Latest Updates
-
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್
ಆನ್ಲೈನ್ ಗೇಮಿಂಗ್ ಚಟಕ್ಕೆ ಪ್ರಾಣ ಕಳೆದುಕೊಂಡ ವಿದ್ಯಾರ್ಥಿ: ಈ ಚಟಕ್ಕೆ ಬಿದ್ದರೆ ಮಕ್ಕಳಲ್ಲಿ ಕಂಡು ಬರುವ ಬದಲಾವಣೆಗಳಿವು
ಕಳೆದ ಗುರುವಾರ (ಡಿಸೆಂಬರ್ 5) ಸೋಮನಾಥ್ ಚಿದ್ರಿ ಎಂಬ 22 ವರ್ಷದ ನರ್ಸಿಂಗ್ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ, ಅವನ ಸಾವಿಗೆ ಕಾರಣವಾಗಿದ್ದು ಆನ್‌ಲೈನ್ ಗೇಮಿಂಗ್, ಸುಲಭದಲ್ಲಿ ದುಡ್ಡು ಮಾಡಬಹುದು ಎಂದು ಆನ್‌ಲೈನ್ ಗೇಮಿಂಗ್ ಪ್ರಾರಂಭಿಸಿ ಕೊನೆಗೆ ಆತನ ಬದುಕೇ ಅಂತ್ಯವಾಯ್ತು.
ಇದು ಬರಿ ಒಬ್ಬ ವಿದ್ಯಾರ್ಥಿಯ ಕತೆಯಲ್ಲ, ಎಷ್ಟೋ ಜನರು ಆನ್‌ಲೈನ್ ಗೇಮಿಂಗ್ ಸುಳಿಗೆ ಸಿಕ್ಕ ಬದುಕು ನಾಶ ಮಾಡಿಕೊಳ್ಳುತ್ತಿದ್ದಾರೆ, ಅದರಲ್ಲಿಯೂ ವಿದ್ಯಾರ್ಥಿಗಳು ಹಣದಾಸೆಗೆ ಆನ್‌ಲೈನ್ ಗೇಮಿಂಗ್ ಆಡಿ ಸಾಲದ ಸುಳಿಗೆ ಸಿಲುಕುತ್ತಿದ್ದಾರೆ. ಇದು ನಿರ್ಲಕ್ಷ್ಯ ಮಾಡುವಂಥ ವಿಷಯ ಅಲ್ವೇ? ವಿದ್ಯಾರ್ಥಿಗಳಿಗೂ ಇದರ ಬಗ್ಗೆ ಜಾಗ್ರತೆ ಮೂಡಿಸಬೇಕು, ಪೋಷಕರೂ ತಮ್ಮ ಮಕ್ಕಳ ನಡವಳಿಕೆ ಬಗ್ಗೆ ಗಮನಹರಿಸುವುದು ಮುಖ್ಯವಾಗಿದೆ.

ಒಂದು ಅಧ್ಯಯನ ಹೇಳುತ್ತದೆ ಸುಮಾರು 2 ಬಿಲಿಯನ್ ಜನರು ಆನ್‌ಲೈನ್ ಗೇಮಿಂಗ್ ಚಟಕ್ಕೆ ಬಿದ್ದಿದ್ದಾರೆ, ಅದರಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಆನ್‌ಲೈನ್ ಚಟಕ್ಕೆ ಬಿದ್ದರೆ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ತುಂಬಾನೇ ಕೆಟ್ಟ ಪರಿಣಾಮ ಬೀರುವುದು. ಆನ್ಲೈನ್ ಗೇಮಿಂಗ್ ಚಟದಿಂದಾಗಿ ಆ ವಿದ್ಯಾರ್ಥಿಗಳಲ್ಲಿ ಈ ಬದಲಾವಣೆಯಾಗುವುದು
ಅವರು ವಾಸ್ತವದಿಂದ ದೂರ ಉಳಿಯುತ್ತಾರೆ
ಆನ್‌ಲೈನ್ ಗೇಮ್ ತುಂಬಾ ಸಮಯದಿಂದ ಆಡುತ್ತಿದ್ದರೆ ವಾಸ್ತವದಿಂದ ದೂರಾಗಿ ವರ್ಚ್ಯೂಯಲ್ ಪ್ರಪಂಚದಲ್ಲಿ ಬಾಳಲಾರಂಭಿಸುತ್ತರೆ. ಅದೇ ನಿಜ ಎಂಬ ಭ್ರಮೆ ಆವರಿಸುತ್ತದೆ, ಅವರು ಜನರ ಜೊತೆಗೆ, ಸ್ನೇಹಿತರ ಜೊತೆಗೆ ಹೆಚ್ಚು ಕಳೆಯುವ ಬದಲಿಗೆ ಮೊಬೈಲ್‌ನಲ್ಲಿ ಹೆಚ್ಚು ಸಮಯ ಕಳೆಯಲು ಬಯಸುತ್ತಾರೆ.
ಆನ್‌ಲೈನ್ ಗೇಮಿಂಗ್ ಚಟ ಮಾನಸಿಕ ಆರೋಗ್ಯದ ಮೇಲೂ ತುಂಬಾನೇ ಕೆಟ್ಟ ಪರಿಣಾಮ ಬೀರುವುದು, ಈ ಕಾರಣದಿಂದ ತುಂಬಾ ವಿದ್ಯಾರ್ಥಿಗಳು ಖಿನ್ನತೆಗೂ ಜಾರುತ್ತಿದ್ದಾರೆ.
