Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗರ್ಭಾವಸ್ಥೆಯಲ್ಲಿ ಕಾಡುವ ಆತಂಕದಿಂದ ಹೊರಬರುವುದು ಹೇಗೆ?
ಗರ್ಭಾವಸ್ಥೆಯಲ್ಲಿ ಮಹಿಳೆಯರು ಅನೇಕ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಅದ್ರಲ್ಲಿ ಮುಖ್ಯವಾಗಿ ಅವರು ಆತಂಕದಂತಹ ಸಮಸ್ಯೆಗಳನ್ನು ಹೆಚ್ಚಾಗಿ ಎದುರಿಸಬೇಕಾಗುತ್ತದೆ. ಇದಕ್ಕೆ ಕಾರಣಗಳು ಹಲವು ಇರಬಹುದು. ಆದರೆ ಒಂದು ಸಾರಿ ಮಹಿಳೆಯರು ಆತಂಕ ಹಾಗೂ ಖಿನ್ನತೆಯಿಂದ ಬಳಲುವುದಕ್ಕೆ ಶುರು ಮಾಡಿದ್ರೆ ಅದ್ರಿಂದ ಹೊರ ಬರೋದು ಕಷ್ಟ ಆಗುತ್ತದೆ. ಅಷ್ಟಕ್ಕೂ ಗರ್ಭಾವಸ್ಥೆಯಲ್ಲಿ ಉಂಟಾಗುವ ಆತಂಕದಂತಹ ಸಮಸ್ಯೆಗಳಿಂದ ಹೊರ ಬರೋದು ಹೇಗೆ ಅನ್ನೋದನ್ನು ತಿಳಿಯೋಣ.

ಗರ್ಭಾವಸ್ಥೆಯಲ್ಲಿ ಆತಂಕ ಹೆಚ್ಚಾಗೋದಕ್ಕೆ ಕಾರಣಗಳೇನು?
* ಹೆಚ್ಚಾಗಿ ತಲೆಕೆಡಿಸಿಕೊಳ್ಳುವುದು
* ದೈಹಿಕ ನೋವುಗಳು
* ನಿದ್ರಾಚಕ್ರ ಬದಲಾಗೋದು
* ಆಹಾರ ಪದ್ಧತಿ ಬದಲಾಗುವುದು
* ಕಿರಿಕಿರಿ ಉಂಟಾಗುವುದು
* ಗಮನ ಕೇಂದ್ರೀಕರಿಸೋದಕ್ಕೆ ಕಷ್ಟವಾಗುತ್ತದೆ
* ಇನ್ನಿಲ್ಲದಂತೆ ಕಾಡುವ ಆಲೋಚನೆಗಳು
ಗರ್ಭಾವಸ್ಥೆಯಲ್ಲಿ ಉಂಟಾಗುವ ಆತಂಕದಿಂದ ಹೊರಬರೋದು ಹೇಗೆ?
1. ಧ್ಯಾನವನ್ನು ಅಭ್ಯಾಸ ಮಾಡಿ
ಗರ್ಭಾವಸ್ಥೆಯ ಸಮಯದಲ್ಲಿ ನಮ್ಮ ತಲೆಯಲ್ಲಿ ಇಲ್ಲದ ಆಲೋಚನೆಗಳು ಓಡಾಡೋದಕ್ಕೆ ಶುರುವಾಗುತ್ತದೆ. ಅದ್ರಲ್ಲೂ ಗರ್ಭಿಣಿಯರ ಮನಸ್ಥಿತಿಯು ಅಷ್ಟು ಚೆನ್ನಾಗಿ ಇರೋದಿಲ್ಲ. ಮಗುವಿನ ಬಗ್ಗೆಯೇ ಹೆಚ್ಚಾಗಿ ಅವರ ಮನಸ್ಸು ಚಿಂತಿಸುತ್ತಿರುತ್ತದೆ. ಈ ಸಂದರ್ಭದಲ್ಲಿ ನಿಮ್ಮ ಮನಸ್ಸು ಶಾಂತವಾಗಿರೋದು ತುಂಬಾನೇ ಮುಖ್ಯವಾಗುತ್ತದೆ.
