Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಮಕ್ಕಳನ್ನು ಬೆಳೆಸುವಾಗ ಈ ತಪ್ಪುಗಳನ್ನು ಮಾಡಲೇಬೇಡಿ !
ಮಕ್ಕಳನ್ನು ಬೆಳೆಸುವುದು ನಾವಂದುಕೊಂಡಷ್ಟು ಸುಲಭವಲ್ಲ. ಮಕ್ಕಳು ಚಿಕ್ಕದಿರುವಾಗಲೇ ಅವರಿಗೆ ಜೀವನ ಮೌಲ್ಯಗಳನ್ನು ಕಲಿಸಿಕೊಟ್ಟರೆ ದೊಡ್ಡವರಾದ ಮೇಲೆ ಅವರು ಸಜ್ಜನ ಪ್ರಜೆಯಾಗುತ್ತಾರೆ. ಇಲ್ಲದಿದ್ದರೆ ಹಾದಿ ತಪ್ಪಿ ಬಿಡುತ್ತಾರೆ. ಹೀಗಾಗಿ ಮಕ್ಕಳ ಬೆಳವಣಿಗೆಯ ಪ್ರತಿ ಹಂತದಲ್ಲೂ ಪೋಷಕರು ಕಣ್ಣಲ್ಲಿ ಕಣ್ಣಿಟ್ಟು ಸಾಕಿ ಸಲಹಬೇಕು.

ಕೆಲವೊಂದು ಬಾರಿ ಪೋಷಕರು ಮಾಡುವ ತಪ್ಪುಗಳು ಮಕ್ಕಳ ಭವಿಷ್ಯವನ್ನೇ ಹಾಳು ಮಾಡಿ ಬಿಡಬಹುದು. ಹಾಗಾದ್ರೆ ಪೋಷಕರೇ ಮಕ್ಕಳನ್ನು ಬೆಳೆಸುವಾಗ ಈ ತಪ್ಪುಗಳನ್ನು ಮಾಡಲೇಬೇಡಿ.
1. ಓಡಾಡುವ ಮಕ್ಕಳ ಬೆನ್ನ ಹಿಂದಿರುವುದು ತಪ್ಪು
ಹುಟ್ಟಿದ ಮಗು ಪ್ರತಿನಿತ್ಯ ಬೆಳೆಯುತ್ತದೆ ಹಾಗೂ ಬೇರೆ ಬೇರೆ ವಿಚಾರಗಳ ಬಗ್ಗೆ ತಿಳಿದುಕೊಳ್ಳುತ್ತದೆ. ದಿನ ಏನಾದರೂ ಹೊಸತನ್ನು ಕಲಿಯುತ್ತದೆ. ಆ ಮಗುವಿಗೆ ಎಲ್ಲವೂ ಹೊಸತು ಎಂದೆನಿಸುತ್ತದೆ. ಇನ್ನೂ ಮಗು ಕೊಂಚ ಓಡಾಡಲು ಶುರು ಮಾಡಿದಾಗ ಪೋಷಕರಿಗೆ ಸ್ವಲ್ಪ ಕಷ್ಟ. ಏಕೆಂದರೆ ಮನೆಯಲ್ಲಿದ್ದ ವಸ್ತುಗಳು ಆ ಜಾಗದಲ್ಲಿ ಇರೋದಿಲ್ಲ. ಕೆಲವೊಂದು ಸಾರಿ ಪೋಷಕರು ಮಕ್ಕಳನ್ನು ಒತ್ತಾಯ ಪೂರ್ವಕವಾಗಿ ಒಂದು ಜಾಗದಲ್ಲಿ ಕೂರಿಸುತ್ತಾರೆ. ಇಲ್ಲದಿದ್ದರೆ ಅವರು ಹೋದಲೆಲ್ಲಾ ಅವರ ಬೆನ್ನ ಹಿಂದೆ ಹೋಗುವುದನ್ನು ಮಾಡುತ್ತಾರೆ. ಇದು ಸರಿಯಲ್ಲ. ಮಕ್ಕಳು ತಪ್ಪು ಮಾಡಿದರೇನೆ ಕಲಿಯೋದಕ್ಕೆ ಸಾಧ್ಯ. ಮಕ್ಕಳು ಬಿದ್ದರೆ ಅವರಾಗೇ ಏಳುವವರೆಗೆ ಸುಮ್ಮನಿರಿ ಇದೆಲ್ಲಾ ಅವರ ಕಲಿಕೆಯ ಹಂತಗಳು.
