Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈ ಫುಡ್ ಕಾಂಬಿನೇಷನ್ ಮಕ್ಕಳಿಗೆ ತುಂಬಾನೇ ಅಪಾಯಕಾರಿ!
ಮಕ್ಕಳಿಗೆ ಆರೋಗ್ಯಕರ ಆಹಾರ ಕೊಡಬೇಕೆಂದು ನೀವು ತುಂಬಾ ಗಮನಕೊಡುತ್ತಿರಬಹುದು ಅಲ್ವಾ? ಹಾಗಾದರೆ ಕೆಲವೊಂದು ಫುಡ್ ಕಾಂಬಿನೇಷನ್ ಮಕ್ಕಳಿಗೆ ನೀಡದಿರುವುದು ಒಳ್ಳೆಯದು, ಆ ಆಹಾರಗಳು ಆರೋಗ್ಯಕರವಾಗಿದ್ದರೂ ಎರಡನ್ನೂ ಸೇರಿಸಿದರೆ ಅವು ಆರೋಗ್ಯಕರವಲ್ಲ. ಅಂಥ ಆಹಾರಗಳಾವುವು ಎಂದು ನೋಡೋಣ:

ಮೊದಲಿಗೆ ಆಹಾರ ಕಾಂಬಿನೇಷನ್ ಸರಿಯಿಲ್ಲದಿದ್ದರೆ ಏನಾಗುತ್ತೆ ಎಂದು ನೋಡೋಣ ಬನ್ನಿ:
* ಅಜೀರ್ಣ
* ಗ್ಯಾಸ್ಟ್ರಿಕ್ ಸಮಸ್ಯೆ
* ವಾಂತಿ
* ತಲೆಸುತ್ತು
*ಫುಡ್ ಪಾಯಿಸನ್
ಕೆಲವೊಮ್ಮೆ ಈ ಆಹಾರಗಳನ್ನು ನೀಡಿದಾಗ ಮೊದಲಿಗೆ ಗೊತ್ತಾಗುವುದಿಲ್ಲ ಆದರೆ ಕ್ರಮೇಣ ಇದರಿಂದ ಜೀವನಶೈಲಿಗೆ ಸಂಬಂಧಿಸಿದ ಸಮಸ್ಯೆ ಕಂಡು ಬರಬಹುದು. ಮಕ್ಕಳಲ್ಲಿಯೂ ಮಧುಮೇಹ, ಕರುಳಿಗೆ ಸಂಬಂಧಿಸಿದ ಸಮಸ್ಯೆ ಕೆಲವು ಅಂಗಾಂಗಗಳಿಗೂ ತೊಂದರೆ ಉಂಟಾಗಬಹುದು. ಆದ್ದರಿಂದ ಮಕ್ಕಳಿಗೆ ಆಹಾರ ಕೊಡುವಾಗ ಈ ಬಗೆಯ ಫುಡ್ ಕಾಂಬಿನೇಷನ್ ಕೊಡಲೇಬೇಡಿ.
ಬಾಳೆಹಣ್ಣು ಮತ್ತು ಹಾಲು
ಬಾಳೆಹಣ್ಣು ಹಾಗೂ ಹಾಲು ಕುಡಿಯುತ್ತೇವೆ. ಆದರೆ ಆಯುರ್ವೇದದ ಪ್ರಕಾರ ಈ ಎರಡು ಫುಡ್ ಕಾಂಬಿನೇಷನ್ ಮಕ್ಕಳಿಗೆ ನೀಡಲೇಬಾರದು. ಇದನ್ನು ನೀಡಿದಾಗ ಮಕ್ಕಳಿಗೆ ನಿದ್ದೆ ಬಂದಂತೆ ಆಗುವುದು ಅಲ್ಲದೆ ಚುರುಕುತನ ಕಡಿಮೆಯಾಗುವುದು. ಈ ಎರಡು ಫುಡ್ ಕಾಂಬಿನೇಷನ್ ಮಕ್ಕಳಿಗೆ ಒಳ್ಳೆಯದಲ್ಲ.
ಅಲ್ಲದೆ ಬಾಳೆಹಣ್ಣು ಹಾಗೂ ಹಾಲು ನೀಡುವುದರಿಂದ ಮಕ್ಕಳ ನಿದ್ದೆಗೂ ತೊಂದರೆ ಉಂಟಾಗುವುದು. ಈ ಎರಡು ಕಾಂಬಿನೇಷನ್ ನೀಡುವುದರಿಂದ ಮಕ್ಕಳಿಗೆ ಕೆಮ್ಮು, ಕಫ ಉಂಟಾಗುವುದು. ಅದರಲ್ಲೂ ಸೂರ್ಯಾಸ್ತದ ನಂತರ ಈ ಎರಡು ಕಾಂಬಿನೇಷನ್ ನೀಡಲೇಬೇಡಿ.
