Latest Updates
-
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ
ಮಕ್ಕಳು ಹಣ್ಣು, ತರಕಾರಿ ತಿನ್ನುತ್ತಿಲ್ಲವೇ? ಈ ಟ್ರಿಕ್ಸ್ ಫಾಲೋ ಮಾಡಿ
ಮಕ್ಕಳಿಗೆ ತಿನ್ನಿಸೋದೇ ಪೋಷಕರಿಗೆ ಬಹುದೊಡ್ಡ ತಲೆನೋವು ಇದ್ದ ಹಾಗೆ. ಪುಟ್ಟ ಮಕ್ಕಳಿಂದ ಹಿಡಿದು ಹದಿಹರೆಯದ ಮಕ್ಕಳು ಕೂಡ ತಿನ್ನೋದ್ರಲ್ಲಿ ತುಂಬಾನೇ ಚೂಸಿ. ಆಗೋಗ್ಯಕರ ಆಹಾರಗಳಾದ ಹಣ್ಣು, ತರಕಾರಿ, ಡ್ರೈ ಫ್ರೂಟ್ಸ್ ಅನ್ನು ಕಂಡ್ರೆ ಅವರಿಗೆ ಆಗೋದಿಲ್ಲ. ಹೊರಗಿನ ತಿಂಡಿ, ಐಸ್ ಕ್ರೀಮ್, ಚಾಕಲೇಟ್ ಅನ್ನು ಮಕ್ಕಳು ಬಾಯಿ ಚಪ್ಪರಿಸಿ ತಿನ್ನುತ್ತಾರೆ. ಅಷ್ಟಕ್ಕು ಮಕ್ಕಳು ಆರೋಗ್ಯಕರ ಆಹಾರಗಳನ್ನು ತಿನ್ನುವಂತೆ ಮಾಡೋದು ಹೇಗೆ? ಇಲ್ಲಿದೆ ಟಿಪ್ಸ್.
1. ಡಬ್ಬಿಯಲ್ಲಿ ಆರೋಗ್ಯಕರ ತಿಂಡಿಯನ್ನೇ ನೀಡಿ
ಸಾಮಾನ್ಯವಾಗಿ ನಾವು ಮಕ್ಕಳಿಗೆ ಸ್ನಾಕ್ಸ್ ಮತ್ತು ಊಟದ ಸಮಯಕ್ಕೆ ಬುತ್ತಿಯನ್ನು ಪ್ಯಾಕ್ ಮಾಡಿ ಕೊಡುತ್ತೇವೆ. ಸ್ನಾಕ್ಸ್ ಸಮಯದಲ್ಲಿ ಪೋಷಕರು ಮಕ್ಕಳಿಗೆ ಹೆಚ್ಚಾಗಿ ಮ್ಯಾಗಿ, ಬಿಸ್ಕೆಟ್, ಚಿಪ್ಸ್ ತಿನ್ನೋದಕ್ಕೆ ಕೊಡ್ತಾರೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರ ಬದಲಾಗಿ ಹಣ್ಣುಗಳು ಅಥವಾ ಬೇಯಿಸಿದ ತರಕಾರಿಯನ್ನು ನೀಡಿ. ಇನ್ನೂ ಊಟದ ಸಮಯದಲ್ಲೂ ಅನ್ನ, ಚಪಾತಿ ಜೊತೆಗೆ ತರಕಾರಿ, ಮೀನು, ಕಾಳುಗಳು, ಮೊಟ್ಟೆ ಹೀಗೆ ಪೌಷ್ಠಿಕಾಂಶ ಭರಿತ ಆಹಾರವನ್ನೇ ಬುತ್ತಿಯಲ್ಲಿಡಿ.

2. ಮಕ್ಕಳು ತಿನ್ನುವ ಆಹಾರ ಆಕರ್ಷಕವಾಗಿರಲಿ
ಮಕ್ಕಳಿಗೆ ನಾವು ಆರೋಗ್ಯಕ್ಕೆ ಉತ್ತಮವಾಗಿರೋ ಯಾವುದೇ ಆಹಾರ ಕೊಟ್ಟರೂ ಅವರು ತಿನ್ನೋದಿಲ್ಲ. ಹೀಗಾಗಿ ಆಹಾರವನ್ನು ಆಕರ್ಷಕವಾಗಿ ಕಾಣಿಸಿವಂತೆ ಸಿಂಗರಿಸಿ ಕೊಡಿ. ಚಪಾತಿ ಮೇಲೆ ಟೊಮೊಟೋ ಕೆಚಪ್ ನಿಂದ ಏನನ್ನಾದರೂ ಬರೆದು ಕೊಡಿ. ಬ್ರೆಡ್ ಅನ್ನು ಜಾಮ್ ನಿಂದ ಸಿಂಗರಿಸಿ. ಒಟ್ಟಿನಲ್ಲಿ ಅವರು ತಿನ್ನೋ ಆಹಾರ ಕಲರ್ ಫುಲ್ ಆಗಿರುವಂತೆ ನೋಡಿಕೊಳ್ಳಿ. ಆಗ ಮಕ್ಕಳು ಖಂಡಿತವಾಗಿ ಆಹಾರ ಸೇವಿಸದೇ ಇರೋದಿಲ್ಲ.
