Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ ತಿಂಗಳಲ್ಲಿ ಜನಿಸಿದ ಮಕ್ಕಳಲ್ಲಿಯೇ ಫುಡ್ ಅಲರ್ಜಿ ಹೆಚ್ಚು..! ಏಕೆ ಗೊತ್ತಾ?
ಮಕ್ಕಳು ಒಂದು ಹಂತದವರೆಗೂ ದೊಡ್ಡಾಗುವವರೆಗೂ ಅವರ ಆರೋಗ್ಯದ ಮೇಲೆ ತುಸು ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಏಕೆಂದರೆ ಚಿಕ್ಕ ಮಕ್ಕಳು ಬಹುಬೇಗ ಅನಾರೋಗ್ಯಕ್ಕೆ ಒಳಗಾಗುವುದನ್ನು ನಾವು ನೋಡಬಹುದು. ಅವರಲ್ಲಿ ಇಮ್ಯೂನಿಟಿ ಪರ್ ಅಷ್ಟೊಂದು ಬೆಳವಣಿಗೆ ಆಗಿರದ ಕಾರಣ ಬಹಳ ಬೇಗ ಕಾಯಿಲೆಗಳಿಗೆ ಒಳಗಾಗುತ್ತಿರುತ್ತಾರೆ.
ಅದಕ್ಕಾಗಿಯೇ ಮಕ್ಕಳ ತಜ್ಞರು ಶಿಶುಗಳ ಮೇಲೆ ಹೆಚ್ಚಿನ ಗಮನವಿಡುವುದು, ಆರೈಕೆ ಮಾಡುವಂತೆ ಸಲಹೆ ನೀಡುತ್ತಾರೆ. ಹಾಗೆ ಅವರ ಮೃದುವಾದ ತ್ವಚೆಗೆ ಅಲರ್ಜಿಯಂತಹ ಸಮಸ್ಯೆ ಕಂಡುಬರುವುದು ಸಾಮಾನ್ಯ ಎನ್ನುವಂತಾಗಿದೆ. ಸಣ್ಣ ಪುಟ್ಟ ವಿಚಾರಗಳಿಗೂ ಅವರಲ್ಲಿ ಅನಾರೋಗ್ಯ ಸಮಸ್ಯೆ ಎದುರಾಗುವುದಕ್ಕೆ ಇದು ಸಾಕ್ಷಿಯಾಗಿದೆ.

ಹಾಗೆ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಲು ಹಲವು ಕಾರಣಗಿರುತ್ತದೆ. ಅದರಲ್ಲಿ ನಾವು ಮಕ್ಕಳು ಜನಿಸುವ ಸಮಯ ಕೂಡ ಅವರ ಆರೋಗ್ಯ ದೃಷ್ಟಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ತಿಳಿದಿರಬೇಕು. ಒಂದು ಚಳಿಗಾಲದಲ್ಲಿ ಜನಿಸುವ ಮಕ್ಕಳು ಒಂದಲ್ಲಾ ಒಂದು ರೀತಿಯ ಅನಾರೋಗ್ಯ ಸಮಸ್ಯೆಗೆ ಒಳಗಾಗುತ್ತಾರೆ ಎಂದು ಮಕ್ಕಳು ವೈದ್ಯರು ಹೇಳುತ್ತಾರೆ.
ಚಳಿಗಾಲದಲ್ಲಿ ಜನಿಸಿದ ಮಕ್ಕಳು ಆಹಾರ ಅಲರ್ಜಿಯ ಅಪಾಯವನ್ನು ಏಕೆ ಹೊಂದಿರುತ್ತಾರೆ? ಇದರ ಹಿಂದಿನ ಕಾರಣಗಳೇನು ಎಂಬುದನ್ನು ನಾವಿಂದು ತಿಳಿದುಕೊಳ್ಳಉವ ಪ್ರಯತ್ನ ಮಾಡೋಣ.
ಪ್ರಖರ ಸೂರ್ಯನ ಕಿರಣ ಇಲ್ಲದಿರುವುದು
ನಮಗೆ ಸೂರ್ಯನ ಕಿರಣಗಳು ಎಷ್ಟು ಮುಖ್ಯ ಎಂದು ತಿಳಿಸಿದೆ. ಬೆಳಗನ ಜಾವದಲ್ಲಿ ಸೂರ್ಯನ ಕಿರಣಗಳು ನಮ್ಮ ಮೈ ಮೇಲೆ ಬೀಳಬೇಕು. ಇದರಿಂದ ಹಲವು ರೀತಿಯ ಆರೋಗ್ಯಕರ ಪ್ರಯೋಜನಗಳಿವೆ. ಆದರೆ ಚಳಿಗಾಲದಲ್ಲಿ ಬೆಳಗ್ಗೆ ಬಹಳ ಕಾಲದವರೆಗೂ ಸೂರ್ಯದ ದರ್ಶನವೇ ಆಗುವುದಿಲ್ಲ. ಹಾಗೆ ಈ ಕಿರಣಗಳು ಹೆಚ್ಚು ಪ್ರಖರತೆಯಿಂದಲೂ ಕೂಡಿರುವುದಿಲ್ಲ. ಹೀಗಾಗಿ ಚಳಿಗಾಲದಲ್ಲಿ ಜನಿಸುವ ಮಕ್ಕಳಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯಿಂದ ಅತಿಯಾದ ಪ್ರತಿಕ್ರಿಯೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಮತ್ತು ಆಹಾರ ಅಲರ್ಜಿಗಳಿಗೆ ಕಾರಣವಾಗಬಹುದು.
