Latest Updates
-
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ? -
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ
ತಾಯಂದಿರೇ ಹಾಲು ಕುಡಿಯದ ಮಕ್ಕಳಿಗೆ ಮನೆಯಲ್ಲೇ ಈ ರೀತಿ ಫ್ಲೇವರ್ಡ್ ಹಾಲು ತಯಾರಿಸಿ ಕೊಡಿ
ಮನೆಯಲ್ಲಿ ಮಕ್ಕಳಿದ್ದರೆ ಅವರಿಗೆ ಹಾಲು ಕುಡಿಸೋದಕ್ಕೆ ಎಷ್ಟೊಂದು ಹರ ಸಾಹಸ ಪಡ್ಬೇಕು ಅಲ್ವಾ? ಏನೇ ಮಾಡಿದ್ರು ಮಕ್ಕಳು ಹಾಲು ಕುಡಿಯೋದೇ ಇಲ್ಲ ಅಂತಾರೆ. ದಿನನಿತ್ಯ ಹಾಲಿನ ಲೋಟ ಹಿಡಿದುಕೊಂಡು ಅವರ ಹಿಂದೆ ಓಡೋದೇ ತಾಯಿಗೆ ಬಹುದೊಡ್ಡ ಕೆಲಸ. ಹಾಲಿನಲ್ಲಿ ಕ್ಯಾಲ್ಸಿಯಂ, ಮಿನರಲ್ಸ್, ವಿಟಮಿನ್ ಬಿ12, ರೈಬೋಪ್ಲೆವೀನ್ ಇದೆ. ಇದು ಮಕ್ಕಳ ಅಭಿವೃದ್ಧಿಗೆ ತುಂಬಾನೇ ಒಳ್ಳೆಯದು. ಹಾಲು ಕುಡಿಯಲು ಹಠ ಮಾಡುವ ಮಕ್ಕಳಿಗೆ ನೀವೆನಾದ್ರು ಈ ರೀತಿ ಮಾಡಿಕೊಟ್ರೆ ಹಾಲಿನ ಒಂದು ತೊಟ್ಟನ್ನು ಉಳಿಸೋದಿಲ್ಲ. ಪೂರ್ತಿಯಾಗಿ ಕುಡಿಯುತ್ತಾರೆ. ಅಷ್ಟಕ್ಕು ಹಾಲನ್ನು ಮತ್ತಷ್ಟು ರುಚಿಕರವಾಗಿ ತಯಾರಿಸೋದು ಹೇಗೆ ಅನ್ನೋದನ್ನು ನೋಡೋಣ.
1. ಕಡಲೆಕಾಳು ಪೀನಟ್ ಬಟರ್ ಹಾಲು
ನಿಮ್ಮ ಮಗು ಹಾಲು ಕುಡಿಯೋದಕ್ಕೆ ಇಷ್ಟ ಪಡೋದಿಲ್ಲ. ಆದರೆ ಚಾಕಲೇಟ್ ಅಂದ್ರೆ ತುಂಬಾನೇ ಇಷ್ಟ ಅಲ್ವಾ?. ಹೀಗಾಗಿ ಒಂದು ಲೋಟ ಹಾಲಿಗೆ ಎರಡು ಚಮಚ ಚಾಕಲೇಟ್ ಸಿರಪ್, ಸಕ್ಕರೆ ಹಾಗೂ ಒಂದು ಚಮಚ ಪೀನಟ್ ಬಟರ್ ಸೇರಿಸಿ ಮಿಕ್ಸಿಯಲ್ಲಿ ಮಿಶ್ರಣ ಮಾಡಿ ಕೊಡಿ. ಇದರ ರುಚಿ ಅದ್ಭುತವಾಗಿರುತ್ತದೆ. ಹಾಗೂ ನಿಮ್ಮ ಮಗು ಖಂಡಿತ ಹಾಲನ್ನು ಇಷ್ಟ ಪಟ್ಟು ಕುಡಿಯುತ್ತದೆ.

2. ಬಾಳೆ ಹಣ್ಣಿನ ಹಾಲು
ಬಾಳೆಹಣ್ಣು ಆರೋಗ್ಯಕರವಾದ ಹಣ್ಣು ಇದರಲ್ಲಿ ವಿಟಮಿನ್ ಬಿ6, ಕಾರ್ಬೋಹೈಡ್ರೇಟ್ಸ್, ಪ್ರೋಟಿನ್ ಹಾಗೂ ಮಿನರಲ್ ಇದೆ. ಹಾಲು, ಅರ್ಧ ಟೀ ಚಮಚ ವೆನಿಲ್ಲಾ ಸಾರ, ಒಂದು ಚಮಚ ಸಕ್ಕರೆ ಹಾಗೂ ಬಾಳೆಹಣ್ಣನ್ನು ಮಿಕ್ಸಿಯಲ್ಲಿ ಹಾಕಿ ಬ್ಲೆಂಡ್ ಮಾಡಿ ನಿಮ್ಮ ಮಗುವಿಗೆ ನೀಡಿ. ಈ ಫ್ಲೇವರ್ ನಿಮ್ಮ ಮಗುವಿಗೆ ತುಂಬಾನೇ ಇಷ್ಟ ಆಗುತ್ತೆ.
