Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಮಕ್ಕಳಿಗೆ ಮೀನು ಯಾವ ವಯಸ್ಸಿನಲ್ಲಿ ಕೊಡಬಹುದು? ಹೇಗೆ ಕೊಟ್ಟರೆ ಸುರಕ್ಷಿತ?
ಮಾಂಸಾಹಾರಗಳಲ್ಲಿ ಮೀನು ಅತ್ಯಂತ ಉತ್ತಮವಾದ ಆಹಾರ. ಮೀನಿನಲ್ಲಿ ಪ್ರೋಟೀನ್ ಸಮೃದ್ಧವಾಗಿದ್ದು, ಮನುಷ್ಯನನ್ನು ಆರೋಗ್ಯವಾಗಿಡೋದು ಮಾತ್ರವಲ್ಲದೇ ಅನೇಕ ರೋಗಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಮಕ್ಕಳ ಆರೋಗ್ಯಕ್ಕೂ ಮೀನು ಉತ್ತಮವಾದ ಆಹಾರ ಅಂತಾನೇ ಹೇಳಬಹುದು. ಹಾಗಾದ್ರೆ ಪುಟ್ಟ ಮಕ್ಕಳಿಗೆ ಯಾವ ವಯಸ್ಸಿನಲ್ಲಿ ಮೀನು ನೀಡಬೇಕು? ಎಂತಹ ಮೀನು ಮಕ್ಕಳಿಗೆ ನೀಡಬೇಕು ಅನ್ನೋದ್ರ ಬಗ್ಗೆ ಮಾಹಿತಿ ತಿಳಿಯೋಣ.

ಯಾವ ವಯಸ್ಸಿನಲ್ಲಿ ಮಕ್ಕಳಿಗೆ ಮೀನು ಕೊಡಬೇಕು?
ಮಾಂಸಾಹಾರ ಮನೆಯಲ್ಲಿ ಸೇವಿಸುವವರು ತಮ್ಮ ಮಕ್ಕಳಿಗೂ ಕೂಡ ಮೀನು ತಿನ್ನೋದಕ್ಕೆ ಅಭ್ಯಾಸ ಮಾಡೋದಕ್ಕೆ ಇಷ್ಟ ಪಡುತ್ತಾರೆ. ಆದರೆ ಹೆಚ್ಚಿನವರಿಗೆ ಯಾವ ಸಮಯದಲ್ಲಿ ಮಕ್ಕಳಿಗೆ ಮಾಂಸಾಹಾರ ನೀಡಬೇಕು ಅನ್ನೋದ್ರ ಬಗ್ಗೆ ಮಾಹಿತಿ ಇರೋದಿಲ್ಲ. ಮಕ್ಕಳಿಗೆ ಆರು ತಿಂಗಳು ತುಂಬಿದ ನಂತರ ಅವರಿಗೆ ಘನ ಆಹಾರಗಳನ್ನು ನೀಡೋದನ್ನು ಅಭ್ಯಾಸ ಮಾಡಿಸಲಾಗುತ್ತದೆ.
ಹೀಗಾಗಿ ಮೀನು ಕೂಡ ಮಕ್ಕಳಿಗೆ ಆರು ತಿಂಗಳು ತುಂಬಿದ ತಕ್ಷಣವೇ ನೀಡಲು ಶುರು ಮಾಡಿ. ಆದರೆ ಅಲರ್ಜಿ ಬಗ್ಗೆ ಗಮನ ಕೊಡಿ. ಕೆಲವು ಮಕ್ಕಳಿಗೆ ಅಲರ್ಜಿ ಆಗುವ ಸಾಧ್ಯತೆ ಇದ್ದು, ಹೀಗಿದ್ದಾಗ ಎಂಟು ತಿಂಗಳು ತುಂಬಿದ ನಂತರ ಮೀನು ನೀಡಬಹುದು. ಹೆಚ್ಚಿನ ಮನೆಗಳಲ್ಲಿ ಮಕ್ಕಳಿಗೆ ಒಂದು ವರ್ಷ ತುಂಬುವವರೆಗೂ ಮಾಂಸಾಹಾರ ನೀಡೋದಿಲ್ಲ. ಇದು ನಿಮ್ಮ ಆಯ್ಕೆಗೆ ಬಿಟ್ಟಿದ್ದು. ಮಕ್ಕಳಿಗೆ ಮೀನು ನೀಡೋದಕ್ಕೆ ಭಯ ಇದ್ದರೆ ನೀವು ಮಕ್ಕಳ ವೈದ್ಯರನ್ನು ಸಂಪರ್ಕಿಸಿ ನಂತರ ಶುರು ಮಾಡಬಹುದು. ಇನ್ನೂ ಮೀನಿನಲ್ಲಿ ಮುಳ್ಳಿರೋದ್ರಿಂದ ಮಕ್ಕಳಿಗೆ ಮೀನು ನೀಡೋವಾಗ ಆದಷ್ಟು ಜಾಗರೂಕರಾಗಿ ಇರಬೇಕು.
ಮಕ್ಕಳಿಗೆ ಮೀನು ನೀಡುವ ವಿಧಾನ ಹೇಗೆ?
