Latest Updates
-
ವಾಟ್ಸಾಪ್ನಲ್ಲಿ ದೀಪಾವಳಿ ಬೋನಸ್ ಲಿಂಕ್ ಬಂದಿದೆಯೇ? ಮೋಸ ಹೋಗುವ ಮುನ್ನ ಈ 30 ಸೆಕೆಂಡ್ ಕೆಲಸ ಮಾಡಿ! -
ದೆಹಲಿ ಮಾಲಿನ್ಯದ ಭೀತಿ: ₹150 ಬಜೆಟ್ನಲ್ಲಿ ನಿಮ್ಮ ಆರೋಗ್ಯ ರಕ್ಷಿಸುವ ಆಂಟಿ-ಸ್ಮಾಗ್ ಡಯಟ್ ಪ್ಲಾನ್ ಇಲ್ಲಿದೆ! -
ದೀಪಾವಳಿ 2026: ಬೆಂಗಳೂರು, ದೆಹಲಿ, ಮುಂಬೈನಲ್ಲಿ ಪಟಾಕಿ ಸಿಡಿಸಲು ಹೊಸ ನಿಯಮಗಳು, ಸಮಯದ ಮಿತಿ! -
ದಕ್ಷಿಣ ಭಾರತದಲ್ಲಿ ಮಳೆ ಅಲರ್ಟ್: ಮನೆಯಲ್ಲೇ ಫಿಟ್ ಆಗಿರಲು ಈ 10 ನಿಮಿಷದ ವರ್ಕೌಟ್ ಟ್ರೈ ಮಾಡಿ! -
ದೀಪಾವಳಿ ಹಬ್ಬದ ಡ್ರಾಮಾ ತಪ್ಪಿಸಿ: ದಂಪತಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಪ್ಲಾನ್ ಮತ್ತು ಮೆಸೇಜ್ ಟಿಪ್ಸ್ -
ದೀಪಾವಳಿ ಪಾರ್ಟಿ ಜೋರಾಗಿದೆಯಾ? ₹30ರೊಳಗೆ ಸಿಗುವ 12 ಆರೋಗ್ಯಕರ ಹೈ-ಪ್ರೋಟೀನ್ ಸ್ನ್ಯಾಕ್ಸ್ ಇಲ್ಲಿದೆ! -
ಧನ್ತೇರಸ್ ಮುನ್ನವೇ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ: ಇಂದೇ ಖರೀದಿಸಬೇಕಾ ಅಥವಾ ನಾಳೆ ಕಾಯಬೇಕಾ? -
IND vs NZ 2nd ODI: ಪಂದ್ಯದ ದಿನ ಬೆಳಿಗ್ಗೆ ಫ್ರೆಶ್ ಆಗಿರಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಎನ್ಆರ್ಐಗಳೇ ಎಚ್ಚರ! ವಿದೇಶಿ ವಿಚ್ಛೇದನ ಭಾರತದಲ್ಲಿ ಸಿಂಧುವಲ್ಲ: ದ್ವಿವಿವಾಹದ ಅಪಾಯ ತಪ್ಪಿಸಿಕೊಳ್ಳುವುದು ಹೇಗೆ? -
ದೀಪಾವಳಿ ಸಿಹಿ ಕೊಳ್ಳುವ ಮುನ್ನ ಎಚ್ಚರ! ಕಲಬರಕೆ ಪತ್ತೆ ಹಚ್ಚುವುದು ಹೇಗೆ?
ಮಕ್ಕಳು ಪಟಪಟನೆ ಮಾತನಾಡಬೇಕೆಂದರೆ ಈ ರೀತಿ ಮಾಡಿ!
ಮಗುವಿನ ಬಾಯಿಯಿಂದ ಹೊರಡುವ ಮೊದಲ ಶಬ್ಧವನ್ನು ಕೇಳೋದಕ್ಕೆ ಪ್ರತಿಯೊಬ್ಬ ತಂದೆ ತಾಯಿಯೂ ಕೂಡ ಕಾತುರರಾಗಿರುತ್ತಾರೆ. ಹೆಚ್ಚಾಗಿ ಮಕ್ಕಳು ಅಮ್ಮಾ ಎನ್ನುವ ಶಬ್ಧದಿಂದಲೇ ಮಕ್ಕಳು ತಮ್ಮ ಮೊದಲ ಮಾತು ಆರಂಭಿಸುತ್ತಾರೆ. ಇನ್ನೂ ಮಕ್ಕಳು ಬೆಳೆಯುತ್ತಾ ಇದ್ದಂತೆ ಅವರ ತೊದಲು ಮಾತನ್ನು ಕೇಳೋದಕ್ಕೆ ತುಂಬಾನೇ ಖುಷಿಯಾಗುತ್ತದೆ.
