ಗರ್ಭಿಣಿಯರು ಹೇರ್‌ ಡೈ ಮಾಡುವುದು ಎಷ್ಟು ಸೇಫ್!

ಒಬ್ಬ ಹೆಣ್ಣು ಗರ್ಭಿಣಿ ಆದ ದಿನದಿಂದ ಆಕೆ ಮಗುವನ್ನು ಹೆರುವವರೆಗೂ ಸಾಕಷ್ಟು ಮುತುವರ್ಜಿ ವಹಿಸಬೇಕಾಗುತ್ತದೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಮಾಡಬೇಕಾಗಿರುತ್ತದೆ. ಗರ್ಭಿಣಿ ಆದರೆ ಆಕೆಯ ಜವಾಬ್ದಾರಿ ಕೂಡ ಹೆಚ್ಚಾಗುತ್ತದೆ. ಯಾಕೆಂದರೆ ಆಕೆ ಅವಳನ್ನು ಮಾತ್ರವಲ್ಲದೆ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ಆರೋಗ್ಯದ ಬಗ್ಗೆಯೂ ಕೂಡ ಹೆಚ್ಚಿನ ಗಮನ ನೀಡಬೇಕು. ಗರ್ಭಿಣಿ ಆಗೋದಕ್ಕಿಂತ ಮೊದಲು ಮಾಡುತ್ತಿರುವ ಕೆಲಸಗಳನ್ನು ಗರ್ಭಿಣಿ ಆದಾಗ ಮುಂದುವರಿಸಬಹುದೋ ಬೇಡವೋ ಎನ್ನುವ ಗೊಂದಲ ಕೂಡ ಇರುತ್ತೆ. ಉದಾಹರಣೆಗೆ ಕೂದಲಿಗೆ ಕಲರಿಂಗ್ ಮಾಡುವುದು.

hair dye in pregnant

ಹೌದು, ಕಲರಿಂಗ್ ಅನ್ನುವುದು ಈಗಿನ ಟ್ರೆಂಡಿಂಗ್ ಕೂಡ ಹೌದು. ಜೊತೆಗೆ ತುಂಬಾ ಕಡಿಮೆ ವಯಸ್ಸಿನಲ್ಲಿಯೇ ಬಿಳಿ ಕೂದಲು ಕಾಣಿಸಿಕೊಳ್ಳುತ್ತಲ್ಲ ಅದನ್ನ ಮರೆಮಾಚುವ ಸಲುವಾಗಿ ಕೂದಲಿಗೆ ಕಲರಿಂಗ್ ಮಾಡುವುದು, ಡೈ ಹಚ್ಚುವುದು, ಹೈ ಲೈಟರ್ ಬಳಸುವುದು, ಬ್ಲೀಚ್ ಮಾಡಿಸುವುದು ಹೇಗೆ ಕೂದಲಿಗೆ ಸಾಕಷ್ಟು ಸಲೂನಿಂಗ್ ಚಿಕಿತ್ಸೆಗಳನ್ನು ಮಾಡಿಸುತ್ತಾರೆ. ಗರ್ಭಿಣಿ ಆಗುವವರೆಗೆ ಇವೆಲ್ಲದರಿಂದ ಹೆಚ್ಚಿನ ಸಮಸ್ಯೆ ಆಗದೆ ಇರಬಹುದು ಆದರೆ ಗರ್ಭಿಣಿ ಆದ ನಂತರವೂ ಇಂತಹ ಕೆಲಸವನ್ನು ಮಾಡಬಹುದೇ ಎನ್ನುವ ಗೊಂದಲ ಇರುತ್ತೆ ಯಾಕೆ ಎಂದರೆ, ಮೇಲೆ ಹೇಳಿರುವ ಎಲ್ಲಾ ಕೂದಲಿನ ಥೆರಪಿಗಳು ಕೂಡ ಕೆಮಿಕಲ್ ಮಿಶ್ರಿತವಾಗಿಯೇ ಇರುವಂತದ್ದು.