ಮೀನು ಮಾತ್ರವಲ್ಲ ಬೇರೆ ಯಾವುದೇ ಆಹಾರವನ್ನು ಮಕ್ಕಳಿಗೆ ಪರಿಚಯ ಮಾಡೋವಾಗ ತುಂಬಾನೇ ಹುಷಾರಾಗಿ ಇರಬೇಕು. ಯಾಕಂದ್ರೆ ಮಕ್ಕಳು ಅದಕ್ಕೆ ಹೊಂದಿಕೊಳ್ಳದೇ ಹೋದರೆ ಅದರಿಂದ ಅಲರ್ಜಿ ಆಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ವಿಧ ವಿಧದ ಮೀನುಗಳನ್ನು ಮಕ್ಕಳಿಗೆ ಒಂದೇ ಬಾರಿಗೆ ನೀಡೋದಕ್ಕೆ ಹೋಗಬೇಡಿ. ಮೊದಲಿಗೆ ಒಂದು ಜಾತಿಯ ಮೀನನ್ನು ಮಾತ್ರ ನೀಡಿ. ಅಕ್ಕಳು ಅದಕ್ಕೆ ಹೊಂದಿಕೊಂಡರೆ ನಂತರ ನಿಧಾನವಾಗಿ ಬೇರೆ ಮೀನುಗಳನ್ನು ಕೊಡಿ.
ಆದಷ್ಟು ಮುಳ್ಳು ಇರದೇ ಇರುವ ಮೀನುಗಳನ್ನು ಮಕ್ಕಳಿಗೆ ನೀಡಿ. ಇನ್ನೂ ಹಬೆಯಲ್ಲಿ ಬೇಯಿಸಿದ ಮೀನನ್ನು ಮಕ್ಕಳಿಗೆ ಕೊಟ್ಟರೆ ಉತ್ತಮ. ಮೀನು ಫ್ರೈ ಕೊಡಬೇಡಿ. ಯಾಕಂದ್ರೆ ಅದ್ರಲ್ಲಿ ಮಸಾಲೆ ಹಾಗೂ ಎಣ್ಣೆಯ ಅಂಶ ಹೆಚ್ಚಾಗಿ ಇರೋದ್ರಿಂದ ಮಕ್ಕಳ ಆರೋಗ್ಯಕ್ಕೆ ಸಮಸ್ಯೆ ಉಂಟಾಗುತ್ತದೆ.
ಮೀನು ತಿನ್ನೋದ್ರಿಂದ ಆಗುವ ಆರೋಗ್ಯಕರ ಪ್ರಯೋಜನಗಳೇನು?
* ಮೀನು ಪ್ರೋಟೀನ್‌ನ ಪ್ರಬಲ ಮೂಲವಾಗಿದೆ
* ಮೀನು ಒಮೆಗಾ -3 ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿದೆ. ಆದ್ದರಿಂದ ಮಗುವಿನ ಮೆದುಳಿನ ಬೆಳವಣಿಗೆಗೆ ಉತ್ತಮವಾದ ಮೀನುಗಳನ್ನು ಆಯ್ಕೆ ಮಾಡಿ ತಿನ್ನಲು ನೀಡಿ
* ಮೀನಿನ ಮಾಂಸ ಹೃದಯವನ್ನು ಆರೋಗ್ಯವಾಗಿಡೋದಕ್ಕೆ ಸಹಾಯಕಾರಿಯಾಗಿದೆ
* ಮೀನು ಕಣ್ಣುಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.
* ಮೀನು ವಿಟಮಿನ್ ಎ, ಡಿ, ಇ ಮತ್ತು ಕೆ ನಂತಹ ಕೊಬ್ಬು ಕರಗುವ ವಿಟಮಿನ್‌ಗಳ ಅತ್ಯುತ್ತಮ ಮೂಲವಾಗಿದೆ.
* ಮೀನಿನಲ್ಲಿ ಅಯೋಡಿನ್ ಕೂಡ ಸಮೃದ್ಧವಾಗಿದ್ದು, ಇದು ನಮ್ಮ
ದೇಹವು ಉತ್ಪಾದಿಸಲು ಸಾಧ್ಯವಾಗದ ಪ್ರಮುಖ ಖನಿಜವಾಗಿದೆ.
ಮಕ್ಕಳಿಗೆ ಮೀನು ಕೊಡುವಾಗ ಈ ಬಗ್ಗೆ ಗಮನ ಕೊಡಿ!
