Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಹೆಣ್ಣು ಮಕ್ಕಳೇ, ತಾಯಿಯಾಗೋ ಮೊದಲು ನಿಮಗೆ ಈ ಸತ್ಯಗಳು ಗೊತ್ತಿರಲಿ
ಪ್ರತಿ ಹೆಣ್ಣು ಕೂಡ ಖಂಡಿತ ತಾಯಿಯಾಗುವ ಕನಸನ್ನು ಕಂಡಿರುತ್ತಾಳೆ. ಆ ಬಗ್ಗೆ ಆಕೆಗೆ ನೂರಾರು ಆಸೆಗಳು ಇರುತ್ತದೆ. ಆದರೆ ತಾಯಿಯಾಗೋದು ನೀವು ಅಂದುಕೊಂಡಷ್ಟು ಸುಲಭವಲ್ಲ. ಅದಕ್ಕಾಗಿ ನೀವು ಎಷ್ಟೋ ತ್ಯಾಗಗಳನ್ನು ಮಾಡಬೇಕಾಗುತ್ತದೆ.
ತಾಯಿಯಾದ ಮೇಲೆ ನಿಮ್ಮ ಬದುಕು ಹಿಂದಿನಂತೆ ಇರೋದಿಲ್ಲ. ನಿಮ್ಮ ಬದುಕಿನಲ್ಲಿ ಎಲ್ಲವೂ ಬದಲಾಗುತ್ತದೆ. ತಾಯಿ ಎಂದ ಮೇಲೆ ಕೆಲವೊಂದು ತ್ಯಾಗಗಳನ್ನು ಖಂಡಿತ ಮಾಡಬೇಕಾಗುತ್ತದೆ. ಅಷ್ಟಕ್ಕು ಒರ್ವ ಹೆಣ್ಣು ಮಗಳು ತಾಯಿಯಾಗುವ ಮೊದಲು ತಿಳಿದು ಕೊಳ್ಳಬೇಕಾದ ವಿಚಾರಗಳು ಯಾವುದು ಅನ್ನೋದನ್ನು ತಿಳಿಯೋಣ.

1. ಗರ್ಭಿಣಿಯಾಗಿರುವಾಗಲೇ ತಾಯ್ತನ ಶುರುವಾಗುತ್ತದೆ
ಹೆಣ್ಣು ಮಕ್ಕಳಿಗೆ ಮಗುವಾದ ಮೇಲೆ ತಾಯ್ತನ ಶುರುವಾಗೋದು ಅಲ್ಲ. ಗರ್ಭಿಣಿ ಇರುವಾಗಲೇ ಅವರು ತಾಯ್ತನವನ್ನು ಅನುಭವಿಸುತ್ತಾರೆ. ಗರ್ಭಿಣಿ ಇರುವಾಗಲೇ ಅವರ ದೇಹದಲ್ಲಿ ನಾನಾ ರೀತಿಯ ಬದಲಾವಣೆಗಳು ಆಗುತ್ತದೆ.
ಕೆಲವೊಂದು ಬದಲಾವಣೆಗಳು ಹೆಣ್ಣು ಮಕ್ಕಳಿಗೆ ಹಿಂಸೆ ಅನ್ನಿಸುತ್ತದೆ. ಹೆಚ್ಚಿನ ಸಮಯದಲ್ಲಿ ಬೆಳಗ್ಗೆ ಎದ್ದಾಗ ಹುಷಾರಿರೋದಿಲ್ಲ. ಏನೂ ತಿಂದರೂ ಆಗೋದಿಲ್ಲ. ಕಾಲು ನೋವು, ಬೆನ್ನು ನೋವು ಹೀಗೆ ಎಲ್ಲಾ ರೀತಿಯ ತಿಂದರೆಗಳನ್ನು ಅನುಭವಿಸಬೇಕು. ಹೀಗಾಗಿ ತಾಯಿ ಆಗುವ ಮುಂಚೆ ಈ ಬಗ್ಗೆ ತಿಳಿದುಕೊಂಡಿರಬೇಕು.
2. ನಿದ್ದೆಯನ್ನು ಮರೆತು ಬಿಡಬೇಕು
ತಾಯಿಯಾದ ಮೇಲೆ ಹೆಣ್ಣು ಮಕ್ಕಳು ನಿದ್ದೆಯನ್ನು ಮರೆತು ಬಿಡಬೇಕು. ನೀವು ಮೂರು ಹೊತ್ತು ಮಗುವಿನ ಆರೈಕೆಯಲ್ಲಿಯೇ ಮಗ್ನರಾಗಿ ಇರಬೇಕಾಗುತ್ತದೆ. ಮಗು ಎದ್ದಾಗಲೆಲ್ಲಾ ಅದನ್ನು ಸಮಾಧಾನ ಪಡಿಸಬೇಕು. ಅದಕ್ಕೆ ಹಾಲು ಕುಡಿಸೋದು, ಡೈಪರ್ ಚೇಂಜ್ ಮಾಡೋದು ಈ ಕೆಲಸಗಳನ್ನು ಮಧ್ಯ ರಾತ್ರಿ ಎದ್ದು ಕೂಡ ಮಾಡಬೇಕಾಗುತ್ತದೆ.
