Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗರ್ಭಿಣಿಯರು ಶೀತವಾದರೆ ಈ ಮನೆಮದ್ದು ಟ್ರೈ ಮಾಡಿ ರಿಲ್ಯಾಕ್ಸ್ ಅನಿಸುವುದು
ಸಾಮಾನ್ಯವಾಗಿ ಶೀತ ಅಥವಾ ನೆಗಡಿ ಆದಾಗ ಔಷಧ ತೆಗೆದುಕೊಳ್ಳುವುದು ಸಹಜ. ಆದರೆ ಗರ್ಭವಸ್ಥೆಯಲ್ಲಿ ಇರುವ ಹೆಣ್ಣು ಮಕ್ಕಳ ಸ್ಥಿತಿ ಬೇರೆಯೇ ಆಗಿರುತ್ತದೆ. ಸಣ್ಣಪುಟ್ಟ ಶೀತ, ನೆಗಡಿ ,ಜ್ವರ ಕಾಣಿಸಿಕೊಂಡಾಗ ಸುಲಭವಾಗಿ ಔಷಧಗಳನ್ನು ಸೇವಿಸಲು ಸಾಧ್ಯವಿಲ್ಲ. ಇದಕ್ಕೆ ಮುಖ್ಯವಾಗಿ ವೈದ್ಯರ ಸಲಹೆ ಬೇಕು. ಅಷ್ಟೇ ಅಲ್ಲದೆ ಗರ್ಭಾವಸ್ಥೆಯಲ್ಲಿ ಇರುವ ಸ್ತ್ರೀ ಹೆಚ್ಚಾಗಿ ಔಷಧಿಯನ್ನು ಸೇವನೆ ಮಾಡಿದರೆ ಅದು ಹೊಟ್ಟೆಯಲ್ಲಿ ಇರುವ ಮಗುವಿನ ಮೇಲೆ ಪರಿಣಾಮ ಬೀರುವುದರಿಂದ ಕೂಡ ಅಷ್ಟಾಗಿ ಔಷಧ ಸೇವನೆಗೆ ಸಲಹೆ ಮಾಡುವುದಿಲ್ಲ.

ಗರ್ಭಾವಸ್ಥೆ ಎನ್ನುವುದು ಹೆಣ್ಣಿನಲ್ಲಿ ಆಗುವಂತಹ ಬಹಳ ದೊಡ್ಡ ಬದಲಾವಣೆ. ಈ ಸಂದರ್ಭದಲ್ಲಿ ಹಾರ್ಮೋನ್ ಬದಲಾವಣೆಗಳಿಂದ ದೇಹದಲ್ಲಿ ಸಾಕಷ್ಟು ವ್ಯತ್ಯಾಸಗಳು ಆಗುತ್ತವೆ. ಇಂತಹ ಸಂದರ್ಭದಲ್ಲಿ ಮಹಿಳೆ ಆರೋಗ್ಯವಾಗಿ ಇರುವುದು ಬಹಳ ಮುಖ್ಯ. ಆದಾಗ್ಯೂ ಸ್ತ್ರೀಯರಿಗೆ ಶೀತ ಅಥವಾ ನೆಗಡಿ ಕಾಣಿಸಿಕೊಳ್ಳುವುದು ಸಹಜ ಅದರಲ್ಲೂ ಈಗ ಚಳಿಗಾಲ ಆರಂಭವಾಗಿದೆ. ಇಂತಹ ಸಂದರ್ಭದಲ್ಲಿ ಶೀತ ಅಥವಾ ಜ್ವರ ಉಂಟಾದಾಗ ಯಾವ ರೀತಿ ಮುತುವರ್ಜಿ ವಹಿಸಬೇಕು ಎಂದು ವೈದ್ಯರು ಕೂಡ ಸಲಹೆ ನೀಡುತ್ತಾರೆ.
ಗರ್ಭವಸ್ಥೆಯಲ್ಲಿ ಶೀತ ಉಂಟಾದಾಗ ಸ್ತ್ರೀಯರು ಅನುಸರಿಸಬೇಕಾದ ಸಲಹೆಗಳು!
