Latest Updates
-
ಮಳೆಗಾಲದಲ್ಲಿ ದಂಪತಿಗಳ ಬಾಂಧವ್ಯ ಗಟ್ಟಿಯಾಗಬೇಕೆ? ಮದುವೆ ಮತ್ತು ಬಜೆಟ್ ಪ್ಲಾನಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ದೆಹಲಿ ನೀರಿನ ಬಿಕ್ಕಟ್ಟು: ಮನೆಯಲ್ಲಿ ನೀರು ಉಳಿಸಿ, ಗಿಡಗಳನ್ನು ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಡೈರಿ ಉತ್ಪನ್ನಗಳ ಸ್ಮಾರ್ಟ್ ಆಯ್ಕೆ: ವಿಶ್ವ ಹಾಲು ದಿನದ ವಿಶೇಷ ಸಲಹೆಗಳು -
ಬೆಂಗಳೂರು ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಸ್ಟೈಲಿಶ್ ಆಗಿ ಕಾಣಲು ಈ ವೈರಲ್ ಟಿಪ್ಸ್ ಮಿಸ್ ಮಾಡ್ಬೇಡಿ! -
ವಿಶ್ವ ಸೈಕಲ್ ದಿನ: ಫಿಟ್ನೆಸ್ ಕಾಯ್ದುಕೊಳ್ಳಲು ಮತ್ತು ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ!
ಆಕ್ರಮಣಕಾರಿ ಮಕ್ಕಳನ್ನು ನಿಯಂತ್ರಿಸೋದು ಹೇಗೆ? ಇಲ್ಲಿದೆ ಟಿಪ್ಸ್!
ಎಲ್ಲಾ ಮಕ್ಕಳ ಗುಣ ಒಂದೇ ರೀತಿ ಇರೋದಿಲ್ಲ. ಒಬ್ಬೊಬ್ಬ ಮಗುವಿನ ಗುಣ-ನಡತೆ ಒಂದೊಂದು ರೀತಿಯಲ್ಲಿ ಇರುತ್ತದೆ. ಕೆಲವು ಮಕ್ಕಳು ಶಾಂತ ಸ್ವಭಾವವನ್ನು ಹೊಂದಿದ್ದರೆ, ಇನ್ನೂ ಕೆಲವು ಮಕ್ಕಳು ಆಕ್ರಮಣಕಾರಿ ಸ್ವಭಾವ ಹೊಂದಿರುತ್ತಾರೆ. ಎಲ್ಲಾ ವಿಚಾರಕ್ಕೂ ಹಠ ಮಾಡುತ್ತಾರೆ.
ತಾವು ಇಷ್ಟ ಪಟ್ಟಿರೋದು ಸಿಗದೇ ಹೋದರೆ ಅಥವಾ ತಾವು ಅಂದುಕೊಂಡಿದ್ದು ಆಗದೇ ಹೋದರೆ ಕಿರಿಚಾಡುತ್ತಾರೆ, ಜೋರಾಗಿ ಬೊಬ್ಬೆ ಹಾಕುತ್ತಾರೆ. ಹೀಗೆ ಮೊಂಡು ಹಠವನ್ನು ಹೊಂದಿರುತ್ತಾರೆ. ಅಷ್ಟಕ್ಕು ಈ ರೀತಿ ಆಕ್ರಮಣಕಾರಿ ಗುಣ ಹೊಂದಿರುವ ಮಕ್ಕಳನ್ನು ಶಾಂತಗೊಳಿಸೋದು ಹೇಗೆ ಅನ್ನೋದನ್ನು ತಿಳಿಯೋಣ.

