Latest Updates
-
ಹೋಳಿ ಹಬ್ಬದಂದೇ 4 ಗ್ರಹಗಳ ವಕ್ರ ನಡೆ: ಈ 5 ರಾಶಿಗಳ ಮೇಲೆ ಭಾರೀ ಪರಿಣಾಮ.. ಭರ್ಜರಿ ಧನಲಾಭ! ನೀವೂ ಲಕ್ಕಿನಾ? -
ದೇಸಿ ಮಸಾಲೆಯ ಘಮ, ಮಣ್ಣಿನ ಮಡಕೆಯ ರುಚಿ! ಮನೆಯಲ್ಲೇ ಮಾಡಿ ಛತ್ತೀಸ್ಗಢ ಸ್ಪೆಷಲ್ ಚಿಕನ್ ಕರಿ.. ಈಸಿ ರೆಸಿಪಿ ಇಲ್ಲಿದೆ -
ಮಾತಿನ ಹೋಳಿ.. ಮನದ ಸಂಭ್ರಮ.. ಇದು ಬಣ್ಣಗಳ ಕೇಳಿ! ರೊಮ್ಯಾಂಟಿಕ್ ಶುಭಾಶಯಗಳು ಇಲ್ಲಿವೆ -
ಚಂದ್ರಗ್ರಹಣದ ದಿನ.. ಪ್ರೇಮ ಜೀವನದಲ್ಲಿ ಸಂಕಷ್ಟ! ಪ್ರಣಯ ಸಂಬಂಧಗಳಲ್ಲಿ ಎಚ್ಚರ -
March 03 Horoscope: ವರ್ಷದ ಮೊದಲ ಚಂದ್ರಗ್ರಹಣ.. ಅಪಘಾತ ಸಂಭವಿಸುವ ಸಾಧ್ಯತೆ! ಖರ್ಚುಗಳು ಹೆಚ್ಚಾಗಲಿವೆ -
ಬೆಳಗ್ಗೆ ಮಾಡಿದ ರೊಟ್ಟಿ ಸಂಜೆಯಾದರೂ ಫ್ರೆಶ್ & ಸಾಫ್ಟ್ ಆಗಿರುತ್ತೆ! ಅಮ್ಮನ ಸೂಪರ್ ಕಿಚನ್ ಟಿಪ್ಸ್ ಇಲ್ಲಿದೆ -
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ? ಯಾರಿಗೆ ಸಂಕಷ್ಟ? ನಿಮ್ಮ ರಾಶಿ ಫಲ ಇಲ್ಲಿದೆ -
ಉಳಿದ ಅನ್ನದಿಂದ ಮಾಡಿ ಗರಿಗರಿಯಾದ ಕುರ್ಕುರೆ! ಹೊರಗಿನ ಸ್ನ್ಯಾಕ್ಗೂ ಮೀರಿದ ರುಚಿ.. ಮಾಡೋದು ಹೇಗೆ? -
30 ವರ್ಷ ದಾಟಿದ್ರಾ? ಈ 5 ಅಭ್ಯಾಸಗಳನ್ನು ತಕ್ಷಣ ಬದಲಿಸಿ.. ಜೀವನಪೂರ್ತಿ ಫಿಟ್ ಆಗಿರಿ! -
Happy Holi 2026: ನಿಮ್ಮ ಪ್ರೀತಿಪಾತ್ರರಿಗೆ ಕಳಿಸಿ ಈ ಸ್ಪೆಷಲ್ ಶುಭಾಶಯಗಳು! ಸ್ನೇಹ, ಪ್ರೀತಿ, ಸಂತೋಷ ತುಂಬಿದ ಮೆಸೇಜ್ ಇಲ್ಲಿವೆ
ಹೇಗೆ ಒತ್ತಡ ಎಂಬುವುದು ಹೆಣ್ಣಿನ ತಾಯ್ತನಕ್ಕೆ ದೊಡ್ಡ ಅಡ್ಡಿಯಾಗಿದೆ? ತಜ್ಞರ ಪ್ರಕಾರ ಇಂಥ ಸಮಸ್ಯೆ ತಡೆಗಟ್ಟುವುದು ಹೇಗೆ?