ಮಹಿಳೆ ಗರ್ಭಿಣಿಯಾದಾಗ ದೇಹದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತವೆ. ಇಂತಹ ಸಂದರ್ಭದಲ್ಲಿ ಶೀತ ಅಥವಾ ನೆಗಡಿ ಜ್ವರ ಮೊದಲ ಸಮಸ್ಯೆಗಳು ಮೊದಲ ತ್ರೈಮಾಸಿಕದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಹಾಗಂದ ಮಾತ್ರಕ್ಕೆ ರಾಸಾಯನಿಕ ಔಷಧಗಳನ್ನ ಕೂಡ ಸೇವಿಸಲು ವೈದ್ಯರು ಈ ಸಂದರ್ಭದಲ್ಲಿ ಸಲಹೆ ನೀಡುವುದಿಲ್ಲ. ಹಾಗಾಗಿ ಹೆಚ್ಚು ಔಷಧಗಳನ್ನು ಸೇವಿಸುವುದಕ್ಕಿಂತ ನೀವು ಹೇಗೆ ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳಬಹುದು ಎನ್ನುವುದನ್ನು ನೋಡೋಣ.
ದೇಹ ಡಿ-ಹೈಡ್ರೇಟ್ ಆಗದಂತೆ ನೋಡಿಕೊಳ್ಳಿ!
ಗರ್ಭಾವಸ್ಥೆಯಲ್ಲಿ ಇರುವಾಗ ಸ್ತ್ರೀಯರು ಎರಡು ಜೀವಕ್ಕೆ ಬೇಕಾಗುವಷ್ಟು ನೀರನ್ನು ಕುಡಿಯಬೇಕು ಅಂದರೆ ತಮಗಾಗಿ ಹಾಗೂ ತಮ್ಮ ಹೊಟ್ಟೆಯಲ್ಲಿ ಇರುವ ಮಗುವಿಗಾಗಿಯೂ ಕೂಡ ನೀರು ಸೇವನೆ ಮಾಡುವುದು ಬಹಳ ಮುಖ್ಯ. ಯಾವುದೇ ಕಾರಣಕ್ಕೂ ದೇಹ ಡಿ ಹೈಡ್ರೇಟ್ ಆಗಲು ಬಿಡಬೇಡಿ. ನೀರು ಮಾತ್ರವಲ್ಲದೆ ತಾಜಾ ಹಣ್ಣಿನ ಜ್ಯೂಸ್ ಕೂಡ ಸೇವಿಸಿದರೆ ದೇಹ ಹೈಡ್ರೇಟ್ ಆಗಿರುತ್ತದೆ.
ಮನೆಯಲ್ಲಿಯೇ ಮಾಡಿಕೊಳ್ಳಿ ಸ್ಟೀಮ್ ಚಿಕಿತ್ಸೆ!
ಗರ್ಭಾವಸ್ಥೆಯ ಸಮಯದಲ್ಲಿ ಮೂಗು ಕಟ್ಟಿದಂತೆ ಆದಾಗ ಮನೆಯಲ್ಲಿ ಬಿಸಿನೀರಿನ ಹಬೆ ತೆಗೆದುಕೊಳ್ಳುವುದು ಒಳ್ಳೆಯದು. ಒಂದು ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿ ಆ ಹಬೆಗೆ ಮುಖವನ್ನು ಒಡ್ಡಿ ಹಬೆಯನ್ನು ತೆಗೆದುಕೊಳ್ಳಬೇಕು. ಮುಖನೀರಿನೊಂದಿಗೆ ನೇರ ಸಂಪರ್ಕ ಹೊಂದಿದಾಗ ಉಸಿರಾಡುವ ಪ್ರಕ್ರಿಯೆ ಸುಲಭವಾಗುತ್ತದೆ ಸುಮಾರು ಎರಡರಿಂದ ಐದು ನಿಮಿಷಗಳ ಕಾಲ ಮಾಡಬಹುದು.
ವಿಶ್ರಾಂತಿ ತೆಗೆದುಕೊಳ್ಳುವುದು!