ಹೀಗಾಗಿ ಧ್ಯಾನ ಮಾಡೋದು ತುಂಬಾನೇ ಮುಖ್ಯ. ಇದ್ರಿಂದ ನಿಮ್ಮ ಆತಂಕ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಅಷ್ಟೇ ಅಲ್ಲದೇ ಇದ್ರಿಂದ ನಿಮ್ಮ ಒತ್ತಡದ ಹಾರ್ಮೋನುಗಳು ಶಾಂತವಾಗೋದಕ್ಕೆ ಸಹಕಾರಿಯಾಗುತ್ತದೆ. ಹೀಗಾಗಿ ಗರ್ಭಿಣಿಯರು ಉಸಿರಾಟಕ್ಕೆ ಸಂಬಂಧಿಸಿದ ವ್ಯಾಯಾಮಗಳ ಜೊತೆಗೆ ಧ್ಯಾನ ಮಾಡಿದ್ರೆ ಒಳ್ಳೆಯದು.
2. ನಿಯಮಿತವಾಗಿ ವ್ಯಾಯಾಮ ಮಾಡಿ
ವ್ಯಾಯಾಮ ಮಾಡೋದು ಆರೋಗ್ಯ ದೃಷ್ಟಿಯಿಂದ ತುಂಬಾನೇ ಒಳ್ಳೆಯದು. ಇದು ಆತಂಕವನ್ನು ಆದಷ್ಟು ಕಡಿಮೆ ಮಾಡೋದಕ್ಕೆ ಸಹಕಾರಿಯಾಗಿದೆ. ಹಾಗಂತ ದೇಹಕ್ಕೆ ಹಾನಿಯಾಗುವಂತಹ ವ್ಯಾಯಾಮಗಳನ್ನು ಮಾಡಬಾರದು. ಗರ್ಭಾವಸ್ಥೆಯಲ್ಲಿ ಇರುವವರು ನಡೆದಾಟ, ಈಜು ಮತ್ತು ಯೋಗ ಇತ್ಯಾದಿಗಳನ್ನು ಅಭ್ಯಾಸ ಮಾಡಬಹುದು.
3. ನಿಮ್ಮ ಆಪ್ತರೊಂದಿಗೆ ಎಲ್ಲಾ ವಿಚಾರವನ್ನು ಹಂಚಿಕೊಳ್ಳಿ
ಗರ್ಭಾವಸ್ಥೆಯಲ್ಲಿ ಆತಂಕಗಳಾಗೋದು ಸಹಜ. ಇಂತಹ ಸಂದರ್ಭದಲ್ಲಿ ನೀವು ನಿಮ್ಮ ಆಪ್ತರ ಜೊತೆಗೆ ನಿಮ್ಮ ನೋವುಗಳ ಬಗ್ಗೆ ಹಂಚಿಕೊಳ್ಳಬಹುದು. ಮುಖ್ಯವಾಗಿ ನಿಮ್ಮ ಪತಿ, ತಾಯಿ ಅಥವಾ ಸ್ನೇಹಿತರು ಹೀಗೆ ಯಾರು ನಿಮಗೆ ಹೆಚ್ಚು ಆಪ್ತರಾಗಿ ಇರುತ್ತಾರೆಯೋ ಅವರೊಂದಿಗೆ ನಿಮ್ಮ ನೋವುಗಳನ್ನು ಹಂಚಿಕೊಳ್ಳಬಹುದು.
ನೋವನ್ನು ಹಂಚಿಕೊಳ್ಳೋದ್ರಿಂದ ನಮ್ಮ ಮನಸ್ಸು ಹಗುರವಾಗುತ್ತದೆ. ನಾವು ದುಃಖವನ್ನು ಹೊರಹಾಕೋದಕ್ಕೆ ಸಾಧ್ಯವಾಗುತ್ತದೆ. ನಮ್ಮ ಆಪ್ತರು ನಮ್ಮ ಸಮಸ್ಯೆಗೆ ಪರಿಹಾರವನ್ನು ನೀಡುವ ಸಾಧ್ಯತೆಯಿದೆ.