3. ಸ್ಟ್ರಾಬೆರಿ ಹಾಲು
ಸ್ಟ್ರಾಬೆರಿಯು ವಿಟಮಿನ್ ಸಿ, ಫೈಬರ್ ಮತ್ತು ಆಂಟಿಆಕ್ಸಿಡೆಂಟ್‌ನಿಂದ ಸಮೃದ್ಧವಾಗಿದೆ. ಇನ್ನೂ ಇದರಲ್ಲಿ ಅಧಿಕ ಪ್ರಮಾಣದ ಮ್ಯಾಗ್ನಿಷಿಯಂ ಹಾಗೂ ಪೊಟ್ಯಾಶಿಯಂ ಇದ್ದು, ಇದು ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸೋದು ಮಾತ್ರವಲ್ಲದೇ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ.
ಮಕ್ಕಳಿಗೂ ಸ್ಟ್ರಾಬೆರಿ ಹಾಲು ಎಂದರೆ ತುಂಬಾನೇ ಇಷ್ಟ ಆಗುತ್ತದೆ. ಇದನ್ನು ತಯಾರಿಸಲು ಮೊದಲಿಗೆ ಅರ್ಧ ಲೀಟರ್ ಹಾಲು ತೆಗೆದುಕೊಳ್ಳಿ ಅದಕ್ಕೆ 3 ಸ್ಕೂಬ್ಸ್ ಸ್ಟ್ರಾಬೆರಿ ಐಸ್‌ಕ್ರೀಮ್, 3 ಚಮಚ ಸಕ್ಕರೆ, 10 ಸ್ಟ್ರಾಬೆರಿ ಸೇರಿಸಿ ಮಿಕ್ಸಿಯಲ್ಲಿ ಬ್ಲೆಂಡ್ ಮಾಡಿ. ಇದು ನಿಮ್ಮ ಮಗುವಿಗೆ ತುಂಬಾನೇ ಇಷ್ಟವಾಗುತ್ತದೆ. ಈ ರೀತಿ ಮಾಡಿಕೊಟ್ಟರೆ ನಿತ್ಯ ಹಾಲು ಕುಡಿಯೋದಕ್ಕೆ ಅವರೇ ಹಠ ಮಾಡುತ್ತಾರೆ.
4. ರೋಸ್ ಮಿಲ್ಕ್
ನಮಗೆಲ್ಲಾ ಗೊತ್ತಿರುವ ಹಾಗೆ ರೋಸ್ ವಾಟರ್ ಹಾಗೂ ರೋಸ್ ಸಿರಪ್ ಅನೇಕ ಆರೋಗ್ಯಕರ ಉಪಯೋಗಗಳನ್ನು ಹೊಂದಿದೆ. ಹೀಗಾಗಿ ರೋಸ್ ವಾಟರ್ ಹಾಗೂ ಸಿರಪ್ ಸೇರಿಸೋದು ಆರೋಗ್ಯದ ದೃಷ್ಟಿಯಿಂದ ಮಾತ್ರವಲ್ಲದೇ ಕುಡಿಯೋದಕ್ಕೂ ರುಚಿಕರವಾಗಿರುತ್ತದೆ. ಇದಕ್ಕಾಗಿ ಅರ್ಧ ಲೀಟರ್ ಹಾಲು, 3 ಚಮಚ ರೋಸ್ ಸಿರಪ್ ಜೊತೆಗೆ ರುಚಿಗೆ ತಕ್ಕಷ್ಟು ಸಕ್ಕರೆ ಹಾಕಬೇಕು. ಆನಂತರ ಮಿಕ್ಸಿಯಲ್ಲಿ ಬ್ಲೆಂಡ್ ಮಾಡಿ ನಿಮ್ಮ ಮಗುವಿಗೆ ಕೊಡಿ.
5. ಚೆರಿ ಹಾಲು
ಚೆರಿಯಲ್ಲಿ ಅಧಿಕ ಪ್ರಮಾಣದ ಕ್ಯಾಲ್ಸಿಯಂ, ಪ್ರೋಟಿನ್, ಐರನ್, ವಿಟಮಿನ್ ಸಿ ಮತ್ತು ವಿಟಮಿನ್ ಎ ಅಂಶವಿದೆ. ಇದು ಮಕ್ಕಳ ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು. ಇದನ್ನು ತಯಾರಿಸಲು ಕಾಲು ಕಪ್‌ನಷ್ಟು ಚೆರಿ, ಅದಕ್ಕೆ ಒಂದು ಕಪ್ ಹಾಲು, ಜೊತೆಗೆ ರುಚಿಗೆ ತಕ್ಕಷ್ಟು ಸಕ್ಕರೆ ಹಾಕಿ ಮಿಕ್ಸಿಯಲ್ಲಿ ಬ್ಲೆಡ್ ಮಾಡಿ. ಈಗ ಚೆರಿ ಹಾಲು ಕುಡಿಯಲು ಸಿದ್ಧ.
