Latest Updates
-
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು!
ಮಕ್ಕಳನ್ನು ಹಾಸ್ಟೆಲ್‌ಗೆ ಕಳುಹಿಸುತ್ತಿದ್ದೀರಾ? ಈ ರೀತಿ ಅವರ ಮನವೊಲಿಸಿ
ಪೋಷಕರು ಮಕ್ಕಳ ಭವಿಷ್ಯಕ್ಕಾಗಿ ಸರ್ವಸ್ವವನ್ನೇ ತ್ಯಾಗ ಮಾಡ್ತಾರೆ. ಕೆಲವೊಂದು ಸಲ ಮನೆಯಲ್ಲಿ ಮಕ್ಕಳು ಹೇಳದ ಮಾತನ್ನು ಕೇಳದಿದ್ದಾಗ ಅವರನ್ನು ಹಾಸ್ಟೆಲ್ ಗೆ ಕಳುಹಿಸೋ ನಿರ್ಧಾರವನ್ನು ಮಾಡುತ್ತಾರೆ. ಹಾಸ್ಟೆಲ್ ಕಳುಹಿಸಿದರೆ ಮಕ್ಕಳು ಶಿಸ್ತು ಕಲಿಯುತ್ತಾರೆ, ಓದಿನಲ್ಲಿ ಯಾವತ್ತೂ ಮುಂದಿರುತ್ತಾರೆ, ಜೊತೆಗೆ ಇತರ ಕೌಶಲ್ಯಗಳನ್ನು ಬೆಳೆಸಿಕೊಳ್ಳುತ್ತಾರೆ ಅನ್ನೋ ನಂಬಿಕೆ ಪೋಷಕರಲ್ಲಿ ಇರುತ್ತಾರೆ. ಆದರೆ ಮಕ್ಕಳಿಗೆ ಮನೆಯನ್ನು ಬಿಟ್ಟು ಹಾಸ್ಟೆಲ್ ಗೆ ಹೋಗುವುದು ಒಂಚೂರು ಇಷ್ಟ ಇರೋದಿಲ್ಲ. ಹಾಗಾದ್ರೆ ಹಾಸ್ಟೆಲ್ ಗೆ ಹೋಗೋದಕ್ಕೆ ಮಕ್ಕಳನ್ನು ತಯಾರಿ ಮಾಡೋದು ಹೇಗೆ? ಇಲ್ಲಿದೆ ಟಿಪ್ಸ್!
1. ನಿಮ್ಮ ಮಗುವಿನ ಜೊತೆಗೆ ಮಾತನಾಡಿ
ಮಕ್ಕಳು ಪೋಷಕರ ಜೊತೆಗೆ ತುಂಬಾ ಆತ್ಮೀಯರಾಗಿರುತ್ತಾರೆ. ಒಂದು ದಿನವೂ ಅವರು ಮನೆಯನ್ನು ಬಿಟ್ಟು ಹೋದವರಲ್ಲ, ಅಂತದ್ರಲ್ಲಿ ಏಕಾಏಕಿ ಹಾಸ್ಟೆಲ್ ಗೆ ಹೋಗೋದ್ರಂತೆ ಒಂದು ರೀತಿಯಲ್ಲಿ ಅವರಿಗೆ ಭಯ ಇದ್ದೇ ಇರುತ್ತದೆ. ಅಪ್ಪ- ಅಮ್ಮನನ್ನು ಬಿಟ್ಟು ಇರೋದು ಹೇಗೆ? ವಾರ್ಡರ್ ಕಂಡರೆ ಭಯ, ಹಾಸ್ಟೆಲ್ ಊಟ ಸೇರೋದಿಲ್ಲ. ಹೀಗೆ ಅನೇಕ ರೀತಿಯ ಆತಂಕ, ಭಯ ಅವರನ್ನು ಕಾಡುತ್ತಿರುತ್ತೆ. ಇಂತಹ ಸಂದರ್ಭದಲ್ಲಿ ಪೋಷಕರು ಅವರ ಜೊತೆ ಮಾತನಾಡಿ ಅವರಿಗೆ ದೈರ್ಯ ತುಂಬಬೇಕು.

