Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ನಿಮ್ಮ 1 ವರ್ಷದ ಮಗು ಚುರುಕಾಗಿರಬೇಕೆಂದರೆ ಏನು ಮಾಡಬೇಕು?
ಮಕ್ಕಳು 12 ತಿಂಗಳಿನಿಂದ 2 ವರ್ಷ ವಯಸ್ಸಿನವರೆಗೂ ಎಲ್ಲಾ ವಿಚಾರಗಳನ್ನು ಒಂದೊಂದಾಗಿ ಕಲಿಯುವ ವಯಸ್ಸು. ಈ ಸಮಯದಲ್ಲಿ ಪೋಷಕರು ಮಕ್ಕಳಿಗೆ ಕೆಲವೊಂದು ಮುಖ್ಯವಾದ ವಿಚಾರಗಳನ್ನು ಕಲಿಸಬೇಕು. ಈ ವಯಸ್ಸಿನಲ್ಲಿ ನೀವು ಏನೇ ಕಲಿಸಿದರೂ ಮಕ್ಕಳು ಸುಲಭವಾಗಿ ಮತ್ತು ಬೇಗನೆ ಕಲಿಯುತ್ತಾರೆ. ಹಾಗಾದ್ರೆ ಪೋಷಕರು ಮಕ್ಕಳಿಗೆ ಏನು ಕಲಿಸಬೇಕು? ಏನು ಕಲಿಸಬಾರದು ಅನ್ನೋ ಸೂಕ್ಷ್ಮ ವಿಚಾರಗಳು ಗೊತ್ತಾಗೋದಿಲ್ಲ. ಅಷ್ಟಕ್ಕು ನಿಮ್ಮ ಒಂದು ವರ್ಷದ ಮಗುವಿಗೆ ಕಲಿಸಿ ಕೊಡಬೇಕಾದ ಮುಖ್ಯ ವಿಚಾರಗಳು ಏನು ಅನ್ನೋದನ್ನು ಒಂದೊಂದಾಗಿ ತಿಳಿಯೋಣ.
1. ಭಾಷೆ ಮತ್ತು ಸಂವಹನ
ಈ ವಯಸ್ಸಿನಲ್ಲಿ ಮಕ್ಕಳು ನಾವು ಮಾತನಾಡುವ ಮಾತನ್ನು ಅರ್ಥ ಮಾಡಿಕೊಳ್ಳುತ್ತಾರೆ. ಮಕ್ಕಳಿಗೆ ಸುಮಾರು 15 ತಿಂಗಳಾಗುವಷ್ಟರಲ್ಲಿ ಅವರ ತಮ್ಮ ಮೊದಲ ಪದವನ್ನು ಉಚ್ಛರಿಸುತ್ತಾರೆ. ಈ ಸಂದರ್ಭದಲ್ಲಿ ನೀವು ಸಾಧ್ಯವಾದಷ್ಟು ಮಕ್ಕಳ ಜೊತೆಗೆ ಸಂವಹನ ನಡೆಸಬೇಕು. ಇನ್ನೂ ಸಾಧ್ಯವಾದಷ್ಟು ಮಕ್ಕಳಿಗೆ ಸುಲಭವಾದ ಭಾಷೆಯಲ್ಲಿ ಸಂವಹನ ಮಾಡಿ. ಪದಗಳು ಮಕ್ಕಳಿಗೆ ಉಚ್ಛರಿಸಲು ಅನುಕೂಲವಾಗುವಂತಿರಲಿ. ಕೆಲವೊಂದು ಮುಖ್ಯವಾದ ಪದಗಳನ್ನು ನೀವು ಮಕ್ಕಳಿಗೆ ಆಗಾಗ್ಗೆ ನೆನಪಿಸುತ್ತಿರಬೇಕು. ಆಗ ಅವರು ಅಂತಹ ಪದಗಳನ್ನು ಮರೆಯುವುದಿಲ್ಲ.

2. ಬಣ್ಣದ ಪೆನ್ಸಿಲ್ ಮತ್ತು ಆಟದ ಸಮಾನು ನೀಡಿ
ಒಂದು ವರ್ಷದ ನಂತರ ಮಕ್ಕಳಿಗೆ ಬಣ್ಣದ ಪೆನ್ಸಿಲ್‌ಗಳನ್ನು ನೀಡಿ. ಇದರಿಂದ ಮಕ್ಕಳು ಗೀಚೋದಕ್ಕೆ ಶುರು ಮಾಡುತ್ತಾರೆ. ಆಗ ಅವರ ಮನಸ್ಸು ಹಾಗೂ ಬುದ್ಧಿ ಒಂದು ಕಡೆಗೆ ಕೇಂದ್ರೀಕೇತವಾಗುತ್ತದೆ. ಜೊತೆಗೆ ಇನ್ನೂ ಅವರಿಗೆ ನೀಡುವ ಆಟದ ಸಾಮಾನುಗಳು ಹೇಗಿರಬೇಕೆಂದರೆ ಬ್ಲಾಕ್ಸ್‌ಗಳನ್ನು ನೀಡಿ. ಅದನ್ನು ಅವರು ಜೋಡಿಸಲಿ. ಇದು ಕೂಡ ಅವರ ಬುದ್ಧಿಗೆ ಕೆಲಸ ನೀಡುತ್ತದೆ. ಇದರಿಂದ ಅವರ ಯೋಚನಾ ಸಾಮರ್ಥ್ಯ ಕೂಡ ಹೆಚ್ಚಾಗುತ್ತದೆ.