6. ಜೇನು ತುಪ್ಪದ ಹಾಲು
ಜೇನು ತುಪ್ಪ ದೇಹದ ತೂಕ ಕಡಿಮೆ ಮಾಡೋದಕ್ಕೆ ಸಹಾಯ ಮಾಡೋದು ಮಾತ್ರವಲ್ಲದೇ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದನ್ನು ತಯಾರಿಸಲು ಒಂದು ಲೋಟ ಹಾಲು ತೆಗೆದುಕೊಳ್ಳಿ ಅದಕ್ಕೆ 2 ಟೀ ಚಮಚ ಜೇನು ತುಪ್ಪ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ರಾತ್ರಿ ಹೊತ್ತಿನಲ್ಲಿ ಕುಡಿಯೋದ್ರಿಂದ ನಿದ್ದೆಗೂ ಇದು ತುಂಬಾನೇ ಒಳ್ಳೆಯದು.
7. ಕೇಸರಿ ಹಾಲು
ಕೇಸರಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದು ನಿಮ್ಮನ್ನು ಚಳಿಗಾಲದ ಸಮಯದಲ್ಲಿ ಬೆಚ್ಚಗಿಡೋದಕ್ಕೆ ಸಹಾಯ ಮಾಡುತ್ತದೆ. ಇದನ್ನು ತಯಾರಿಸೋದು ತುಂಬಾನೇ ಸುಲಭ. ಮೊದಲಿಗೆ ಹಾಲಿಗೆ ರುಚಿಗೆ ತಕ್ಕಷ್ಟು ಸಕ್ಕರೆ ಸೇರಿಸಿ ನಂತರ ಒಂದು ಚಿಟಿಕೆ ಕೇಸರಿ ಹಾಕಿದರೆ ಸಾಕು.
8. ಬಾದಾಮಿ ಹಾಲು
ಬಾದಾಮಿಯಲ್ಲಿ ಫೈಬರ್, ವಿಟಮಿನ್ ಇ, ಪ್ರೊಟೀನ್, ಮ್ಯಾಗ್ನಿಷಿಯಂ ಮತ್ತು ಹೆಚ್ಚಿನ ಪ್ರಮಾಣದ ಆರೋಗ್ಯಕರ ಫ್ಯಾಟ್ ಇದೆ. ಬಾದಾಮಿಯು ನೆನಪಿನ ಶಕ್ತಿಗೆ ತುಂಬಾನೇ ಒಳ್ಳೆಯದು, ತೂಕ ಇಳಿಸೋದಕ್ಕೆ ಸಹಾಯ ಮಾಡುತ್ತದೆ, ಹಸಿವನ್ನು ಕಡಿಮೆ ಮಾಡುತ್ತದೆ. ಬಾದಾಮಿ ಹಾಲು ಮಕ್ಕಳ ಬೆಳವಣಿಗೆಯ ದೃಷ್ಟಿಯಿಂದ ತುಂಬಾನೇ ಒಳ್ಳೆಯದು.
ತಯಾರಿಸುವ ವಿಧಾನ : ರಾತ್ರಿ ಕಾಲು ಕಪ್ಪಿನಷ್ಟು ಬಾದಾಮಿಯನ್ನು ನೆನಯಲು ಇಡಿ. ಬೆಳಗ್ಗೆ ಒಂದು ಕಪ್ ಹಾಲಿಗೆ ಕಾಲು ಕಪ್ಪಿನಷ್ಟು ಬಾದಾಮಿ ಹಾಗೂ ತುಚಿಗೆ ತಕ್ಕಷ್ಟು ಸಕ್ಕರೆ ಸೇರಿಸಿ ಮಿಕ್ಸಿಯಲ್ಲಿ ಬ್ಲೆಂಡ್ ಮಾಡಿ. ಆನಂತರ ಚೆನ್ನಾಗಿ ಸೋಸಿ ಮಗುವಿಗೆ ಕುಡಿಯೋದಕ್ಕೆ ನೀಡಿ. ಈ ರೀತಿ ಹಾಲನ್ನು ಪ್ರತಿನಿತ್ಯ ಕೊಟ್ರೆ ಮಕ್ಕಳ ಆರೋಗ್ಯಕ್ಕೆ ಒಳ್ಳೆಯದು.
ಮಕ್ಕಳು ಆರೋಗ್ಯವಾದ ಆಹಾರವನ್ನು ಸೇವಿಸೋದಕ್ಕೆ ತುಂಬಾನೇ ಹಠ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ತಾಯಂದಿರು ಈ ರೀತಿ ಮಾಡಿ ಕೊಟ್ರೆ ಖಂಡಿತ ಸೇವಿಸ್ತಾರೆ.



Click it and Unblock the Notifications













