Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತಾಯಂದಿರೇ ಮನೆಯಲ್ಲಿ ಮಕ್ಕಳು ಒಂದೇ ಸಮನೇ ಜಗಳವಾಡ್ತಾರಾ? ಜಗಳ ಪರಿಹರಿಸಲು ಇಲ್ಲಿದೆ ಟಿಪ್ಸ್!
ಒಡಹುಟ್ಟಿದವರು ಜಗಳ ಆಡದೇ ಇರುವ ಮನೆ ಯಾವುದಿದೆ ಹೇಳಿ. ಅದ್ರಲ್ಲೂ ಸಾಮಾನ್ಯವಾಗಿ ಎಲ್ಲಾ ಮನೆಗಳಲ್ಲಿ ಒಡಹುಟ್ಟಿದವರ ಕಿತ್ತಾಟ ಇದ್ದಿದ್ದೆ. ಮಕ್ಕಳಿಗೆ ಜಗಳವಾಡೋದಕ್ಕೆ ಇಂತಹದ್ದೇ ವಿಚಾರಗಳು ಬೇಕು ಅಂತೇನಿಲ್ಲ. ಚಿಕ್ಕ-ಪುಟ್ಟ ವಿಚಾರಗಳಿಗೆ ಕಿತ್ತಾಡುತ್ತಾರೆ. ಟಿವಿ, ಮೊಬೈಲ್, ಆಟದ ಸಾಮಾನು ಹೀಗೆ ಪ್ರತಿಯೊಂದು ವಿಚಾರಕ್ಕೂ ಜಗಳವೇ. ಇವರನ್ನು ಸಂಭಾಳಿಸುವಷ್ಟರಲ್ಲಿ ತಾಯಿಯಾದವಳಿಗೆ ಸಾಕಾಗಿ ಬಿಡುತ್ತದೆ. ಅಷ್ಟಕ್ಕು ಮಕ್ಕಳ ಜಗಳವನ್ನು ನಿಭಾಯಿಸೋದು ಹೇಗೆ ಇಲ್ಲಿದೆ ಸಿಂಪಲ್ ಟಿಪ್ಸ್.
1. ಒಂದು ಮಗುವಿನ ಪರ ಮಾತನಾಡಬೇಡಿ
ಮಕ್ಕಳು ಜಗಳ ಶುರುವಾದಾಗ ನೀವು ಅಲ್ಲೇ ಇದ್ದರೆ ಆರಂಭದಲ್ಲೇ ಆ ಜಗಳವನ್ನು ನಿಲ್ಲಿಸೋದಕ್ಕೆ ಪ್ರಯತ್ನಿಸಿ. ಅದು ಗಂಭೀರ ರೂಪಕ್ಕೆ ತಿರುಗೋವರೆಗೂ ಸುಮ್ಮನೆ ಕೂರಬೇಡಿ. ಇನ್ನೂ ಜಗಳ ಬಿಡಿಸುವ ಭರದಲ್ಲಿ ನೀವು ಒಬ್ಬರ ಪರ ವಹಿಸಿಕೊಂಡು ಮಾತನಾಡೋದಕ್ಕೆ ಹೋಗಬೇಡಿ. ಇದು ಇನ್ನೊಂದು ಮಗುವಿಗೆ ಇಷ್ಟ ಆಗೋದಿಲ್ಲ. ಹಾಗೂ ಆ ಮಗು ನಿಮ್ಮನ್ನು ದ್ವೇಷಿಸಬಹುದು. ಹೀಗಾಗಿ ಇಬ್ಬರಿಗೂ ಸಮಾನ ನ್ಯಾಯ ಒದಗಿಸಲು ಪ್ರಯತ್ನಿಸಿ.

2. ಇಬ್ಬರೂ ಒಟ್ಟಿಗೆ ಸಮಯ ಕಳೆಯುವಂತೆ ನೋಡಿಕೊಳ್ಳಿ
ನಿಮಗೆ ಇಬ್ಬರು ಮಕ್ಕಳಿದ್ದರೆ ಇಬ್ಬರೂ ಕೂಡ ಹೆಚ್ಚಾಗಿ ಒಟ್ಟಿಗೆ ಸಮಯ ಕಳೆಯುವಂತೆ ನೋಡಿಕೊಳ್ಳಿ. ಊಟ ಮಾಡೋವಾಗ, ಆಟ ಆಡುವಾಗ, ಪಾರ್ಕ್‌ಗೆ ಹೋಗೋವಾಗ, ಸಿನಿಮಾ ನೋಡುವಾಗ ಹೀಗೆ ಎಲ್ಲಾ ಕಡೆ ಒಟ್ಟಿಗೆ ಇರಲಿ. ಆಗ ಅವರ ನಡುವಿನ ಬಾಂಧವ್ಯ ಹೆಚ್ಚಾಗುತ್ತದೆ. ಇಂತಹ ಸಂದರ್ಭದಲ್ಲಿ ಒಂದು ಪಕ್ಷ ಅವರು ಜಗಳವಾಡಿದರೂ ಕೂಡ ಮತ್ತೆ ಬೇಗನೆ ಒಂದಾಗುತ್ತಾರೆ.