1. ಮಕ್ಕಳಿಗೆ ಮನೆಯ ನಿಯಮಗಳ ಬಗ್ಗೆ ತಿಳಿಸಿ
ಚಿಕ್ಕ ಮಕ್ಕಳಿಗೆ ಸಾಮಾನ್ಯವಾಗಿ ಮನೆಯ ನಿಯಮಗಳ ಬಗ್ಗೆ ಗೊತ್ತಿರೋದಿಲ್ಲ. ಪೋಷಕರು ಮಾಡಬೇಕಾದ ಮೊದಲ ಕೆಲಸ ಅಂದ್ರೆ ಮಕ್ಕಳಿಗೆ ಮನೆಯ ನಿಯಮಗಳ ಬಗ್ಗೆ ತಿಳಿಸಿ ಕೊಡುವುದು. ಮಕ್ಕಳಿಗೆ ನೋಡಿದ್ದನ್ನೆಲ್ಲಾ ಮುಟ್ಟಬೇಕು, ಎಲ್ಲವನ್ನೂ ಬೇಕು ಎಂದು ಕೇಳುತ್ತಾರೆ. ಮಕ್ಕಳಿಗೆ ಅದರ ಮೌಲ್ಯಗಳ ಬಗ್ಗೆ ತಿಳಿಸಿ. ಅದನ್ನು ಮುಟ್ಟಬಾರದೆಂದು ಬುದ್ಧಿ ಮಾತು ಹೇಳಿ.
ಮಕ್ಕಳಿಗೆ ಎಲ್ಲಾ ಜಾಗದಲ್ಲಿ ಆಟವಾಡಲು ಅವಕಾಶ ನೀಡಬೇಡಿ. ಒಂದು ಪ್ಲೇ ಏರಿಯಾ ಮಾಡಿ ಅಲ್ಲಿ ಆಟವಾಡಲು ಬಿಡಿ. ಇನ್ನೂ ಮುಖ್ಯವಾಗಿ ಮಕ್ಕಳು ತಪ್ಪು ಮಾಡಿದಾಗ ಆಗಲೇ ತಿದ್ದಿ ಬುದ್ಧಿ ಹೇಳಿ. ಹೀಗಾದಾಗ ಅವರ ಮೀತಿ ಏನು ಅನ್ನೋದು ಅವರಿಗೆ ಗೊತ್ತಿರುತ್ತೆ.
2. ಪೋಷಕರಿಗೆ ತಾಳ್ಮೆ ಇರಲಿ
ಮಕ್ಕಳನ್ನು ಬೆಳೆಸುವಾಗ ಪೋಷಕರಿಗೆ ತಾಳ್ಮೆ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ಮಕ್ಕಳು ಆಕ್ರಮಣಕಾರಿಯಾದಾಗ ನೀವು ಯಾವುದೇ ರೀತಿ ಪ್ರತಿಕ್ರಿಯೆ ನೀಡಬಾರದು. ನೀವು ಬೈದರೆ ಅಥವಾ ಹೊಡೆದರೆ ಅವರು ಮತ್ತಷ್ಟು ಹೆಚ್ಚಿಕೊಳ್ಳುತ್ತಾರೆ. ಒಂದು ವೇಳೆ ನೀವು ಮುದ್ದು ಮಾಡೋದಕ್ಕೆ ಹೋದರೂ ಕೂಡ ಮಕ್ಕಳು ನಿಮ್ಮ ನಿಯಂತ್ರಣಕ್ಕೆ ಬರೋದಿಲ್ಲ. ಹೀಗಾಗಿ ಏನು ಮಾತನಾಡದೇ ನಿಮ್ಮಷ್ಟಕ್ಕೆ ಸುಮ್ಮನಿರಿ, ಖಂಡಿತ ಸ್ವಲ್ಪ ಸಮಯದ ಬಳಿಕ ಅವರ ಸಮಧಾನಗೊಳ್ಳುತ್ತಾರೆ.
