Latest Updates
-
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ -
ಈ 3 ರಾಶಿಗಳಿಗೆ ಜೀವನದಲ್ಲಿ ಏರಿಳಿತಗಳು! ಹಳೆಯ ನೆನಪುಗಳು ಕಾಡುತ್ತೆ -
March 09 Horoscope: ಶುಭ ಕಾರ್ಯದಲ್ಲಿ ಭಾಗಿಯಾಗುವ ಸಾಧ್ಯತೆ ಹೆಚ್ಚು! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ
ಪೋಷಕರೇ, ಮಕ್ಕಳಿಗೆ ಈ 5 ಜೀವನ ಪಾಠಗಳನ್ನು ಕಲಿಸೋದಕ್ಕೆ ಮರೆಯದಿರಿ!
ಪ್ರತಿಯೊಬ್ಬ ಮನುಷ್ಯ ಕೂಡ ಕೆಲವೊಂದು ಜೀವನ ಪಾಠಗಳನ್ನು ಕಲಿತಿರಬೇಕು. ಇದು ಆತನ ಭವಿಷ್ಯದ ದಾರಿ ಉತ್ತಮವಾಗಿಸೋದಕ್ಕೆ ಸಹಾಯ ಮಾಡುತ್ತದೆ. ಹಾಗಂತ ಹುಟ್ಟಿದ ಮಗುವಿಗೆ ಒಂದೇ ಸಾರಿಗೆ ಜೀವನ ಪಾಠಗಳನ್ನು ಕಲಿಸೋದಕ್ಕೆ ಸಾಧ್ಯವಿಲ್ಲ. ಹಂತ ಹಂತವಾಗಿ ಕಲಿಸುತ್ತಾ ಅವರನ್ನು ಸದೃಢರನ್ನಾಗಿ ಮಾಡಬೇಕು. ಕೆಲವೊಂದು ಸಲ ಮಕ್ಕಳು ತಮ್ಮ ತಪ್ಪಿನಿಂದ ಪಾಠ ಕಲಿಯುವಂತೆ ಅವರನ್ನು ಪ್ರೇರೇಪಿಸಬೇಕು.
ಮಕ್ಕಳು ಬೆಳೆದು ದೊಡ್ಡವರಾಗುವಷ್ಟರಲ್ಲಿ ಕೆಲವೊಂದು ಜೀವನ ಪಾಠಗಳನ್ನು ಅವರು ಕಲಿಯುವಂತೆ ಮಾಡುವುದು ಪೋಷಕರಾದವರ ಕರ್ತವ್ಯ. ಈ ಐದು ಮಂತ್ರಗಳನ್ನು ಪೋಷಕರು ಮಕ್ಕಳಿಗೆ ಕಲಿಸಲೇಬೇಕು. ಅಷ್ಟಕ್ಕು ಪೋಷಕರು ಮಕ್ಕಳಿಗೆ ಕಲಿಸಬೇಕಾದ ಆ 5 ಜೀವನ ಪಾಠಗಳು ಯಾವುದು ಅನ್ನೋದನ್ನು ನೋಡೋಣ.

1. ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು
ಸಾಮಾನ್ಯವಾಗಿ ಮಕ್ಕಳ ವಿಚಾರದಲ್ಲಿ ಎಲ್ಲಾ ನಿರ್ಧಾರಗಳನ್ನು ಪೋಷಕರೇ ತೆಗೆದುಕೊಳ್ಳುತ್ತಾರೆ. ಅವರು ಏನು ತಿನ್ನಬೇಕು? ಯಾವ ಬಟ್ಟೆ ಹಾಕಬೇಕು? ಎಂತಹ ಸ್ನೇಹಿತರನ್ನು ಹೊಂದಬೇಕು? ಇತ್ಯಾದಿ. ಇನ್ನೂ ಹದಿಹರೆಯದ ವಯಸ್ಸಿಗೆ ಬರುವಷ್ಟರ ಹೊತ್ತಿಗೆ ಈ ಬಗ್ಗೆ ಮಕ್ಕಳು ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಕೆಲವು ಮಕ್ಕಳು ಹದಿಹರೆಯದ ವಯಸ್ಸಿನಲ್ಲೂ ಎಲ್ಲದಕ್ಕೂ ಅಪ್ಪ- ಅಮ್ಮನನ್ನೇ ಅವಲಂಬಿಸಿರುತ್ತಾರೆ.
