Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಮೊಬೈಲ್ ಕೊಡದಿದ್ದಕ್ಕೆ ತಾಯಿ ತಲೆಗೆ ಬ್ಯಾಟ್‌ನಿಂದ ಹೊಡೆದ ಮಗ: ಪೋಷಕರೇ ಇನ್ನಾದರು ಎಚ್ಚೆತ್ತುಕೊಳ್ಳಿ
ಚಿಕ್ಕ ಹುಡುಗನೊಬ್ಬ ಮೊಬೈಲ್ ಕೊಡಲಿಲ್ಲ ಎಂದು ಬ್ಯಾಟ್‌ನಲ್ಲಿ ತಾಯಿ ತಲೆಗೆ ಹೊಡೆದ ವೀಡಿಯೋ ವೈರಲ್ ಆಗುತ್ತಿದ್ದು, ಪ್ರತಿಯೊಬ್ಬ ಪೋಷಕರು ಇದನ್ನು ನೋಡಲೇಬೇಕು, ಈ ಮೊಬೈಲ್ ನೀಡುವುದರಿಂದ ಅದು ಎಂಥ ಕೆಟ್ಟ ಪರಿಣಾಮ ಬೀರುತ್ತಿದೆ ಎಂಬುವುದಕ್ಕೆ ಇದು ಒಂದು ಉದಾಹರಣೆ ಅಷ್ಟೇ, ಎಚ್ಚೆತ್ತುಕೊಳ್ಳದಿದ್ದರೆ ಪೋಷಕರೇ ತಪ್ಪಿದ್ದಲ್ಲ ಅಪಾಯ.
ಎಷ್ಟೊಂದು ಭಯಾನಕವಾಗಿದೆ ವೀಡಿಯೋ
ಅ ಹುಡುಗ ಇನ್ನೂ ಸ್ಕೂಲ್ ಯೂನಿಫಾರಂನಲ್ಲಿ ಇದ್ದಾನೆ, ಸ್ಕೂಲ್‌ನಿಂದ ಆಗಷ್ಟೇ ಬಂದಿದ್ದಾನೆ ಕಾಣುತ್ತೆ, ಬಂದವನೇ ಮೊಬೈಲ್ ಹಿಡಿದು ಕೂತಿದ್ದಾನೆ, ಇದನ್ನು ನೋಡಿದ ತಾಯಿ ಮೊಬೈಲ್ ಕಿತ್ತಿಕೊಂಡು ಒಂದು ಪಟ್ಟು ಕೂಡ ನೀಡಿದ್ದಾರೆ, ನಂತರ ಬುಕ್ ತೆಗೆದು ಓದುವಂತೆ ಸೂಚಿಸುತ್ತಾಳೆ, ಹುಡುಗನೂ ಬುಕ್ ತೆಗೆದು ಓದುವಂತೆ ನಟಿಸುತ್ತಾನೆ, ಅವನ ಕೋಪ ಆ ಬುಕ್‌ಗೆ ಗುದ್ದಿ ತೋರಿಸಿಕೊಳ್ಳುವುದನ್ನು ಕಾಣಬಹುದು. ತಾಯಿಗೆ ಫೋನ್ ಬರುತ್ತೆ, ಅವಳು ಫೋನ್‌ನಲ್ಲಿ ಮಾತನಾಡುತ್ತಾ ಏನೋ ತಿನ್ನುತ್ತಿರುತ್ತಾಳೆ, ಇವನು ಎದ್ದು ಒಳಗೆ ಹೋಗುತ್ತಾನೆ, ನಂತರ ಬಂದವನೇ ಬ್ಯಾಟ್ ತೆಗೆದು ತಾಯಿ ತಲೆಗೆ ಹೊಡೆಯುತ್ತಾನೆ.

ಇನ್ನೂ ಶಾಕಿಂಗ್ ಎಂದರೆ ಆ ಹುಡುಗ ನಂತರ ತೋರಿದ ವರ್ತನೆ
ಕೋಪದಿಂದ ತಾಯಿ ತಲೆಗೆ ಹೊಡೆದಿದ್ದಾನೆ, ತಾಯಿ ಪ್ರಜ್ಞಾಹೀನಳಾಗಿ ಬಿದ್ದಿದ್ದಾಳೆ, ಆದರೆ ಅವನು ಅದು ಕೂಡ ಕೇರ್ ಮಾಡದೆ ಮತ್ತೆ ಮೊಬೈಲ್ ತೆಗೆದು ನೋಡುತ್ತಾನೆ.