3. ಮಕ್ಕಳ ತಾಳಕ್ಕೆ ತಕ್ಕಂತೆ ಕುಣಿಯಬೇಡಿ
ಕೆಲ ಮಕ್ಕಳು ತಮಗೆ ಬೇಕಾದ್ದು ಸಿಗದಿದ್ದಾಗ ಆಕ್ರಮಣಕಾರಿಯಾಗುತ್ತಾರೆ. ಆದರೆ ಅವರು ಅತ್ತರೆಂದು ಪೋಷಕರು ಅವರ ತಾಳಕ್ಕೆ ತಕ್ಕಂತೆ ಕುಣಿಯಬಾರದು. ಉದಾಹರಣೆಗೆ ನೀವು ಶಾಪಿಂಗ್ ಗೆ ಹೋಗುತ್ತೀರಿ ಎಂದು ಇಟ್ಟುಕೊಳ್ಳಿ. ನಿಮ್ಮ ಮಗು ಏನನ್ನಾದರೂ ನೋಡಿ ಬೇಕೆಂದು ಹಠ ಹಿಡಿಯುತ್ತದೆ. ಮಗುವಿನ ಹಠಕ್ಕೆ ಬೇಸತ್ತು ನೀವು ಖಂಡಿತ ಮಗು ಕೇಳಿದ್ದನ್ನು ಕೊಡಿಸುತ್ತೀರಿ. ಈ ರೀತಿ ಮಾಡುವುದು ತಪ್ಪು.
ಏಕೆಂದರೆ ಮಕ್ಕಳು ಹಠ ಹಿಡಿದಾಗಲೆಲ್ಲಾ, ಆಕ್ರಮಣಕಾರಿ ನಡತೆ ತೋರಿದಾಗಲೆಲ್ಲಾ ಅವರು ಹೇಳಿದ್ದನ್ನು ನೀವು ಮಾಡುತ್ತಿದ್ದರೆ, ಅವರು ಅದನ್ನೇ ಮುಂದುವರಿಸುತ್ತಾರೆ. ಹೀಗಾಗಿ ಆರಂಭದಲ್ಲೇ ಅದನ್ನು ನಿಯಂತ್ರಣಕ್ಕೆ ತರೋದು ಪೋಷಕರ ಕರ್ತವ್ಯ.
4. ಮಕ್ಕಳ ಉತ್ತಮ ನಡತೆಗೆ ಪ್ರೋತ್ಸಾಹಿಸಿ
ಪ್ರತಿ ಸಾರಿ ಮಕ್ಕಳು ಹಠ ಮಾಡುತ್ತಾ, ಆಕ್ರಮಣಕಾರಿಯಾಗಿದ್ದರೆ ನಿಮಗೆ ಕಿರಿಕಿರಿ ಆಗೋದು ಸಹಜ. ಆದರೆ ನೀವು ಅವರಿಗೆ ಬುದ್ಧಿ ಮಾತು ಹೇಳಿದ ನಂತರ ಅವರು ಒಳ್ಳೆಯವರಾದರೆ, ಉತ್ತಮ ನಡವಳಿಕೆಯನ್ನು ಅಳವಡಿಸಿಕೊಂಡರೆ ಮಕ್ಕಳನ್ನು ಪ್ರೋತ್ಸಾಹಿಸಿ. ನಿಮ್ಮ ನಡತೆ ಇಷ್ಟವಾಯಿತು. ಇದೇ ರೀತಿ ಇರಬೇಕು ಎಂದು ಪದೇ ಪದೇ ಹೇಳುತ್ತೀರಿ. ಈ ರೀತಿ ಶಾಂತವಾಗಿದ್ದರೆ ಹೊರಗಡೆ ಕರೆದುಕೊಂಡು ಹೋಗಿ ಏನಾದರೂ ತೆಗೆಸಿಕೊಡೋದಾಗಿ ಹೇಳಿ.
