ಮಕ್ಕಳ ದಿನಾಚರಣೆ: ಈಗೀನ ಪೋಷಕರು ಮಾಡುತ್ತಿರುವ 3 ತಪ್ಪುಗಳಿವು, ಹೀಗೆ ಮಾಡಲೇಬಾರದು ಅಂತಾರೆ ಮನಶಾಸ್ತ್ರಜ್ಞರು

ಮುದ್ದು ಮಕ್ಕಳಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳು.... ಈ ದಿನದ ವಿಶೇಷ ಲೇಖನವಾಗಿ ನಾವಿಲ್ಲಿ ಮಕ್ಕಳನ್ನು ಬೆಳೆಸುವಲ್ಲಿ ಈಗೀನ ಪೋಷಕರು ಮಾಡುತ್ತಿರುವ ತಪ್ಪುಗಳು, ಅದಕ್ಕೆ ಹೇಗೆ ಪರಿಹಾರ ಕಂಡುಕೊಳ್ಳಬಹುದು ಎಂಬುವುದಕ್ಕೆ ಖ್ಯಾತ ಮನಶಾಸ್ತ್ರಜ್ಞ ಡಾ. ಹರ್ಷ ಜಿಟಿ (Consultant, Psychiatrist, Manipal Hospital, Yeshwanthpur)ಯವರು ತುಂಬಾನೇ ಮನ ಮುಟ್ಟುವಂತೆ ವಿವರಿಸಿದ್ದಾರೆ ನೋಡಿ.

1. ಕೆಲಸದ ಬ್ಯುಸಿಯಲ್ಲಿ ಮಕ್ಕಳಿಗೆ ಸಮಯ ಕೊಡದಿರುವುದು
ಬಹುತೇಕ ಕುಟುಂಬಗಳಲ್ಲಿ ಗಂಡ ಹೆಂಡತಿ ಇಬ್ಬರು ಹೊರಗಡೆ ದುಡಿಯುತ್ತಿರುತ್ತಾರೆ ಇದರಿಂದಾಗ ಮಕ್ಕಳಿಗೆ ಹೆಚ್ಚಿನ ಸಮಯ ಕೊಡಲು ಸಾಧ್ಯವಾಗುತ್ತಿಲ್ಲ , ಈ ರೀತಿಯಾದಾಗ ಮಕ್ಕಳ ಮೇಲೆ ಪರಿಣಾಮ ಬೀರುವುದೇ ಎಂದು ಕೇಳಿದಾಗ ಮನಶಾಸ್ತ್ರಜ್ಞರು ಮಕ್ಕಳಿಗೆ ಸಮಯ ಕೊಡುವುದು ಏಕೆ ಅವಶ್ಯಕ ಎಂಬುವುದನ್ನು ಈ ರೀತಿ ಹೇಳುತ್ತಾರೆ.

Childrens Day

ಪೋಷಕರಿಗೆ ಮನಶಾಸ್ತ್ರಜ್ಞ ಹರ್ಷಾ ಜಿಟಿ ಹೇಳುವುದೇನಂದರೆ
ಮಕ್ಕಳ ಬೆಳವಣಿಗೆಯನ್ನು ನಾವು ಎರಡು ಹಂತಗಳಾಗಿ ವಿಂಗಡಸಬಹುದು
10-5 ವರ್ಷದವರೆಗೆ ಒಂದು ಹಂತ 6-18 ವರ್ಷದವರೆಗೆ ಒಂದು

ಅದರಲ್ಲಿ ಮೊದಲ ಹಂತದಲ್ಲಿ ಪೋಷಕರು ಮಕ್ಕಳಿಗೆ ಸಮಯ ನೀಡ ಬೇಕಾಗಿರುವುದು ಅತ್ಯಾವಶ್ಯಕ. ನಿಮ್ಮದು ಏನೇ ಕೆಲಸವಿರಲಿ, ನಿಮ್ಮ ಮಗುವಿನ ಜೊತೆಗೆ ಕಳೆಯುವುದು ಮೊದಲ ಆದ್ಯತೆ ಆಗಿರಬೇಕು. ಏಕೆಂದರೆ ಮಕ್ಕಳು ಆ ಹಂತದಲ್ಲಿ ತುಂಬಾನೇ ಕಲಿಯುತ್ತಾರೆ, ಅವರು ಮಾತನಾಡಲು ಕಲಿಯುವ ಪ್ರಾಯವದು, ಆ ಸಮಯದಲ್ಲಿ ಮಕ್ಕಳಿಗೆ ಸಮಯ ಕೊಡದಿದ್ದರೆ ಅವರಲ್ಲಿ ಸ್ಪೀಚ್‌ ಡಿಲೇ ಅಂದರೆ ಮಾತನಾಡುವುದು ಕಲಿಯುವುದು ತುಂಬಾನೇ ತಡವಾಗುತ್ತದೆ. ನಮ್ಮ ಹಾಗೂ ಮಗುವಿನ ನಡುವೆ ನಡೆಯುವ ಸಂವಹನದಿಂದಾಗಿ ಮಗು ಮಾತು ಕಲಿಯುತ್ತದೆ.

