Latest Updates
-
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ!
ಈ ರೀತಿ ಹೇಳಿ ಕೊಟ್ಟರೆ ಮಕ್ಕಳು ಗೌರವ ಕೊಡೋದನ್ನು ಕಲಿಯುತ್ತಾರೆ!
ನಾವು ಒಬ್ಬ ವ್ಯಕ್ತಿಯಿಂದ ಹೇಗೆ ಗೌರವವನ್ನು ಪಡೆಯೋದಕ್ಕೆ ಇಚ್ಛಿಸುತ್ತೇವೆಯೋ ಅದೇ ರೀತಿ ನಾವು ಕೂಡ ಅವರಿಗೆ ಗೌರವ ಕೊಡಬೇಕಾಗಿರೋದು ತುಂಬಾನೇ ಮುಖ್ಯ. ಗೌರವ ಕೊಡುವ ಗುಣಗಳನ್ನು ಚಿಕ್ಕಂದಿನಿಂದಲೇ ಮಕ್ಕಳು ಬೆಳೆಸಿಕೊಳ್ಳಬೇಕು. ಇದನ್ನು ರೂಢಿಸಿಕೊಳ್ಳುವಂತೆ ಮಾಡುವುದು ಪೋಷಕರ ಕರ್ತವ್ಯ. ಹಾಗಾದ್ರೆ ಮಕ್ಕಳಲ್ಲಿ ಗೌರವ ಕೊಡೋ ಗುಣವನ್ನು ಬೆಳೆಸಿಕೊಳ್ಳುವಂತೆ ಮಾಡೋದು ಹೇಗೆ ಅನ್ನೋದನ್ನು ತಿಳಿಯೋಣ.
1. ಸೂಕ್ಷ್ಮವಾಗಿ ನಡೆದುಕೊಳ್ಳಬೇಕು
ಕೆಲವೊಂದು ಸಮಯ ಸಂದರ್ಭಕ್ಕೆ ತಕ್ಕ ಹಾಗೆ ನಮ್ಮ ಮಾತು ಇರಬೇಕು. ಎಲ್ಲಾ ಸಂದರ್ಭಗಳಲ್ಲಿ ನಾವು ಕಿರುಚಾಡುತ್ತಾ ಏರು ಧ್ವನಿಯಲ್ಲಿ ಮಾತನಾಡಿದರೆ ಯಾವುದೇ ಪ್ರಯೋಜನವಿಲ್ಲ. ಇದರಿಂದ ತಮ್ಮ ಗೌರವಕ್ಕೆ ಧಕ್ಕೆ ಉಂಟಾಗುತ್ತದೆ. ಹೀಗಾಗಿ ನಾವು ಆದಷ್ಟು ಸೂಕ್ಷ್ಮವಾಗಿ ನಡೆದುಕೊಳ್ಳಬೇಕು. ಮಕ್ಕಳಲ್ಲಿ ಚಿಕ್ಕ ವಯಸ್ಸಿನಲ್ಲೇ ಈ ಗುಣಗಳನ್ನು ರೂಢಿಸಿಕೊಳ್ಳೋದಕ್ಕೆ ಕಲಿಸಿ.

2. ಮಕ್ಕಳ ಜೊತೆಗೆ ಮೃದುವಾಗಿ ಮಾತನಾಡಿ
ಮನೆಯೇ ಮೊದಲ ಪಾಠಶಾಲೆ ಅಂತಾರೆ. ಹೀಗಾಗಿ ನಾವು ಮನೆಯಲ್ಲಿ ಕಲಿಸಿಕೊಟ್ಟ ಜೀವನ ಮೌಲ್ಯಗಳನ್ನು ಮಕ್ಕಳು ಮುಂದೆ ಅವರ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ. ಹೀಗಾಗಿ ಮನೆಯಲ್ಲಿ ಮಕ್ಕಳ ಜೊತೆಗೆ ಮಾತನಾಡುವಾಗ ಮೃದುವಾಗಿ ಮಾತನಾಡಿ. ಆಗ ಅವರು ಕೂಡ ಅದನ್ನೇ ಕಲಿತುಕೊಳ್ಳುತ್ತಾರೆ. ನಿಮ್ಮ ಸ್ನೇಹಿತರು, ಸಂಬಂಧಿಕರು ಹಾಗೂ ಅಪರಿಚಿತರ ಬಳಿ ಕೂಡ ಅದೇ ರೀತಿ ಮಾತನಾಡುತ್ತಾರೆ.