ಅಸ್ತಮಾ ಇರುವ ಮಕ್ಕಳಿಗೆ ಈ ಕಾಂಬಿನೇಷನ್ ಆಹಾರ ತುಂಬಾನೇ ಅಪಾಯಕಾರಿ. ಮಕ್ಕಳಿಗೆ ಉಸಿರಾಟದ ತೊಂದರೆ ಉಂಟು ಮಾಡುವುದು. ನೀವು ಹಾಲು ಮತ್ತು ಬಾಳೆಹಣ್ಣು ಜೊತೆಗೆ ಕೊಡುವುದಾದರೆ ಸ್ವಲ್ಪ ಏಲಕ್ಕಿ ಅಥವಾ ನಕ್ಷತ್ರ ಮೊಗ್ಗಿನ ಪುಡಿ (ನಟ್‌ಮಗ್) ಸೇರಿಸಿ ನೀಡಿ.
2. ಹಣ್ಣುಗಳು ಮತ್ತು ಮೊಸರು
ನೀವು ಹಣ್ಣುಗಳು ಹಾಗೂ ಮೊಸರು ಜೊತೆ ನೀಡಿದರೆ ಈ ಸಮಸ್ಯೆಗಳು ಉಂಟಾಗುವುದು
* ಜೀರ್ಣಕ್ರಿಯೆಗೆ ತೊಂದರೆ
* ತಲೆನೋವು ಉಂಟಾಗುವುದು
* ಕೆಮ್ಮು, ಶೀತ ಉಂಟಾಗುವುದು
* ಅಲರ್ಜಿ ಸಮಸ್ಯೆ ಉಂಟು ಮಾಡಬಹುದು
ಯೋಗರ್ಟ್ ಮತ್ತು ಫ್ರೂಟ್ಸ್ ಆರೋಗ್ಯಕರವೆಂದೇ ಹೆಚ್ಚಿನ ತಾಯಂದಿರು ಭಾವಿಸಿರುತ್ತಾರೆ. ಅಲ್ಲದೆ ಫ್ರೂಟ್ ಕಾಂಬಿನೇಷನ್‌ನ ಯೋಗರ್ಟ್ ಸಿಗುತ್ತದೆ. ಆದ್ದರಿಂದ ಒಳ್ಳೆಯದೆಂದೇ ಭಾವಿಸುತ್ತಾರೆ. ನೀವು ಮಕ್ಕಳಿಗೆ ಯೋಗರ್ಟ್ ನೀಡುವಾಗ ಫ್ರೂಟ್ ಕಾಂಬಿನೇಷನ್ ನೀಡಬೇಡಿ. ಏಕೆಂದರೆ ಅದರಲ್ಲಿ ಪ್ರಿಸರ್ವೇಟಿವ್ ಸೇರಿಸಿರುತ್ತಾರೆ. ಬದಲಿಗೆ ಪ್ಲೇನ್ ಯೋಗರ್ಟ್ ನೀಡಿ. ಯೋಗರ್ಟ್ ನೀಡಿ ತುಂಬಾ ಹೊತ್ತಿನ ಬಳಿಕ ಬೇಕಾದರೆ ಹಣ್ಣು ಕೊಡಬೇಡಿ, ಆದರೆ ಜೊತೆಗೆ ಕೊಡಬೇಡಿ.
ಮಕ್ಕಳಿಗೆ ಪ್ಯಾಕ್ ಮಾಡಿದ ಯೋಗರ್ಟ್ ಬದಲಿಗೆ ಮನೆಯಲ್ಲಿಯೇ ಮಾಡುವ ಮೊಸರು ಒಳ್ಳೆಯದು. ಮೊಸರಿನಲ್ಲಿ ಪ್ರೊಬಯೋಟಿಕ್ ಇದ್ದು ಪ್ರಿಸರ್ವೇಟಿವ್ ಇರಲ್ಲ. ಆದ್ದರಿಂದ ಮನೆಯಲ್ಲಿಯೇ ಮಾಡುವ ಪ್ರಿಸರ್ವೇಟಿವ್ ಬಳಸಿ. ಮೊಸರನ್ನು ಫ್ರಿಡ್ಜ್‌ನಲ್ಲಿಟ್ಟು ನೀಡಬೇಡಿ. ರೂಂನ ಉಷ್ಣತೆಯಲ್ಲಿ ಇಟ್ಟು ಬಳಸಿ. ಅಲ್ಲದೆ ಮೊಸರು ಅಥವಾ ಯೋಗರ್ಟ್ ಜೊತೆ ಸಿಟ್ರಸ್ ಹಣ್ಣುಗಳನ್ನು ನೀಡಬೇಡಿ.
ವೈಟ್ ಬ್ರೆಡ್ ಮತ್ತು ಜಾಮ್ ನೀಡಬೇಡಿ
* ಮಕ್ಕಳಿಗೆ ಬ್ರೆಡ್, ಜಾಮ್ ಕೊಡುವುದನ್ನು ಬಹುತೇಕ ಪೋಷಕರು ಮಾಡುತ್ತಾರೆ. ಆದರೆ ನಿಮಗೆ ಗೊತ್ತಾ ಈ ಎರಡು ಕಾಂಬಿನೇಷನ್ ತುಂಬಾನೇ ಅಪಾಯಕಾರಿ.