ಡಾ. ಮಮತಾ ಕೆ.ವಿ,
(ಪ್ರಾಂಶುಪಾಲರು, ಎಸ್.ಡಿ.ಎಂ ಆಯುರ್ವೇದ ಕಾಲೇಜು, ಆಸ್ಪತ್ರೆ, ಮತ್ತು ಸಂಶೋಧನಾ ಕೇಂದ್ರ ಉಡುಪಿ)

ಅರ್ಚನಾ ಹಾಗೂ ಅನಿರುದ್ದ್ ದಂಪತಿಗಳು ಕಳೆದ12 ವರ್ಷಗಳಿಂದ ಮಕ್ಕಳಾಗುವಿಕೆಯ ತೊಂದರೆಗಾಗಿ ಭೇಟಿ ನೀಡದ ಆಸ್ಪತ್ರೆಗಳಿಲ್ಲ, ಪೂಜೆ ಸಲ್ಲಿಸದ ದೇವರುಗಳಿಲ್ಲ. ಆದರೆ ಮಾಡಿಲಿಗೊಂದು ಮಗು ಬೇಕು ಎನ್ನುವ ಅವರ ಆಸೆ ಮಾತ್ರ ಕೈಗೂಡಲೇ ಇಲ್ಲ.
ಸೋತು ಅನಾಥಾಶ್ರಮದಿಂದ ಬಂದ 15 ದಿನದ ಬಿಂದು ಅವರ ಜೀವನವನ್ನೇ ಬದಲಾಯಿಸಿಬಿಟ್ಟಳು. ಬಿಂದುವನ್ನೇ ಕೇಂದ್ರೀಕೃರಿಸಿ ಅವರ ದಿನಚರಿಗಳೆಲ್ಲ ಬದಲಾಗಿ ಸ್ವಂತವಿಷಯಗಳನ್ನೂ ಮರೆತು ಬಿಡುವಷ್ಟು ತನ್ಮಯತೆ ಅವರದ್ದಾಗಿತ್ತು. ಈ ಸಂಭ್ರಮದಲ್ಲಿದ್ದಾಗ ತಲೆ ಸುತ್ತು, ವಾಕರಿಕೆ 2 ತಿಂಗಳಿಂದ ಬರತೊಡಗಿದಾಗಲೇ ನೆನಪಾಗಿದ್ದು 3 ತಿಂಗಳಿನಿಂದ ಋತುಚಕ್ರ ಬಂದಿಲ್ಲವೆಂದು. ಡಾಕ್ಟರ್ ರನ್ನು ಕಂಡಾಗ 3 ತಿಂಗಳ ಗರ್ಭಿಣಿ ಎಂಬುದೂ ಖಾತ್ರಿಯಾದಗ ಎಲ್ಲರೂ ಬಿಂದುವಿನ ಕಾಲ್ಗುಣವನ್ನು ಕೊಂಡಾಡುವವರೇ. ಈ ವರೆಗೂ ಯವುದರಿಂದಲೂ ಸಾಧ್ಯವಾಗದ ಈ ಚಮತ್ಕಾರ ಹೇಗಾಯ್ತು ಎಂಬುದೇ ಪ್ರಶ್ನೆ !
ಆಯುರ್ವೇದದ ಮೂಲ ಗ್ರಂಥ ಚರಕ ಸಂಹಿತೆಯಲ್ಲಿ ಸೋಮನಸ್ಯಮ್ ಗರ್ಭಕರಾಣನಾಮ್ ಎಂಬ ಉಲ್ಲೇಖವಿದೆ.
ಅಂದರೆ ಗರ್ಭ ಧಾರಣೆಗೆ ಸಂತೋಷ ಭರಿತ ಮನಸ್ಸೇ ಶ್ರೇಷ್ಠ. ಚಿಂತೆಯಿಂದ ವ್ಯಾಕುಲಿತ ಸ್ಥಿತಿಯಲ್ಲಿ ಗರ್ಭಧಾರಣೆ ಅಸಾಧ್ಯ ಎಂಬುದು ಇದರ ತಾತ್ಪರ್ಯ. ಅರ್ಚನಾ ದಂಪತಿಗಳಂತ ಹಲವಾರು ಜ್ವಲಂತ ನಿದರ್ಶನಗಳನ್ನು ನಾವು ನಮ್ಮ ವೈದ್ಯಕೀಯ ವೃತ್ತಿ ಯಲ್ಲಿ ಹಲವಾರು ಬಾರಿ ಕಾಣುತ್ತೇವೆ. ಒತ್ತಡ ಈಗ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದ್ದು