Latest Updates
-
MI vs RCB ಮ್ಯಾಚ್ ನೋಡುವಾಗ ದಂಪತಿಗಳ ಜಗಳ ತಪ್ಪಿಸುವುದು ಹೇಗೆ? -
ವಿಷು, ಬೈಸಾಖಿ ಹಬ್ಬಕ್ಕೆ ನಿಮ್ಮ ಮನೆ ಮಿಂಚಬೇಕೆ? ಈ ಟಿಪ್ಸ್ ಫಾಲೋ ಮಾಡಿ -
ಗರ್ಭಿಣಿಯರ ಆಹಾರ ಕ್ರಮ: ಮಗುವಿನ ಆರೋಗ್ಯಕ್ಕೆ ಈ ಬದಲಾವಣೆ ಕಡ್ಡಾಯ! -
ಬೇಸಿಗೆ ಬಿಸಿಲಿಗೆ ತಂಪಾಗಲು ವೈರಲ್ ಆಗುತ್ತಿರುವ ಫ್ಯಾಷನ್ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ಫಿಟ್ನೆಸ್ ರೂಟೀನ್ ಬದಲಿಸಿ -
ಹಬ್ಬದ ಫ್ಯಾಷನ್ ಟ್ರೆಂಡ್ಸ್: ಈ ಲುಕ್ ಟ್ರೈ ಮಾಡಿ ಮಿಂಚಿ -
ಬೆಳಗಿನ ವ್ಯಾಯಾಮ: ಬಿಸಿಲ ಧಗೆಯಿಂದ ಪಾರಾಗಲು ಹೀಗೆ ಮಾಡಿ -
ಬಿಸಿಲಿನ ತಾಪಕ್ಕೆ ದಾಂಪತ್ಯದಲ್ಲಿ ಜಗಳವೇ? ಈ ಟಿಪ್ಸ್ ಪಾಲಿಸಿ -
ದೆಹಲಿ ಬಿಸಿಲು: ಮನೆಯನ್ನು ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ತೂಕ ಇಳಿಸುವ ಔಷಧಿಗಳ ಬೆಲೆ ಇಳಿಕೆ: ಬೊಜ್ಜು ನಿವಾರಣೆಗೆ ಹೊಸ ಭರವಸೆ
ಪೋಷಕರೇ ಪರೀಕ್ಷಾ ಸಮಯವಿದು, ಈ ತಪ್ಪು ಮಾಡಲೇಬೇಡಿ
ಪರೀಕ್ಷೆ ಸಮಯವಿದು, ಈ ಅವಧಿಯಲ್ಲಿ ಮಕ್ಕಳಿಗಿಂತ ಹೆಚ್ಚು ಪೋಷಕರು ಒತ್ತಡಕ್ಕೊಳಗಾಗುತ್ತಾರೆ, ಮಕ್ಕಳು ಎಷ್ಟೇ ಚೆನ್ನಾಗಿ ಓದುತ್ತಿದ್ದರೂ 100ಕ್ಕೆ ನೂರು ಅಂಕ ತೆಗೆಯುವಂತೆ ಆದರೆ ಸಾಕು ಎಂದು ಒತ್ತಡಕ್ಕೆ ಒಳಗಾಗುವ ಪೋಷಕರಿಗೇನೂ ಕಡಿಮೆಯಿಲ್ಲ. ಪೋಷಕರ ಈ ಬಗೆಯ ವರ್ತನೆ ಮಕ್ಕಳಲ್ಲಿಯೂ ತುಂಬಾನೇ ಒತ್ತಡವನ್ನುಂಟು ಮಾಡುತ್ತದೆ. ಆದರೆ ಪೋಷಕರೇ ನಿಮ್ಮ ಮಕ್ಕಳು ಉತ್ತಮ ಮಾರ್ಕ್ಸ್ ಪಡೆಯಬೇಕೆಂದರೆ ಈ ತಪ್ಪು ಮಾಡಲೇಬೇಡಿ:
ಮಕ್ಕಳಿಗೆ ಸದಾ ಓದು ಓದು ಅಂ ಒತ್ತಾಯ ಹಾಕುವುದು: ಮಕ್ಕಳು ಸ್ವಲ್ಪ ಆಟ ಆಡಲು ಬಯಸಿದರೆ ಅವರನ್ನು ಬಿಡಿ, ಸದಾ ಓದು-ಓದು ಅಂತ ಒತ್ತಡ ಹಾಕುವುದರಿಂದ ಅವರಿಗೆ ಓದುವುದುಎಂದು ಹಿಂಸೆಯಾಗಬಹುದು, ಅದೇ ಆಟವಾಡಿ ಬಂದಾಗ ಮನಸ್ಸು ನರಾಳವಾಗುವುದು, ಓದಿನ ಕಡೆಗೆ ಗಮನಹರಿಸಲು ಸಾಧ್ಯವಾಗುವುದು.
ಬೇರ ಮಕ್ಕಳ ಜೊತೆ ಹೋಲಿಕೆ ಮಾಡುವುದು: ನೋಡು ಅವನು ಎಷ್ಟು ಮಾರ್ಕ್ಸ್ ತಗೊಂಡಿದ್ದಾಳೆ, ಇವರ ಮಗಳು ಕ್ಲಾಸ್‌ಗೆ ಫಸ್ಟ್ ಬರ್ತಾಳೆ ನೀನೂ ಇದ್ದೀಯಾ ಅಂತೆಲ್ಲಾ ಹೋಲಿಕೆ ಮಾಡಿ ಮಾತನಾಡಬೇಡಿ. ಪ್ರತಿಯೊಂದು ಮಗುವೂ ಭಿನ್ನವಾಗಿರುತ್ತದೆ. ಒಂದು ವೇಳೆ ನಿಮ್ಮ ಮಗು ಓದಿನಲ್ಲಿ ಸ್ವಲ್ಪ ಹಿಂದೆ ಹಿಂದಿದ್ದರೆ ಅವರು ಪಾಸಾಗಲು ಪ್ರೋತ್ಸಾಹಿಸಿ ಬದಲಿಗೆ ಹೋಲಿಕೆ ಮಾಡಬೇಡಿ.
