Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪೋಷಕರೇ, ಹೆಣ್ಣು ಮಕ್ಕಳಲ್ಲಿ ಆತ್ಮ ವಿಶ್ವಾಸ ಹೆಚ್ಚಾಗುವಂತೆ ಮಾಡೋದು ಹೇಗೆ?
ಹಿಂದೆಲ್ಲಾ ಹೆಣ್ಣು ಮಕ್ಕಳೆಂದರೆ ಮೂಗು ಮುರಿಯುತ್ತಿದ್ರು. ಹೆಣ್ಣು ಮಕ್ಕಳು ಹುಟ್ಟಿದ್ರೆ ಖರ್ಚು ಅವರಿಂದ ಮನೆಗೆ ಏನು ಪ್ರಯೋಜನವಿಲ್ಲವೆಂದು ಹಂಗಿಸುತ್ತಿದ್ದ ಕಾಲವದು. ಆದರೆ ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳು ಗಂಡು ಮಕ್ಕಳ ಸರಿ ಸಮನಾಗಿ ನಿಂತಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಹೆಣ್ಣು ಮಕ್ಕಳು ಕೂಡ ಸಾಧನೆ ಮಾಡುತ್ತಿದ್ದಾರೆ.
ಆದರೆ ಇಂದಿಗೂ ಕೂಡ ಅನೇಕ ಹೆಣ್ಣು ಮಕ್ಕಳು ಎಲ್ಲರ ಮುಂದೆ ಬಂದು ಮಾತನಾಡೋದಕ್ಕೆ ಹೆದರಿಕೊಳ್ಳುತ್ತಾರೆ. ಹೀಗಾಗಿ ಪೋಷಕರು ಚಿಕ್ಕ ವಯಸ್ಸಿನಲ್ಲೇ ಹೆಣ್ಣು ಮಕ್ಕಳಲ್ಲಿ ವಿಶ್ವಾಸ ತುಂಬುವ ಕೆಲಸವನ್ನು ಮಾಡಬೇಕು. ಅಷ್ಟಕ್ಕು ಹೆಣ್ಣು ಮಕ್ಕಳು ಬೆಳೆಯುತ್ತಿರಬೇಕಾದರೆ ಅವರಲ್ಲಿ ವಿಶ್ವಾಸ ಹೆಚ್ಚಾಗಬೇಕೆಂದರೆ ಇಲ್ಲಿದೆ ಟಿಪ್ಸ್.

1. ಮಗಳ ಮೇಲೆ ನಂಬಿಕೆಯಿದೆ ಎಂದು ಹೇಳಿ
ಪೋಷಕರು ತಮ್ಮ ಮಕ್ಕಳ ಮೇಲೆ ನಂಬಿಕೆಯಿದೆ ಇಡಬೇಕಾದುದು ತುಂಬಾನೇ ಮುಖ್ಯವಾಗಿತ್ತದೆ. ಅದ್ರಲ್ಲೂ ಹೆಣ್ಣು ಮಕ್ಕಳಿಗೆ ಚಿಕ್ಕಂದಿನಲ್ಲಿ ಒಂದು ರೀತಿ ಅಂಜಿಕೆ, ಅಳುಕು ಇದ್ದೇ ಇರುತ್ತದೆ. ಆಗ ಅವರಲ್ಲಿ ದೈರ್ಯ ತುಂಬ ಬೇಕಾದುದು ಪೋಷಕರ ಕೆಲಸ. ಅವರಿಗೆ ನಿಮ್ಮ ಮೇಲೆ ನಂಬಿಕೆಯಿದೆ ಎಂದು ಪದೇ ಪದೇ ಹೇಳುತ್ತಿರಿ. ಗಂಡು ಮಕ್ಕಳಿಗೆ ಸರಿ ಸಮನಾಗಿ ನಿಮ್ಮ ಮಗಳನ್ನು ಬೆಳೆಸಿ.
