Latest Updates
-
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ!
ಫುಡ್ ಡೆಲಿವರಿ ಮಾಡುತ್ತಿರುವ ಮಹಿಳೆಯ ತಾಯಿ ಪ್ರೀತಿಯ ವೀಡಿಯೋ ವೈರಲ್: ಆಕೆಯ ತಾಯಿ ಪ್ರೀತಿಗೆ ತಲೆ ಬಾಗಿದ ನೆಟ್ಟಿಗರು
ಒಬ್ಬ ತಾಯಿಯ ವೀಡಿಯೋ ಸಾಮಾಜಿಕ ತಾಣದಲ್ಲಿ ತುಂಬಾನೇ ಗಮನ ಸೆಳೆದಿದೆ, ಮಗುವನ್ನು ಬೈಕ್‌ನಲ್ಲಿ ಕೂರಿಸಿ ಜೊಮೆಟೊ ಡೆಲಿವರಿ ಗರ್ಲ್‌ಆಗಿ ಕಾರ್ಯನಿರ್ವಹಿಸುತ್ತಿರುವ ತಾಯಿಯ ಫೋಟೋ ಅದು, ಆಕೆಯ ಆ ಚಿತ್ರವೇ ಆಕೆ ಇಂದು ಹೊತ್ತಿನ ಊಟಕ್ಕೆ ಎಷ್ಟು ಕಷ್ಟಪಡುತ್ತಿದ್ದಾಳೆ ಎಂಬುವುದನ್ನು ತೋರಿಸುತ್ತದೆ, ಅದೇ ಸಮಯದಲ್ಲಿ ತನಗೆ ಎಂಥದ್ದೇ ಕಷ್ಟವಿರಲಿ, ತನ್ನ ಮಗುವನ್ನು ಕಾಂಗರೂ ರೀತಿ ರಕ್ಷಣೆ ಮಾಡುವ ಅವಳ ತಾಯಿ ಪ್ರೀತಿಗೆ ಇಂದು ನೆಟ್ಟಿಗರು ತಲೆಬಾಗಿದ್ದಾರೆ.
ಡೆಲಿವರಿ ಬಾಯ್ ಆಗಿ ಹುಡುಗರು ದುಡಿಯುತ್ತಿದ್ದರು, ಆದರೆ ಇತ್ತೀಚಿನ ವರ್ಷಗಳಲ್ಲಿ ಡೆಲಿವರಿ ಬಾಯ್(ಗರ್ಲ್ ) ಆಗಿ ದುಡಿಯುವ ಹಲವು ಹೆಣ್ಮಕ್ಕಳಿದ್ದಾರೆ, ಮನೆಯಲ್ಲಿನ ಆರ್ಥಿಕ ಸಮಸ್ಯೆ, ನಿರುದ್ಯೋಗ ಈ ಎಲ್ಲಾ ಕಾರಣದಿಂದ ಒಂದು ಕೆಲಸ ಮಾಡಿ ಕುಟುಂಬವನ್ನು ನಿರ್ವಾಹಿಸುವ ಜವಾಬ್ದಾರಿ ಅವಳ ಮೇಲೆ ಇರುತ್ತದೆ, ಅವಳು ಈಗ ಪುರುಷನೊಗೆ ಸರಿ ಸಮನಾಗಿ ದುಡಿಯುತ್ತಾಳೆ, ಆದರೆ ಆಕೆ ಕೆಲಸದ ಜವಾಬ್ದಾರಿ ಜೊತೆಗೆ ಮನೆಯ ಜವಾಬ್ದಾರಿ ಕೂಡ ನಿಭಾಯಿಸಬೇಕಾಗುತ್ತದೆ.