3. ಒಂದೇ ಆಹಾರವನ್ನು ಪದೇ ಪದೇ ಕೊಡಬೇಡಿ
ಮಕ್ಕಳಿಗೆ ಆರೋಗ್ಯವಾದ ಆಹಾರವನ್ನು ತಿನ್ನಿಸೋದೇ ದೊಡ್ಡ ಸಾಹಸ. ಅಂತದ್ರಲ್ಲಿ ಯಾವುದಾದರೂ ಒಂದು ಆಹಾರವನ್ನು ಅವರು ಇಷ್ಟ ಪಟ್ರೆ ಅದೇ ಆಹಾರವನ್ನು ಅತಿಯಾಗಿ ತಿನ್ನೋದಕ್ಕೆ ಕೊಡಬೇಕು. ಪದೇ ಪದೇ ನೀವು ಅದನ್ನೇ ಕೊಡುತ್ತಿದ್ದರೆ ಅವರಿಗೆ ಆ ಆಹಾರವನ್ನು ಕಂಡಾಗ ವಾಕರಿಕೆ ಬರಬಹುದು. ಹೀಗಾಗಿ ಬೇರೆ ಬೇರೆ ವಿಧದ ಹಣ್ಣು ಹಾಗೂ ತರಕಾರಿಗಳನ್ನು ಮಕ್ಕಳಿಗೆ ಕೊಡುತ್ತಿರಿ. ಆದಷ್ಟು ನೀವು ತರಕಾರಿಗಳನ್ನು ಬದಲಾಯಿಸುತ್ತಾ ಇದ್ದರೆ ಒಳ್ಳೆಯದು. ನಿತ್ಯ ಒಂದೇ ರೀತಿ ಆಹಾರ ಮಕ್ಕಳಿಗೆ ಇಷ್ಟ ಆಗೋದಿಲ್ಲ.
4. ಆಹಾರವನ್ನು ಅವರ ಕೈಯಾರೆ ತಿನ್ನಲಿ
ಸಾಮಾನ್ಯವಾಗಿ ಎರಡು ವರ್ಷದ ನಂತರ ಮಕ್ಕಳು ಆಹಾರವನ್ನು ತಮ್ಮ ಕೈಯಾರೆ ತಿನ್ನುತ್ತಾರೆ. ಹೀಗಾಗಿ ಆದಷ್ಟು ಅವರಾಗಿಯೇ ತಿನ್ನೋದಕ್ಕೆ ಅವಕಾಶ ನೀಡಬೇಕು. ಆದರೆ ಭಾರತದಲ್ಲಿ ಹೆಚ್ಚಿನ ಪೋಷಕರು ಮಕ್ಕಳಿಗೆ ಆಹಾರ ಇಷ್ಟ ಇಲ್ಲದಿದ್ದರೆ ಒತ್ತಾಯ ಪೂರ್ವಕವಾಗಿ ತಿನ್ನಿಸುತ್ತಾರೆ. ಇದು ಪುಟ್ಟ ಮಕ್ಕಳಿಗೆ ತುಂಬಾನೇ ಹಿಂಸೆ ಅನ್ನಿಸುತ್ತೆ. ಇನ್ನೂ ಊಟದ ಸಮಯ ಅಂದ್ರೆ ಸಾಕು ಅವರು ಅಳೋದಕ್ಕೆ ಶುರು ಮಾಡುತ್ತಾರೆ. ಇದರ ಬದಲಾಗಿ ಅವರ ಕೈಯಾರೆ ತಿನ್ನೋದಕ್ಕೆ ನೀಡಿದರೆ ಅವರ ಪುಟ್ಟ ಕೈಗಳಿಂದ ಸ್ವಲ್ಪ ಸ್ವಲ್ಪ ಆಹಾರವನ್ನು ಸೇವಿಸುತ್ತಾರೆ.