ಮಗುವಿನಿಂದ ವೃದ್ಧರ ತನಕ ಪ್ರತಿಯೊಬ್ಬರೂ ತಮ್ಮದೇ ಆದ ಕಾರಣದಿಂದ ಒತ್ತಡದಲ್ಲಿ ಸಿಲುಕಿರುತ್ತಾರೆ. ಈ ಒತ್ತಡ ಕೇವಲ ಮನಸ್ಸಿನ ಆರೋಗ್ಯಕ್ಕಷ್ಟೇ ಅಲ್ಲದೆ ನಮ್ಮ ದೈಹಿಕ ಆರೋಗ್ಯ ಹಾಗೂ ಸಂತಾನ ಹೀನತೆಗೂ ಕೂಡಾ ಕಾರಣವಾಗಬಹುದು ಎಂಬುದು ಕಟು ಸತ್ಯ ಒತ್ತಡವನ್ನು ನಾವು ಸರಿಯಾದ ರೀತಿಯಲ್ಲಿ ನಿಭಾಯಿಸದೆ ಇದ್ದಾಗ, ಸಮಸ್ಯೆಗಳನ್ನು ಧನಾತ್ಮಕ ಚಿಂತನೆಯಿಂದ ಪರಿಹಾರ ಮಾಡಿಕೊಳ್ಳದೇ ಕೇವಲ ಚಿಂತೆ ಮಾಡುವುದರಿಂದ ನಮ್ಮ ದೇಹದ ಮಸ್ತಿಷ್ಟದಲ್ಲಿರುವ ಹೈಪೋಥಲಾವೋ ಪಿಟ್ಯೆಯಿಟರಿಗಳ ಸ್ರಾವದಿಂದ ಹಾರ್ಮೋನುಗಳ ಸ್ರಾವದಲ್ಲಿ ವ್ಯಾತ್ಯಾಸಗಳಾಗಿ, ಮಕ್ಕಳಾಗುವಿಕೆಗೆ ಬೇಕಾಗುವ ಬೀಜದ ಬಿಡುಗಡೆಗೆ ತೊಂದರೆಯನ್ನುಂಟು ಮಾಡಬಹುದು. ಅಥವಾ ಋತುಚಕ್ರದಲ್ಲಿ ವ್ಯತ್ಯಾಸವಾಗಬಹುದು.
ಕೇವಲ ಸ್ತ್ರೀಯರಲ್ಲಿ ಅಷ್ಟೇ ಅಲ್ಲದೆಯೆ ಪುರುಷರಲ್ಲಿಯೂ ಜನನಾಂಗದ ನಿಮಿರುವಿಕೆ ಇತ್ಯಾದಿ ಸಮಸ್ಯೆಗಳಿಗೆ ಕಾರಣವಾಗಬಹುದು.
ಹಾಗಾಗಿ ಸಂತಾನ ಹೀನತೆಯ ಎಲ್ಲಾ ಚಿಕಿತ್ಸಾ ಕೇಂದ್ರಗಳಲ್ಲಿ ಒತ್ತಡ ನಿರ್ವಹಣೆಗಾಗಿ ಸಮಾಲೋಚನಾ ಕೇಂದ್ರಗಳಿರುತ್ತವೆ. ಅಷ್ಟೇ ಅಲ್ಲದೆಯೆ ತಜ್ಞ ವೈದ್ಯರು ಇದರ ಬಗ್ಗೆ ದಂಪತಿಗಳಿಗೆ ನಿರ್ದೇಶನಗಳನ್ನು, ಯೋಗ ಪ್ರಾಣಾಯಾಮಗಳ ತರಬೇತಿಗಳನ್ನೂ ನೀಡುತ್ತಾರೆ. ವೈಜ್ಞಾನಿಕವಾಗಿಯೂ ಒತ್ತಡ ನಿರ್ವಹಣೆ ಹಾಗೂ ಫಲವತ್ತತೆಯ ಸಂಬಂಧ ಪ್ರಮಾಣೀಕೃತವಾಗಿದೆ.
ಒತ್ತಡಗಳು ಕೇವಲ ಗರ್ಭಧಾರಣೆಗೆ ಮುಂದೂಡುವುದು ಮಾತ್ರವಷ್ಟೇ ಅಲ್ಲ. ಗರ್ಭಿಣಿ ಹಾಗೂ ಗರ್ಭದ ಆರೋಗ್ಯ ಸ್ಥಿತಿಯ ಮೇಲೂ ಋಣಾತ್ಮಕ ಪರಿಣಾಮ ಬೀರುತ್ತದೆ ಎಂಬುದರ ಉಲ್ಲೇಖಗಳೂ ಆಯುರ್ವೇದ ಗ್ರಂಥಗಳಲ್ಲಿವೆ.