* ಮೀನು ಅಡುಗೆಗೆ ಬಳಸುವ ಮೊದಲು ಅದನ್ನು ಚೆನ್ನಾಗಿ ಸ್ವಚ್ಛಗೊಳಿಸಿ
* ಹೆಚ್ಚಿನ ಮರ್ಕ್ಯೂರಿ ಅಂಶ ಇರುವ ಮೀನನ್ನು ಬಳಸೋದಕ್ಕೆ ಹೋಗಬೇಡಿ
* ಮಕ್ಕಳಿಗೆ ತಜಾ ಮೀನನ್ನು ಮಾತ್ರ ಕೊಡಿ. ಎರಡು-ಮೂರು ದಿನಗಳ ಕಾಲ ಫ್ರಿಡ್ಜ್ ನಲ್ಲಿಟ್ಟ ಮೀನು ಕೊಡದಿರಿ
* ಹಸಿ ಮೀನಿನ ಮಾಂಸವನ್ನೂ ಯಾವುದೇ ಕಾರಣಕ್ಕೂ ಮಕ್ಕಳಿಗೆ ಕೊಡಬೇಡಿ
ಮಕ್ಕಳಿಗೆ ಯಾವ ಮೀನು ಕೊಟ್ಟರೆ ಒಳ್ಳೆಯದು?
ಮಕ್ಕಳಿಗೆ ಹೆಚ್ಚಿನ ಪ್ರೋಟೀನ್ ಅಂಶ ಇರುವ ಮೀನನ್ನು ಮಾತ್ರ ನೀಡಿದರೆ ಸಾಕು. ಇನ್ನೂ ಹೆಚ್ಚಿನ ಮರ್ಕ್ಯೂರಿ ಅಂಶ ಇರುವ ಮೀನನ್ನು ಮಕ್ಕಳಿಗೆ ನೀಡದಿರಿ. ಇನ್ನೂ ಹೆಚ್ಚಾಗಿ ಮುಳ್ಳುಗಳೇ ತುಂಬಿರೋ ಮೀನನ್ನು ಮಕ್ಕಳಿಗೆ ಕೊಡಬೇಡಿ. ಯಾಕಂದ್ರೆ ಮಕ್ಕಳ ಗಂಟಲಿನಲ್ಲಿ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾದ್ರೆ ಯಾವೆಲ್ಲಾ ಮೀನು ಮಕ್ಕಳ ಆರೋಗ್ಯಕ್ಕೆ ಒಳ್ಳೆಯದು ಅನ್ನೋದನ್ನು ನೋಡೋಣ :
* ಪಾಮ್ ಫ್ರೆಟ್
* ಸಾಲ್ಮಾನ್
* ಅಂಜಲ್
ಮಕ್ಕಳಿಗೆ ಯಾವ ಮೀನುಗಳನ್ನು ಕೊಡಬಾರದು?
*ಬಾಂಗ್ಡಾ : ಬಾಂಗ್ಡಾ ಕರ್ನಾಟಕದ ಕರಾವಳಿ ತೀರದಲ್ಲಿ ಸಿಗುವ ವಿಶೇಷ ಮೀನು. ತಿನ್ನೋದಕ್ಕೆ ತುಂಬಾನೇ ಟೇಸ್ಟಿಯಾಗಿರುತ್ತದೆ. ಆದರೆ ಇದ್ರಲ್ಲಿ ಮರ್ಕ್ಯೂರಿ ಅಂಶ ಅಧಿಕ ಆಗಿರೋದ್ರಿಂದ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ಈ ಮೀನು ಕೊಡೋದಕ್ಕೆ ಹೋಗಬೇಡಿ.
* ಕಪ್ಪೆ ಚಿಪ್ಪು : ಸಮುದ್ರ ಆಹಾರಗಳಲ್ಲಿ ಚಿಪ್ಪು ಹೊಂದಿರುವ ಜೀವಿಗಳು ತುಂಬಾನೇ ಟೇಸ್ಟಿಯಾಗಿರುತ್ತದೆ. ಉದಾಹರಣೆಗೆ ಏಡಿ, ಕಪ್ಪೆ ಚಿಪ್ಪು, ಸಿಗಡಿ ಮುಂತಾದವುಗಳು. ಇವುಗಳನ್ನು ಕೂಡ ಮಕ್ಕಳಿಗೆ ಕೊಡೋದಕ್ಕೆ ಹೋಗಬೇಡಿ. ಏಕೆಂದರೆ ಇದರಲ್ಲಿ ಮರ್ಕ್ಯೂರಿ ಅಂಶ ಕಡಿಮೆ ಇದ್ದರೂ ಕೂಡ ಇದನ್ನು ತಿಂದ ಮೇಲೆ ಚಿಕ್ಕ ಮಕ್ಕಳಿಗೆ ಅಲರ್ಜಿ ಆಗುವ ಸಾಧ್ಯತೆ ಹೆಚ್ಚಿರುತ್ತದೆ.
ಮೀನು ಆರೋಗ್ಯ ದೃಷ್ಟಿಯಿಂದ ತುಂಬಾನೇ ಒಳ್ಳೆಯದು. ಆದರೆ ಮಕ್ಕಳಿಗೆ ಇದನ್ನು ನೀಡುವಾಗ ತುಂಬಾನೇ ಹುಷಾರಾಗಿ ಇರಬೇಕು. ಮುಳ್ಳು ಹಾಗೂ ಅಲರ್ಜಿ ಅಪಾಯ ಇರೋದ್ರಿಂದ ಜಾಗೃತೆ ವಹಿಸೋದು ತುಂಬಾನೇ ಮುಖ್ಯ.



Click it and Unblock the Notifications