2. ಮಗಳನ್ನು ಹೊರಗೆ ಕರೆದುಕೊಂಡು ಹೋಗಿ
ನಿಮ್ಮ ಮಗಳು ಮನೆಯ ಒಳಗಡೆ ಇದ್ದರೆ ಅವಳು ಒಂದು ರೀತಿ ಮಂಕಾಗಿ ಹೋಗತ್ತಾಳೆ. ಆಗಾಗ್ಗೆ ಅವಳನ್ನು ಮನೆಯಿಂದ ಹೊರಗಡೆ ಕರೆದುಕೊಂಡು ಹೋಗಿ ಹೊಸ ಹೊಸ ಜಾಗಗಳ ಪರಿಚಯ ಮಾಡಿಸಿ. ಅವಳ ಆಸಕ್ತಿಗಳು ಏನು ಅನ್ನೋದನ್ನು ತಿಳಿದುಕೊಳ್ಳಿ. ಆಕೆಗೆ ಏನೆಲ್ಲಾ ಕೌಶಲ್ಯಗಳ ಅಗತ್ಯವಿದೆ ಅದನ್ನು ಚಿಕ್ಕ ವಯಸ್ಸಿನಲ್ಲೇ ಹೆಣ್ಣು ಮಕ್ಕಳಿಗೆ ಆ ಕೌಶಲ್ಯಗಳನ್ನು ಕಲಿಸಿದರೆ ಅವರು ಸದೃಢರಾಗುತ್ತಾರೆ. ಹಾಗೂ ಅವರಲ್ಲಿ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ.
3. ಆಕೆಯ ಆಸಕ್ತಿಗೆ ಪ್ರೋತ್ಸಾಹ ನೀಡಿ
ಕೇವಲ ಗಂಡು ಮಕ್ಕಳಿಗೆ ಮಾತ್ರ ಅವರದ್ದೇ ಆದ ಆಸಕ್ತಿಗಳು ಇರೋದಲ್ಲ. ಹೆಣ್ಣು ಮಕ್ಕಳಿಗೂ ಕೂಡ ಅವರದ್ದೇ ಆದ ಆಸಕ್ತಿ ಇರುತ್ತದೆ. ಒಂದು ಪಕ್ಷ ಹೆಣ್ಣು ಮಕ್ಕಳಿಗೆ ಕ್ರೀಡೆಯಲ್ಲಿ ಆಸಕ್ತಿ ಇದ್ದರೆ ಪೋಷಕರು ಅದಕ್ಕೆ ಹೆಚ್ಚಿನ ಪ್ರೋತ್ಸಾಹ ಕೊಡೋದಕ್ಕೆ ಹೋಗೋದಿಲ್ಲ. ಅದು ಗಂಡು ಮಕ್ಕಳ ಆಟ ನಿನಗೆ ಬೇಡ ಅಂತ ಸುಮ್ಮನಾಗಿ ಬಿಡುತ್ತಾರೆ. ಇದರಿಂದ ನಿಮ್ಮ ಮಗಳ ಆತ್ಮ ವಿಶ್ವಾಸ ಕುಗ್ಗಿ ಹೋಗಬಹುದು. ಹೀಗಾಗಿ ಯಾವತ್ತೂ ಪೋಷಕರು ಗಂಡು-ಹೆಣ್ಣು ಎಂದು ಭೇದ ತೋರಲೇಬಾರದು.
4. ಅವಳ ನೋಟವನ್ನು ಪ್ರೀತಿಸಲು ಹೇಳಿ
ಜಗತ್ತಿನಲ್ಲಿರೋ ಪ್ರತಿಯೊಬ್ಬರೂ ಸುಂದರವಾಗಿರೋದಕ್ಕೆ ಸಾಧ್ಯವಿಲ್ಲ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಇರುತ್ತಾರೆ. ಕೆಲವೊಂದು ಸಲ ಹೆಣ್ಣು ಮಕ್ಕಳಿಗೆ ನಾನು ನೊಡೋದಿಕ್ಕೆ ಚೆನ್ನಾಗಿಲ್ಲ. ಆಕೆಯ ಮೈ ಬಣ್ಣ, ದೇಹದ ಆಕಾರ ನೋಡಿ ಬೇಸರ ಪಟ್ಟುಕೊಳ್ಳುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ನೀವು ಆಕೆಗೆ ಸುಂದರವಾಗಿದ್ದೀಯಾ ಎಂದು ಹೇಳಿ. ಆಕೆಯ ಸೌಂದರ್ಯವನ್ನು ಪ್ರೀತಿಸಲು ಹೇಳಿ. ಆಗ ಆಕೆ ತನ್ನನ್ನು ತಾನು ಒಪ್ಪಿಕೊಳ್ಳುತ್ತಾಳೆ.