6-18 ಕುತೂಹಲದ ಪ್ರಾಯ
ಈ ಪ್ರಾಯದಲ್ಲಿ ಮಕ್ಕಳಲ್ಲಿ ಕುತೂಹಲ ತುಂಬಾನೇ ಅಧಿಕವಿರುತ್ತದೆ, ಪೋಷಕರು ಮಕ್ಕಳ ಜೊತೆ ಸಮಯ ಕಳೆಯುವ ಮೂಲಕ ಅವರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಸಬೇಕು, ಅದರಲ್ಲೂ ಹದಿಹರೆಯದ ಪ್ರಾಯಕ್ಕೆ(12-18 ವರ್ಷ) ಬಂದಾಗ ಮಕ್ಕಳಲ್ಲಿ ಕೆಲ ಹಾರ್ಮೋನ್‌ಗಳ ಬದಲಾವಣೆಯೂ ಆಗುವುದು, ಈ ಅವಧಿಯಲ್ಲೂ ಪೋಷಕರು ಮಕ್ಕಳ ಕಡೆ ಹೆಚ್ಚಿನ ಗಮನ ನೀಡಬೇಕಾಗಿದೆ.

2. ಮಕ್ಕಳಿಗೆ ಶಿಕ್ಷಿಸಿ ಬುದ್ಧಿಕಲಿಸುವುದು
ಮಕ್ಕಳು ನಮ್ಮ ಮಾತು ಕೇಳುವುದೇ ಇಲ್ಲ, ಅವರ ತಪ್ಪುಗಳನ್ನು ಅವರನ್ನು ಶಿಕ್ಷಿಸುವ ಮೂಲಕ ಸರಿಪಡಿಸಬಹುದು ಎಂಬ ಆಲೋಚನೆ ಕೆಲ ಪೋಷಕರಿಗಿದೆ, ಅದಕ್ಕೆ ಮನಶಾಸ್ತ್ರಜ್ಞರು ಹೇಳುವುದೇನಂದರೆ
ಮಕ್ಕಳನ್ನು ಚಿಕ್ಕ-ಚಿಕ್ಕ ವಿಷಯಗಳಿಗೆ ಹೊಡೆಯುವುದು, ಶಿಕ್ಷಿಸುವುದು ಮಾಡಬಾರದು. ಅವರಿಗೆ ತಾವು ತಪ್ಪು ಮಾಡಿದರೆ ನಮಗೆ ಶಿಕ್ಷೆಯಾಗುತ್ತದೆ ಎಂಬ ಭಯವಿರಬೇಕು, ಆದರೆ ಹೊಡೆಯುತ್ತಿದ್ದರೆ ಮಕ್ಕಳಲ್ಲಿ ಆ ಭಯ ದೂರಾಗುವುದು, ಇದರಿಂದ ಹೊಡೆದರೂ ಅವರು ಬದಲಾಗುವುದಿಲ್ಲ. ಆದ್ದರಿಂದ ಮಕ್ಕಳನ್ನು ಹೊಡೆಯದೆ ಅವರಿಗೆ ಅವರ ತಪ್ಪುಗಳನ್ನು ತಿಳಿಸುವ ಕೆಲಸವನ್ನು ಪೋಷಕರು ಮಾಡಬೇಕು ಎಂಬುವುದಾಗಿ ಹೇಳಿದ್ದಾರೆ.

3. ಮಕ್ಕಳು ಏನ ಕೇಳುತ್ತಾರೋ ಎಲ್ಲವೂ ಕೊಡಿಸುವುದು
ಈಗೀನ ಪೋಷಕರು ನಾವು ಕಷ್ಟಪಟ್ಟಂತೆ ಮಕ್ಕಳು ಪಡಬಾರದು ಎಂದು ಮಕ್ಕಳು ಕೇಳಿದ್ದೆಲ್ಲಾ ಕೊಡಿಸುತ್ತಾರೆ, ಇದು ಸರಿಯೇ? ಎಂದು ಕೇಳಿದಾಗ ಈ ಬಗ್ಗೆ ಡಾ. ಹರ್ಷ ಈ ರೀತಿ ನಮಗೆ ತಿಳಿಸಿದ್ದು ಏನೆಂದರೆ