2. ಬೇರೆ ಮಕ್ಕಳ ಜೊತೆಗೆ ಹೋಲಿಕೆ ಮಾಡಬೇಡಿ
ಮಗು ಶಾಲೆಗೆ ಹೋಗಲು ಶುರು ಮಾಡಿದಾಗ ಪೋಷಕರು ಮಾಡುವ ದೊಡ್ಡ ತಪ್ಪು ಮಗುವಿನ ಸ್ನೇಹಿತರ ಜೊತೆಗೆ ಆಕೆಯ/ಆತನ ಅಂಕವನ್ನು ಹೋಲಿಕೆ ಮಾಡುವುದು. ಅದನ್ನೇ ಪದೇ ಪದೇ ಹೇಳಿ ನಿಂದಿಸುವುದು. ಇದು ನಿಮ್ಮ ಮಗುವಿನ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ. ಸುಖಾ ಸುಮ್ಮನೇ ಇನ್ನೊಂದು ಮಗುವಿನ ಜೊತೆಗೆ ನಿಮ್ಮ ಮಗುವನ್ನು ಹೋಲಿಸುವುದನ್ನು ಬಿಟ್ಟು ನಿಮ್ಮ ಮಗುವಿನ ಕೌಶಲ್ಯಗಳನ್ನು ಗುರುತಿಸಿ ಅವರಿಗೆ ಯಾವುದರ ಮೇಲೆ ಆಸಕ್ತಿ ಇದೆಯೋ ಆ ಬಗ್ಗೆ ಅವರಿಗೆ ಪ್ರೋತ್ಸಾಹ ನೀಡಿ.
3. ಮಕ್ಕಳ ಮೇಲೆ ಒತ್ತಡ ಹೇರಬೇಡಿ
ಈ ಜಗತ್ತಿನಲ್ಲಿ ಪರಿಪೂರ್ಣ ವ್ಯಕ್ತಿ ಅಂತ ಯಾರೂ ಇಲ್ಲ. ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ನ್ಯೂನ್ಯತೆ ಇದ್ದೇ ಇರುತ್ತದೆ. ಹೀಗಾಗಿ ಮಕ್ಕಳ ಮೇಲೆ ನಿಯಮಗಳನ್ನು ಹೇರಬೇಡಿ. ಹೀಗೆ ಇರಬೇಕು. ಹಾಗೇ ಇರಬೇಕು ಎಂದು ನಿಯಂತ್ರಣ ಹೇರುವುದು ತಪ್ಪು. ಈ ರೀತಿ ಮಾಡಿದರೆ ಮಕ್ಕಳಿಗೆ ಮನೆಯಲ್ಲಿ ಉಸಿರುಗಟ್ಟಿದ ವಾತಾವರಣ ನಿರ್ಮಾಣವಾಗುತ್ತದೆ. ಇದರಿಂದ ಮಕ್ಕಳು ಖಿನ್ನತೆಯಂತಹ ಗಂಭೀರ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.
