Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್‌ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಗುವಿನ ಆರೈಕೆಯಲ್ಲೇ ಕಳೆದು ಹೋಗಿದ್ದೀರಾ? ನಿಮಗಾಗಿ ಸಮಯ ಸಿಗ್ತಿಲ್ವಾ? ಈ ಟಿಪ್ಸ್ ಫಾಲೋ ಮಾಡಿ
ತಾಯಿಗಿಂತ ಮಿಗಿಲಾದ ದೇವರು ಈ ಜಗತ್ತಿನಲ್ಲಿ ಇಲ್ಲ. ಆಕೆ ತನ್ನ ತಾಯ್ತನವನ್ನು ತುಂಬಾನೇ ಇಷ್ಟ ಪಡುತ್ತಾಳೆ. ಒಂದು ಮಗು ಆದ ಮೇಲೆ ತಾಯಿಯಾದವಳು ಅನೇಕ ತ್ಯಾಗಗಳನ್ನು ಮಾಡಲೇಬೇಕಾಗುತ್ತದೆ. ಮಗುವಿಗಾಗಿ ಊಟ, ನಿದ್ದೆ ಬಿಟ್ಟು ಅದರ ಆರೈಕೆಯನ್ನು ಮಾಡಬೇಕಾಗುತ್ತದೆ. ಈ ಸಮಯದಲ್ಲಿ ಆಕೆ ತನಗಾಗಿ ಸಮಯ ಮೀಸಲಿಡೋದನ್ನೇ ಮರೆತು ಬಿಡುತ್ತಾಳೆ. ಇನ್‌ಪ್ಯಾಕ್ಟ್ ಆಕೆಗಾಗಿ ಸಮಯವೇ ಸಿಗದಂತಾಗುತ್ತದೆ. ಹಾಗಾದ್ರೆ ಮಗುವನ್ನು ನೋಡಿಕೊಳ್ಳುವ ಮಧ್ಯೆಯೂ ತಾಯಿಯಾದವಳು ತನಗಾಗಿ ಯಾವ ರೀತಿ ಸಮಯ ಮೀಸಲಿಡಬಹುದು ಅನ್ನೋದನ್ನು ನೋಡೋಣ.

1. ಸ್ವಲ್ಪ ಸಮಯದ ಮಟ್ಟಿಗೆ ನಿಮ್ಮ ಜವಾಬ್ದಾರಿಯನ್ನು ಬೇರೆಯವರಿಗೆ ವಹಿಸಿ
ಮಕ್ಕಳಾದ ಮೇಲೆ ತಾಯಂದಿರು ತಮಗಾಗಿ ಸಮಯ ಮೀಸಲಿಡೋದು ಕಷ್ಟ ಸಾಧ್ಯ. ಯಾಕಂದ್ರೆ ಇಡೀ ದಿನ ಮಕ್ಕಳ ಆರೈಕೆ ಮಾಡಬೇಕು. ಅದರ ಜೊತೆಗೆ ಮನೆ ಕೆಲಸ ಕೂಡ ಮಾಡಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಸಂಜೆಯ ಒಂದು ಗಂಟೆಯನ್ನು ನೀವು ನಿಮಗಾಗಿ ಮೀಸಲಿಡಬಹುದು. ಈ ವೇಳೆ ಮಗುವನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ನಿಮ್ಮ ಸಂಗಾತಿಗೆ, ಆತ್ತೆ, ಮಾವ, ಮೈದುನ ಹೀಗೆ ಯಾರಿಗಾದರೂ ವಹಿಸಬಹುದು. ಆ ಒಂದು ಗಂಟೆಯ ವೇಳೆಯಲ್ಲಿ ನೀವು ವರ್ಕ್‌ಔಟ್, ಲೈಬ್ರೆರಿ, ಪಾರ್ಲರ್, ಶಾಪಿಂಗ್ ಹೀಗೆ ಎಲ್ಲಾದರೂ ಹೋಗಿ ಬರಬಹುದು.
2. ಮಗು ಮಲಗಿರುವ ಸಮಯದಲ್ಲಿ ಕೆಲಸ ಮಾಡಿ
ಮಕ್ಕಳು ಇಷ್ಟೇ ಹೊತ್ತಿಗೆ ಮಲಗುತ್ತಾರೆ. ಇಷ್ಟೇ ಹೊತ್ತಿಗೆ ಏಳುತ್ತಾರೆ ಅಂತ ಹೇಳೋದಿಕ್ಕಾಗೋದಿಲ್ಲ. ಹೀಗಾಗಿ ಮಗು ಮಲಗಿರುವ ಸಮಯದಲ್ಲಿ ನೀವು ಮನೆಯ ಕೆಲಸವನ್ನು ಬೇಗ ಬೇಗನೆ ಮುಗಿಸಿ ಬಿಡಬೇಕು. ನಂತರ ಮಗು ಎದ್ದರೆ ಮಗುವಿನ ಆರೈಕೆಯನ್ನು ಮಾಡಿದರೆ ಸಾಕು. ಇಲ್ಲದಿದ್ದರೆ ಇತ್ತ ಕೆಲಸವೂ ಆಗುವುದಿಲ್ಲ. ಇಡೀ ದಿನವನ್ನು ನೀವು ಮಗುವಿನ ಆರೈಕೆಯಲ್ಲಿ ಕಳೆದು ಬಿಡಬೇಕಾಗುತ್ತದೆ.