ಮಕ್ಕಳಲ್ಲಿ ಇದ್ದಕ್ಕಿದ್ದಂತೆ ಸಕ್ಕರೆಯಂಶ ಹೆಚ್ಚು ಮಾಡಬಹುದು. ಸಕ್ಕರೆಯಂಶ ಅಧಿಕವಾದರೆ ಸುಸ್ತು ಕೂಡ ಉಂಟಾಗಬಹುದು. ಅಲ್ಲದೆ ಮಕ್ಕಳಿಗೆ ಜೀರ್ಣಕ್ರಿಯೆ ಕೂಡ ಸರಿಯಾಗಿ ಆಗುವುದಿಲ್ಲ.
ಮಕ್ಕಳಲ್ಲಿ ಸಕ್ಕರೆಯಂಶ ಹೆಚ್ಚಾದಾಗ ಅದಕ್ಕೆ ತಕ್ಕಷ್ಟು ಇನ್ಸುಲಿನ್ ಉತ್ಪತ್ತಿಗೆ ದೇಹ ಅಧಿಕ ಶ್ರಮ ಹಾಕಬೇಕಾಗುತ್ತದೆ. ಇದರಿಂದ ಮೇಧೋಜೀರಕ ಗ್ರಂಥಿ ಮೇಲೆ ಮತ್ತಷ್ಟು ಒತ್ತಡ ಉಂಟಾಗುವುದು. ಆದ್ದರಿಂದ ಸುಲಭದಲ್ಲಿ ಬ್ರೇಕ್‌ಫಾಸ್ಟ್ ಅಥವಾ ಸ್ನ್ಯಾಕ್ಸ್ ನೀಡಬಹುದು ಎಂದು ಬ್ರೆಡ್-ಜಾಮ್ ನೀಡಬೇಡಿ. ನೀವು ಪ್ಲೇನ್ ಬ್ರೆಡ್ ಬದಲಿಗೆ ವ್ಹೀಟ್ ಬ್ರೆಡ್ ಅಥವಾ ಮಲ್ಟಿಗ್ರೈನ್ ಬ್ರೆಡ್ ನೀಡಿ. ಇದಕ್ಕಿಂತ ಓಟ್ಸ್, ಫ್ರೂಟ್ಸ್ ಹಣ್ಣುಗಳನ್ನು ನೀಡಬೇಡಿ.
ಮಾಂಸಾಹಾರ ಹಾಗೂ ಅಧಿಕ ಪಿಷ್ಠಾದ ಆಹಾರ
ಮಾಂಸಾಹಾರ ಸೇವಿಸುವವರು ಇದನ್ನು ಗಮನಿಸಲೇಬೇಕು. ಮಾಂಸಾಹಾರ ಜೊತೆಗೆ ಬ್ರೆಡ್, ಪಾಸ್ತಾ ಆಲೂಗಡ್ಡೆ ಇವುಗಳನ್ನು ನೀಡಬೇಡಿ. ಈ ಕಾಂಬಿನೇಷನ್ ಆಹಾರ ಮಕ್ಕಳಿಗೆ ಅಜೀರ್ಣ ಸಮಸ್ಯೆ ಉಂಟು ಮಾಡುತ್ತದೆ.
ಈ ಎರಡು ಕಾಂಬಿನೇಷನ್ ಸೇರಿದರೆ ಹೊಟ್ಟೆ ನೋವು, ಅಜೀರ್ಣ ಈ ಬಗೆಯ ಸಮಸ್ಯೆ ಕಂಡು ಬರುವುದು. ಕೆಲವೊಮ್ಮೆ ಫುಡ್ ಪಾಯಿಸನ್ ಕೂಡ ಉಂಟಾಗಬಹುದು. ಆದ್ದರಿಂದ ನೀವು ಮಾಂಸಾಹಾರ ಜೊತೆಗೆ ಗೆಣಸು, ಪಾಸ್ತಾ ಇವುಗಳ ಜೊತೆಗೆ ಮಾಂಸಾಹಾರ ನೀಡಬೇಡಿ.
ಟೊಮೆಟೊ ಮತ್ತು ಚೀಸ್
ನೀವು ಟೊಮಟೊ ಮತ್ತು ಚೀಸ್ ಜೊತೆಗೆ ನೀಡಬೇಡಿ, ಇದರಿಂದ ಫುಡ್ ಪಾಯಿಸನ್ ಉಂಟಾಗಬಹುದು. ನೀವು ವೆಜ್ ಅನ್ನು ಚೀಸ್ ಜೊತೆ ಬೇಯಿಸುವುದು ಒಳ್ಳೆಯದು. ಪಿಜ್ಜಾ ಜೊತೆ ಚೀಸ್ ಮತ್ತು ಟೊಮೆಟೊ ಒಟ್ಟಿಗೆ ಬಳಸಬೇಡಿ.



Click it and Unblock the Notifications
