ಮಕ್ಕಳಿಗೆ ಹೊಡೆಯ ಬೇಕಾಗಿಲ್ಲ ! ಈ ರೀತಿ ಹೇಳಿದ್ರೆ ಸಾಕು ಮಕ್ಕಳು ಶಿಸ್ತು ಕಲಿಯುತ್ತಾರೆ

ಮಕ್ಕಳು ಚಿಕ್ಕ ವಯಸ್ಸಿನಲ್ಲಿರಬೇಕಾದರೆ ತಪ್ಪು ಮಾಡೋದು ಸಹಜ. ಅವರು ಚಿಕ್ಕವರಿರಬೇಕಾದರೆ ಅವರ ತಪ್ಪಿನ ಬಗ್ಗೆ ತಿದ್ದಿ ತಿಳಿ ಹೇಳಬೇಕಾಗಿರೋದು ಪೋಷಕರ ಕರ್ತವ್ಯ. ಇದಕ್ಕಾಗಿ ಪೋಷಕರು ಅನುಸರಿಸುವ ಮೊದಲ ಮಾರ್ಗವೇ ಹೊಡೆಯೋದು ಹಾಗೂ ಬೈಯೋದು. ಕೇವಲ ಹೊಡೆದು, ಬಡಿದು ಮಾಡಿದ್ರೆ ಮಕ್ಕಳು ಹಾದಿಗೆ ಬರೋದಿಲ್ಲ. ಬದಲಾಗಿ ಅವರ ತಪ್ಪಿನ ಅರಿವು ಮೂಡಿಸಬೇಕು. ಹಾಗಾದ್ರೆ ಮಕ್ಕಳನ್ನು ಹೊಡೆಯದೇ ಸರಿ ದಾರಿಗೆ ತರೋದು ಹೇಗೆ? ಅವರಲ್ಲಿ ಶಿಸ್ತು ಅಳವಡಿಸಿಕೊಳ್ಳುವಂತೆ ಮಾಡೋದ್ಹೇಗೆ ಅನ್ನೋದನ್ನು ತಿಳಿಯೋಣ.

1. ಸವಲತ್ತುಗಳನ್ನು ಕಸಿದುಕೊಳ್ಳಿ
ಮಕ್ಕಳು ತಪ್ಪು ಮಾಡೋದು ಸಹಜ. ಆದರೆ ಸರಿಯಾದ ಸಮಯದಲ್ಲಿ ಅವರ ತಪ್ಪಿನ ಅರಿವು ಮೂಡಿಸೋದು ಪೋಷಕರ ಕರ್ತವ್ಯ. ಮಕ್ಕಳಿಗೆ ಹೊಡೆದು, ಬೈಯೋದನ್ನು ಮಾಡೋದ್ರ ಬದಲು. ಒಂದು ತಪ್ಪನ್ನು ಮಾಡಿದಾಗ ಅವರಿಗೆ ಎಚ್ಚರಿಕೆ ನೀಡಿ. ಒಂದು ವೇಳೆ ಅದೇ ತಪ್ಪು ಮತ್ತೆ ಮರುಕಳಿಸಿದರೆ ಅವರ ಆಟದ ಸಾಮಾನು, ಮೊಬೈಲ್‌, ಟ್ಯಾಪ್‌ ಹೀಗೆ ಅವರಿಗೆ ಇಷ್ಟ ಬಂದ ವಸ್ತುಗಳನ್ನು ವಾಪಾಸ್ಸ್‌ ತೆಗೆದುಕೊಳ್ಳುತ್ತೇನೆ ಎಂದು ಹೇಳಿ. ಆ ನಂತರ ಅದನ್ನು ಕೊಡಲೇಬೇಡಿ. ಒಂದೆರಡು ಸಾರಿ ಈ ರೀತಿ ಮಾಡಿದರೆ ಅವರಾಗೇ ತಿದ್ದಿಕೊಳ್ಳುತ್ತಾರೆ.

Effective Ways of Teaching Discipline to Your Child Without Spanking in Kannada

2. ಹೊಸ ಕೌಶಲ್ಯಗಳನ್ನು ಕಲಿಸಿ ಕೊಡಿ
ಮಕ್ಕಳು ಹೆಚ್ಚಾಗಿ ಗಲಾಟೆ ಮಾಡೋದು ಅವರಿಗೆ ಕೋಪ ಬಂದಾಗ, ಬೇಜಾರಾದಾಗ. ಹೀಗಾಗಿ ಮೊದಲು ನೀವು ನಿಮ್ಮ ಮಗುವಿಗೆ ಕೋಪವನ್ನು ನಿಯಂತ್ರಣ ಮಾಡೋದು ಹೇಗೆ ಎಂಬ ಕೌಶಲ್ಯವನ್ನು ಕಲಿಸಿಕೊಡಿ. ಇನ್ನೂ ಬೇಜಾರಾದಾಗ ಮುನಿಸಿಕೊಳ್ಳುವುದು ಕೆಟ್ಟ ಗುಣ ಎಂದು ತಿಳಿ ಹೇಳಿ. ಬೆಳೆಯುತ್ತಾ ಬೆಳೆಯುತ್ತಾ ಅವರೇ ಎಲ್ಲವನ್ನು ಅರ್ಥ ಮಾಡಿಕೊಳ್ಳುತ್ತಾರೆ. ಇದಕ್ಕಾಗಿ ಅವರಿಗೆ ಹೊಡೆಯುವ ಅಗತ್ಯವಿಲ್ಲ.