ಇದರಿಂದ ನೀವು ಕಣ್ತುಂಬ ನಿದ್ದೆ ಮಾಡೋದಕ್ಕೂ ಆಗೋದಿಲ್ಲ. ನೀವು ಸರಿಯಾಗಿ ಎರಡು ಗಂಟೆಗಳ ಕಾಲ ಮಲಗಿದ್ರೆ ಹೆಚ್ಚು. ಹೀಗಾಗಿ ಆದಷ್ಟು ಮಗು ಮಲಗಿರುವ ಸಮಯದಲ್ಲಿ ನಿದ್ದೆ ಮಾಡಿದರೆ ಉತ್ತಮ.
3. ಬಟ್ಟೆ ಹಾಗೂ ಆಟದ ಸಾಮಾನುಗಳನ್ನು ತಂದಿಡಿ
ಮಕ್ಕಳು ಎಷ್ಟು ಬೇಗ ದೊಡ್ಡವರಾಗುತ್ತಾರೆ ಅಂತ ಹೇಳೋದಿಕ್ಕೆ ಆಗೋದಿಲ್ಲ. ಹೀಗಾಗಿ ಮಗು ಹುಟ್ಟುವ ಮೊದಲೇ ಮಗುವಿಗೆ ಬೇಕಾಗೋ ಬಟ್ಟೆ ಬರೆಗಳನ್ನು ತಂದಿಟ್ಟ. ಸಾಧ್ಯವಾದರೆ ಎಲ್ಲಾ ಋತುಮಾನಕ್ಕೂ ಬೇಕಾಗುವ ಬಟ್ಟೆಗಳನ್ನೇ ತಂದಿಡಿ. ಇನ್ನೂ ಆಟದ ಸಾಮಾನು ಕೂಡ ಹಾಗೆ ಅವರಿಗೆ ಬೇಕಾದ ಎಲ್ಲಾ ಆಟದ ಸಾಮಾನು ಮನೆಯಲ್ಲಿ ಇರುವಂತೆ ನೋಡಿಕೊಳ್ಳಿ. ಹೀಗಾಗಿ ಅವರ ಕಣ್ಣು ಬೇರೆ ಕಡೆ ಹೋಗೋದನ್ನು ತಪ್ಪಿಸಬಹುದು.
4. ಖರ್ಚಿನ ಬಗ್ಗೆ ಯೋಜನೆ ರೂಪಿಸಿಕೊಳ್ಳಿ
ಮಕ್ಕಳಾದ ಮೇಲೆ ಗಂಡ-ಹೆಂಡತಿಯ ಜೀವನ ಸಾಮಾನ್ಯವಾಗಿ ಇರೋದಿಲ್ಲ. ಖರ್ಚು ದುಪ್ಪಟ್ಟಾಗುತ್ತದೆ. ಹೀಗಾಗಿ ಮಗು ಆಗೋದಕ್ಕೂ ಮೊದಲೇ ಒಂದು ಬಜೆಟ್ ಪ್ಲಾನ್ ಮಾಡಿಟ್ಟುಕೊಳ್ಳಿ. ಸೀಮಂತ, ಹೆರಿಗೆ ಖರ್ಚು, ನಾಮಕರಣ ಅಂತ ಒಂದಿಷ್ಟು ಖರ್ಚುಗಳು ಪೋಷಕರ ಮೇಲಿರುತ್ತೆ. ಇದಾದ ಬಳಿಕೆ ಮಗುವಿನ ಬಟ್ಟೆ, ಔಷಧಿ, ಆಹಾರ ಮತ್ತು ಆಟದ ಸಾಮಾನು ಅಂತೆಲ್ಲಾ ಖರ್ಚು. ಇನ್ನೇನು ಮಕ್ಕಳು ಸ್ವಲ್ಪ ದೊಡ್ಡವರಾದರೆ ಬೇಬಿ ಸಿಟ್ಟಿಂಗ್ ನಿಂದ ಹಿಡಿದು ಅವರನ್ನು ಕಾಲೇಜಿಗೆ ಕಳುಹಿಸುವವರೆಗೂ ತುಂಬಾನೇ ದುಡ್ಡು ಬೇಕಾಗುತ್ತದೆ.