ಹೀಗಾಗಿ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳು ನಿಮ್ಮ ಮೇಲೆ ಅವಲಂಬಿತವಾಗುವಂತೆ ಮಾಡುವುದು ತಪ್ಪು. ಅವರ ನಿರ್ಧಾರಗಳನ್ನು ಅವರೇ ತೆಗೆದುಕೊಳ್ಳೋದಕ್ಕೆ ಅವಕಾಶ ನೀಡಿ. ಶಾಲೆಯಲ್ಲಿ ಅವರಿಗೆ ಇಷ್ಟವಿರೋ ಪಠ್ಯೇತರ ಚಟುವಟಿಕೆಗಳಲ್ಲಿ ಅವರು ಭಾಗವಹಿಸಲಿ. ಒಂದು ವೇಳೆ ಅವರು ತೆಗೆದುಕೊಂಡ ನಿರ್ಧಾರ ತಪ್ಪಿದರೆ ಆಗ ಅವರಿಗೆ ತಿದ್ದಿ ಬುದ್ಧಿ ಹೇಳಿ. ಪೋಷಕರು ಮಕ್ಕಳಿಗೆ ಸ್ವ ಇಚ್ಛೆಯಿಂದ ನಿರ್ಧಾರ ತೆಗೆದುಕೊಳ್ಳೋದಕ್ಕೆ ಅವಕಾಶ ಕಲ್ಪಿಸಬೇಕು.
2. ಸಮಯ ಪರಿಪಾಲನೆ
ಒರ್ವ ಮನುಷ್ಯನ ಜೀವನದಲ್ಲಿ ಸಮಯ ಪರಿಪಾಲನೆ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ಚಿಕ್ಕಂದಿನಿಂದ ಮಕ್ಕಳಲ್ಲಿ ಸಮಯ ಪರಿಪಾಲನೆಯ ಗುಣ ಬಂದರೆ ಮುಂದೆ ದೊಡ್ಡವರಾದ ಮೇಲೆ ಮಕ್ಕಳು ಇದೇ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುತ್ತಾರೆ. ಮಕ್ಕಳ ಓದುವ ಸಮಯ, ಆಟದ ಸಮಯ ಹಾಗೂ ಕುಟುಂಬಕ್ಕೆ ಎಷ್ಟು ಸಮಯ ನೀಡಬೇಕು ಎನ್ನುವ ಬಗ್ಗೆ ಈಗಿನಿಂದಾನೇ ಒಂದು ಟೈಂ ಟೇಬಲ್ ಫಾಲೋ ಮಾಡೋದಕ್ಕೆ ತಿಳಿಸಿ. ಪ್ರತಿಯೊಂದು ಕೆಲಸವನ್ನೂ ಲೆಕ್ಕಾಚಾರ ಹಾಕಿಕೊಂಡು ಸಮಯ ಪರಿಪಾಲಿಸುತ್ತಾ ಮಾಡುವಂತೆ ತಿಳಿಸಿ.
3. ದುಡ್ಡಿನ ನಿರ್ವಹಣೆ
ಮಕ್ಕಳಿಗೆ ದುಡ್ಡಿನ ಮಹತ್ವ ಏನು ಅನ್ನೋದನ್ನು ತಿಳಿಸೋದು ತುಂಬಾನೇ ಮುಖ್ಯವಾಗುತ್ತದೆ. ಕೆಲವು ಮಕ್ಕಳಂತೂ ದಡ್ಡಿರೋದೇ ಖರ್ಚು ಮಾಡೋದಕ್ಕೆ ಅಂತ ಭಾವಿಸಿರುತ್ತಾರೆ. ದೊಡ್ಡವರಾದ ಮೇಲೂ ಇದನ್ನೇ ಕಲಿಯುತ್ತಾರೆ. ಹೀಗಾಗಿ ಪಾಕೆಟ್ ಮನಿ ಅತಿಯಾಗಿ ನೀಡಬೇಡಿ. ಒಂದು ಪಿಗ್ಗಿ ಬ್ಯಾಂಕ್ ತಂದು ಕೊಟ್ಟು ಅದರಲ್ಲಿ ಹಣವನ್ನು ಉಳಿತಾಯ ಮಾಡೋದಕ್ಕೆ ತಿಳಿಸಿ.