ಆ ಫೋಟೋವೇ ಹೇಳುತ್ತೆ ಈ ಮಹಿಳೆಯ ಆರ್ಥಿಕ ಪರಿಸ್ಥಿತಿ
ಕಾಲಿನಲ್ಲಿ ಒಂದು ಜೊತೆ ಚಪ್ಪಲಿ ಕೂಡ ಇಲ್ಲ, ತನ್ನ ಮಗುವಿನ ಹೊಟ್ಟೆ ತುಂಬಿಸಲು ಫುಡ್ ಡೆಲಿವರಿ ಮಾಡುವ ಕೆಲಸ ಮಾಡುತ್ತಿದ್ದಾಳೆ, ಚಿಕ್ಕ ಮಗುವಿದೆ ಬಿಟ್ಟು ಹೋಗೋಣ ಎಂದರೆ ನೋಡಿಕೊಳ್ಳುವವರು ಇಲ್ಲ, ಕೆಲಸ ಕಾಡದೆ ಇರುವುದಕ್ಕೂ ಸಾಧ್ಯವಿಲ್ಲ ಏಕೆಂದರೆ ಹೊಟ್ಟೆಪಾಡು ಸಮಸ್ಯೆ, ಹಾಗಾಗಿ ಮಗುವನ್ನು ಜೊತೆಗೆ ಕರೆದುಕೊಂಡು ಹೋಗಿದ್ದಾಳೆ.
ಕೆಲವೊಂದು ತಾಯಿಂದರನ್ನು ನೋಡುವಾಗ ಈ ತಾಯಿ ಬೆಟರ್ ಅನಿಸುತ್ತೆ
ನೀವು ಬೆಳಗ್ಗೆ 9-10 ಗಂಟೆಯ ಸಮಯದಲ್ಲಿ ಡೇ ಕೇರ್ ಕಡೆಗೆ ಹೋಗಿ, ಪುಟ್ಟ ಕಂದಮ್ಮನನ್ನು ಡೇ ಕೇರ್‌ಗೆ ಬಿಟ್ಟು ಮರಳುವ ತಾಯಿಯ ಮುಖವನ್ನೊಮ್ಮೆ ನೋಡಿ ಎಂಥ ಅಸಾಯಕತೆ, ಒಂದು ಕಡೆ ಬಯಸಿದ ಪಡೆದ ಕೆಲಸ, ಮತ್ತೊಂದೆಡೆ ಜೀವಕ್ಕೆ ಜೀವವಾಗಿರುವ ಮಗು, ಮಗುವಿನ ಭವಿಷ್ಯಕ್ಕಾಗಿ ಕೆಲಸ ಮಾಡಲೇಬೇಕಾದ ಪರಿಸ್ಥಿತಿ, ಡೇ ಕೇರ್‌ನಲ್ಲಿ ಮಗುವನ್ನು ಬಿಟ್ಟು ಹೋಗಬೇಕಾಗುತ್ತದೆ. ತನ್ನ ಮಗು ಅತ್ತಾಗ ಅವರು ಸರಿಯಾಗಿ ತಿನ್ನಕ್ಕೆ ಕೊಡ್ತಾ ಇದ್ದಾರಾ? ನನ್ನ ಮಗುವನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರಾ? ಎಂಬ ಆತಂಕ ಅವರನ್ನು ಕಾಡುತ್ತಲೇ ಇರುತ್ತದೆ. ಸಿಸಿಟಿವಿ ಕನೆಕ್ಷನ್ ಇದ್ದರೆ ಪದೇ ಪದೇ ಮೊಬೈಲ್ ಚೆಕ್ಕ ಮಾಡುತ್ತಲೇ ಇರ್ತಾಳೆ.
ಆದರೆ ಈ ತಾಯಿಗೆ ಕಷ್ಟವಿದೆ, ಆದರೆ ಮಗು ಅವಳ ಜೊತೆಯೇ ಇದೆ, ಅದರ ಬೇಕು-ಬೇಡಗಳನ್ನು ಗಮನಿಸಲು ಸಾಧ್ಯವಾಗುವುದು. ಅಯ್ಯೋ ನನ್ನ ಮಗು ತಿಂದ್ನಾ, ಮಲಗಿದ್ನಾ ಎಂಬ ಆತಂಕ ಇರಲ್ಲ, ಕಣ್ಮುಂದೆ ಮಗು ಇರುವುದೇ ಆ ತಾಯಿಗೆ ಇರುವ ನೆಮ್ಮದಿ.