3. ಹಂಚಿಕೊಳ್ಳುವ ಗುಣ ಬೆಳೆಸಿಕೊಳ್ಳಿ
ಮಕ್ಕಳು ಆಟದ ಸಾಮಾನಿಗಾಗಿ ಕಿತ್ತಾಡುತ್ತಾರೆ. ಅದ್ರಲ್ಲೂ ಚಿಕ್ಕವರು ಕೇಳಿದಾಗ ದೊಡ್ಡವರು ಕೊಡೋದಕ್ಕೆ ಸಿದ್ಧರಿರೋದಿಲ್ಲ. ಹೀಗಾಗಿ ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ಹಂಚಿಕೊಂಡು ಬದುಕುವುದರ ಮಹತ್ವ ಏನು ಅನ್ನೋದನ್ನು ತಿಳಿಸಿ. ಇನ್ನೂ ತಿನ್ನುವಾಗಲೂ ಅಷ್ಟೇ, ಹಂಚಿಕೊಂಡು ತಿನ್ನುವುದನ್ನು ಅಭ್ಯಾಸ ಮಾಡಿಸಿ. ಆಗ ಈ ವಿಚಾರವಾಗಿ ಎಂದು ನಿಮ್ಮ ಮಕ್ಕಳ ಮಧ್ಯೆ ಬಿರುಕು ಮೂಡುವುದಿಲ್ಲ.
4. ಸಮಸ್ಯೆಗಳನ್ನು ಪರಿಹರಿಸೋದನ್ನು ಹೇಳಿಕೊಡಿ
ಮಕ್ಕಳು ತಮ್ಮ ಒಡಹುಟ್ಟಿದವರ ಜೊತೆಗೆ ಸಮಸ್ಯೆಗಳನ್ನು ಕ್ಷಣ ಮಾತ್ರದಲ್ಲಿ ಹುಟ್ಟು ಹಾಕುತ್ತಾರೆ. ಹಾಗೂ ಜಗಳವಾಡೋದಕ್ಕೆ ಶುರು ಹಚ್ಚಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಪೋಷಕರು ಸಮಸ್ಯೆಗಳನ್ನು ಯಾವ ರೀತಿ ಬಗೆಹರಿಸಿಕೊಳ್ಳಬಹುದು ಅನ್ನೋದನ್ನು ಹೇಳಿಕೊಡಬೇಕು. ಜಗಳವಾದ ನಂತರ ತಮ್ಮ ಒಡಹುಟ್ಟಿದವರಲ್ಲಿ ಕ್ಷಮೆ ಕೇಳಿ ಅಪ್ಪಿಕೊಳ್ಳುವ ಅಭ್ಯಾಸವನ್ನು ಚಿಕ್ಕಂದಿನಿಂದಲೇ ರೂಢಿಸಿ. ಇದು ದೊಡ್ಡದಾದ ಮೇಲೆ ಉಪಯೋಗಕ್ಕೆ ಬರುತ್ತದೆ.