ಅವರು ಚಾಕಲೇಟ್ ಅಥವಾ ಬೇರೆ ಏನಾದರೂ ಬೇಕೆಂದು ಕೇಳಿದರೆ ಅವರಲ್ಲಿರುವ ದುಡ್ಡಿನಿಂದಲೇ ಅದನ್ನು ಖರೀದಿಸಲು ಹೇಳಿ. ಆಗ ಅವರಿಗೆ ದುಡ್ಡಿನ ಮಹತ್ವ ಏನು ಅನ್ನೋದು ಅರ್ಥವಾಗುತ್ತದೆ. ಆದಷ್ಟು ಅವರ ಖರ್ಚಿಗೆ ಕಡಿವಾಣ ಹಾಕೋದಕ್ಕೆ ಈಗಿನಿಂದಲೇ ಪ್ರಯತ್ನಿಸಿದರೆ ಒಳ್ಳೆಯದು.
4. ಮಕ್ಕಳಲ್ಲಿ ಸಹಾನುಭೂತಿಯನ್ನು ಅಭಿವೃದ್ಧಿ ಪಡಿಸಿ
ಮಕ್ಕಳು ಅವರ ಮೂಗಿನ ನೇರಕ್ಕೆ ಯೋಚಿಸುತ್ತಾರೆಯೇ ಹೊರತು ಅವರಿಗೆ ಬೇರೆಯವರ ನೋವು ಏನು ಅನ್ನೋದು ಅರ್ಥ ಆಗೋದಿಲ್ಲ. ಸಹಾನುಭೂತಿ ಎಂದರೆ ಏನು ಅನ್ನೋದನ್ನು ಅರ್ಥ ಮಾಡಿಸೋದು ಪೋಷಕರ ಕರ್ತವ್ಯ. ಅದು ಕಥೆ ಹೇಳುವ ಮೂಲಕ, ಆಟ ಆಡುವ ಸಮಯದಲ್ಲಿ ಅಥವಾ ನಿರ್ಗತಿಕರು ಮನೆ ಮುಂದೆ ಬಂದಾಗ ಅವರ ಪರಿಸ್ಥಿತಿಯನ್ನು ತಿಳಿಸುವ ಮೂಲಕ ಮಕ್ಕಳಿಗೆ ಅರ್ಥ ಮಾಡಿಸೋದಕ್ಕೆ ಪ್ರಯತ್ನಿಸಿ.
5. ಮನೆ ಕೆಲಸದಲ್ಲಿ ಸಹಾಯ ಪಡೆಯಿರಿ
ಕೆಲವೊಂದು ಮನೆಗಳಲ್ಲಿ ಮಕ್ಕಳನ್ನು ತುಂಬಾನೇ ಕಾಳಜಿಯಿಂದ ಸಾಕುತ್ತಾರೆ. ಅವರು ತಿಂದ ತಟ್ಟೆಯನ್ನು ಕೂಡ ಪೋಷಕರೇ ತೊಳೆಯುತ್ತಾರೆ. ಈ ರೀತಿ ಮಾಡೋದು ತಪ್ಪು. ಅವರಿಂದ ಆಗುವ ಸಣ್ಣ-ಪುಟ್ಟ ಕೆಲಸಗಳನ್ನು ಅವರ ಕೈಯಿಂದಲೇ ಮಾಡಿಸಿ. ಇಲ್ಲದಿದ್ದರೆ ಅವರು ಸೋಂಬೇರಿಗಳಾಗಿ ಬದಲಾಗುತ್ತಾರೆ. ನೀವು ಅಡುಗೆ ಮಾಡುವ ಸಂದರ್ಭದಲ್ಲಿ ಪಾತ್ರೆ ತೊಳೆಸಿ, ತರಕಾರಿ ಹೆಚ್ಚುವುದು, ಬೆಡ್ ಕವರ್ ಸರಿಪಡಿಸೋದು, ಆಟದ ಸಾಮಾನುಗಳನ್ನು ಜೋಡಿಸಿ ಇಡುವುದು ಇತ್ಯಾದಿ.
ಈ ಎಲ್ಲಾ ಜೀವನ ಪಾಠಗಳು ಮಕ್ಕಳ ಜೀವನದಲ್ಲಿ ಬಹಳ ದೊಡ್ಡ ಪರಿಣಾಮವನ್ನೇ ಬೀರಲಿದೆ. ದೊಡ್ಡವರಾದ ಮೇಲೆ ಮನೆ ಒರ್ವ ಉತ್ತಮ ಮಗನಾಗಿ, ದೇಶಕ್ಕೆ ಒರ್ವ ಉತ್ತಮ ಪ್ರಜೆಯಾಗೋದಕ್ಕೆ ಸಹಾಕಾರಿಯಾಗುತ್ತದೆ.



Click it and Unblock the Notifications