ಮಕ್ಕಳಿಗೆ ಅವರು ಕೇಳಿದ್ದೆಲ್ಲಾ ಕೊಡಿಸುವುದು ಮಾಡಲೇಬಾರದು,ಅವರು ಕೇಳಿದ್ದೆಲ್ಲಾ ಅವರಿಗೆ ಸಿಗುತ್ತಿದೆ ಎಂದಾದಾಗ ಅವರಿಗೆ ಏನಾದರೂ ಸಿಗದೆ ಹೋಗದೆ ತುಂಬಾನೇ ಬೇಸರಪಟ್ಟುಕೊಳ್ಳುತ್ತಾರೆ, ಒಂದು ಚಿಕ್ಕ ವಿಷಯ ಸಹಿಸುವ ಮನಸ್ಥುತಿ ಇರುವುದಿಲ್ಲ. ಇನ್ನು ಕೆಲ ಪೋಷಕರು ಮಕ್ಕಳಿಗೆ ಏನೂ ತೊಂದರೆಯಾಗಬಾರದು ಅವರಿಗೆ ಒಂದಿಷ್ಟೂ ಕಷ್ಟದ ಅರಿವು ಉಂಟಾಗದಂತೆ ನೋಡಿಕೊಳ್ಳುತ್ತಾರೆ, ಅದು ಕೂಡ ತಪ್ಪು, ಮಕ್ಕಳಿಗೆ ಏನಾದರೂ ಸಮಸ್ಯೆ ಎದುರಾದರೆ ಮೊದಲಿಗೆ ಅವರೇ ಎದುರಿಸಲು ಬಿಡಿ, ಆವಾಗ ಅವರಲ್ಲಿ ಸಮಸ್ಯೆಗಳನ್ನು ಹೇಗೆ ಎದುರಿಸಬೇಕೆಂಬ ಕೌಶಲ್ಯ ಬರುತ್ತದೆ, ಮಕ್ಕಳಿಗೆ ಟ್ರೈ ಮಾಡಲು ಬಿಡಬೇಕು, ಆವಾಗ ಮಾತ್ರ ಅವರು ಕಲಿಯುತ್ತಾರೆ. ಹಾಗಾಗಿ ಓವರ್ ಪ್ಯಾಂಪರಿಂಗ್ ಒಳ್ಳೆಯ ಪೋಷಕರ ಲಕ್ಷಣವಲ್ಲ ಎಂಬುವುದಾಗಿ ಹೇಳುತ್ತಾರೆ.

ಮಗುವಿನ ಮಾನಸಿಕ ಆರೋಗ್ಯ ವೃದ್ಧಿಸಲು ಮನಶಾಸ್ತ್ರಜ್ಞರು ನೀಡಿರುವ ಟಿಪ್ಸ್
* ಮಕ್ಕಳಿಗೆ ಸಮಯ ನೀಡಿ
* ಮಕ್ಕಳು ನಿಮ್ಮ ಮೊದಲ ಆದ್ಯತೆ ನೀಡಿ
* Authoritative Parenting ಅಂದರೆ ನಾನು ಹೇಳಿದಂತೆ ನಮ್ಮ ಮಕ್ಕಳು ಕೇಳಬೇಕು, ಅವರು ಹೀಗೇ ಇರಬೇಕು ಅಂತೆಲ್ಲಾ ತುಂಬಾನೇ ರೂಲ್ಸ್ ಮಾಡುವುದು ಒಳ್ಳೆಯ ಪೋಷಕರ ಲಕ್ಷಣವಲ್ಲ
* ಚಿಕ್ಕ-ಚಿಕ್ಕ ವಿಷಯಗಳಿಗೆ ಶಿಕ್ಷಿಸಬೇಡಿ , ಅವರ ತಪ್ಪುಗಳ ಬಗ್ಗೆ ತಿಳಿಸಿ ಹೇಳಿ
* ADHD ಲಕ್ಷಣ ನಿರ್ಲಕ್ಷ್ಯ ಮಾಡಬೇಡಿ. ಪೋಷಕರು ತಮ್ಮ ಮಕ್ಕಳಲ್ಲಿ ADHD ಲಕ್ಷಣಗಳಿದ್ದರೆ ನಿರ್ಲಕ್ಷ್ಯ ಮಾಡಬಾರದು. ಮಗು ಕಲಿಕೆಯಲ್ಲಿ ತುಂಬಾ ಹಿಂದೆ ಬೀಳುವುದು, ಈ ರೀತಿಯಿದ್ದರೆ ಆ ಮಗು ADHD ಸಮಸ್ಯೆಯಿಂದ ಬಳಲುತ್ತಿರಬಹುದು, ಸೂಕ್ತ ಚಿಕಿತ್ಸೆ ನೀಡಿದರೆ ಈ ಸಮಸ್ಯೆ ಪರಿಸಹರಿಸಬಹುದು.

English summary

Children's Day: 3 Parenting Mistakes And Psychiatrist Dr Harsha GT Explained Why It Is Not Good

Children's Day: 3 Parenting Mistakes how it affects kids, Psychiatrist Dr Harsha GT explained why parents should not these mistakes read on...
X
Desktop Bottom Promotion