Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಗರ್ಭಧಾರಣೆಗೆ ಪ್ರಯತ್ನಿಸುತ್ತಿದ್ದೀರಾ? ಈ ಪೋಷಕಾಂಶ ಹೆಚ್ಚಾಗಿ ಸೇವಿಸಿ
ನೀವು ಗರ್ಭಧಾರಣೆಗೆ ಪ್ರಯತ್ನಿಸುತ್ತಿದ್ದೀರಾ? ಹಾಗಾದರೆ ನಿಮ್ಮ ಆಹಾರದಲ್ಲಿ ಮಾಡಿಕೊಳ್ಳುವ ಕೆಲವೊಂದು ಬದಲಾವಣೆ ನಿಮ್ಮಲ್ಲಿ ಫಲವತ್ತತೆ ಸಾಮರ್ಥ್ಯ ಹೆಚ್ಚಿಸುತ್ತದೆ. ಮಗುವಿಗಾಗಿ ಪ್ರಯತ್ನಿಸುತ್ತಿದ್ದೇವೆ ಎಂದು ವೈದ್ಯರ ಬಳಿ ಹೇಳಿದರೆ ಅವರು ನಿಮಗೆ ಫಾಲಿಕ್ ಆಮ್ಲ ತೆಗೆದುಕೊಳ್ಳುವಂತೆ ಸಲಹೆ ನೀಡುತ್ತಾರೆ, ಆದ್ದರಿಂದ ನೀವು ಪೋಷಕಾಂಶಗಳಿರುವ ಆಹಾರಕ್ರಮದ ಕಡೆಗೆ ಗಮನ ಹರಿಸುವುದು ಒಳ್ಳೆಯದು.

ಈ ಪೋಷಕಾಂಶಗಳಿರುವ ಆಹಾರವನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ:
* ಫಾಲಿಕ್ ಆಮ್ಲ: ಹುಟ್ಟುವ ಮಗುವಿನಲ್ಲಿ ನ್ಯೂನ್ಯತೆ ತಡೆಗಟ್ಟಲು ಇದು ತುಂಬಾನೇ ಅವಶ್ಯಕ
* ಕ್ಯಾಲ್ಸಿಯಂ: ಮಗು ಮತ್ತು ತಾಯಿಯ ಮೂಳೆಗಳ ಆರೋಗ್ಯಕ್ಕೆ ತುಂಬಾನೇ ಅವಶ್ಯಕ
* ಕಬ್ಬಿಣದಂಶ: ಕೆಂಪು ರಕ್ತಕಣಗಳ ಉತ್ಪತ್ತಿಗೆ ಅವಶ್ಯಕ. ರಕ್ತಹೀನತೆಯಿದ್ದರೆ ಗರ್ಭಧಾರಣೆಯ ಸಾಧ್ಯತೆ ಕಡಿಮೆಯಾಗುವುದು.
* ವಿಟಮಿನ್ ಡಿ: ಗರ್ಭಧಾರಣೆಯ ನಂತರ ಮಗುವಿನ ಬೆಳವಣಿಗೆಗೆ ತುಂಬಾನೇ ಅವಶ್ಯಕ
ಇವುಗಳನ್ನು ವೈದ್ಯರು ಸೂಚಿಸಿದರೆ ಸಪ್ಲಿಮೆಂಟ್ಸ್ ಆಗಿ ಸೇವಿಸಬಹುದು. ಅಲ್ಲದೆ ಈ ಆಹಾರಗಳಲ್ಲಿ ಈ ಪೋಷಕಾಂಶಗಳು ನೈಸರ್ಗಿಕವಾಗಿ ದೊರೆಯುವುದು.
ಫಾಲಿಕ್ ಆಮ್ ಇರುವ ಆಹಾರಗಳು
* ಸೊಪ್ಪು
* ಬೀನ್ಸ್
* ಬಟಾಣಿ
* ಸೂರ್ಯಕಾಂತಿ ಬೀಜ
* ಹಣ್ಣುಗಳು
* ಧಾನ್ಯಗಳು
* ಪ್ರಾಣಿಗಳ ಲಿವರ್
ಕ್ಯಾಲ್ಸಿಯಂ ಇರುವ ಆಹಾರಗಳು
* ಚಿಯಾ ಸೀಡ್ಸ್, ಎಳ್ಳು
* ಚೀಸ್
* ಯೋಗರ್ಟ್
* ಬೂತಾಯಿ, ಸಾಲಾಮೋನ್ ಮೀನು
* ಬೀನ್ಸ್, ಧಾನ್ಯಗಳು
* ಬಾದಾಮಿ
* ಸೊಪ್ಪು
* ಹಾಲು
* ಹಾಲಿನ ಉತ್ಪನ್ನಗಳು
ಕಬ್ಬಿಣದಂಶವಿರುವ ಆಹಾರಗಳು
* ನಟ್ಸ್
* ಡ್ರೈ ಫ್ರೂಟ್ಸ್
* ಪಾಸ್ತಾ, ಬ್ರೆಡ್
* ಓಟ್ಸ್
* ಸೊಪ್ಪು
* ಧಾನ್ಯಗಳು
* ಚಿಕನ್
* ಮೊಟ್ಟೆ
* ಪೋರ್ಕ್
* ಕುರಿ ಮಾಂಸ
* ತುನಾ
* ಬೂತಾಯಿ, ಬಂಗುಡೆ
* ಸಿಹಿ ಗೆಣಸು
* ಬ್ರೊಕೋಲಿ
* ಬಟಾಣಿ
* ಅಂಜೂರ
* ಕಲ್ಲಂಗಡಿ
ವಿಟಮಿನ್ ಡಿ
* ನಿಮಗೆ ಸೂರ್ಯನ ಬೆಳಕಿನಿಂದ ಸಿಗುತ್ತದೆ, ಅಲ್ಲದೆ ಅಣಬೆ, ಅಗಸೆಬೀಜ ಇವುಗಳಲ್ಲಿಯೂ ಸ್ವಲ್ಪ ಪ್ರಮಾಣದಲ್ಲಿ ದೊರೆಯುವುದು.