3. ಅಕ್ಕ-ಪಕ್ಕದ ಮಹಿಳೆಯರ ಜೊತೆಗೂಡಿ ಒಂದು ಗುಂಪು ಮಾಡಿ
ನಿಮ್ಮ ಮನೆಯ ಅಕ್ಕ-ಪಕ್ಕದಲ್ಲಿ ಅಥವಾ ನಿಮ್ಮ ಸ್ನೇಹಿತರು ಯಾರಾದರೂ ಸರಿ. ನಿಮ್ಮಂತೆಯೇ ಮಗು ಇರೋ ಮಹಿಳೆಯರ ಜೊತೆಗೆ ಸ್ನೇಹ ಬೆಳೆಸಿ ಒಂದು ಗುಂಪು ಸಿದ್ಧ ಪಡಿಸಿ. ಸಂಜೆಯ ಹೊತ್ತಿನಲ್ಲಿ ಎಲ್ಲರೂ ತಮ್ಮ ತಮ್ಮ ಮಕ್ಕಳನ್ನು ಕರೆದುಕೊಂಡು ಪಾರ್ಕ್ ಅಥವಾ ಅಪಾರ್ಟ್‌ಮೆಂಟ್ ಕೆಳಗಡೆ ಬಂದರೆ ಮಕ್ಕಳಿಗೂ ಒಂದು ರೀತಿ ಬದಲಾವಣೆ ಸಿಗುತ್ತದೆ. ಅದರ ಜೊತೆಗೆ ತಾಯಂದಿರಿಗೂ ತಮ್ಮ ಸ್ನೇಹಿತೆಯರ ಜೊತೆಗೆ ಸುಂದರ ಕ್ಷಣಗಳನ್ನು ಕಳೆದಂತಾಗುತ್ತದೆ.
4. ಸರಿಯಾಗಿ ನಿದ್ದೆ ಮಾಡಿ
ತಾಯಿಯಾದ ಮೇಲೆ ಮಹಿಳೆಯರು ಮೊದಲಿಗೆ ತಮ್ಮ ನಿದ್ದೆಯನ್ನು ತ್ಯಜಿಸಬೇಕಾಗುತ್ತದೆ. ರಾತ್ರಿಯಿಡೀ ಮಗು ಅಳುತ್ತಿದ್ದರೆ ತಾಯಿಗೆ ಸರಿಯಾಗಿ ನಿದ್ದೆ ಕೂಡ ಬರೋದಿಲ್ಲ. ಇದರಿಂದ ಆರೋಗ್ಯ ಸಮಸ್ಯೆ ಎದುರಾಗುತ್ತದೆ. ಹೀಗಾಗಿ ಮಗು ಮಲಗುವ ಸಮಯ ಹಾಗೂ ನೀವು ಮಲಗುವ ಸಮಯ ಒಂದೇ ಆಗಿರಲಿ. ಇನ್ನೂ ರಾತ್ರಿ ಮಗುವಿನ ಜೊತೆಗೆ ತಡವಾಗಿ ಮಲಗಿ ರಾತ್ರಿ ಬೇಗ ಏಳೋದಕ್ಕೆ ಹೋಗಬೇಡಿ ಇದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಕೊಂಚ ತಡವಾಗಿ ಎದ್ದರೂ ತೊಂದರೆಯಿಲ್ಲ. ಮನೆ ಕೆಲಸಕ್ಕೆ ನಿಮ್ಮ ಸಂಗಾತಿ ಅಥವಾ ಅತ್ತೆಯ ಸಹಾಯ ಪಡೆಯಿರಿ.
5. ನಿಮ್ಮ ಚಟುವಟಿಕೆಗಳಲ್ಲಿ ಮಗುವನ್ನು ತೊಡಗಿಸಿ
ಆರೋಗ್ಯವಾಗಿರಲು ಯೋಗ, ವ್ಯಾಯಾಮದಂತಹ ಚಟುವಟಿಕೆಗಳನ್ನು ಮಾಡುವುದು ತುಂಬಾನೇ ಮುಖ್ಯವಾಗುತ್ತದೆ. ಮಗುವಾದ ಮೇಲೆ ಅದನ್ನೆಲ್ಲಾ ಬಿಟ್ಟಿರೋದಕ್ಕೆ ಆಗೋದಿಲ್ಲ. ಹೀಗಾಗಿ ಮಗುವನ್ನು ಕೂಡ ನಿಮ್ಮ ಜೊತೆಗೆ ವಾಕಿಂಗ್‌ಗೆ ಕರೆದುಕೊಂಡು ಹೋಗಿ. ಮಗುವಿಗೂ ಮನೆಯಿಂದ ಹೊರಬಂದಾಗ ಏನೋ ಒಂಥರಾ ಖುಷಿ ಸಿಗುತ್ತದೆ. ಇನ್ನೂ ಸ್ವಲ್ಪ ದೊಡ್ಡವರಾದರೆ ಮಕ್ಕಳಿಗೂ ನಿಮ್ಮ ಜೊತೆಗೆ ಯೋಗ, ವ್ಯಾಯಾಮ ಮಾಡೋದನ್ನ ರೂಢಿ ಮಾಡಿಸಿ.
ತಾಯ್ತನವನ್ನು ಅನುಭವಿಸುವ ಖುಷಿಯಲ್ಲಿ ಅನೇಕ ಮಹಿಳೆಯರು ತಮಗಾಗಿ ಸಮಯ ಬೇಕೆಂಬುವುದನ್ನೇ ಮರೆತು ಹೋಗುತ್ತಾರೆ. ಇಂತಹ ಸಮಯದಲ್ಲಿ ನಿಮಗಾಗಿ ನಿಮ್ಮ ಸಮಯವನ್ನು ಕಂಡುಕೊಳ್ಳುವುದು ತುಂಬಾನೇ ಮುಖ್ಯವಾಗುತ್ತದೆ.



Click it and Unblock the Notifications