ನೀವು ಗರ್ಭಿಣಿಯಾಗಿದ್ದಾಗಲೂ ಕೂಡ ಕೆಲಸಕ್ಕೆ ಹೊರಗಡೆ ಹೋಗುವುದಿದ್ದರೆ ಹೊರಗಿನ ಧೂಳು ಪ್ರದೂಷಣೆಯಿಂದ ನೆಗಡಿಯಾಗುವ ಸಾಧ್ಯತೆ ಇರುತ್ತದೆ. ಕಚೇರಿಗೆ ರಜೆ ಹಾಕಿ ಮನೆಯಲ್ಲಿಯೇ ಉಳಿದುಕೊಳ್ಳಲು ಪ್ರಯತ್ನಿಸಿ. ನಿಮ್ಮ ದೇಹಕ್ಕೆ ಸಾಕಷ್ಟು ವಿಶ್ರಾಂತಿ ನೀಡಿದರೆ ಆಗ ಅನಾರೋಗ್ಯದ ಸಮಸ್ಯೆ ನಿವಾರಣೆ ಆಗುತ್ತದೆ.
ಬೆಚ್ಚಗಿನ ನೀರಿನ ಉಪಯೋಗ!
ಶೀತ ಆರಂಭವಾಗುವುದಕ್ಕೂ ಮೊದಲು ಅಥವಾ ಶೀತ ಇರುವಾಗ ಗಂಟಲು ನೋವು ಉಂಟಾಗುವುದು ಸಹಜ. ಈ ಕಾರಣದಿಂದಾಗಿ ಉಗುರು ಬೆಚ್ಚಗಿನ ನೀರಿಗೆ ಉಪ್ಪನ್ನು ಹಾಕಿ ತಪ್ಪದೆ ಗಾರ್ಗ್ಲಿಂಗ್ ಮಾಡಿ. ಈ ರೀತಿ ಮಾಡೋದ್ರಿಂದ ಗಂಟಲಲ್ಲಿ ಉಂಟಾಗುವ ಕಿರಿಕಿರಿ ನಿವಾರಣೆ ಆಗುತ್ತದೆ.
ಜೇನುತುಪ್ಪ ಮತ್ತು ನಿಂಬೆರಸ!
ನಿಂಬೆರಸ ದೇಹದಲ್ಲಿ ಡಿ ಹೈಡ್ರೇಟ್ ಆಗದಂತೆ ಕಾಪಾಡುತ್ತದೆ. ಜೊತೆಗೆ ಜೇನುತುಪ್ಪ ಕೂಡ ಸಾಕಷ್ಟು ಪೌಷ್ಟಿಕಾಂಶವನ್ನು ಹೊಂದಿರುವುದರಿಂದ ಉಗುರು ಬೆಚ್ಚಗಿನ ನೀರಿಗೆ ಜೇನುತುಪ್ಪ ಹಾಗೂ ನಿಂಬೆರಸ ಬೆರೆಸಿ ಕುಡಿಯುವುದರಿಂದ ಕೆಮ್ಮು ಕಡಿಮೆಯಾಗುತ್ತದೆ.
ಮಲಗುವಾಗ ದಿಂಬನ್ನು ಬಳಸುವುದು!
ಗರ್ಭವಸ್ಥೆಯಲ್ಲಿ ಶೀತ ಹೆಚ್ಚಾಗಿ ಮೂಗು ಕಟ್ಟಿಕೊಂಡರೆ ಅಥವಾ ಮೂಗಿನಿಂದ ನೀರು ಇಳಿಯುತ್ತಿದ್ದರೆ ನೀವು ನಿಮ್ಮ ತಲೆಗೆ ಭಾಗವನ್ನು ಸ್ವಲ್ಪ ಎತ್ತರದಲ್ಲಿ ಇಡಬೇಕು ಅಂದರೆ ಮಲಗುವಾಗ ದಿಂಬನ್ನು ಬಳಸಿ ಮಲಗಿದರೆ ಆಗ ಸುಲಭವಾಗಿ ಉಸಿರಾಡಿಸಲು ಸಾಧ್ಯವಾಗುತ್ತದೆ.
