Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಅವಳಿ ಮಕ್ಕಳಿಗೆ ಎದೆಹಾಲುಣಿಸುವಾಗ ಎದುರಾಗುವ ಸವಾಲುಗಳೇನು? ಏನು ಮಾಡಿದರೆ ಒಳ್ಳೆಯದು
ಅವಳಿ ಮಕ್ಕಳಾದಾಗ ಡಬಲ್ ಖುಷಿ ಮಾತ್ರವಲ್ಲ ಚಾಲೆಂಜ್ ಕೂಡ ಡಬಲ್ ಆಗಿರುತ್ತದೆ. ಒಂದು ಮಗುವಿನ ಆರೈಕೆ ಮಾಡಿದಷ್ಟು ಸುಲಭವಲ್ಲ ಎರಡು ಮಕ್ಕಳ ಆರೈಕೆ ಮಾಡುವುದು. ಅವಳಿ ಮಕ್ಕಳಾದಾಗ ಎದುರಾಗುವ ಪ್ರಮುಖ ಸಮಸ್ಯೆಯೆಂದರೆ ಎದೆಹಾಲುಣಿಸುವುದು. 6 ತಿಂಗಳವರೆಗೆ ಮಕ್ಕಳನ್ನು ನೋಡಿಕೊಳ್ಳುವುದು ಅಂತೂ ತುಂಬಾನೇ ಕಷ್ಟ. ಅವಳಿ ಮಕ್ಕಳಿರುವವರು ಎದುರಿಸುವ ಸವಾಲುಗಳು ಹಾಗೂ ಯಾವ ಟಿಪ್ಸ್ ಸಹಾಯಕ್ಕೆ ಬರುತ್ತದೆ ಎಂದು ಹೇಳುವುದಾದರೆ

ಎರಡು ಮಗುವಿಗೆ ಒಟ್ಟಿಗೆ ಹಾಲುಣಿಸಬಹುದೇ?
ಎರಡು ಮಕ್ಕಳಿಗೆ ಒಟ್ಟಿಗೆ ಹಾಲುಣಿಸುವುದು ಸುಲಭವಲ್ಲ, ಇದಕ್ಕೆ ಗಂಡ ಅಥವಾ ಮನೆಯವರ ಸಹಾಯ ಬೇಕಾಗುತ್ತದೆ. ಎರಡು ಮಕ್ಕಳಿಗೆ ಒಟ್ಟಿಗೆ ಹಾಲುಣಿಸುವಾಗ ಬೆನ್ನುನೋವು, ಸೊಂಟ ನೋವು ಕಾಣಿಸಿಕೊಳ್ಳಬಹುದು, ಆದ್ದರಿಂದ ಇಬ್ಬರಿಗೆ ಒಟ್ಟಿಗೆ ಹಾಲುಣಿಸುವ ಬದಲಿಗೆ ಒಬ್ಬರಿಗೆ ಹಾಲುಣಿಸಿದ ಬಳಿಕ ಮತ್ತೊಬ್ಬರಿಗೆ ಉಣಿಸಿ.
ಒಂದು ಮಗುವಿಗೆ ಹಾಲುಣಿಸಿದರೆ ಮತ್ತೊಂದು ಮಗುವಿಗೆ ಹಾಲು ಸಾಲದೇ ಹೋಗುವುದೇ?
ಈ ಸಂಶಯ ತಾಯಿಗೆ ಕಾಡುವುದು ಸಹಜ. ಒಂದು ಸ್ತನದ ಹಾಲುಣಿಸಿದರೆ ಆ ಮಗುವಿಗೆ ಹಾಲು ಸಾಕಾಗುವುದಿಲ್ಲ ಎಂದು ಕೂಡ ಅನಿಸುವುದು. ನೀವು ಮಗುವಿಗೆ ಹಾಲುಣಿಸುವಾಗ ಇನ್ನೊಂದು ಮಗುವಿಗೆ ಸಾಕಾಗುವುದಿಲ್ಲ ಎಂದು ಭಾವಿಸಬೇಡಿ, ಮಗು ಎದೆ ಹಾಲು ಹೀರಿ ಕುಡಿದಂತೆ ಎದೆಹಾಲು ಉತ್ಪತ್ತಿಯಾಗುವುದು, ಇದರಿಂದಾಗಿ ಆ ಮಗುವಿಗೂ ಎದೆ ಹಾಲು ಸಾಕಾಗುವುದು.
