Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಚಳಿಗಾಲದಲ್ಲಿಯೇ ಮಕ್ಕಳಲ್ಲಿ ಕಂಡು ಬರುತ್ತಿದೆ ಗ್ಯಾಸ್ಟ್ರೋಎಂಟರೈಟಿಸ್, ಈ ಬಗ್ಗೆ ಮಕ್ಕಳ ತಜ್ಞರು ನೀಡಿರುವ ಸಲಹೆಯೇನು?
ಗ್ಯಾಸ್ಟ್ರೋಎಂಟರೈಟಿಸ್ ಎಂಬುವುದು ಮಕ್ಕಳಲ್ಲಿ ಬೇಸಿಗೆಯ ಕಾಲದಲ್ಲಿ ಕಂಡು ಬರುವುದು ಸಹಜ, ಆದರೆ ಇದೀಗ ಈ ನವೆಂಬರ್ -ಡಿಸೆಂಬರ್ ತಿಂಗಳಿನಲ್ಲಿ ಅಂದರೆ ಚಳಿಗಾಲದಲ್ಲಿ ಕಂಡು ಬರುತ್ತಿದೆ. ಇದೊಂದು ಅಚ್ಚರಿಯ ವಿಷಯ ಎಂಬುವುದಾಗಿ ಮಕ್ಕಳ ತಜ್ಞರು ಹೇಳುತ್ತಾರೆ. ಮಕ್ಕಳಲ್ಲಿ ಈ ಸಮಸ್ಯೆ ಕಂಡು ಬರುತ್ತರುವುದರಿಂದ ಪೋಷಕರು ಈ ಬಗ್ಗೆ ಹೆಚ್ಚು ಜಾಗ್ರತೆವಹಿಸಬೇಕು ಅಂತಾರೆ
ಬೆಂಗಳೂರಿನ ವಾಸವಿ ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ. ಡಾ.ಅಶೋಕ್ ಎಂ.ವಿ.

ಏನಿದು ಗ್ಯಾಸ್ಟ್ರೋಎಂಟರೈಟಿಸ್?
ಗ್ಯಾಸ್ಟ್ರೋಎಂಟರೈಟಿಸ್ ಎಂದರೆ ಇದು ಜಠರ ಕರುಳಿನ ಕಾಯಿಲೆಯಾಗಿದೆ, ಈ ಕಾಯಿಲೆ ಸಾಮಾನ್ಯವಾಗಿ ಬೇಸಿಗೆಯಲ್ಲಿ ಕಂಡು ಬರ್ತಾ ಇತ್ತು, ಆದರೆ ಚಳಿಗಾಲದಲ್ಲಿಯೇ ಮಕ್ಕಳಲ್ಲಿ ಈ ರೋಗ ಲಕ್ಷಣ ಕಂಡು ಬಂದು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.ಗ್ಯಾಸ್ಟ್ರೋಎಂಟರೈಟಿಸ್ ಉಂಟಾದರೆ ಮಕ್ಕಳು ಹೊಟ್ಟೆ ನೋವು ಎಂದು ಹೇಳುತ್ತಾರೆ. ಬೇಧಿ, ವಾಂತಿ ಕೂಡ ಉಂಟಾಗುವುದು.
ಗ್ಯಾಸ್ಟ್ರೋಎಂಟರೈಟಿಸ್ ಲಕ್ಷಣಗಳು
ಕೈ, ಕಾಲುಗಳು, ಬಾಯಲ್ಲಿ ದದ್ದುಗಳು ಏಳುವುದು
ಹೊಟ್ಟೆನೋವು
ವಾಂತಿ
ಬೇಧಿಸುಸ್ತು
ಕಂಡು ಬರುವುದು
ಸಾಮಾನ್ಯವಾಗಿ ಕಂಡು ಬರುವ ಗ್ಯಾಸ್ಟ್ರೋಎಂಟರೈಟಿಸ್ ಲಕ್ಷಣಗಳೆಂದರೆ
ಬೇಧಿ: ವಿಪರೀತ ಬೇಧಿ ಉಂಟಾಗುವುದು, ಕೆಲವೊಮ್ಮೆ ಮಲದಲ್ಲಿ ರಕ್ತದ ಕಲೆಗಳು ಕೂಡ ಕಂಡು ಬರಬಹುದು
ವಾಂತಿ: ಮಕ್ಕಳು ವಾಂತಿ ಮಾಡಿಕೊಳ್ಳುತ್ತಾರೆ
ಅಸಾಧ್ಯವಾದ ಹೊಟ್ಟೆನೋವು ಕಾಣಿಸಿಕೊಳ್ಳುವುದು
ತಲೆಸುತ್ತು
ಊಟ ಸೇರಲ್ಲ
ದೇಹದಲ್ಲಿ ನೀರಿನಂಶ ಕಡಿಮೆಯಾಗಿ ತುಂಬಾನೇ ಸುಸ್ತು ಕಂಡು ಬರುವುದು
ಇದರ ಜೊತೆಗೆ ಜ್ವರ ಕೂಡ ಕಾಣಿಸಿಕೊಳ್ಳುವುದು.