ಅತೀ ಕ್ಲಿಷ್ಟ ಹಾಗೂ ತೀವ್ರ ಭಯ, ದುಃಖ, ಕೋಪ, ಚಿಂತನೆ, ಇತ್ಯಾದಿಗಳಿಂದ ಗರ್ಭಪಾತ, ಅಕಾಲಿಕ ಪ್ರಸವ, ಭ್ರೂಣದಲ್ಲಿ ಬೆಳವಣಿಗೆಯ ನ್ಯೂನತೆಗಳು ಅಥವಾ ಗರ್ಭಿಣಿಯ ಅಧಿಕ ರಕ್ತದೊತ್ತಡ, ಮಧುಮೇಹದಂತಹ ತೊಂದರೆಗಳನ್ನು ತಂದು ಕಷ್ಟಕರವಾಧ ಪ್ರಸವಕ್ಕೆ ದಾರಿ ಮಾಡಿಕೊಡುತ್ತದೆ. ಈ ಸರಣಿ ಇಲ್ಲಿಗೂ ನಿಲ್ಲದೆ ಮುಂದೆ ಬಾಣಂತಿ ತನದಲ್ಲಿಯೂ ಮಗುವಿನ ಜೊತೆಗಿನ ಸಂವಹನ, ಸಂಬಂಧ, ಸ್ತನ್ಯಪಾನದ ತೊಂದರೆಗಳು ಹಾಗೂ ಮಾನಸಿಕ ಖಿನ್ನತೆಗಳಿಗೆ ಮಹೀಳೆ ಬಲಿಯಾಗುವ ಸಾಧ್ಯತೆಗಳಿರುತ್ತವೆ.
ಇಲ್ಲಿ ನಾವು ಅರ್ಥ ಮಾಡಿಕೊಳ್ಳಬೇಕಾದ ವಿಷಯವೇನೆಂದರೆ, ಒತ್ತಡವಿಲ್ಲದೆ ಮಗು ತನ್ನ ಪರೀಕ್ಷೆಗೆ ಓದುವಂತೆ, ಒತ್ತಡವಿಲ್ಲದೆ ಸಾಧನೆಗಳನ್ನು ಮಾಡಲು ಸಾಧ್ಯವಿಲ್ಲ. ಒತ್ತಡಗಳನ್ನು ಧನಾತ್ಮಕವಾಗಿ ತೆಗೆದುಕೊಂಡು ಸಾಧನೆಯ ಮೆಟ್ಟಿಲನ್ನಾಗಿಸಿಕೊಳ್ಳಬೇಕೇ ವಿನಃ ಚಿಂತೆಯನ್ನೇ ಚಿತೆಯನ್ನಾಗಿಸಿಕೊಳ್ಳಬಾರದು.
ಏಕಾಂಗಿಯಾಗಿ ಎಲ್ಲವನ್ನೂ ಎದುರಿಸುತ್ತೇನೆನ್ನುವ ಛಲದ ಬದಲು, ಮನೆಯವರ, ಸಹಪಾಠಿಗಳ, ಸಹೋದ್ಯೋಗಿಗಳ ಜೊತೆ ಪರಸ್ಪರ ಸಹಕಾರ- ಹೊಂದಾಣಿಕೆ - ಸಹಾನುಭೂತಿ ಸಂವಹನಗಳಿಂದ ಒತ್ತಡದ ಸಮರ್ಥ ನಿರ್ವಹಣೆ ಸಾಧ್ಯವಿದೆ. ಇರುವ ಸಮಯದ ಸೂಕ್ತ ನಿರ್ವಹಣೆಯಿಂದ ಒತ್ತಡೆ ನಿಯಂತ್ರಕಗಳಾದ ಯೋಗ ಪ್ರಾಣಾಯಾಮ, ನಮಗೆ ಇಷ್ಟವಾದ ಹವ್ಯಾಸಗಳನ್ನು ದಿನಚರಿಯಲ್ಲಿ ಸೇರಿಸಿಕೊಳ್ಳುವುದೂ ನಮ್ಮನ್ನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢಗೊಳಿಸಿಕೊಳ್ಳಬಹುದು.
ಒಟ್ಟಾರೆಯಾಗಿ ಈ ಮಹಿಳಾ ದಿನಾಚರಣೆಯ ಶುಭದಿನಸದಲ್ಲಿ ಮೇಣದ ಬತ್ತಿಯಂತೆ ನಾವು ಕೊರಗಿ ಕರಗುವ ಬದಲು... ದೀಪದಂತೆ ನಾವೂ ನಗುತ್ತಾ ಬದುಕೋಣ.



Click it and Unblock the Notifications