ಕೆಮಿಕಲ್ ಮಿಶ್ರಿತ ಸಲೂನ್ ಚಿಕಿತ್ಸೆ ಒಳ್ಳೆಯದೇ?
ಫಾರ್ಮಲ್ಡಿಹೈಡ್, ಥಾಲೇಟ್ ಗಳು, ಪ್ಯಾರಾಬನ್ ಗಳು, ಆಕ್ಸಿಬೆನ್ ಜೋನ್ ಈ ತರಹದ ಉತ್ಪನ್ನಗಳನ್ನು ಬಳಸದೆ ಇರುವಂತೆ ತಜ್ಞರು ಕೂಡ ಶಿಫಾರಸು ಮಾಡುತ್ತಾರೆ. ಕೂದಲಿಗೆ ಹಾಕುವ ಬಣ್ಣಗಳಲ್ಲಿ ಕೆಮಿಕಲ್ ಇರೋದು ಬಹಳ ಸಾಮಾನ್ಯ. ಈ ಕೆಮಿಕಲ್ ಬಳಸದೆ ದೀರ್ಘಕಾಲದವರಿಗೆ ಕೂದಲು ಬಣ್ಣದಿಂದ ಕೂಡಿರುವಂತೆ ಮಾಡಲು ಸಾಧ್ಯವಿಲ್ಲ. ಮಗು ಹೊಟ್ಟೆಯಲ್ಲಿ ಇರುತ್ತೆ ತಾನೇ? ಕೂದಲಿಗೆ ಬಣ್ಣ ಹಚ್ಚಿದರೆ ಏನು ತಪ್ಪು ಎಂದು ಹಲವರಿಗೆ ಅನಿಸಬಹುದು. ಹೌದು ಮೇಲ್ನೋಟಕ್ಕೆ ಯಾವ ತೊಂದರೆಯೂ ಇಲ್ಲ.

ತಜ್ಞರು ಹೇಳುವಂತೆ ಕೂದಲಿನ ಮೇಲ್ಭಾಗದಲ್ಲಿ ಹಚ್ಚುವ ಬಣ್ಣಗಳು ತಲೆಯ ಒಳಗೆ ಹೋಗುವುದಿಲ್ಲ. ಕೂದಲಿನ ಬುಡಕ್ಕು ಕೂಡ ಹೋಗುವುದಿಲ್ಲ. ಹಾಗಾಗಿ ಗರ್ಭಾವಸ್ಥೆಯಲ್ಲಿ ಕಲರಿಂಗ್ ಸ್ಟೈಲ್ ಮಾಡುವುದು ದೊಡ್ಡ ಹಾನಿ ಏನು ಅಲ್ಲ. ಆದರೆ ತಜ್ಞರು ಹೇಳುವ ಪ್ರಕಾರ ಗರ್ಭವಸ್ಥೆಯಲ್ಲಿ ಇರುವಾಗ ಹೆಣ್ಣು ಮಕ್ಕಳಲ್ಲಿ ಹಾರ್ಮೋನ್ ಬದಲಾವಣೆಗಳು ಆಗುತ್ತವೆ. ಗರ್ಭಧಾರಣೆ ಆರಂಭವಾದ ದಿನದಿಂದ ಮಗುವಿಗೆ ಜನ್ಮ ಕೊಡುವವರೆಗೂ ಕೂಡ ಹಾರ್ಮೋನ್ ಬದಲಾವಣೆಗಳು ಆಗುತ್ತಲೇ ಇರುತ್ತವೆ. ದಿನವೊಂದಕ್ಕೆ ಒಂದೊಂದು ರೀತಿಯಲ್ಲಿ ದೇಹ ರಿಯಾಕ್ಟ್ ಮಾಡಲು ಆರಂಭಿಸುತ್ತದೆ. ಇಂತಹ ಸಂದರ್ಭದಲ್ಲಿ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಕೂಡ ಎದುರಾಗಬಹುದು. ಹಾಗಾಗಿ ಸಾಮಾನ್ಯ ದಿನಗಳಲ್ಲಿ ಬಳಸುವ ಕೆಮಿಕಲ್ ಯುಕ್ತ ಕಲರ್ ಗಳು ಗರ್ಭಾವಸ್ಥೆಯಲ್ಲಿ ದೇಹಕ್ಕೆ ಸರಿ ಹೊಂದದೆ ಇರಬಹುದು. ಆಗ ತಲೆಯಲ್ಲಿ ತಲೆಯ ಮೂಲಕ ದೇಹಕ್ಕೆ ತುರಿಕೆಯಂತಹ ಸಮಸ್ಯೆಗಳು ಕೂಡ ಕಾಡಬಹುದು. ಈ ಸಮಸ್ಯೆಗಳಿಂದ ನೀವು ಆರಾಮದಾಯಕವಾಗಿ ಇಲ್ಲದೆ ಇದ್ದಾಗ ಹೊಟ್ಟೆಯಲ್ಲಿ ಇರುವ ಭ್ರೂಣಕ್ಕೆ ಸಮಸ್ಯೆ ಉಂಟಾಗುತ್ತದೆ.