4. ಮಕ್ಕಳು ಮಾಡಿದ ತಪ್ಪುಗಳನ್ನು ಒಪ್ಪಿಕೊಳ್ಳಬೇಡಿ
ನಿಮ್ಮ ಮಗು ತಪ್ಪು ಮಾಡಿದ ಪ್ರತಿಸಾರಿಯು ಮಗು ಮಾಡಿದ್ದು ಸರಿ ಎಂದು ಅವರಿಗೆ ಪ್ರೋತ್ಸಾಹ ನೀಡಬೇಡಿ. ಇದು ಅವರಿಗೆ ಮತ್ತಷ್ಟು ದೊಡ್ಡ ತಪ್ಪುಗಳನ್ನು ಮಾಡೋದಕ್ಕೆ ಅವಕಾಶ ಕೊಟ್ಟಂತಾಗುತ್ತದೆ. ಹೀಗಾಗಿ ತಪ್ಪು ಮಾಡಿದಾಗ ಅದನ್ನು ತಿದ್ದಿ. ಹಾಗೂ ಸರಿ ಯಾವುದು, ತಪ್ಪು ಯಾವುದು ಅನ್ನೋದನ್ನ ತಿಳಿಹೇಳಿ. ಮುಂದೆ ಅವರು ಆ ತಪ್ಪನ್ನು ಪುನರಾವರ್ತಿಸದಂತೆ ನೋಡಿಕೊಳ್ಳಿ.
5. ಮಗುವಿನ ಶಾಲೆಯ ಕಡೆಗೂ ನಿಮ್ಮ ಗಮನವಿರಲಿ
ಲಕ್ಷಾಂತರ ರೂಪಾಯಿ ಕೊಟ್ಟು ಮಕ್ಕಳನ್ನು ಶಾಲೆಗೆ ಕಳುಹಿಸಿದರೆ ಸಾಕಾಗುವುದಿಲ್ಲ. ಮಕ್ಕಳು ಶಾಲೆಯಲ್ಲಿ ಏನು ಮಾಡುತ್ತಿದ್ದಾರೆ? ಹೇಗೆ ಕಲಿಯುತ್ತಿದ್ದಾರೆ? ಅನ್ನೋದರ ಬಗ್ಗೆ ಆಗಾಗ ಶಾಲೆಗೆ ಭೇಟಿ ಕೊಟ್ಟು ಮಾಹಿತಿ ಪಡೆದುಕೊಳ್ಳಿ. ಅಷ್ಟೇ ಅಲ್ಲ, ಮಕ್ಕಳನ್ನು ಸ್ನೇಹಿತರಂತೆ ಮಾತನಾಡಿಸಿ ಶಾಲೆಯಲ್ಲಿ ಆಗುತ್ತಿರುವ ಚಟುವಟಿಕೆಯ ಬಗ್ಗೆ ಮಾಹಿತಿ ಪಡೆದುಕೊಳ್ಳಿ. ಒಂದು ವೇಳೆ ಅವರಿಗೆ ಏನಾದರೂ ತೊಂದರೆ ಆಗುತ್ತಿದ್ದರೆ ಅದನ್ನು ಸರಿಪಡಿಸಲು ಪ್ರಯತ್ನಿಸಿ.
6. ಅವರ ಆಯ್ಕೆ ಕ್ಷೇತ್ರದಲ್ಲೇ ಬೆಳೆಯಲು ಅವಕಾಶ ನೀಡಿ
ಮಕ್ಕಳಿಗೆ ಬರೀ ಓದು ಓದು ಅಂತ ಹಿಂಸೆ ಮಾಡಬೇಡಿ. ಅವರ ಆಯ್ಕೆಯ ಕ್ಷೇತ್ರದಲ್ಲಿ ಬೆಳೆಯಲು ಪ್ರೋತ್ಸಾಹಿಸಿ. ಪ್ರತಿಯೊಂದು ಮಗುವಿನಲ್ಲೂ ಒಂದಲ್ಲ ಒಂದು ಕಲೆ ಇದ್ದೇ ಇರುತ್ತದೆ. ಆದರೆ ಅದನ್ನು ಗುರುತಿಸುವುದು ಪೋಷಕರ ಕರ್ತವ್ಯ.
