾರಿಯನ್ನು ಹೆಚ್ಚಾಗಿ ಬಳಸುವುದು ಉತ್ತಮ.

ಮಾಂಸ ಮತ್ತು ಮೀನು

ಕೆಲವರು ಮಕ್ಕಳು ದೊಡ್ಡವರಾಗುವವರೆಗೂ ಮಾಂಸ ಹಾಗೂ ಮೀನನ್ನು ನೀಡುವುದಿಲ್ಲ. ಅವರಿಗೆ ಜೀರ್ಣಕ್ರಿಯೆಗೆ ಸಮಸ್ಯೆಯಾಗಲಿದೆ ಎಂಬುದು ಒಂದು ಕಾರಣವಾದರೆ ಕೆಲವರಲ್ಲಿ ಮಕ್ಕಳಿಗೆ ಮಾಂಸ ನೀಡುವುದೇ ಅಪರಾಧ ಎನ್ನುವಂತೆ ನೋಡುತ್ತಾರೆ. ಆದ್ರೆ ಮಕ್ಕಳಿಗೆ ನಿಯಮಿತವಾಗಿ ಮಾಂಸ, ಮೀನು, ಮೊಟ್ಟೆ ನೀಡುತ್ತಾ ಇರಬೇಕು. ಇದು ಮಾಂಸ ಖಂಡ ಬೆಳವಣಿಗೆಯಲ್ಲಿ ಸಹಕಾರಿಯಾಗಲಿದೆ.

English summary

Give These 5 Foods For Muscle Gowth In Children

If the muscles do not develop, playing, studying, running will become difficult for them. Their weight and muscle mass should also grow with age.
Story first published: Tuesday, September 10, 2024, 17:40 [IST]
X
Desktop Bottom Promotion