ಜೀರ್ಣಕ್ರಿಯೆಯಲ್ಲೂ ತೊಡಕು
ಚಳಿಗಾಲದಲ್ಲಿ ಮಕ್ಕಳು ಹೆಚ್ಚಾಗಿ ಹೊರಗಿನ ಪರಿಸರದೊಂದಿಗೆ ಬೆೆಯದೇ ಇರುವುದರಿಂದಾಗಿ ಕರುಳಿನ ಆರೋಗ್ಯಕ್ಕೆ ಅಗತ್ಯವಾಗಿರುವ ಮೈಕ್ರೋಬಯೋಟಾ ಎಂಬ ಸೂಕ್ಷ್ಮಾಣುಜೀವಿಯ ಅಭಿವೃದ್ಧಿಯಲ್ಲಿ ವ್ಯತ್ಯಾಸ ಉಂಟಾಗಲಿದೆ. ಇದು ಆಹಾರದ ಅಲರ್ಜಿ ಸೇತಿ ಇನ್ನಿತರ ಸಮಸ್ಯೆಗೆ ಕಾರಣವಾಗಬಹುದು.
ಮನೆಯೊಳಗಿನ ಸೂಕ್ಷ್ಮಾಣುಗಳು
ಚಳಿಗಾಲದಲ್ಲಿ ಮಕ್ಕಳನ್ನು ಹೆಚ್ಚಿನ ಸಮಯ ಮನೆಯ ಒಳಗೆ ಕಳೆಯಲು ಬಿಡುವುದರಿಂದ ಮನೆಯಲ್ಲಿನ ಅಲರ್ಜಿಗೆ ಕಾರಣವಾಗುವ ಧೂಳು, ಹುಳುಗಳ ತ್ಯಾಜ್ಯ, ಸಾಕು ಪ್ರಾಣಿಗಳಿಂದ ಹರಡುವ ಸೂಕ್ಷ್ಮಾಣು ಜೀವಿಗಳು ಮಕ್ಕಳಲ್ಲಿ ಸಮಸ್ಯೆ ತರಬಹುದು.
ಫುಡ್ ಅಲರ್ಜಿಯಿಂದ ಮಕ್ಕಳನ್ನು ಪಾರು ಮಾಡುವುದು ಹೇಗೆ?
ಮಕ್ಕಳಿಗೆ ಫುಡ್ ಅರ್ಜಿಯಿಂದ ಅನಾರೋಗ್ಯಕ್ಕೆ ಒಳಗಾಗುವ ಸಂಭವವಿದೆ ಎಂದು ತಿಳಿದರೆ ಅವರಿಗೆ ಹೆಚ್ಚಿನ ವಿಟಮಿನ್ ಡಿ ಸಿಗುವಂತೆ ನೋಡಿಕೊಳ್ಳಿ. ಇದರಿಂದ ಮಕ್ಕಳ ರೋಗ ನಿರೋಧಕ ಶಕ್ತಿ ಸಹ ಹೆಚ್ಚಾಗುವುದನ್ನು ಖಚಿತಪಡಿಸಿಕೊಳ್ಳಿ.
ಹೆಚ್ಚು ಹಾಲು ಕುಡಿಸುವುದು
ಶಿಶುಗಳಿಗೆ ತಾಯಿಯ ಹಾಲಿಗಿಂತಲೂ ಬೇರೆ ಯಾವುದೇ ಶ್ರೇಷ್ಠ ಆಹಾರವಿಲ್ಲ ಎನ್ನಲಾಗುತ್ತದೆ. ಹೀಗಾಗಿ ಚಳಿಗಾಲದಲ್ಲಿ ಜನಿಸಿದ ಮಕ್ಕಳಿಗೆ ಹೆಚ್ಚು ಹೆಚ್ಚು ಸ್ತನಪಾನ ಮಾಡಿಸಬೇಕು. ಇದರಿಂದ ಮಕ್ಕಳಲ್ಲಿ ನೈಸಸರಗಿಕವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ.
ಮಗುವಿನ ವಯಸ್ಸು ಸೂಕ್ತವಾಗಿದ್ದರೆ, ಮೊಸರು ಅಥವಾ ಪೂರಕಗಳಂತಹ ಪ್ರೋಬಯಾಟಿಕ್-ಭರಿತ ಆಹಾರಗಳು ಸೂಕ್ಷ್ಮಜೀವಿಯ ವೈವಿಧ್ಯತೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಮತ್ತು ಮಗುವಿನ ಕರುಳಿನ ಆರೋಗ್ಯಕರ ಬ್ಯಾಕ್ಟೀರಿಯಾವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಡೈರಿ ಉತ್ಪನ್ನಗಳು, ಮೊಟ್ಟೆಗಳ ಮತ್ತು ಕಡಲೆಕಾಯಿಗಳಂತಹ ಸಾಮಾನ್ಯ ಅಲರ್ಜಿನ್‌ಗಳಿಗೆ ಮಕ್ಕಳನ್ನು ಮೊದಲೇ ಒಡ್ಡುವುದರಿಂದ ಆಹಾರ ಅಲರ್ಜಿಯನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಕಡಿಮೆ ಮಾಡಬಹುದು.



Click it and Unblock the Notifications