2. ಹಾಸ್ಟೆಲ್ ಬಗ್ಗೆ ಧನಾತ್ಮಕ ವಿಚಾರಗಳನ್ನೇ ಹೇಳಿ
ಹಾಸ್ಟೆಲ್ ಜೀವನ ಕಳೆಯೋದಂದ್ರೆ ಪ್ರತಿಯೊಬ್ಬ ಮಕ್ಕಳಿಗೂ ಒಂದು ರೀತಿಯ ಭಯ ಇದ್ದೇ ಇರುತ್ತದೆ. ಹಾಸ್ಟೆಲ್ ಬಗ್ಗೆ ಒಂದು ರೀತಿ ಋಣಾತ್ಮಕತೆಯೇ ತುಂಬಿರುತ್ತದೆ. ಇಂತಹ ಸಂದರ್ಭಗಳಲ್ಲಿ ಧನಾತ್ಮಕ ವಿಚಾರಗಳನ್ನು ತುಂಬುವುದು ಪೋಷಕರ ಕರ್ತವ್ಯ. ಹಾಸ್ಟೆಲ್ ನಲ್ಲಿ ನಿನಗೆ ತುಂಬಾ ಸ್ನೇಹಿತರು ಸಿಗುತ್ತಾರೆ. ಅವರ ಜೊತೆಗೆ ನೀನು ಉತ್ತಮ ಸಮಯವನ್ನು ಕಳೆಯಬಹುದು. ಇನ್ನೂ ಮನೆಯಲ್ಲಿ ಇಲ್ಲದಿರೋ ವಿಶೇಷ ಸೌಕರ್ಯಗಳನ್ನು ನೀನು ಹಾಸ್ಟೆಲ್ ನಲ್ಲಿ ಪಡೆಯಬಹುದು. ಇಂತಹ ವಿಚಾರಗಳಲ್ಲಿ ಮಕ್ಕಳ ತಲೆಗೆ ತುಂಬಿ.
3. ಸ್ವತಂತ್ರವಾಗಿರೋದನ್ನು ಕಲಿಸಿ ಕೊಡಿ
ಮಕ್ಕಳು ಮನೆಯಲ್ಲಿದ್ದಾಗ ಪ್ರತಿಯೊಂದು ವಿಚಾರಕ್ಕೂ ಪೋಷಕರನ್ನೇ ಅವಲಂಬಿಸಿರುತ್ತಾರೆ. ಚಿಕ್ಕ-ಪುಟ್ಟ ಕೆಲಸ ಮಾಡೋದಕ್ಕೆ ಅವರಿಗೆ ಗೊತ್ತಿರೋದಿಲ್ಲ. ಈಗಾಗಿ ಹಾಸ್ಟೆಲ್ ಗೆ ಕಳುಹಿಸುವ ಮೊದಲು ಮಕ್ಕಳು ಈ ಎಲ್ಲಾ ಕೆಲಸಗಳನ್ನು ಕಲಿಯುವಂತೆ ಮಾಡೋದು ಪೋಷಕರ ಕರ್ತವ್ಯ. ತಾಯಿಯ ಹೊರತಾಗಿಯೂ ಸ್ವತಂತ್ರವಾಗಿ ಬದುಕೋದು ಹೇಗೆ ಅನ್ನೋದನ್ನು ಕಲಿಸಿ ಕೊಡಬೇಕು. ಬಟ್ಟೆ ಮಡಿಚುವುದು, ತಿಂದ ತಟ್ಟೆ ತೊಳೆಯುವುದು, ಸ್ವಚ್ಛತೆ ಇತ್ಯಾದಿ.
4. ಸರಿಯಾದ ದಿನಚರಿಯನ್ನು ಅಭ್ಯಾಸ ಮಾಡಿಸಿ
ಹಾಸ್ಟೆಲ್ ಎಂದ ಮೇಲೆ ಅಲ್ಲಿ ಸರಿಯಾದ ದಿನಚರಿಯನ್ನು ಪಾಲಿಸಲೇಬೇಕಾಗುತ್ತದೆ. ಶಿಸ್ತಿನ ಜೀವನವನ್ನು ರೂಢಿಸಿಕೊಳ್ಳುವುದು ಮುಖ್ಯವಾಗುತ್ತದೆ. ಹೀಗಾಗಿ ಹಾಸ್ಟೆಲ್ ಗೆ ಕಳುಹಿಸುವ ಮೊದಲೇ ಮನೆಯಲ್ಲಿ ಕೆಲವು ಅಭ್ಯಾಸಗಳನ್ನು ರೂಢಿಸಿಕೊಳ್ಳುವಂತೆ ಮಾಡಿ. ಬೆಳಗ್ಗೆ ಬೇಗ ಏಳುವುದು, ಬಟ್ಟೆಗೆ ಇಸ್ತ್ರಿ ಹಾಕುವುದು, ಸ್ವಚ್ಛತೆ ಹಾಗೂ ರಾತ್ರಿ ಸರಿಯಾದ ಸಮಯಕ್ಕೆ ಮಲಗುವುದು ಇತ್ಯಾದಿ. ಇದೆಲ್ಲಾ ಅಭ್ಯಾಸವಾದರೆ ಹಾಸ್ಟೆಲ್ ಜೀವನಕ್ಕೆ ಒಗ್ಗಿಕೊಳ್ಳೋದು ಕಷ್ಟ ಆಗೋದಿಲ್ಲ.