ಕಲರಿಂಗ್ ಯಾವಾಗ ಮಾಡಿಸಬಹುದು?
ನೀವು ಸಾಮಾನ್ಯ ದಿನಗಳಲ್ಲಿ ಕೂದಲಿಗೆ ಕಲರಿಂಗ್ ಅಥವಾ ಪ್ಯಾಕಿಂಗ್ ಮಾಡಿಸುತ್ತಿದ್ದರೆ ಗರ್ಭಾವಸ್ಥೆಯಲ್ಲಿ ಸಂಪೂರ್ಣವಾಗಿ ಬಿಡಬೇಕು ಎಂದೇನು ಇಲ್ಲ ಆದರೆ ಈ ರೀತಿಯಾಗಿ ಕಲರಿಂಗ್ ಮಾಡುವುದಕ್ಕೆ ಮೊದಲ ತ್ರೈಮಾಸಿಕದ ಸಮಯದಲ್ಲಿ ಮಾಡಿಸಬೇಡಿ. ಆಗ ಮಗು ಹೆಚ್ಚು ವೇಗವಾಗಿ ಬೆಳವಣಿಗೆ ಆಗುತ್ತಿರುತ್ತದೆ ಅಂತಹ ಸಂದರ್ಭದಲ್ಲಿ ಯಾವುದೇ ರೀತಿಯ ಸಮಸ್ಯೆಯೂ ಆಗಬಾರದು ಎನ್ನುವ ಕಾರಣಕ್ಕೆ ಈ ಸಂದರ್ಭದಲ್ಲಿ ರಾಸಾಯನಿಕ ಯುಕ್ತ ಕಲರಿಂಗ್ ಮಾಡಿಸಿಕೊಳ್ಳದೆ ಇರುವುದು ಒಳ್ಳೆಯದು. ಇನ್ನು ತಜ್ಞರ ಪ್ರಕಾರ ಕೂದಲ ಮೇಲ್ಬಾಗದಲ್ಲಿ ಕಲರಿಂಗ್ ಮಾಡಿಸಿದರು ಓಕೆ ಆದರೆ ಅತಿ ಹೆಚ್ಚು ರಾಸಾಯನಿಕ ಬಳಸಿ ಮಾಡಬಹುದಾದ ಬ್ಲೀಚಿಂಗ್ ಟ್ರೀಟ್ಮೆಂಟ್ ಅನ್ನು ಗರ್ಭಾವಸ್ಥೆಯ ಸಂದರ್ಭಗಳಲ್ಲಿ ಮಾಡಿಸದೆ ಇರುವುದೇ ಉತ್ತಮ.