ಇನ್ನೂ ಮಕ್ಕಳಿಗೆ ಅವರ ಚಿಕ್ಕ ವಯಸ್ಸಿನಲ್ಲಿಯೇ ಮಾತನಾಡುವ ಕೌಶಲ್ಯಗಳನ್ನು ಕಲಿಸಿ ಕೊಟ್ಟರೆ ದೊಡ್ಡವರಾದ ಮೇಲೆ ಇದು ಅವರಿಗೆ ತುಂಬಾನೇ ಉಪಯೋಗವಾಗುತ್ತದೆ. ಅಷ್ಟಕ್ಕು ಮಕ್ಕಳಲ್ಲಿ ಮಾತನಾಡುವ ಕೌಶಲ್ಯವನ್ನು ವೃದ್ಧಿಸೋದು ಹೇಗೆ ಅನ್ನೋದನ್ನು ತಿಳಿಯೋಣ.

ತಜ್ಞರು ಈ ಬಗ್ಗೆ ಏನು ಹೇಳುತ್ತಾರೆ?
ತಜ್ಞರು ಹೇಳೋ ಪ್ರಕಾರ ಮಕ್ಕಳು ಯಾವಾಗ ಚಿಕ್ಕ-ಪುಟ್ಟ ವಿಷಯಕ್ಕೂ ಅಳೋದಕ್ಕೆ ಶುರು ಮಾಡುತ್ತಾರೆಯೋ ಇದು ಒಂದು ರೀತಿಯ ಸಂವಹನ ಇದ್ದ ಹಾಗೆ. ಆಳುವ ಮೂಲಕ ಅವರು ಹಸಿವಾದರೆ ಅಥವಾ ಅವರಿಗೆ ಕಿರಿಕಿರಿ ಉಂಟಾದರೆ ಅರ್ಥ ಮಾಡಿಸುವ ಪ್ರಯತ್ನ ಮಾಡುತ್ತಾರೆ. ಆನಂತರ ಕೊಂಚ ಬೆಳದಂತೆ ಬೊಬ್ಬೆ ಹೊಡೆಯುತ್ತಾರೆ. ಜೊತೆಗೆ ಸನ್ನೆ ಮಾಡುತ್ತಾರೆ. ಇದಾದ ಬಳಿಕ ಒಂದೊಂದೇ ಶಬ್ಧವನ್ನು ಮಾತನಾಡಲು ಶುರು ಮಾಡುತ್ತಾರೆ.
ಚಟುವಟಿಕೆಗಳನ್ನು ಅವರಿಗೆ ವಿವರಿಸಿ ಹೇಳಿ
ಸಾಮಾನ್ಯವಾಗಿ ಮಕ್ಕಳು ಒಂದು ವರ್ಷದ ನಂತರವೇ ಮಾತನಾಡೋದಕ್ಕೆ ಶುರು ಮಾಡುತ್ತಾರೆ. ಮೊದಲ 6 ತಿಂಗಳುಗಳಲ್ಲಿ ಮಕ್ಕಳು ತಮ್ಮ ಧ್ವನಿ ಮತ್ತು ದೇಹದೊಂದಿಗೆ ಸಂವಹನ ನಡೆಸಲು ಪ್ರಾರಂಭಿಸುತ್ತಾರೆ. ಇನ್ನೂ ಪ್ರತಿನಿತ್ಯ ನೀವು ಏನು ಮಾಡುತ್ತಿದ್ದೀರಿ ಎಂದು ಅವರಿಗೆ ವಿವರಿಸಿ ಹೇಳಿ. ಉದಾಹರಣೆಗೆ ಬಟ್ಟೆ ಒಗೆಯುವಾಗ, ಮನೆ ಸ್ವಚ್ಛ ಮಾಡುವಾಗ, ಊಟ ಮಾಡುವಾಗ ಇತ್ಯಾದಿ.
ನಿಮ್ಮ ಮಾತಿಗೆ ಮಕ್ಕಳು ಪ್ರತಿಕ್ರಿಯೆ ನೀಡುತ್ತಿದ್ದಾರಾ ಎಂಬುವುದನ್ನು ನೋಡಿ. ಕೆಲವೊಂದು ಸಲ ನಗಬಹುದು ಅಥವಾ ಏನಾದರೂ ಸನ್ನೆ ಮಾಡಬಹುದು. ಇದು ಕೂಡ ಒಂದು ರೀತಿಯ ಸಂವಹನ ಆಗಿರುತ್ತದೆ.