ಈ ವೀಡಿಯೋ ನೋಡಿದರೆ ಖಂಡಿತ ಎಲ್ಲಾ ಪೋಷಕರು ಯೋಚಿಸಲೇಬೇಕು
ಹೌದು ಮಕ್ಕಳು ಹಠ ಮಾಡುತ್ತಾರೆ, ಸ್ವಲ್ಪ ಹೊತ್ತು ಮೊಬೈಲ್ ನೋಡಲಿ ಎಂದು ಮೊಬೈಲ್ ಕೊಡುವ ಎಷ್ಟೋ ಪೋಷಕರಿದ್ದಾರೆ, ಆ ಮೊಬೈಲ್ ಅವರ ಮನಸ್ಥಿತಿಯ ಮೇಲೆ ತುಂಬಾನೇ ಕೆಟ್ಟ ಪರಿಣಾಮ ಬೀರುತ್ತಿದೆ. ಮೊಬೈಲ್ ಕೊಟ್ಟಾಗ ಸುಮ್ಮನೆ ಮೊಬೈಲ್ ನೋಡುವ ಮಕ್ಕಳು, ಅದನ್ನು ಕೇಳಿದಾಗ ಕೊಡಲ್ಲ, ಬಲವಂತವಾಗಿ ಅವರ ಕೈಯಿಂದ ತೆಗೆದುಕೊಂಡಾಗ ಅಳುತ್ತಾರೆ, ಒದ್ದಾಡುತ್ತಾರೆ, ಹೊಡೆಯಲು ಬರ್ತಾರೆ .... ಮಕ್ಕಳ ಕೈಯಲ್ಲಿ ಮೊಬೈಲ್ ನೀಡುವ ಎಲ್ಲಾ ಪೋಷಕರಿಗೆ ಈ ಅನುಭವವಾಗಿರುತ್ತದೆ, ನಾವು ಗಮನಿಸದೆ ಹೋದರೆ ಮುಂದೆ ಈ ರೀತಿ ಅಪಾಯಕಾರಿ ವರ್ತನೆ ತೋರಬಹುದು, ಇಲ್ಲಿ ಆ ಮಕ್ಕಳು ತಪ್ಪಿತಸ್ಥರಲ್ಲ ಪೋಷಕರೇ ತಪ್ಪಿತಸ್ಥರು. ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಅಭ್ಯಾಸ ಮಾಡುವ ಮುನ್ನ ಯೋಚಿಸಬೇಕು.
ಮಕ್ಕಳು ಹಠ ಮಾಡುತ್ತಾರೆ ಎಂದಾಗ ಅವರೇ ಮೊಬೈಲ್ ನೀಡುತ್ತಾರೆ, ನಂತರ ಅವರನ್ನು ಮೊಬೈಲ್ ನೋಡಬೇಡ ಎಂದು ಬೈಯ್ಯುವುದು ಮಾಡುತ್ತಾರೆ
ಮಕ್ಕಳು ಹಠ ಹಿಡಿದರು ಎಂದು ಮೊಬೈಲ್ ಕೊಡುವುದು ಮಾಡಬೇಡಿ, ಅವರ ಎದುರಿಗೆ ನೀವು ಕೂಡ ಮೊಬೈಲ್ ನೋಡಬೇಡಿ. ಅವರ ಜೊತೆ ಹೆಚ್ಚು ಸಮಯ ಕಳೆಯಿರಿ, ಅವರು ಎಂಗೇಜ್ ಆಗಲು ಏನು ಮಾಡಬೇಕು ಎಂದು ಆಲೋಚಿಸಿ.
ಮಕ್ಕಳ ಬುದ್ಧಿ ಶಕ್ತಿ ಮೇಲೆ ತುಂಬಾನೇ ಕೆಟ್ಟ ಪರಿಣಾಮ ಬೀರುತ್ತದೆ
ತಜ್ಞರು ಮೊಬೈಲ್ ಮಕ್ಕಳ ಮೇಲೆ ಬೀರುತ್ತಿರುವ ಪರಿಣಾಮದ ಬಗ್ಗೆ ಎಚ್ಚರಿಸುತ್ತಲೇ ಬರ್ತಾ ಇದ್ದಾರೆ, ಆದರೂ ಪೋಷಕರು ಎಚ್ಚೆತ್ತುಕೊಳ್ಳುತ್ತಿಲ್ಲ.
ಹಾಗಾದರೆ ಮೊಬೈಲ್ ಕೊಡಲೇಬಾರದ?
ಕೊಡಬಾರದು, ಅದು ಪ್ರಾಕ್ಟಿಕಲ್ ಆಗಿ ಸ್ವಲ್ಪ ಕಷ್ಟ, ಅವರಿಗೆ ಇಂತಿಷ್ಟು ಟೈಮ್ ಅಂತ ಸೆಟ್ ಮಾಡಿ, 15 ನಿಮಿಷ ಅರ್ಧ ಗಂಟೆ ಮೊಬೈಲ್‌ನಲ್ಲಿ ಗೇಮ್ ಆಡುತ್ತೇನೆ ಎಂದರೆ ಕೊಡಬಹುದು, ಆದರೆ ಮೊಬೈಲ್ ಕೊಟ್ಟು ನಿಮ್ಮ ಪಾಡಿಗೆ ನೀವಿರಬೇಡಿ, ಅವರು ಎಂಥ ಕಂಟೆಂಟ್ ನೋಡುತ್ತಿದ್ದಾರೆ ಎಂಬುವುದು ಕೂಡ ಗಮನಿಸಬೇಕು.
ಪೋಷಕರೇ ಈಗ ನಾವು ಮಕ್ಕಳ ವಿಷಯದಲ್ಲಿ ಎಷ್ಟು ಜಾಗ್ರತೆವಹಿಸಿದರೂ ಸಾಲದು, ಅವರನ್ನು ಉತ್ತಮ ವ್ಯಕ್ತಿಯನ್ನಾಗಿ ಬೆಳೆಸಬೇಕೆಂದರೆ ನಾವು ಅವರ ಜೊತೆ ಹೆಚ್ಚು ಸಮಯ ಕಳೆಯಬೇಕಾಗುತ್ತದೆ...



Click it and Unblock the Notifications