5. ಆಕೆಯ ಶಾಲಾ ಚಟುವಟಿಕೆಗಳಲ್ಲಿ ಆಸಕ್ತಿ ತೋರಿಸಿ
ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ವಿಶೇಷವಾದ ಕೌಶಲ್ಯ ಇದ್ದೇ ಇರುತ್ತದೆ. ನಿಮ್ಮ ಮಗಳು ಓದಿನಲ್ಲಿ ಮುಂದಿರಬಹುದು. ಆಕೆ ಒಳ್ಳೆಯ ಅಂಕಗಳನ್ನು ಪಡೆದುಕೊಂಡಾಗ ಆಕೆಗೆ ಪ್ರೋತ್ಸಾಹ ನೀಡೋದನ್ನು ಮರೆಯಬೇಡಿ. ಇನ್ನೂ ಶಾಲೆಯಲ್ಲಿ ನೃತ್ಯ, ಸಂಗೀತ, ಕ್ರೀಡೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ನಿಮ್ಮ ಮಗಳನ್ನು ಹುರಿದುಂಬಿಸಿ. ಆಗ ಆಕೆಯಲ್ಲಿ ಆತ್ಮ ವಿಶ್ವಾಸ ಬೆಳೆಯುತ್ತದೆ. ನನ್ನಿಂದ ಏನನ್ನಾದರೂ ಸಾಧಿಸಲು ಸಾಧ್ಯ ಎಂದು ನಂಬಿಕೆ ಬರುತ್ತದೆ.
6. ಸಾಧಕಿ ಮಹಿಳೆಯರ ಉದಾಹರಣೆ ನೀಡಿ
ಹುಟ್ಟಿನಿಂದಲೇ ನಮಲ್ಲಿ ಎಲ್ಲಾ ಕಲೆಗಳು ಕರಗತವಾಗಿ ಇರಬೇಕೆಂದೇನಿಲ್ಲ. ಮಗಳಲ್ಲಿ ಆತ್ಮ ವಿಶ್ವಾಸ ಹೆಚ್ಚಾಗಬೇಕೆಂದಿದ್ದರೆ ನಿಧಾನವಾಗಿ ಆಕೆಗೆ ಎಲ್ಲವನ್ನೂ ಅಭ್ಯಾಸ ಮಾಡಿಸಿ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹಿಳೆಯರ ಉದಾಹರಣೆಯನ್ನೂ ನೀಡಿ. ಆಗ ಅವರಲ್ಲೂ ಕೂಡ ಒಂದು ರೀತಿಯ ಛಲ ಹುಟ್ಟುತ್ತದೆ.
ಹೆಣ್ಣು ಮಕ್ಕಳನ್ನು ನಾಲ್ಕು ಗೋಡೆಗೆ ಸೀಮಿತ ಎನ್ನುವ ರೀತಿಯಲ್ಲಿ ಬೆಳೆಸಬೇಡಿ. ಹೆಣ್ಣು ಮಗಳನ್ನು ಗಂಡು ಮಗನ ಸಮಾನಕ್ಕೆ ಬೆಳೆಸಿ. ಚಿಕ್ಕಂದಿನಲ್ಲೇ ಆಕೆಯಲ್ಲಿ ಹೋರಾಟದ ಮನೋಭಾವ ಹುಟ್ಟುವಂತೆ ಮಾಡಿ. ಖಂಡಿತ ನಿಮ್ಮ ಮಗಳು ಒಂದಲ್ಲ ಒಂದು ದಿನ ಬಹು ಎತ್ತರಕ್ಕೆ ಬೆಳಯುತ್ತಾಳೆ.



Click it and Unblock the Notifications