5. ಮಕ್ಕಳ ಭಾವನೆಗಳನ್ನು ಬಾಯಿಬಿಟ್ಟು ಹೇಳಲಿ
ಸಾಮಾನ್ಯವಾಗಿ ದೊಡ್ಡವರು ತಮಗೆ ಕೋಪ ಬಂದಾಗ, ಬೇಜಾರಾದಾಗ ತಮ್ಮ ಭಾವನೆಗಳನ್ನು ಯಾರ ಬಳಿಯಾದರೂ ವ್ಯಕ್ತ ಪಡಿಸುತ್ತೇವೆ. ಆಗ ನಮಗೆ ಕೊಂಚ ಸಮಾಧಾನ ಎನಿಸುತ್ತದೆ. ಆದರೆ ಮಕ್ಕಳು ಹಾಗಾಲ್ಲ, ಕೋಪ ಬಂದಾಗ ಸಿಕ್ಕಾಪಟ್ಟೆ ಹಠ ಮಾಡುತ್ತಾರೆ, ಒಂದೇ ಸಮನೆ ಚೀರಾಡುತ್ತಾರೆ. ನಿಮ್ಮ ಮಗುವಿಗೆ ಕೋಪ, ಬೇಜಾರಾದಾಗ ಆ ಭಾವನೆಗಳನ್ನು ಈ ರೀತಿ ವ್ಯಕ್ತ ಪಡಿಸುವ ಬದಲು ಮನೆಯವರ ಬಳಿ ಹೇಳಿಕೊಳ್ಳುವಂತೆ ತಿಳಿಸಿ. ಈ ಮೂಲಕ ಮಕ್ಕಳ ಭಾವನೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.
6. ಮಕ್ಕಳ ಜಗಳದಲ್ಲಿ ಮಧ್ಯ ಪ್ರವೇಶ ಮಾಡದಿರಿ
ಕೆಲವೊಂದು ಸಲ ನಿಮ್ಮ ಮಕ್ಕಳಿಬ್ಬರು ಆಟವಾಡುತ್ತಾ ಜಗಳವಾಡುವ ಸಾಧ್ಯತೆಗಳಿದೆ. ಇಂತಹ ಸಂದರ್ಭದಲ್ಲಿ ಪೋಷಕರಾಗಿ ನೀವು ಮಧ್ಯ ಪ್ರವೇಶ ಮಾಡೋದಕ್ಕೆ ಹೋಗಬೇಡಿ. ಇಬ್ಬರು ನಿಮ್ಮ ಮಕ್ಕಳೇ ಆಗಿರೋದ್ರಿಂದ ನೀವು ಒಬ್ಬರ ಪರ ವಹಿಸಿಕೊಳ್ಳೋದಕ್ಕೆ ಆಗೋದಿಲ್ಲ. ಹೀಗಾಗಿ ಸುಮ್ಮನಿದ್ದು ಬಿಡಿ. ಒಂದು ವೇಳೆ ಆ ಜಗಳ ಹೊಡೆದಾಟಕ್ಕೆ ತಿರುಗಿದರೆ ಆಗ ನೀವು ಮಧ್ಯ ಪ್ರವೇಶ ಮಾಡಿದರಷ್ಟೇ ಸಾಕು. ಅಲ್ಲಿಯವರೆಗೂ ಮಕ್ಕಳನ್ನು ಗಮನಿಸುತ್ತಿರಿ. ಇನ್ನೂ ಅವಾಚ್ಯ ಪದಗಳು ಬಳಕೆಯಾಗದಂತೆ ಎಚ್ಚರ ವಹಿಸಿ.
ಮಕ್ಕಳಿಗೆ ಹುಟ್ಟಿನಿಂದಲೇ ಯಾವ ಗುಣಗಳು ಬಳುವಳಿಯಾಗಿ ಬಂದಿರೋದಿಲ್ಲ. ಹೀಗಾಗಿ ಮಕ್ಕಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವುದು ಅಂದುಕೊಂಡಷ್ಟು ಕಷ್ಟವೇನಿಲ್ಲ. ಪ್ರಯತ್ನ ಪಟ್ಟರೆ ಮಕ್ಕಳು ಖಂಡಿತ ನಿಧಾನವಾಗಿ ಬದಲಾಗುತ್ತಾರೆ.



Click it and Unblock the Notifications