ಹಾಲನ್ನು ಪಂಪ್ ಮಾಡಿಡಿ
ಹಸಿವಿನಿಂದ ಎರಡು ಮಗು ಒಟ್ಟಿಗೆ ಅಳಲಾರಂಭಿಸುತ್ತದೆ, ಆವಾಗ ಯಾರಿಗೆ ಹಾಲುಣಿಸಬೇಕೆಂಬ ಗೊಂದಲ ಮೂಡುವುದು. ಮಕ್ಕಳು ನಿದ್ದೆ ಮಾಡಿರುವ ಸಮಯದಲ್ಲಿ ಎದೆಹಾಲನ್ನು ಪಂಪ್ ಮಾಡಿಡಿ. ಹೀಗೆ ಮಾಡಿಟ್ಟರೆ ಇಬ್ಬರು ಜೊತೆಗೆ ಎದ್ದು ಹಾಲಿಗಾಗಿ ಅಳುವಾಗ ಒಂದು ಮಗುವಿಗೆ ಪಂಪ್ ಮಾಡಿಟ್ಟ ಹಾಲನ್ನು ನೀಡಬಹುದು, ಮತ್ತೊಂದು ಮಗುವಿಗೆ ಎದೆ ಹಾಲನ್ನು ನೀಡಬಹುದು.
ಫಾರ್ಮುಲಾ ಹಾಲನ್ನು ಕೊಡಿ
ಮಕ್ಕಳಿಗೆ ಎದೆಹಾಲು ಸಾಕಾಗುತ್ತಿಲ್ಲ ಎಂದು ನಿಮಗನಿಸಿದರೆ ನೀವು ಫಾರ್ಮುಲಾ ಹಾಲನ್ನು ನೀಡಲಾರಂಭಿಸಿ, ಇದರಿಂದ ಮಕ್ಕಳ ಹಸಿವು ನಿಯಂತ್ರಣಕ್ಕೆ ಬರುತ್ತದೆ. ಮಕ್ಕಳ ತಜ್ಞರು ನಿಮಗೆ ಯಾವ ಪ್ರಮಾಣದಲ್ಲಿ ಫಾರ್ಮುಲಾ ಮಿಲ್ಕ್ ನೀಡಬೇಕೆಂದು ಹೇಳುತ್ತಾರೆ ಅದರಂತೆ ನೀಡಿ.
ಇತರ ಆಹಾರ ನೀಡಬಹುದೇ?
ಮಗುವಿಗೆ ರಾಗಿ ಮಣ್ಣಿ ಅಥವಾ ಹಣ್ಣನ್ನು ಬೇಯಿಸಿ ನೀಡುವುದು , ಅನ್ನವನ್ನು ರುಬ್ಬಿ ನೀಡುವುದು ಈ ರೀತಿಯ ಆಹಾರವನ್ನು 6 ತಿಂಗಳಿಗಿಂತ ಮುಂಚೆ ನೀಡಲೇಬೇಡಿ, 6 ತಿಂಗಳವರೆಗೆ ಬರೀ ಎದೆಹಾಲು ಹಾಘೂ ಫಾರ್ಮುಲಾ ಮಿಲ್ಕ್ ಅಷ್ಟೇ ನೀಡಿ, 6 ತಿಂಗಳ ನಂತರ ನೀವು ರಾಗಿಮಣ್ಣಿ ಅಥವಾ ಮತ್ತಿತರ ಆಹಾರ ನೀಡಲು ಪ್ರಾರಂಭಿಸಬಹುದು.
ನೀವು ನಿಮ್ಮ ಆಹಾರಕ್ರಮದ ಕಡೆಗೆ ಗಮನಹರಿಸಬೇಕು
ಎರಡು ಮಕ್ಕಳಿಗೆ ಹಾಲುಣಿಸುವುದರಿಂದ ನೀವು ಆಹಾರವನ್ನು ಚೆನ್ನಾಗಿ ತಿನ್ನಬೇಕು, ಪೌಷ್ಠಿಕಾಂಶ ಅಧಿಕವಿರುವ ಆಹಾರ ಸೇವಿಸಿ. ಹೀಗೆ ಸೇವಿಸುವುದರಿಂದ ಎದೆಹಾಲಿನ ಉತ್ಪತ್ತಿ ಕೂಡ ಹೆಚ್ಚಾಗುವುದು, ಆವಾಗ ಮಕ್ಕಳಿಗೆ ಎದೆಹಾಲಿನ ಕೊರತೆ ಉಂಟಾಗುವುದಿಲ್ಲ.



Click it and Unblock the Notifications