ಗರ್ಭವಸ್ಥೆಯಲ್ಲಿ ಕೆಲವು ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು. ಉದಾಹರಣೆಗೆ ಶೀತ ಅಥವಾ ನೆಗಡಿ ಉಂಟಾದಾಗ ಅರಿಶಿಣ ಹಾಲನ್ನು ಸೇವಿಸುವುದು ಸಾಮಾನ್ಯ. ಹಾಗಂದ ಮಾತ್ರಕ್ಕೆ ಗರ್ಭಿಣಿ ಸ್ತ್ರೀಯರು ಅರಿಶಿನ ಹಾಲನ್ನು ಆಗಾಗ ಕುಡಿಯುವುದು ಒಳ್ಳೆಯದಲ್ಲ. ಇದು ಈಸ್ಟ್ರೋಜನ್ ಮಟ್ಟದಲ್ಲಿ ಬದಲಾವಣೆ ತಂದು ರಕ್ತಸ್ರಾವದಂತಹ ಸಮಸ್ಯೆಗೆ ಕಾರಣವಾಗಬಹುದು.
ಗರ್ಭವಸ್ಥೆ ಅಥವಾ ಪ್ರಸವಪೂರ್ವ ಆರೈಕೆ ಎನ್ನುವುದು ಬಹಳ ಮುಖ್ಯವಾದ ವಿಚಾರ. ನೀವು ಸರಿಯಾದ ರೀತಿಯಲ್ಲಿ ಪೌಷ್ಟಿಕ ಆಹಾರವನ್ನು ಸೇವನೆ ಮಾಡಬೇಕು. ಸರಿಯಾದ ಪ್ರಮಾಣದಲ್ಲಿ ವಿಶ್ರಾಂತಿ ಪಡೆದುಕೊಳ್ಳಬೇಕು. ಉಳಿದ ಸಮಯದಲ್ಲಿ ನಿದ್ರೆ ಮಾಡದೆ ನಿದ್ರಾಹೀನತೆ ಅನುಭವಿಸಿದಂತೆ ಗರ್ಭಾವಸ್ಥೆಯಲ್ಲಿಯೂ ಕೂಡ ನಿದ್ರಾಹೀನತೆ ಉಂಟಾದರೆ ಅದು ನಿಮ್ಮ ಮಗುವಿನ ಆರೋಗ್ಯದ ಮೇಲೂ ಕೂಡ ಪರಿಣಾಮ ಬೀರುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಿ.
ಗರ್ಭಿಣಿ ಸ್ತ್ರೀ ಯಾವುದೇ ತಪ್ಪಾದ ಆಹಾರ ಕ್ರಮವನ್ನು ಅಥವಾ ಜೀವನ ಕ್ರಮವನ್ನು ರೂಡಿಸಿಕೊಂಡರೆ ಅದು ನೇರವಾಗಿ ಪರಿಣಾಮ ಬೀರುವುದು ಹೊಟ್ಟೆಯಲ್ಲಿ ಇರುವ ಮಗುವಿನ ಮೇಲೆ. ಮಗುವಿನ ಆರೋಗ್ಯವನ್ನು ನಿಮ್ಮ ಕೆಟ್ಟ ಆಹಾರ ಪದ್ಧತಿ ಹಾಳು ಮಾಡಬಹುದು ಅಥವಾ ಮಗುವಿನ ಮೆದುಳಿನ ಬೆಳವಣಿಗೆಯನ್ನು ಕುಂಠಿತಗೊಳಿಸಬಹುದು ಹಾಗಾಗಿ ಗರ್ಭಿಣಿ ಸ್ತ್ರೀಯರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಖುಷಿಯಿಂದ ಇರುವುದು ಜೊತೆಗೆ ಆರೋಗ್ಯಕರವಾಗಿ ಇರುವುದು ಬಹಳ ಮುಖ್ಯ. ಗರ್ಭಾವಸ್ಥೆಯಲ್ಲಿ ನಿಮ್ಮ ದೇಹದಲ್ಲಿ ಯಾವುದೇ ಬದಲಾವಣೆ ಕಾಣಿಸಿಕೊಂಡಾಗ ವೈದ್ಯರ ಸಲಹೆ ಪಡೆದುಕೊಳ್ಳುವುದನ್ನು ಮರೆಯಬೇಡಿ.



Click it and Unblock the Notifications