ಒಂಟಿಯಾಗಿರುವುದು
ಆನ್‌ಲೈನ್ ಗೇಮಿಂಗ್‌ನಲ್ಲಿಯೇ ಮುಳುಗಿರುವುದರಿಂದ ಬೇರೆ ಪ್ರಪಂಚದ ಜೊತೆಗೆ ಸಂಬಂಧ ಇರಲ್ಲ, ಯಾರ ಜೊತೆ ಬೆರೆಯಲ್ಲ, ಮೊಬೈಲ್‌ನಲ್ಲಿಯೇ ಕಾಲ ಕಳೆಯಲಾರಂಭಿಸುತ್ತಾರೆ, ಜನರ ಜೊತೆ ಮಾತನಾಡುವುದು, ಬೆರೆಯುವುದು ಎಲ್ಲಾ ಕಡಿಮೆಯಾಗುವುದು.
ಅವರ ವರ್ತನೆಯಲ್ಲಿಯೂ ಬದಲಾವಣೆ ಕಂಡು ಬರುವುದು
ಅವರು ಬೇಗನೆ ಕೋಪಗೊಳ್ಳುವುದು ಕಂಡು ಬರುವುದು, ಅಲ್ಲದೆ ಆನ್‌ಲೈನ್ ಗೇಮಿಂಗ್‌ನಲ್ಲಿ ಹೊಡೆದು ಹಾಕು, ಬಡಿ, ಸೋಲಿಸು ಎಂಬ ನಕರಾತ್ಮಕ ವಿಷಯಗಳೇ ತುಂಬಿರುತ್ತದೆ, ಅವ ವರ್ತನೆಯೂ ಹಾಗೆಯೇ ಬದಲಾಗುವುದು.
ಕಲಿಕೆಯಲ್ಲಿ ಹಿಂದುಳಿಯುತ್ತಾರೆ
ಶಾಲೆ, ಕಾಲೇಜು ಮುಗಿಸಿ ಬಂದ ಮೇಲೆ ಗೇಮ್‌ನಲ್ಲಿಯೇ ಮುಳುಗಿದ್ದರೆ ಓದುವ ಕಡೆ ಗಮನ ಕಡಿಮೆಯಾಗುವುದು, ಇದರಿಂದ ಕಲಿಕೆಯಲ್ಲಿ ಚುರುಕು ಇರಲ್ಲ, ಅಂಕಗಳು ಕಡಿಮೆಯಾಗುವುದು, ಅವರಲ್ಲಿನ ಆತ್ಮವಿಶ್ವಾಸ ಕೂಡ ಕುಗ್ಗುವುದು. ಈ ಸ್ಪರ್ಧಾತ್ಮಕ ಸಮಾಜದಲ್ಲಿ ಅವರಿಗೆ ಪರಿಸ್ಥಿತಿಯನ್ನು ಎದುರಿಸುವುದು ಷ್ಟವಾಗುವುದು., ಒಳ್ಳೆಯ ಕೋರ್ಸ್, ಒಳ್ಳೆಯ ಕೆಲಸ ಪಡೆಯುವುದು ಕಷ್ಟವಾಗುವುದು.
ಆರೋಗ್ಯ ಸಂಬಂಧಿತ ಸಮಸ್ಯೆ ಕಂಡು ಬರುವುದು
ಆನ್‌ಲೈನ್ ಗೇಮಿಂಗ್ ಚಟ ಆರೋಗ್ಯ ಸಂಬಂಧಿತ ಸಮಸ್ಯೆ ಹೆಚ್ಚಿಸುತ್ತದೆ, ಇದರಿಂದ ಸ್ಥೂಲಕಾಯ, ಖಿನ್ನತೆ, ಮಾನಸಿಕ ಒತ್ತಡ ಈ ಬಗೆಯ ಸಮಸಸ್ಯೆ ಕಂಡು ಬರುವುದು, ಆತ್ಮಹತ್ಯೆಯಂಥ ಆಲೋಚನೆಗಳು ಬರುವುದು.
ಅಪರಾಧ ಕೃತ್ಯಗಳಲ್ಲಿ ತೊಡಗುತ್ತಾರೆ
ಕೆಲ ಆನ್‌ಲೈನ್ ಗೇಮಿಂಗ್‌ನಲ್ಲಿ ಹಣ ಕಳೆದುಕೊಳ್ಳುತ್ತಾರೆ, ಇದರಿಂದ ಹಣ ಗಳಿಸಲು ಅಪರಾಧ ಕೃತ್ಯದಲ್ಲಿ ತೊಡಗುತ್ತಾರೆ.
ಮಕ್ಕಳನ್ನು ಆನ್‌ಲೈನ್ ಗೇಮ್ ಚಟದಿಂದ ಹೊರತರುವುದು ಹೇಗೆ?
ಪೋಷಕರು ಮಕ್ಕಳನ್ನು ಗಮನಿಸಬೇಕಾಗುತ್ತದೆ, ಅವರ ವರ್ತನೆ, ಸ್ವಭಾವದಲ್ಲಿ ಬದಲಾವಣೆ ಕಂಡು ಬಂದರೆ ನಿರ್ಲಕ್ಷ್ಯ ಮಾಡಬಾರದು, ಮಕ್ಕಳಿಗೆ ಬೈಯ್ಯುವುದು, ಹೊಡೆಯುವುದು ಮಾಡುವುದಕ್ಕಿಂತ ಅವರ ಮನ ಮುಟ್ಟುವಂತೆ ಸಮಧಾನದಿಂದ ಬುದ್ಧಿ ಹೇಳಿ, ಅಗ್ಯತ ಬಿದ್ದರೆ ಕೌನ್ಸಿಲಿಂಗ್ ಕೊಡಿಸಿ. ಅವರ ಜೀವನಶೈಲಿ ಹೇಗಿದೆ ಎಂದು ಗಮನಹರಿಸಬೇಕು.



Click it and Unblock the Notifications