5. ನೀವು ಆರೋಗ್ಯಯುತ ಆಹಾರವನ್ನೇ ಸೇವಿಸಿ
ಪೋಷಕರು ಆರೋಗ್ಯಯುತ ಆಹಾರ ಸೇವಿಸಿದಾಗ ಮಾತ್ರ ಮಕ್ಕಳು ಕೂಡ ಅದನ್ನೇ ರೂಢಿ ಮಾಡಿಕೊಳ್ಳುತ್ತಾರೆ. ನೀವು ಆರೋಗ್ಯಯುತ ಆಹಾರವನ್ನು ದೂರವಿಟ್ಟು ಹೊರಗಿನ ಅನಾರೋಗ್ಯಯುತ ಆಹಾರವನ್ನು ಸೇವಿಸಿದಾಗ ಮಕ್ಕಳಿಗೂ ಅದೇ ಅಭ್ಯಾಸ ಆಗುತ್ತದೆ. ಅವರು ಅದೇ ಆಹಾರ ಬೇಕೆಂದು ಕೇಳುತ್ತಾರೆ. ಮಕ್ಕಳು ಅನಾರೋಗ್ಯ ಆಹಾರ ತಿನ್ನೋದನ್ನು ತಪ್ಪಿಸಬೇಕಂದ್ರೆ ಪೋಷಕರು ತಿನ್ನುವ ಆಹಾರ ಆರೋಗ್ಯಯುತವಾಗಿರಬೇಕು. ಮತ್ತು ನೀವು ನಿಮ್ಮ ಮಕ್ಕಳಿಗೆ ಆದರ್ಶಪ್ರಾಯರಾಗಿರಬೇಕು.
6. ಕೂಲ್ ಡ್ರಿಂಕ್ಸ್ ಬದಲು ಫ್ರೂಟ್ ಜ್ಯೂಸ್ ಕುಡಿಸಿ
ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಫ್ರಿಡ್ಜ್ ನಲ್ಲಿ ಕೂಲ್ ಡ್ರಿಂಕ್ಸ್ ಇದ್ದೇ ಇರುತ್ತೆ. ನಾವು ಕೂಲ್ ಡ್ರಿಂಕ್ಸ್ ಕುಡಿಯೋ ಸಂದರ್ಭದಲ್ಲಿ ಮಕ್ಕಳಿಗೂ ಕುಡಿಸ್ತೀವಿ. ಈ ಅಭ್ಯಾಸ ಖಂಡಿತ ಮಾಡಿಸಬೇಡಿ. ಇದರ ಬದಲಾಗಿ ನಿತ್ಯ ಒಂದೊಂದು ಹಣ್ಣಿನ ಕಲರ್ ಫುಲ್ ಜ್ಯೂಸ್ ಮಾಡಿ ಮಕ್ಕಳಿಗೆ ಕುಡಿಸಿ. ಇದರಿಂದ ಮಕ್ಕಳ ದೇಹಕ್ಕೆ ಸಾಕಷ್ಟು ಪೌಷ್ಠಿಕಾಂಶ ದೊರೆಯುತ್ತದೆ.
7. ದಿನಕ್ಕೆ ಒಂದು ಬಾರಿಯಾದರೂ ಮಕ್ಕಳ ಜೊತೆಗೆ ತಿನ್ನಿ
ಪೋಷಕರ ಬ್ಯೂಸಿ ಶೆಡ್ಯೂಲ್ ನಲ್ಲಿ ಕುಟುಂಬದ ಜನರೆಲ್ಲಾ ಒಟ್ಟಾಗಿ ಕೂತು ತಿನ್ನೋದಕ್ಕೆ ಅವಕಾಶ ಸಿಗೋದಿಲ್ಲ. ಹೀಗಾಗಿ ದಿನಕ್ಕೆ ಒಂದು ಬಾರಿಯಾದರೂ ಮಕ್ಕಳ ಜೊತೆಗೆ ಕೂತು ತಿನ್ನಿ. ಆಗ ನಿಮಗೆ ಮಕ್ಕಳು ಎಷ್ಟು ತಿನ್ನುತ್ತಾರೆ, ಯಾವ ಆಹಾರ ಅವರಿಗೆ ಇಷ್ಟ ಆಗೋದಿಲ್ಲ. ಯಾವ ಆಹಾರವನ್ನು ಅವರು ಇಷ್ಟ ಪಟ್ಟು ತಿನ್ನುತ್ತಾರೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ಗೊತ್ತಾಗುತ್ತದೆ.
ಪೋಷಕರು ತಮ್ಮ ಮಕ್ಕಳ ಬಗ್ಗೆ ಕಾಳಜಿ ಮಾಡೋದು ತುಂಬಾನೇ ಮುಖ್ಯ ಆಗುತ್ತದೆ. ಚಿಕ್ಕಂದಿನಿಂದಾನೇ ಆರೋಗ್ಯಯುತವಾದ ಆಹಾರವನ್ನು ಮಕ್ಕಳಿಗೆ ನೀಡಿದ್ರೆ ಅವರಿಗೆ ಇಂತಹ ಆಹಾರಗಳೇ ರೂಢಿಯಾಗುತ್ತದೆ. ಇದರಿಂದ ಅವರ ಆರೋಗ್ಯ ಕಾಪಾಡಿಕೊಳ್ಳೋದಕ್ಕೆ ನೆರವಾಗುತ್ತದೆ.



Click it and Unblock the Notifications