ಈಗ ಇರುವ ಒಂದು ಅಥವಾ ಎರಡು ಮಗುವನ್ನು ನೋಡಿಕೊಳ್ಳುವುದು ದೊಡ್ಡ ಕೆಲಸವಾಗುತ್ತಿದೆ ಪೋಷಕರಿಗೆ ಏಕೆ?
ಮನೆಯಲ್ಲಿ ಅಜ್ಜಿ, ಅಮ್ಮ ಇವರೆಲ್ಲಾ ಹೇಳಬಹುದು, ನೀವು ಒಂದು ಮಗುವನ್ನು ನೋಡಲು ಕಷ್ಟಪಡುತ್ತಿದ್ದಾರೆ, ನಾವೆಲ್ಲಾ ಏಳೆಂಟು ಮಕ್ಕಳನ್ನು ಸಾಕಿಲ್ವಾ ? ಆದರೆ ಆ ಕಾಲದ ವ್ಯವಸ್ಥೆಗೂ ಈಗೀನ ವ್ಯವಸ್ಥೆಗೂ ತುಂಬಾ ವ್ಯತ್ಯಾಸವಿದೆ. ಆ ಕಾಲದಲ್ಲಿ ಮಗುವನ್ನು ನೋಡಿಕೊಳ್ಳುವುದು ತಾಯಿಗೆ ಅಷ್ಟು ಕಷ್ಟವಾಗುತ್ತಿರಲಿಲ್ಲ, ಏಕೆಂದರೆ ಆವಾಗ ಬಹುತೇಕ ಜನರು ಕೂಡು ಕುಟುಂಬದಲ್ಲಿ ವಾಸಿಸುತ್ತಿದ್ದರು. ಮಗುವನ್ನು ಅಜ್ಜ-ಅಜ್ಜಿ, ದೊಡ್ಡಮ್ಮ, ಮಾಮ, ಅತ್ತೆ ಅಂತ ಎಲ್ಲರೂ ನೋಡಿಕಳ್ಳುತ್ತಿದ್ದರು, ಮಗು ಬೆಳೆಯುವುದೇ ಗೊತ್ತಾಗ್ತಾ ಇರ್ಲಲಿಲ್ಲ.
ಆದರೆ ಈಗ ನ್ಯೂಕ್ಲಿಯರ್ ಕುಟುಂಬ, ಗಂಡ-ಹೆಂಡತಿಯಷ್ಟೇ ಇರಲು ಬಯಸುತ್ತಾರೆ, ಅತ್ತೆ-ಮಾವ ಕೂಡ ಜೊತೆಯಲ್ಲಿ ಬೇಡ ಎಂದ ಬಯಸುತ್ತಾರೆ, ನಂತರ ಮಕ್ಕಳಾದ ಮೇಲೆ ಮಗುವನ್ನು ನೋಡಿಕೊಳ್ಳಲು ಯಾರೂ ಇಲ್ಲದಿದ್ದಾಗ ಒಂದೇ ಮಗುವಾದರೂ ಅದನ್ನು ಬೆಳೆಸುವುದು ಸವಾಲಾಗುವುದು. ಈಗೀನ ಮಹುತೇಕ ಪೋಷಕರಿಗೆ ತಾವು ಕೆಲಸಕ್ಕೆ ಹೋಗುವಾಗ ಮಕ್ಕಳನ್ನು ಯಾರು ನೋಡಿಕೊಳ್ಳುತ್ತಾರೆ ಎಂಬುವುದೇ ಮುಖ್ಯವಾಗಿದೆ. ಕಾಲ ಬದಲಾಗಿದೆ, ಆದರೆ ಮಕ್ಕಳ ವಿಚಾರದಲ್ಲಿ ಕೂಡು ಕುಟುಂಬದ ಅವ್ಯಕತೆ ತುಂಬಾನೇ ಇದೆ ಅಲ್ಲವೇ?



Click it and Unblock the Notifications