3. ಧನಾತ್ಮಕ ಬಲವರ್ಧನೆ
ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ನಾವು ಏನನ್ನೇ ಕಲಿಸಿಕೊಟ್ಟರೂ ಕೂಡ ಅವರು ಅದನ್ನು ಸುಲಭವಾಗಿ ಕಲಿತುಕೊಂಡು ಬಿಡುತ್ತಾರೆ. ಮನೆಯಲ್ಲಿ ಮಕ್ಕಳಿಗಾಗಿ ಯಾರಾದರೂ ಏನನ್ನಾದರೂ ತಯಾರಿಸಿ ಕೊಟ್ಟರೆ ಅವರಿಗೆ ಥ್ಯಾಂಕ್ಸ್ ಹೇಳೋದನ್ನು ಅಭ್ಯಾಸ ಮಾಡಿಸಿ. ಅವರಿಗೆ ಯಾರಾದರೂ ಸಹಾಯ ಮಾಡಿದಾಗ ಧನ್ಯವಾದ ಹೇಳೋದನ್ನು ರೂಢಿಸಿಕೊಳ್ಳುವಂತೆ ಮಾಡಿ. ಇದರಿಂದ ಮಕ್ಕಳ ಗೌರವ ಕೂಡ ಹೆಚ್ಚಾಗುತ್ತದೆ.
4. ತಾಳ್ಮೆ ಕಲಿಸಿ
ಮನುಷ್ಯನಿಗೆ ತಾಳ್ಮೆ ಮುಖ್ಯ. ತಾಳ್ಮೆ ಕಳೆದುಕೊಂಡ ಮನುಷ್ಯ ತನ್ನ ಸ್ಥಿಮಿತವನ್ನೇ ಕಳೆದುಕೊಂಡು ಬಿಡುತ್ತಾನೆ. ತಾಳ್ಮೆ ಕಳೆದುಕೊಂಡ ವ್ಯಕ್ತಿ ಎಂತಹ ಕೆಟ್ಟ ಕೆಲಸ ಮಾಡೋದಕ್ಕೂ ಹಿಂಜರಿಯೋದಿಲ್ಲ. ಹೀಗಾಗಿ ನಿಮ್ಮ ಮಕ್ಕಳಿಗೆ ಚಿಕ್ಕಂದಿನಲ್ಲೇ ತಾಳ್ಮೆಯಿಂದ ಇರೋದು ಹೇಗೆ ಎನ್ನುವುದನ್ನು ಅಭ್ಯಾಸ ಮಾಡಿಸಿ. ಒಬ್ಬರ ಮಾತನ್ನು ತಾಳ್ಮೆಯಿಂದ ಆಲಿಸುವ ಗುಣವಿರಲಿ. ಏಕಾಏಕಿ ಪ್ರತಿಕ್ರಿಯೆ ನೀಡಬಾರದು ಅನ್ನೋದನ್ನು ತಿಳಿ ಹೇಳಿ. ಇದು ಕೂಡ ಇತರರಿಗೆ ನಾವು ಕೊಡುವ ಗೌರವದ ಒಂದು ಭಾಗವೇ ಸರಿ.
5. ತಪ್ಪುಗಳನ್ನು ಆ ಕ್ಷಣದಲ್ಲೇ ಸರಿಪಡಿಸಿ
ಚಿಕ್ಕ ಮಕ್ಕಳಿಗೆ ಅವರ ವಯಸ್ಸಿನಲ್ಲಿ ಏನು ಮಾಡಬೇಕು? ಮಾಡಬಾರದು? ಅನ್ನೊ ಬಗ್ಗೆ ಗೊತ್ತಿರೋದಿಲ್ಲ. ಕೆಲವೊಂದು ಸಲ ಮಕ್ಕಳು ಸಹಜವಾಗಿ ತಪ್ಪುಗಳನ್ನು ಮಾಡುತ್ತಾರೆ. ಆ ಸಂದರ್ಭದಲ್ಲಿ ಅಲ್ಲಿಯೇ ಅದನ್ನು ಸರಿಪಡಿಸಬೇಕು. ಅವರನ್ನು ಕರೆದು ಮೃದುವಾಗಿ ಮಾತನಾಡಿಸಿ. ಈ ರೀತಿ ಮಾಡುವುದು ತಪ್ಪು ಎಂದು ತಿಳಿಸಿ. ಮುಂದಿನ ಸರಿ ಖಂಡಿತ ಅವರು ಅಂತಹ ತಪ್ಪು ಮರುಕಳಿಸದಂತೆ ನೋಡಿಕೊಳ್ಳುತ್ತಾರೆ.