4. ಸ್ವ-ಆರೈಕೆ ಮತ್ತು ವಿಶ್ರಾಂತಿ ತಂತ್ರಗಳನ್ನು ಅಭ್ಯಾಸ ಮಾಡಿ!
ಗರ್ಭಾವಸ್ಥೆಯ ಸಂದರ್ಭದಲ್ಲಿ ಆತಂಕ ದೂರವಾಗಬೇಕಂದ್ರೆ ಸ್ವ ಆರೈಕೆಯಲ್ಲಿ ತೊಡಗಿಕೊಳ್ಳುವುದು ತುಂಬಾನೇ ಮುಖ್ಯ. ಈ ಸಮಯದಲ್ಲಿ ಬೇರೆ ಚಟುವಟಿಕೆಗಳನ್ನು ಮಾಡುತ್ತಾ ನಿಮ್ಮನ್ನು ನೀವು ಬ್ಯುಸಿಯಾಗಿರುವಂತೆ ನೋಡಿಕೊಳ್ಳಿ. ಸಣ್ಣ-ಪುಟ್ಟ ವ್ಯಾಯಾಮ ಮಾಡಿ, ಕೂದಲು ಹಾಗೂ ಚರ್ಮದ ಆರೈಕೆಯನ್ನು ಮಾಡಿ.
ಜೊತೆಗೆ ಪುಸ್ತಕ ಓದುವುದು, ನಿಮ್ಮ ಇತರ ಹವ್ಯಾಸಗಳನ್ನು ಎಂಜಾಯ್ ಮಾಡಿ. ಪೌರಾಣಿಕ ಕಥೆಗಳನ್ನು ಕೇಳಿ, ಲೈಟ್ ಮ್ಯೂಸಿಕ್ ಕೇಳುವುದು ಕೂಡ ನಿಮ್ಮ ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ.
5. ತಜ್ಞರ ಸಲಹೆಯನ್ನು ಪಡೆಯಿರಿ
ಕೆಲವೊಂದು ಸಲ ನಾವು ಯಾರೊಂದಿಗೂ ಸಮಸ್ಯೆಗಳನ್ನು ಹೇಳೋದಿಕ್ಕೆ ಆಗದ ಹಂತಕ್ಕೆ ತಲುಪುತ್ತೇವೆ. ಬೇರೆಯವರು ಏನಂದುಕೊಳ್ಳುತ್ತಾರೆ ಎನ್ನುವ ಭಯ ನಮ್ಮಲ್ಲಿರುತ್ತದೆ. ಇಂತಹ ಸಂದರ್ಭದಲ್ಲಿ ನೀವು ತಜ್ಞರ ಸಲಹೆ ಪಡೆದುಕೊಳ್ಳುವುದು ತುಂಬಾನೇ ಮುಖ್ಯ. ಯಾಕಂದ್ರೆ ಅವರ ಬಳಿ ಯಾವುದೇ ಮುಚ್ಚು ಮರೆಯಿಲ್ಲದೇ ನಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹೇಳಿಕೊಳ್ಳಬಹುದು. ಹಾಗೂ ಅವರಿಂದ ಸೂಕ್ತ ಪರಿಹಾರವನ್ನು ಪಡೆದುಕೊಳ್ಳಬಹುದು.
ಹೀಗೆ ಗರ್ಭಾವಸ್ಥೆಯಲ್ಲಿ ಉಂಟಾಗುವ ಆತಂಕದಂತಹ ಸಮಸ್ಯೆಗಳಿಂದ ಹೊರ ಬರೋದಕ್ಕೆ ನಾವು ನಾನಾ ರೀತಿಯಲ್ಲಿ ಪರಿಹಾರಗಳನ್ನು ಕಂಡುಕೊಳ್ಳಬಹುದು.



Click it and Unblock the Notifications