5. ಮಕ್ಕಳಿಗೆ ಕೊಡುವ ಶಿಕ್ಷೆ ಗೌಪ್ಯವಾಗಿರಲಿ
ಕೆಲವೊಂದು ಸಲ ನಿಮ್ಮ ಮಕ್ಕಳ ಮಧ್ಯೆ ಹೆಚ್ಚಿನ ವಯಸ್ಸಿನ ಅಂತವಿದ್ದಾಗ ಸಾಮಾನ್ಯವಾಗಿ ನಾವು ಚಿಕ್ಕವರನ್ನು ಶಿಕ್ಷಿಸೋದಕ್ಕೆ ಹೋಗೋದಿಲ್ಲ. ಅವರಿಗೆ ಸ್ವಲ್ಪ ಬೈದು ಸುಮ್ಮನಾಗುತ್ತೀವಿ. ಆದರೆ ದೊಡ್ಡವರಿಗೆ ಹೊಡೆಯುತ್ತೀವಿ. ಈ ರೀತಿ ಮಾಡೋದು ತಪ್ಪು. ದೊಡ್ಡ ಮಗುವಿಗೆ ಯಾವಾಗಲೂ ಚಿಕ್ಕವನ ಮುಂದೆ ಹೊಡೆಯಬೇಡಿ. ಅದು ಅವರಿಗೆ ಅವಮಾನವಾದಂತೆ ಭಾಸವಾಗುತ್ತದೆ. ಮತ್ತೂ ಅವರಿಗೆ ಚಿಕ್ಕ ಮಗುವಿನ ಮೇಲೆ ದ್ವೇಷ ಹುಟ್ಟಬಹುದು. ಹಾಗೆಯೂ ನಿಮಗೆ ಹೊಡೆಯಲೇ ಬೇಕೆಂದಿದ್ದರೆ ಪಕ್ಕಕ್ಕೆ ಕರೆದುಕೊಂಡು ಹೋಗಿ ಬುದ್ಧಿ ಹೇಳಿ ಸಾಕು.
6. ಒಬ್ಬರ ಮಾತನ್ನು ಕೇಳಿ ನಿರ್ಧಾರಕ್ಕೆ ಬರಬೇಡಿ
ಕೆಲವೊಂದು ಸಲ ಮಕ್ಕಳು ಜಗಳವಾಡುತ್ತಾರೆ. ಜಗಳವಾಡುತ್ತಾ ಒಂದು ಮಗು ಅತ್ತರೆ ನಾವು ಅವರ ಬಳಿಗೆ ಓಡಿ ಹೋಗುತ್ತೇವೆ. ಅತ್ತ ಮಗು ಏನು ಹೇಳುತ್ತದೆಯೋ ಅದನ್ನು ಕೇಳಿಕೊಂಡು ಇನ್ನೊಂದು ಮಗುವಿಗೆ ಹೊಡೊಯೋದಕ್ಕೆ ಮುಂದಾಗುತ್ತೇವೆ. ಈ ರೀತಿ ಮಾಡುವುದು ತಪ್ಪು. ಮೊದಲು ಇಬ್ಬರನ್ನೂ ಸಮಾಧಾನ ಪಡಿಸಿ ಅವರೊಂದಿಗೆ ಕೂತು ಮಾತನಾಡಿ. ಏನಾಯ್ತು ಎಂದು ತಿಳಿದುಕೊಳ್ಳಿ. ಆನಂತರ ಒಂದು ನಿರ್ಧಾರಕ್ಕೆ ಬನ್ನಿ.
7. ಮಕ್ಕಳಿಗೆ ಶಿಸ್ತು ಕಲಿಸಿ ಕೊಡಿ
ಚಿಕ್ಕವಯಸ್ಸಿನಲ್ಲೇ ಮಕ್ಕಳು ಶಿಸ್ತು ರೂಢಿಸಿಕೊಳ್ಳುವಂತೆ ನೋಡಿಕೊಳ್ಳೋದು ಪೋಷಕರಾದವರ ಜವಾಬ್ದಾರಿ. ಜಗಳವಾಡದೇ ಇರುವುದು ಕೂಡ ಒಂದು ರೀತಿಯ ಶಿಸ್ತು. ಯಾವಾಗ ಮಕ್ಕಳು ಶಿಸ್ತಿನ ಜೀವನವನ್ನು ಕಲಿತುಕೊಳ್ಳುತ್ತಾರೋ ಆಗ ಅವರು ಇಂತಹ ತಪ್ಪುಗಳನ್ನು ಮಾಡೋದಕ್ಕೆ ಹೋಗೋದಿಲ್ಲ.
ಒಡಹುಟ್ಟಿದವರು ಜಗಳ ಆಡಲೇಬಾರದು ಎಂದು ನಾವು ಹೇಳೋದಿಲ್ಲ ಆದರೆ ಅವರು ಆಡುವ ಜಗಳ ಆರೋಗ್ಯಯುತವಾಗಿರಬೇಕು. ಚಿಕ್ಕದಿರುವಾಗಲೇ ಒಬ್ಬರ ಮೇಲೊಬ್ಬರಿಗೆ ಶತ್ರುತ್ವ ಹುಟ್ಟಿಕೊಂಡರೆ ದೊಡ್ಡದಾದ ಮೇಲೆ ಒಂದಾಗಿರೋದಕ್ಕೆ ಸಾಧ್ಯವೇ ಇಲ್ಲ.



Click it and Unblock the Notifications