6. ಸಂಬಂಧಿಕರೊಂದಿಗೆ ಹೊಂದಾಣಿಕೆ ಮಾಡೋದನ್ನು ಕಲಿಸಿ
ಕೂಡಿ ಬಾಳಿದರೆ ಸ್ವರ್ಗ ಸುಖ ಅಂತಾರೆ ಹಾಗೆ ಮಕ್ಕಳಿಗೆ ಕೂಡು ಕುಟುಂಬದಲ್ಲಿ ಬದುಕುವುದು ಹೇಗೆ ಎಂಬುವುದನ್ನು ಕಲಿಸಿಕೊಡಬೇಕು. ಒಂದು ವೇಳೆ ನಿಮ್ಮ ಮಗು ವಿಭಕ್ತ ಕುಟುಂಬದಲ್ಲಿ ಬೆಳೆದಿದ್ದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ಗೊತ್ತಿರೋದಿಲ್ಲ. ಹೀಗಾಗಿ ನೀವು ಮಕ್ಕಳಿಗೆ ರಜೆ ಇರೋ ಸಂದರ್ಭದಲ್ಲಿ ಸಂಬಂಧಿಕರನ್ನೆಲ್ಲಾ ಒಟ್ಟು ಸೇರಿಸಿ ಕುಟುಂಬದ ಮಹತ್ವವೇನು? ಕುಟುಂಬದೊಳಗೆ ಹೊಂದಾಣಿಕೆ ಮಾಡಿಕೊಂಡು ಬದುಕೋದು ಹೇಗೆ ಎಂಬುವುದನ್ನು ಹೇಳಿಕೊಡಿ.
7. ಮಕ್ಕಳು ನಿಮ್ಮ ಗುಣಗಳನ್ನೇ ಕಲಿತುಕೊಳ್ಳುತ್ತಾರೆ
ಮನೆಯಲ್ಲಿ ಪೋಷಕರು ಎಂತಹ ಮಾತುಗಳನ್ನು ಆಡುತ್ತಾರೆಯೋ ಅದನ್ನೇ ಮಕ್ಕಳು ಕೂಡ ಕಲಿತುಕೊಳ್ಳುತ್ತಾರೆ. ಹೀಗಾಗಿ ನೀವು ಕೂಡ ಆದಷ್ಟು ಮಧುರವಾದ ಮಾತುಗಳನ್ನೇ ಮನೆಯಲ್ಲಿ ಆಡಬೇಕು. ಕೆಟ್ಟ ಭಾಷೆ, ಕೆಟ್ಟ ಪದ ಬಳಕೆ ಮಾಡಬಾರದು. ಮಕ್ಕಳು ಕೂಡ ಅದನ್ನೇ ಕಲಿಯುತ್ತಾರೆ. ನಿಮ್ಮ ಸಂಗಾತಿಯ ಬಳಿ ಕೂಡ ಆದಷ್ಟು ಸಮಾಧಾನವಾಗಿ ಮಾತನಾಡಿಸಿ. ನಿಮ್ಮಲ್ಲಿರುವ ಸಂಸ್ಕಾರವೇ ಮುಂದೆ ಮಕ್ಕಳಿಗೆ ರೂಢಿಯಾಗೋದು.
ಮಕ್ಕಳು ಪೋಷಕರ ಪ್ರತಿಬಿಂದ ಇದ್ದ ಹಾಗೆ. ನೀವು ಹೇಗಿರುತ್ತೀರೋ ಅದೇ ರೀತಿ ಅದೇ ಸಂಸ್ಕಾರವನ್ನು ಮಕ್ಕಳು ಕೂಡ ಕಲಿತುಕೊಂಡು ಬಿಡುತ್ತಾರೆ. ಹೀಗಾಗಿ ಚಿಕ್ಕಂದಿನಲ್ಲೇ ಮಕ್ಕಳಲ್ಲಿ ಒಳ್ಳೆಯ ಗುಣಗಳನ್ನು ಬೆಳೆಸಿದರೆ ಮುಂದೆ ಅವರು ಉತ್ತಮ ಪ್ರಜೆಯಾಗಿ ಬೆಳೆಯೋದಕ್ಕೆ ಸಹಾಯವಾಗುತ್ತದೆ.



Click it and Unblock the Notifications