ಪ್ರತಿದಿನ ವರದಿಯಾಗುತ್ತಿದೆ 5-6 ಪ್ರಕರಣಗಳು
ಇದೀಗ ನಗರ ಪ್ರದೇಶದಲ್ಲಿ ದಿನದಲ್ಲಿ 5-6 ಪ್ರಕರಣಗಳು ಕಂಡು ಬರುತ್ತಿದೆ, ಹಾಗಾಗಿ ಪೋಷಕರು ತುಂಬಾನೇ ಜಾಗ್ರತೆವಹಿಸಬೇಕು, ಅದರಲ್ಲಿಯೂ 5ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚಾಗಿಕಂಡು ಬರುತ್ತಿದೆ ಎಂದು ವೈದ್ಯರು ಹೇಳುತ್ತಿದ್ದಾರೆ.
ಮಕ್ಕಳಲ್ಲಿ ರೋಗಲಕ್ಷಣಗಳು ಕಂಡು ಬಂದಾಗ ಪೋಷಕರು ಏನು ಮಾಡಬೇಕು?
ನಿಮ್ಮ ಮಗುವಿಗೆ ಅನಾರೋಗ್ಯವಿದ್ದರೆ ಮಗುವನ್ನು ಶಾಲೆಗೆ ಕಳುಹಿಸಬೇಡಿ, ಏಕೆಂದರೆ ಬೇರೆ ಮಗುವಿಗೂ ಕೂಡ ಈ ಕಾಯಿಲೆ ಹರಡುತ್ತದೆ
ಮನೆಮದ್ದು ಮಾಡಬೇಡಿ
ಬದಲಿಗೆ ಸೂಕ್ತ ತಜ್ಞರನ್ನು ಭೇಟಿಯಾಗಿ ಮಕ್ಕಳಿಗೆ ಚಿಕಿತ್ಸೆ ನೀಡುವುದರಿಂದ ಅವರು ಬೇಗನೆ ಚೇತರಿಸಿಕೊಳ್ಳುವಂತಾಗುವುದು ಎಂದು ಡಾ. ಡಾ.ಅಶೋಕ್ ಎಂ.ವಿ ಸಲಹೆ ನೀಡಿದ್ದಾರೆ.
ಗ್ಯಾಸ್ಟ್ರೋಎಂಟರೈಟಿಸ್ ಉಂಟಾದಾಗ ಮಕ್ಕಳ ಆರೈಕೆ
ಸಾಕಷ್ಟು ನೀರಿನಂಶ ಕುಡಿಸಬೇಕು: ಸೂಪ್, ಫ್ರೆಷ್ ಜ್ಯೂಸ್ , ನೀರು ಅಂತ ನೀಡುತ್ತಿರಬೇಕು, ಇದು ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ಕಾಪಾಡಲು ಸಹಾಯ ಮಾಡುತ್ತದೆ.
ವಿಶ್ರಾಂತಿ ಪಡೆಯಿರಿ: ಮಕ್ಕಳಿಗೆ ತುಂಬಾನೇ ವಿಶ್ರಾಂತಿ ಅಗ್ಯತ, ಅವರನ್ನು ಚೇತರಿಸಿಕೊಳ್ಳುವವರೆಗೆ ಶಾಲೆಗೆ ಕಳುಹಿಸಬೇಡಿ
ದ್ರವಾಹಾರ ಸೇವಿಸಲು ನೀಡಿ.
ಈ ಬಗೆಯ ಸಮಸ್ಯೆ ಹೇಗೆ ತಡೆಗಟ್ಟಬಹುದು?
ಕೈಗಳ ಸ್ವಚ್ಛತೆ: ಮಕ್ಕಳಿಗೆ ಆಗಾಗ ಕೈ ತೊಳೆಯುವಂತೆ ಸೂಚಿಬೇಕು
ಆಹಾರವನ್ನು ಸ್ಟೋರ್ ಮಾಡುವಾಗ ಅಥವಾ ಅಡುಗೆ ಮಾಡುವಾಗ ಶುಚಿತ್ವ ಕಡೆಗೆ ತುಂಬಾನೇ ಗಮನ ನೀಡಬೇಕು
ರೂಟೋವೈರಸ್ ಲಸಿಕೆ ಮಕ್ಕಳಲ್ಲಿ ಈ ಬಗೆಯ ಸಮಸ್ಯೆ ತಡೆಗಟ್ಟಲು ಸಹಾಯ ಮಾಡುತ್ತದೆ
ಶುದ್ಧವಾದ ನೀರು ಕುಡಿಯಲು ನೀಡಿ.



Click it and Unblock the Notifications