3. ಟೈಂ ಔಟ್‌ ಎಂದು ಹೇಳಿ
"ಟೈಂ ಔಟ್‌" ಎಂದರೆ ನಿಮ್ಮ ಹಠ ಇಲ್ಲಿಗೆ ಕೊನೆಯಾಗಬೇಕು ಎಂದರ್ಥ. ಒಡಹುಟ್ಟಿದವರು ಒಟ್ಟಿಗೆ ಆಟವಾಡುವಾಗ ಹೊಡೆದಾಡಿ, ಜಗಳ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಪೋಷಕರು ಬಂದು ದೊಡ್ಡ ಮಗುವಿಗೆ ಹೆಚ್ಚಾಗಿ ಹೊಡೆಯುತ್ತಾರೆ. ಹೀಗೆ ಮಾಡೋದು ತಪ್ಪು. ನೀವು ಒಂದು ಮಗುವಿಗೆ ಹೊಡೆದರೆ ಅದು ಅಸಮಾನತೆ ಆಗುತ್ತದೆ. ಹೀಗಾಗಿ ಅವರು ಜಗಳವಾಡುತ್ತಿದ್ದರೆ ಟೈಂ ಔಟ್‌ ಎಂಬ ಸೂಚನೆ ಕೊಡಿ. ಅಂದ್ರೆ ಅಲ್ಲಿಗೆ ಅವರ ಜಗಳ, ಹಠ, ಕೋಪ ಕೊನೆಯಾಗಬೇಕೆಂದರ್ಥ.

4. ಶಾಂತವಾಗಿರಿ
ಮಕ್ಕಳು ತಪ್ಪು ಮಾಡಿದಾಗ ಪೋಷಕರಾಗಿ ನೀವು ಕಿರುಚಾಡಿದರೆ ಅದು ನಿಮ್ಮ ತಪ್ಪಾಗುತ್ತದೆ. ಮಕ್ಕಳು ತಪ್ಪು ಮಾಡಿದಾಗ ನಿಮ್ಮಿಂದ ಸಾಧ್ಯವಾದಷ್ಟು ಶಾಂತವಾಗಿರಿ. ಯಾವುದೇ ಕಾರಣಕ್ಕೆ ಮಕ್ಕಳ ಮುಂದೆ ನಿಮ್ಮ ತಾಳ್ಮೆ ಕಳೆದುಕೊಳ್ಳೋದಕ್ಕೆ ಹೋಗಲೇಬೇಡಿ. ನೀವು ಬಳಸುವ ಭಾಷೆ ಸರಳವಾಗಿರಬೇಕು. ಅದು ಆ ಪುಟ್ಟ ಮನಸ್ಸಿಗೆ ನಾಟಬೇಕು. ನಿಮ್ಮ ದೊಡ್ಡ ಮಗುವಿಗೆ ನೀವು ಈ ರೀತಿ ಪದ್ಧತಿ ಅನುಸರಿಸಿದ್ರೆ ನಿಮ್ಮ ಚಿಕ್ಕ ಮಗುವು ಕೂಡ ನಿಮ್ಮ ಸರಳವಾದ ಮಾತು ಕೇಳಿ ಸುಮ್ಮನಾಗುತ್ತದೆ.

5. ಮಕ್ಕಳ ಒಳ್ಳೆಯ ನಡತೆಗೆ ಉಡುಗೊರೆ ನೀಡಿ.
ಮಕ್ಕಳು ತಮ್ಮ ಒಡಹುಟ್ಟಿದವರ ಜೊತೆಗೆ ಜಗಳವಾಡೋದು ಸಾಮಾನ್ಯ. ನಿಮ್ಮ ಮಕ್ಕಳಿಗೆ ಇನ್ನೂ ಮುಂದೆ ಜಗಳವಾಡದಿದ್ದರೆ ಏನಾದರೂ ಉಡುಗೊರೆ ನೀಡೋದಾಗಿ ಹೇಳಿ. ಮಕ್ಕಳು ಯಾವುದಾದರೂ ಕೆಟ್ಟ ಪದವನ್ನು ಬಳಕೆ ಮಾಡುತ್ತಿದ್ದರೆ ಆ ಪದ ಅವರ ಬಾಯಿಯಲ್ಲೇ ಬರದೇ ಹೋದರೆ ಚಾಕಲೇಟ್‌ ಅಥವಾ ಬೇರೆ ಏನಾದರೂ ಕೊಡಿಸೋದಾಗಿ ಹೇಳಿ. ಮುಂದೆ ಅವರು ತಪ್ಪು ಮಾಡುವಾಗ ಜಾಗೃತೆ ವಹಿಸುತ್ತಾರೆ.

ಮಕ್ಕಳು ಬುದ್ಧಿ ಕಲಿಯುವ ವಯಸ್ಸಿನಲ್ಲಿಯೇ ಮಕ್ಕಳಿಗೆ ಈ ವಿಚಾರಗಳನ್ನು ಹೇಳಿಕೊಡಿ. ದೊಡ್ಡದಾದ ಮೇಲೆ ಅವರ ಗುಣ-ನಡೆತೆಯ ಬಗ್ಗೆ ನೀವು ಚಿಂತಿಸಬೇಕಾದ ಅವಶ್ಯಕತೆಯೇ ಇರೋದಿಲ್ಲ.

English summary

Effective Ways of Teaching Discipline to Your Child Without Spanking in Kannada

These are the Effective Ways of Teaching Discipline to Your Child Without Spanking. Read more.
Story first published: Saturday, April 29, 2023, 8:00 [IST]
X
Desktop Bottom Promotion