3. ಇತರ ಮಕ್ಕಳ ಜೊತೆಗೆ ಬೆರೆಯುವಂತೆ ನೋಡಿಕೊಳ್ಳಿ
ಸಾಮಾನ್ಯವಾಗಿ ಒಂದು ವರ್ಷದ ಮಕ್ಕಳು ತಮ್ಮ ಒಡಹುಟ್ಟಿದವರನ್ನು ತುಂಬಾನೇ ಇಷ್ಟ ಪಡುತ್ತಾರೆ. ಅವರ ಜೊತೆಗೆ ಆಟವಾಡುತ್ತಾರೆ. ಆದರೆ ನಿಮ್ಮ ಒಂದು ವರ್ಷದ ಮಗುವನ್ನು ಅವರ ವಯಸ್ಸಿನ ಇತರ ಬೇರೆ ಮಕ್ಕಳೊಂದಿಗೆ ಆಟವಾಡಲು ಅವಕಾಶ ನೀಡಿ. ಆಗ ಅವರು ಇತರರೊಂದಿಗೆ ಮುಕ್ತವಾಗಿ ಬೆರೆಯುವುದಕ್ಕೆ ಸಾಧ್ಯವಾಗುತ್ತದೆ. ಇತರ ಮಕ್ಕಳಿಂದ ಬೇರೆ ವಿಚಾರಗಳನ್ನು ಕಲಿಯುವುದಕ್ಕೆ ಸಾಧ್ಯವಾಗುತ್ತದೆ.
4. ಮಕ್ಕಳನ್ನು ಮನೆಯಿಂದ ಆಚೆ ಕರೆದುಕೊಂಡು ಹೋಗಿ
ನಿಮ್ಮ ಒಂದು ವರ್ಷದ ಪುಟ್ಟ ಮಗುವನ್ನು ಇಡೀ ದಿನ ಮನೆಯೊಳಗಡೆ ಕೂಡಿ ಹಾಕೋದಕ್ಕೆ ಹೋಗಬೇಡಿ. ಮಗು ಕೂಡ ಹೊಸ ಜಾಗಗಳನ್ನು ನೋಡುವುದಕ್ಕೆ ಇಷ್ಟ ಪಡುತ್ತದೆ. ಹೀಗಾಗಿ ಮಗುವನ್ನು ಆಗಾಗ್ಗೆ ಪಾರ್ಕ್‌ಗೆ ಕರೆದುಕೊಂಡು ಹೋಗಿ. ಅದಕ್ಕೂ ಕೂಡ ಮರ, ಹುಲ್ಲು, ಹೊರಗಿನ ಜಗತ್ತಿನ ಪರಿಚಯವಾಗುತ್ತದೆ. ಇನ್ನೂ ಆಗಾಗ್ಗೆ ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರ ಮನೆಗೆ ಕರೆದುಕೊಂಡು ಹೋಗಿ. ಜಾಗ ಬದಲಾದಾಗ ನಿಮ್ಮ ಮಗುವಿನ ಮನಸ್ಸಿಗೂ ಒಂದು ರೀತಿ ಖುಷಿ ಸಿಗುತ್ತದೆ.
5. ಸಂವೇದನಾ ಚಟುವಟಿಕೆಗಳನ್ನು ಮಾಡಿಸಿ
ಸಂವೇದನಾ ಚಟುವಟಿಕೆಗಳನ್ನು ಮಾಡಿಸುವುದರಿಂದ ನಿಮ್ಮ 1 ವರ್ಷದ ಮಗುವಿಗೆ ತಮ್ಮ ಇಂದ್ರಿಯಗಳನ್ನು ಬಳಸಿಕೊಂಡು ವಿಷಯಗಳನ್ನು ಅನ್ವೇಷಿಸಲು ಮತ್ತು ಅರ್ಥಮಾಡಿಕೊಳ್ಳಲು ಅವಕಾಶ ಮಾಡಿಕೊಡುತ್ತವೆ. ಇದು ಅವರ ಕಲ್ಪನಾ ಶಕ್ತಿ ಮತ್ತು ಮಾನಸಿಕ ಬೆಳವಣಿಗೆಯನ್ನು ಪೋಷಿಸುತ್ತದೆ. ಕೆಲವು ಮೋಜಿನ ಚಟುವಟಿಕೆಗಳನ್ನು ಮಕ್ಕಳ ಕೈಯಿಂದ ಮಾಡಿಸಿ. ಸ್ಪಂಜಿನಿಂದ ನೀರನ್ನು ಹಿಂಡುವುದು ಮತ್ತು ಸಂಗೀತ ವಾದ್ಯಗಳೊಂದಿಗೆ ನುಡಿಸುವುದಕ್ಕೆ ಅವಕಾಶ ಕೊಡಿ.
ಮಕ್ಕಳು ಆಕ್ಟೀವ್ ಆಗಿರಬೇಕು ಎಂದರೆ ಒಂದು ವರ್ಷದ ಮಗುವಿನ ಕೈಯಿಂದ ಅನೇಕ ರೀತಿಯ ಚಟುವಟಿಕೆಗಳನ್ನು ಮಾಡಿಸಿ. ಇದರಿಂದ ಮಗುವಿನ ಬುದ್ಧಿಶಕ್ತಿ ಹೆಚ್ಚುವುದು ಮಾತ್ರವಲ್ಲದೇ ಮಕ್ಕಳು ತುಂಬಾನೇ ಚುರುಕಾಗುತ್ತಾರೆ.



Click it and Unblock the Notifications