ಮನೆಯಲ್ಲಿಯೇ ಕಲರಿಂಗ್ ಮಾಡಿಕೊಳ್ಳಬಹುದೇ?
ಕೂದಲಿಗೆ ಕಲರಿಂಗ್ ಮಾಡುವುದು ಅಥವಾ ಬ್ಲೀಚಿಂಗ್ ಮಾಡಿಸುವುದು ಹಾಗೇನೆ ಹೇರ್ ಡೈ ಮಾಡಿಸುವುದು ರಾಸಾಯನಿಕ ಮಿಶ್ರಿತವಾಗಿರುತ್ತದೆ ಎನ್ನುವುದು ನಿಮಗೆ ಈಗಾಗಲೇ ಗೊತ್ತಿರುತ್ತೆ ಆದರೆ ಅಥವಾ ಕೂದಲಿನ ಬಣ್ಣ ಮಾಸಿದಂತೆ ನಿಮಗೆ ಅನಿಸಿದರೆ ಗರ್ಭಾವಸ್ಥೆಯ ಸಂದರ್ಭದಲ್ಲಿ ಮನೆಯಲ್ಲಿಯೇ ನೀವು ರಾಸಾಯನಿಕ ಮುಕ್ತ ಬಣ್ಣಗಳನ್ನು ಬಳಸಬಹುದು. ಉದಾಹರಣೆ ರಾಸಾಯನಿಕ ಬ್ಲೀಚಿಂಗ್ ಬದಲು ನಿಂಬು ರಸವನ್ನು ಉಪಯೋಗಿಸಬಹುದು. ಅಥವಾ ಕೂದಲಿಗೆ ಡೈ ಗಾಗಿ ರಾಸಾಯನಿಕ ಬಳಸುವ ಬದಲು ಮೆಹೆಂದಿ ಅಥವಾ ಹೆನ್ನಾ ಪೌಡರ್, ಹಣ್ಣು ಎಲೆಗಳು ಅಥವಾ ಹೂವಿನಂದ ಮಾಡಿದ ರಸ ಮೊದಲಾದವುಗಳನ್ನು ಕೂದಲಿಗೆ ಹಚ್ಚಿದರೆ ಕೂದಲಿಗೆ ಬಣ್ಣವು ಕೂಡ ಬರುತ್ತದೆ ಜೊತೆಗೆ ಹೆಚ್ಚು ಆರೋಗ್ಯಕರವಾಗಿಯೂ ಇರುತ್ತದೆ.

ಗರ್ಭಾವಸ್ಥೆಯಲ್ಲಿ ತ್ರೈಮಾಸಿಕದ ಸಮಯವನ್ನು ಹೊರತುಪಡಿಸಿ ನಂತರದ ದಿನಗಳಲ್ಲಿ ಅಗತ್ಯವಿದ್ದರೆ ಕೂದಲಿನ ಮೇಲ್ಭಾಗದಲ್ಲಿ ಕಲರಿಂಗ್ ಮಾಡಿಸಬಹುದು ಆದರೆ ನೀವು ಸಲೂನ್ ಸಿಬ್ಬಂದಿಗಳನ್ನು ಮನೆಗೆ ಕರೆಸಿ ಮಾಡಿಕೊಂಡರೆ ಇನ್ನೂ ಉತ್ತಮ ಎನ್ನುತ್ತಾರೆ ತಜ್ಞರು. ಆದರೆ ಯಾವುದೇ ಕಾರಣಕ್ಕೂ ರಾಸಾಯನಿಕ ಬಳಸಿ ಮಾಡುವಂತಹ ಟ್ರೀಟ್ಮೆಂಟ್ ಅಥವಾ ಸ್ಟ್ರೈಟ್ನಿಂಗ್ ಮಾಡಿಸುವುದನ್ನು ತಪ್ಪಿಸುವುದು ಒಳ್ಳೆಯದು. ಯಾವುದೇ ಬ್ರಾಂಡ್ ನ ಕಂಡೀಷನರ್ ಅಥವಾ ಕಲರ್ ಆಯ್ದುಕೊಳ್ಳುವದಿದ್ದರೆ ಅಮೋನಿಯ ಇಲ್ಲದೆ ಇರುವ ಡರ್ಮಿ ಪರ್ಮನೆಂಟ್ ಫಾರ್ಮುಲಾ ಆಯ್ದುಕೊಳ್ಳಿ. ಕೇವಲ ಒಂಬತ್ತು ತಿಂಗಳುಗಳು ಅಷ್ಟೇ ಅದಾದ ನಂತರ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾಳೆ. ನಂತರ ಆ ಮಗುವಿನ ಆರೈಕೆಯಲ್ಲಿ ಸಮಯ ಕಳೆಯುತ್ತದೆ. ಇದು ಒಂದೆರಡು ವರ್ಷಗಳ ಅನುಭವಗಳು ಅಷ್ಟೇ! ಅದರ ನಂತರ ನಿಮಗೆ ಬೇಕಾಗಿರುವ ಹೇರ್ ಸ್ಟೈಲ್ ಮಾಡಿಸಿಕೊಳ್ಳೋದಕ್ಕೆ ಯಾರು ತಾನೆ ಬೇಡ ಅಂತಾರೆ ಅಲ್ವಾ?

English summary

Can Pregnant Woman Do Hair Dye In Kannada

Is it safe to hair dye if you are pregnant, read on...
Story first published: Tuesday, August 15, 2023, 19:42 [IST]
X
Desktop Bottom Promotion