5. ವರ್ಕ್ ಫ್ರಮ್ ಹೋಮ್ ಒಳ್ಳೆಯ ಆಯ್ಕೆ ಅಲ್ಲ ಅನ್ನಿಸುತ್ತೆ
ಹೆಚ್ಚಿನ ತಾಯಂದಿರು ಮಕ್ಕಳಾದ ಮೇಲೆ ವರ್ಕ್ ಫ್ರಮ್ ಹೋಮ್ ಆಯ್ಕೆ ಚೆನ್ನಾಗಿದೆ ಎಂದುಕೊಂಡು ಅದನ್ನೇ ಆಯ್ಕೆ ಮಾಡುತ್ತಾರೆ. ನಿಜವಾಗಿಯೂ ಅದು ಉತ್ತಮ ಆಯ್ಕೆ ಅಲ್ಲ. ತಾಯಿಯಾದ ಮೇಲೂ ನೀವು ನಿಮ್ಮ ವೃತ್ತಿಯನ್ನು ಮುಂದುವರಿಸಲು ಬಯಸುವುದಾದರೆ ಮಕ್ಕಳ ಬಗ್ಗೆ ಚಿಂತಿಸಲೇಬೇಕು.
ಮಗುವನ್ನು ನೋಡಿಕೊಳ್ಳೋದು ಯಾರು ಎನ್ನುವ ಬಗ್ಗೆ ಯೋಚಿಸಿ. ನೀವು ವರ್ಕ್ ಫ್ರಮ್ ಹೋಮ್ ತೆಗೆದುಕೊಂಡರೆ ನಂತರ ನೀವು ತುಂಬಾನೇ ಕಷ್ಟ ಪಡಬೇಕಾಗುತ್ತದೆ. ಒಂದು ಕಡೆಯಿಂದ ಮಗುವನ್ನು ನೋಡಿಕೊಳ್ಳೋದು ಕಷ್ಟ. ಜೊತೆಗೆ ಕೆಲಸದ ಕಡೆಗೆ ಗಮನ ನೀಡೋದಕ್ಕೆ ಆಗೋದಿಲ್ಲ. ಹೀಗಾಗಿ ಮಗುವನ್ನು ನೋಡಿಕೊಳ್ಳಲು ಯಾರನ್ನಾದರೂ ನಿಯೋಜಿಸಿ. ನೀವು ಕೆಲಸಕ್ಕೆ ಹೋದರೆ ಉತ್ತಮ. ಆಗ ನಿಮ್ಮ ವೃತ್ತಿ ಜೀವನದಲ್ಲಿ ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತದೆ.
6. ಹೊರಗಡೆ ಸುತ್ತಾಡಲು ಹೋಗೋದು ಕಷ್ಟ ಆಗಬಹುದು
ಮದುವೆಯಾದ ಮೇಲೆ ನೀವು ಗಂಡ-ಹೆಂಡತಿ ಹೊರಗಡೆ ಟ್ರಿಪ್ ಗೆ ಹೋಗಿರಬಹುದು. ಅಡ್ವೇಂಚರಸ್ ಚಟುವಟಿಕೆಗಳನ್ನು ಮಾಡಿರಬಹುದು. ಆದರೆ ಮಕ್ಕಳಾದ ಮೇಲೆ ಇದೆಲ್ಲಾ ಸಾಧ್ಯವಾಗೋದಿಲ್ಲ. ನಿಮಗೆ ಬೇಕಾದ ಕಡೆ ಟ್ರಿಪ್ ಮಾಡೋದಿಕ್ಕಾಗೋದಿಲ್ಲ. ಒಂದು ವೇಳೆ ಹೋದರೂ ಕೂಡ ಅಲ್ಲಿಗೆ ಮಗುವನ್ನು ಹಿಡಿದುಕೊಂಡೇ ಹೋಗಬೇಕು. ಕೆಲವೊಂದು ಮಕ್ಕಳಿಗೆ ಕೆಲವು ಜಾಗಗಳು ಇಷ್ಟ ಆಗದೇ ಅಳೋದಕ್ಕೆ ಶುರು ಮಾಡುತ್ತೆ. ಮಕ್ಕಳಾದ ಮೇಲೆ ನೀವು ಹೆಚ್ಚು ವಸ್ತುಗಳನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ. ಮಗುವಿಗೆ ಬೇಕಾಗುವ ಪ್ರತಿಯೊಂದು ಸಾಮಾಗ್ರಿಗಳು ನಿಮ್ಮ ಬಳಿ ಇರಲೇಬೇಕು.
ತಾಯಿಯಾದ ಮೇಲೆ ಕೆಲವೊಂದು ತ್ಯಾಗಗಳನ್ನು ಮಾಡಲೇಬೇಕಾಗುತ್ತದೆ. ಇದಕ್ಕೆಲ್ಲಾ ನೀವು ಹೊಂದಿಕೊಳ್ಳಲೇಬೇಕು. ಯಾಕಂದ್ರೆ ತಾಯಿಯಾಗುವ ಭಾಗ್ಯ ಎಲ್ಲರಿಗೂ ಸಿಗೋದಿಲ್ಲ. ಹಾಗೂ ಈ ಜಗತ್ತಿನಲ್ಲಿ ತಾಯಿಗಿಂತ ಶ್ರೇಷ್ಠ ವ್ಯಕ್ತಿ ಮತ್ತೊಬ್ಬರಿಲ್ಲ.



Click it and Unblock the Notifications