ತುಂಬಾ ಮಾರ್ಕ್ಸ್ ತೆಗೆಯಲೇಬೇಕು ಎಂದು ಒತ್ತಡ ಹಾಕುವುದು
ಹೌದು ಫಸ್ಟ್ ಕ್ಲಾಸ್ ಸಾಕಾಗಲ್ಲ, ಔಟ್ ಆಫ್ ಔಟ್ ತೆಗೆಯಲೇಬೇಕು ಎಂದು ಮಕ್ಕಳಿಗೆ ಹೇಳಿದರೆ ಅದು ಅವರ ಮನಸ್ಸಿನ ಮೇಲೆ ತುಂಬಾನೇ ಮಾನಸಿಕ ಒತ್ತಡ ಬೀರುವುದು. ನೀನು ಒಳ್ಳೆಯ ಮಾರ್ಕ್ಸ್ ತೆಗೆಯದಿದ್ದರೆ ಪರಿಣಾಮ ಸರಿಯಿರಲ್ಲ ಎಂದಲ್ಲ ಗದರುವುದು ಮಾಡುವುದು ಮಾಡಿದರೆ ಮಕ್ಕಳ ಮನಸ್ಸಿನ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುವುದು.
ಅವರ ಸ್ಟಡಿ ಪ್ಲ್ಯಾನ್ ನೀವು ಮಾಡುವುದು: ಎಷ್ಟು ಹೊತ್ತಿಗೆ ಮಲಗಬೇಕು, ಎಷ್ಟು ಹೊತ್ತಿಗೆ ಏಳಬೇಕು ಎಂದೆಲ್ಲಾ ಸ್ಟಡಿ ಪ್ಲ್ಯಾನ್ ಮಕ್ಕಳು ಮಾಡಬೇಕು, ಆದರೆ ನೀವು ಇಷ್ಟೇ ಹೊತ್ತು ಓದಬೇಕು ಎಂದೆಲ್ಲಾ ನಿಯಮಗಳನ್ನು ಮಾಡಬೇಡಿ, ಅವರಿಗೆ ನಿದ್ದೆ ಮಾಡಬೇಕು ಎಂದು ಅನಿಸಿದಾಗ ಅವರು ನಿದ್ದೆ ಮಾಡಲಿ, ಸ್ವಲ್ಪ ಟಿವಿ ನೋಡಬೇಕೆಂದು ಅನಿಸಿದಾಗ ನೋಡಲಿ.
ಪರೀಕ್ಷೆ ಸಮಯದಲ್ಲಿ ಮನೆಯ ಪರಿಸರವೇ ಬದಲಾಗುವುದು: ಇದು ಬಹುತೇಕ ಮನೆಗಳಲ್ಲಿ ಆಗುತ್ತೆ, ಮಕ್ಕಳಿಗೆ ಪ್ರಶ್ನೆ ಕೇಳುವುದು, ಅವರು ಅದಕ್ಕೆ ಉತ್ತರಿಸದೆ ಇದ್ದಾಗ ಕೋಪಗೊಂಡು ಹೊಡೆಯುವುದು ಅಥವಾ ಬೈಯ್ಯುವುದು ಇವೆಲ್ಲಾ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರುವುದು.
ಪರೀಕ್ಷೆಯಲ್ಲಿ ಮಾರ್ಕ್ಸ್ ತೆಗೆದಿಲ್ಲ ಎಂದರೆ ಭವಿಷ್ಯವೇ ಇಲ್ಲ ಎಂಬಂತೆ ವರ್ತಿಸುವುದು: ಪರೀಕ್ಷೆಯಲ್ಲಿ ಮಾರ್ಕ್ಸ್ ಬೇಕು ನಿಜ, ಆದರೆ ಮಾರ್ಕ್ಸ್ ಮಾತ್ರ ಜೀವನ ರೂಪಿಸುತ್ತೆ ಎಂದಲ್ಲ, ಇಂಥ ರೂಪಿಸಿದಾಗ ಮಕ್ಕಳು ಒಂದು ವೇಳೆ ಫೇಲ್ ಆದರೆ ಕೆಟ್ಟ ನಿರ್ಧಾರ ತೆಗೆದುಕೊಳ್ಳುತ್ತಾರೆ.

ಬದಲಿಗೆ ಏನು ಮಾಡಬೇಕು?
ಅವರನ್ನು ಹುರಿದುಂಬಿಸಿ, ಭಾವನಾತ್ಮಕ ಬೆಂಬಲ ನೀಡಿ
ಅವರ ಆಹಾರಕ್ರಮದ ಕಡೆಗೆ ಗಮನಹರಿಸಿ
ಅವರ ಜೊತೆ ಖುಷಿಯಿಂದ ಮಾತನಾಡಿ
ಅವರ ಚಿಕ್ಕ ಸಾಧನೆಯನ್ನು ಸಂಭ್ರಮಿಸಿ.



Click it and Unblock the Notifications