ಮೂರು ಸಲ ಪುನರಾವರ್ತಿಸಿ
ನೀವು ಮಕ್ಕಳಿಗೆ ಸಂವಹನ ಕಲಿಸುವಾಗ ಗಮನಿಸಬೇಕಾದ ಮುಖ್ಯ ಅಂಶ ಎಂದರೆ ಯಾವುದೇ ವಿಚಾರವನ್ನಾದರೂ ಸರಿ ಮೂರು ಸಾರಿ ಹೇಳಿ. ಉದಾಹರಣೆಗೆ ನೀವು ಪುಸ್ತಕವನ್ನು ಹಿಡಿದಿದ್ದರೆ ಇಲ್ಲಿ ನೋಡು ಪುಸ್ತಕ ಎಂದು ಮೂರು ಸಾರಿ ಹೇಳಿ. ಆಗ ಆ ಮಾತುಗಳು ಮಗುವಿನ ತಲೆಯಲ್ಲಿ ಕೂತು ಬಿಡುತ್ತದೆ. ಹಾಗೂ ಈ ಪುಸ್ತಕದ ಮೇಲೆ ಬರೆ ಎಂದು ಹೇಳಿ. ಒಂದು ಪೆನ್ಸಿಲ್ ತೆಗೆದುಕೊಂಡು ನಿಮ್ಮ ಮಗುವಿನ ಕೈ ಹಿಡಿದು ಪುಸ್ತಕದ ಮೇಲೆ ಬರೆಸಿ.
ಮಗುವಿಗೆ ಆಯ್ಕೆ ನೀಡಿ
ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಯಾವುದೇ ವಸ್ತುಗಳ ಪರಿಚಯ ಇರೋದಿಲ್ಲ. ನೀವು ಅವರಿಗೆ ಪ್ರತಿಯೊಂದು ವಸ್ತುವಿನ ಹೆಸರು ಹೇಳಿ ಪರಿಚಯ ಮಾಡಿಕೊಡಬೇಕು. ಉದಾಹರಣೆಗೆ ಒಂದು ಬುಟ್ಟಿಯಲ್ಲಿ ಬಾಳೆಹಣ್ಣು ಮತ್ತು ಕಿತ್ತಾಳೆ ಹಣ್ಣನ್ನು ಹಾಕಿ ನಿನಗೆ ಕಿತ್ತಾಳೆ ಬೇಕಾ? ಅಥವಾ ಬಾಳೆಹಣ್ಣು ಬೇಕಾ? ಎಂದು ಮೂರು ಸಾರಿ ಕೇಳಿ. ಈ ರೀತಿ ಮಾಡುತ್ತಿದ್ದರೆ ಅವರಿಗೆ ವಸ್ತುಗಳ ಪರಿಚಯ ಆಗುತ್ತದೆ.
ನಿತ್ಯ ಪುಸ್ತಕಗಳನ್ನು ಓದಿ
ಮಕ್ಕಳ ಸಂವಹನ ಕಲೆಯನ್ನು ಉತ್ತಮಗೊಳಿಸೋದಕ್ಕೆ ಪೋಷಕರು ನಿತ್ಯ ಪುಸ್ತಕವನ್ನು ಓದುವುದು ತುಂಬಾನೇ ಒಳ್ಳೆಯದು. ಕಥೆ ಪುಸ್ತಕವಾದರೂ ಪರವಾಗಿಲ್ಲ. ಅದನ್ನು ಜೋರಾಗಿ ಓದಿತ್ತಿರಿ. ಮಗು ಆ ಕಥೆಯಲ್ಲಿರುವ ಒಂದೊಂದು ಶಬ್ಧವನ್ನು ಗ್ರಹಿಸಿಕೊಳ್ಳುತ್ತದೆ. ನೀವು ನಿತ್ಯ ಪುಸ್ತಕ ಓದುತ್ತಿದ್ದರೆ ಮಗುವಿನ ತಲೆಯಲ್ಲಿ ಶಬ್ಧಕೋಶ ವೃದ್ಧಿಯಾಗುತ್ತದೆ.
ಇದನ್ನೆಲ್ಲಾ ಮಾಡದಿದ್ದರೂ ಕೂಡ ಮಕ್ಕಳು ಮಾತನಾಡುತ್ತಾರೆ ಅಂತ ನೀವು ಅಂದುಕೊಳ್ಳುತ್ತಿರಬಹುದು. ಆದರೆ ಈ ಚಟುವಟಿಕೆಗಳನ್ನು ಮಾಡಿದರೆ ಅವರ ಸಂವಹನ ಕೌಶಲ್ಯ ಉತ್ತಮವಾಗುತ್ತದೆ.



Click it and Unblock the Notifications