5. ಭಾವನಾತ್ಮಕವಾಗಿ ಪ್ರೋತ್ಸಾಹ ನೀಡಿ
ಹಾಸ್ಟೆಲ್ ಹೋಗೋದಂದ್ರೆ ಮಕ್ಕಳು ಖಂಡಿತ ಕಣ್ಣೀರು ಹಾಕದೇ ಇರೋದಿಲ್ಲ. ಅಪ್ಪ- ಅಮ್ಮನ ನೆನೆಪು ಖಂಡಿತ ಅವರನ್ನು ಕಾಡುತ್ತದೆ. ಹಾಸ್ಟೆಲ್ ಗೆ ಹೋಗಬೇಕಲ್ಲ ಅನ್ನೋ ದುಃಖದಲ್ಲೇ ಅವರು ದಿನ ಕಳೆಯುತ್ತಾರೆ. ಇಂತಹ ಸಂದರ್ಭದಲ್ಲಿ ಪೋಷಕರು ಮಕ್ಕಳಿಗೆ ಭಾವನಾತ್ಮಕ ಪ್ರೋತ್ಸಾಹ ನೀಡಬೇಕು. ಹಾಸ್ಟೆಲ್ ನಲ್ಲಿ ಮನೆಯ ವಾತಾವರಣ ಇರುತ್ತೆ, ನಿನ್ನ ಭವಿಷ್ಯಕ್ಕಾಗಿ ನೀನು ಹಾಸ್ಟೆಲ್ ಗೆ ಹೋಗಲೇಬೇಕು. ನೀನು ಉತ್ತಮ ಅಂಕಗಳನ್ನು ಗಳಿಸಬಹುದು. ಇಂತಹ ಮಾತುಗಳಿಂದ ಅವರಿಗೆ ಪ್ರೋತ್ಸಾಹ ನೀಡಬೇಕು.
6. ಮಕ್ಕಳಿಗೆ ಇಷ್ಟವಾದ ವಸ್ತುಗಳನ್ನು ಪ್ಯಾಕ್ ಮಾಡಿ
ಮಕ್ಕಳು ಚಿಕ್ಕ-ಪುಟ್ಟ ವಸ್ತುಗಳನ್ನು ತುಂಬಾನೇ ಇಷ್ಟ ಪಡುತ್ತಾರೆ. ಅವರು ಹಾಸ್ಟೆಲ್ ಗೆ ಹೋಗುವ ಮೊದಲು ಅವರ ಬ್ಯಾಗ್ ನಲ್ಲಿ ಅವರಿಷ್ಟದ ಆಟದ ಸಾಮಾನು, ಫ್ಯಾಮಿಲಿ ಫೋಟೋ, ಇಷ್ಟದ ತಿಂಡಿ-ತಿನಿಸುಗಳನ್ನು ಪ್ಯಾಕ್ ಮಾಡಿ. ಆಗ ಅವರಿಗೆ ಮನೆಯ ನೆನೆಪು ಅಷ್ಟಾಗಿ ಕಾಡೋದಿಲ್ಲ. ಇನ್ನೂ ಪ್ರತಿ ವಾರ ಭೇಟಿ ಮಾಡೋದಕ್ಕೆ ಹಾಸ್ಟೆಲ್ ಗೆ ಬರೋದಾಗಿ ಭರವಸೆ ನೀಡಿ.
ಮಕ್ಕಳನ್ನು ಹಾಸ್ಟೆಲ್ ಗೆ ಕಳುಹಿಸುವ ಮೊದಲು ಪೋಷಕರು ಈ ವಿಚಾರಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು. ಹೀಗೆ ಮಾಡೋದ್ರಿಂದ ಅವರು ಮಾನಸಿಕವಾಗಿ ಹಾಸ್ಟೆಲ್ ಗೆ ಹೋಗೋದಕ್ಕೆ ಸಿದ್ಧರಾಗುತ್ತಾರೆ.



Click it and Unblock the Notifications