7. ಗಂಡ-ಹೆಂಡತಿ ಇಬ್ಬರು ಮಕ್ಕಳ ಮುಂದೆ ಜಗಳವಾಡಬೇಡಿ
ಕೆಲವೊಂದು ಮನೆಗಳಲ್ಲಿ ಗಂಡ-ಹೆಂಡತಿ ಮಕ್ಕಳ ಮುಂದೆ ಜಗಳವಾಡೋದನ್ನು ನಾವು ನೋಡಿರ್ತೀವಿ. ಇದು ಮಕ್ಕಳ ಮನಸ್ಸಿನ ಮೇಲೆ ನೇರ ಪರಿಣಾಮ ಬೀರುತ್ತದೆ. ಹಾಗೂ ಅವರು ಖಿನ್ನತೆಗೊಳಗಾಗುವ ಸಾಧ್ಯತೆ ಕೂಡ ಹೆಚ್ಚಿರುತ್ತದೆ. ಇಲ್ಲವಾದರೆ ನಿಮ್ಮ ಗುಣವನ್ನೇ ಮಕ್ಕಳು ಕಲಿತುಕೊಳ್ಳುತ್ತಾರೆ. ದೊಡ್ಡವರಾದ ಮೇಲೆ ಮಕ್ಕಳು ತಂದೆ-ತಾಯಿಗೆ ಬೆಲೆ ಕೊಡೋದಿಲ್ಲ. ನಿಮ್ಮ ಗುಣಗಳನ್ನು ಅವರು ಕೂಡ ಮೈಗೂಡಿಸಿಕೊಳ್ಳುತ್ತಾರೆ. ಹೀಗಾಗಿ ಮಕ್ಕಳ ಮುಂದೆ ಜಗಳವಾಡುವುದು ತಪ್ಪು.
8. ಮಕ್ಕಳಿಗೆ ಉತ್ತಮ ಬಾಲ್ಯ ನೀಡಿ
ಪ್ರತಿಯೊಬ್ಬ ವ್ಯಕ್ತಿ ಜೀವನದಲ್ಲಿ ಬಾಲ್ಯ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ಕೆಲವೊಂದು ಮನೆಗಳಲ್ಲಿ ಪೋಷಕರು ದುಡಿಯುವ ಭರದಲ್ಲಿ ಮಕ್ಕಳನ್ನು ಬೇಬಿ ಸಿಟ್ಟಿಂಗ್ ಅಥವಾ ಪ್ಲೇ ಹೋಂಗಳಲ್ಲಿ ಬೆಳೆಸುತ್ತಾರೆ. ಹೀಗಾಗಿ ಮಕ್ಕಳಿಗೆ ಪೋಷಕರ ಪ್ರೀತಿಯೇ ಸಿಗುವುದಿಲ್ಲ. ಬಾಲ್ಯದ ಆಟ, ತುಂಟಾಟ ಯಾವುದು ಕೂಡ ಮಕ್ಕಳ ಪಾಲಿಗೆ ಇಲ್ಲದಾಗುತ್ತದೆ. ಹೀಗಾಗಿ ತಂದೆ-ತಾಯಿ ಇಬ್ಬರಲ್ಲಿ ಒಬ್ಬರಾದರೂ ಮನೆಯಲ್ಲಿ ಇದ್ದು ಮಕ್ಕಳಿಗೆ ಸುಂದರವಾದ ಬಾಲ್ಯ ನೀಡಿ.
ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಗಾದೆ ಮಾತಿನಂತೆ ಚಿಕ್ಕ ವಯಸ್ಸಿನಲ್ಲಿ ನಾವು ಮಕ್ಕಳಿಗೆ ಯಾವ ಮೌಲ್ಯಗಳನ್ನು ನೀಡುತ್ತೇವೆಯೋ ಅದನ್ನೇ ಅವರು ಮೈಗೂಡಿಸಿಕೊಳ್ಳುತ್ತಾರೆ. ಹೀಗಾಗಿ ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು ನೀಡಿ ಬೆಳೆಸುವುದು ಪೋಷಕ ಕರ್ತವ್ಯ.



Click it and Unblock the Notifications