ಆದ್ದರಿಂದ ಗರ್ಭಧಾರಣೆಗೆ ಪ್ರಯತ್ನಿಸುತ್ತಿದ್ದರೆ ಈ ಬಗೆಯ ಆಹಾರ ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ.
ಈ ಬಗೆಯ ಆಹಾರಗಳನ್ನು ದೂರವಿಡಿ
ಟ್ರಾನ್ಸ್‌ಫ್ಯಾಟ್: ಸಂಸ್ಕರಿಸಿದ ಆಹಾರಗಳಲ್ಲಿ ಟ್ರಾನ್ಸ್‌ಫ್ಯಾಟ್ ಅಧಿಕವಿರುತ್ತದೆ, ಇದರಿಂದ ಹಾರ್ಮೋನ್‌ಗಳ ಅಸಮತೋಲನ ಉಂಟಾಗುವುದು. ಈ ಬಗೆಯ ಆಹಾರಗಳನ್ನು ದೂರವಿಡಿ.
* ಕಾರ್ಬೋನೇಟಡ್ ಹಾಗೂ ಕಾರ್ಬ್ಸ್ ಆಹಾರಗಳು
ಕೋಲ್ಡ್ ಡ್ರಿಂಕ್ಸ್, ಜ್ಯೂಸ್, ಮೈದಾ, ಅಕ್ಕಿ, ಆಲೂಗಡ್ಡೆ ಇವುಗಳನ್ನು ಕಡಿಮೆ ಮಾಡಿ ಅದರ ಬದಲಿಗೆ ಅಧಿಕ ನಾರಿನಂಶವಿರುವ ಆಹಾರಗಳು, ಹಣ್ಣುಗಳು, ತರಕಾರಿ ಅಧಿಕ ಸೇವಿಸಿ.
ಅತ್ಯಧಿಕ ಹಾಲಿನ ಉತ್ಪನ್ನಗಳನ್ನು ಬಳಸಬೇಡಿ
ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನ ಬಳಸಬಹುದು, ಆದರೆ ಅತ್ಯಧಿಕ ಬಳಸಬೇಡಿ. ಏಕೆಂದರೆ ಹಾಲಿನ ಉತ್ಪನ್ನಗಳಲ್ಲಿರುವ ಈಸ್ಟ್ರೋಜಿನ್, ಪ್ರೊಗೆಸ್ಟಿರೋನೆ ಅಂಡಾಣು ಉತ್ಪತ್ತಿ ಮೇಲೆ ಪರಿಣಾಮ ಬೀರುವುದು.
ಈ ಬಗೆಯ ಆಹಾರ ಹೆಚ್ಚು ಸೇವಿಸಿ
ಸೊಪ್ಪು, ತರಕಾರಿ, ಹಣ್ಣುಗಳು, ಬೀನ್ಸ್, ನಟ್ಸ್, ಡ್ರೈ ಫ್ರೂಟ್ಸ್, ರಾಗಿ, ನವಣೆ ಈ ಬಗೆಯ ಆಹಾರಗಳನ್ನು ಹೆಚ್ಚಾಗಿ ಸೇವಿಸಿ. ಇದರಿಂದ ಅಂಡಾಣುಗಳ ಉತ್ಪತ್ತಿಗೆ ಸಹಕಾರಿಯಾಗುವುದು.
ನಿಮ್ಮ ಆಹಾರದಲ್ಲಿ ಪ್ರೊಟೀನ್ ಅಧಿಕವಿರಲಿ
ನಟ್ಸ್, ಬೀಜಗಳು, ಧಾನ್ಯಗಳು, ರಾಜ್ಮಾ, ಪ್ರೊಟೀನ್ ಇರುವ ಮಾಂಸಾಹಾರ (ಮಾಂಸಾಹಾರ ಮಿತಿಯಲ್ಲಿ ಸೇವಿಸಿ) ಇವುಗಳನ್ನು ಸೇವಿಸಿ.
* ಮೀನಿನ ಆಹಾರ ಕೂಡ ಒಳ್ಳೆಯದು.
ಈ ರೀತಿ ನಿಮ್ಮ ಆಹಾರಕ್ರಮದಲ್ಲಿ ಬದಲಾವಣೆ ಮಾಡಿಕೊಂಡರೆ ಗರ್ಭಧಾರಣೆಯ ಸಾಧ್ಯತೆ ಹೆಚ್ಚುವುದು.



Click it and Unblock the Notifications
