ಪೋಷಕರೇ ಸೆಲ್ಫ್‌ ಲವ್‌ ಎಂದರೇನು ಅನ್ನೋದನ್ನ ಮಕ್ಕಳಿಗೆ ಕಲಿಸಿಕೊಡಿ

ಮಕ್ಕಳು ಗಿಡ ಇದ್ದ ಹಾಗೆ ನಾವು ಮಕ್ಕಳೆಂಬ ಗಿಡಕ್ಕೆ ಎಂತಹ ಮೌಲ್ಯಗಳನ್ನು ಕೊಟ್ಟು ಬೆಳೆಸುತ್ತೇವೆ ಅನ್ನೋದ್ರ ಮೇಲೆ ಅವರ ಜೀವನ ನಿರ್ಧಾರವಾಗಿರುತ್ತದೆ. ಚಿಕ್ಕಂದಿನಿಂದಲೇ ಮಕ್ಕಳಿಗೆ ಅವರನ್ನು ಅವರು ಹೇಗೆ ಪ್ರೀತಿಸೋದು ಅನ್ನೋದನ್ನ ಹೇಳಿಕೊಡಿ. ಯಾಕಂದ್ರೆ ದೊಡ್ಡದಾದ ಮೇಲೆ ಇಂತಹ ವಿಚಾರಗಳನ್ನು ಅಳವಡಿಸಿಕೊಳ್ಳುವುದು ತುಂಬಾನೇ ಕಷ್ಟ.

Best Way to Teach Self Love To Your Kids in Kannada

ಅನೇಕ ಜನರು ಬೇರೆಯವರ ಗುಣ, ಕೌಶಲ್ಯಗಳನ್ನು ನೋಡಿ ಇಷ್ಟ ಪಡುತ್ತಾರೆಯೇ ಹೊರತು ತಮ್ಮನ್ನು ತಾವು ಇಷ್ಟ ಪಡೋದಿಲ್ಲ. ಇದು ತಪ್ಪು, ನಾವು ಮೊದಲು ನಮ್ಮ ವ್ಯಕ್ತಿತ್ವವನ್ನು ಇಷ್ಟ ಪಡಬೇಕು. ಇಂತಹ ಗುಣಗಳನ್ನು ಚಿಕಂದಿನಿಂದಲೇ ರೂಢಿಸಿಕೊಂಡರೆ ಉತ್ತಮ. ಹಾಗಾದ್ರೆ ಮಕ್ಕಳಿಗೆ ತಮ್ಮ ವ್ಯಕ್ತಿತ್ವವನ್ನು ಇಷ್ಟ ಪಡುವಂತೆ ಮಾಡೋದು ಹೇಗೆ? ಇದಕ್ಕಾಗಿ ಪೋಷಕರು ಏನು ಮಾಡಬಹುದು? ಅನ್ನೋದನ್ನ ಹೇಳ್ತೀವಿ.

1. ತಮಗೋಸ್ಕರ ಬದುಕಿ ಬೇರೆಯವರಿಗಾಗಿ ಅಲ್ಲ

1. ತಮಗೋಸ್ಕರ ಬದುಕಿ ಬೇರೆಯವರಿಗಾಗಿ ಅಲ್ಲ

ಸ್ನೇಹಿತರು, ಸಂಬಂಧಿಕರು ಹೀಗೆ ಯಾರೇ ಇರಲಿ ಅವರ ಜೊತೆಗೆ ನಿರ್ದಿಷ್ಟ ಬೌಂಡರಿಯನ್ನು ಕಾಪಾಡಿಕೊಳ್ಳಲೇಬೇಕು ಎಂದು ಪೋಷಕರು ತಮ್ಮ ಮಗುವಿಗೆ ಹೇಳಿ ಕೊಡಬೇಕು. ನಿಮಗೆ ಏನಾದರೂ ತಪ್ಪಾಗಿದೆ ಎಂದು ಅನ್ನಿಸಿದರೆ ಅದನ್ನು ನೀವು ಇಷ್ಟಪಡದೇ ಹೋದರೆ ಆ ಸಮಯದಲ್ಲಿ ಅದನ್ನು ಆ ವ್ಯಕ್ತಿಗೆ ತಿಳಿಸಿ, ಸುಮ್ಮನಿರಬೇಡಿ ಎಂದು ಹೇಳಿ. ನಾವು ಯಾವುದೇ ವಿಷಯಗಳನ್ನು ಸಹಿಸಿಕೊಳ್ಳಬಾರದು. ಬೇರೆಯವರಿಗಾಗಿ ಕಾಂಪ್ರಮೈಸ್‌ ಕೂಡ ಆಗಬಾರದು. ಅದು ನಿಮಗೆ ನೀವು ಅಗೌರವ ತೋರಿದಂತೆ. ನೀವು ನಿಮಗೋಸ್ಕರ ಬದುಕಬೇಕೇ ವಿನಹಃ ಬೇರೆಯವರಿಗಾಗಿ ಅಲ್ಲ ಎಂದು ಅರ್ಥ ಮಾಡಿಸಿ.

2. ಮಕ್ಕಳಿಗೆ ಆಯ್ಕೆ ಮಾಡಲು ಅವಕಾಶ ನೀಡಿ

2. ಮಕ್ಕಳಿಗೆ ಆಯ್ಕೆ ಮಾಡಲು ಅವಕಾಶ ನೀಡಿ

ಮಕ್ಕಳಿಗೆ ಪ್ರತಿಸಾರಿ ಬೈದು ಆದೇಶ ಮಾಡುವುದನ್ನು ಬಿಟ್ಟು ಅವರಿಗೆ ನಿರ್ಧಾರ ತೆಗೆದುಕೊಳ್ಳಲು ಅವಕಾಶ ನೀಡಿ. ಶಾಪಿಂಗ್‌ಗೆ ಹೋಗಾಗ ಮಗುವಿಗೆ ಅವರು ಇಷ್ಟಪಡುವ ಶರ್ಟ್ ಆಯ್ದುಕೊಳ್ಳಲು ಹೇಳಿ. ಆದಷ್ಟು ಅವರಿಗೆ ಸ್ವತಂತ್ರರಾಗಿರಲು ಅವಕಾಶ ನೀಡಿ. ಆದರೆ ಯಾವುದೇ ಕಾರಣಕ್ಕೂ ದಾರಿ ತಪ್ಪದಂತೆ ನೋಡಿಕೊಳ್ಳಿ. ಚಿಕ್ಕಂದಿನಿಂದಲೇ ಇದು ಅಭ್ಯಾಸವಾದರೆ ಅವರು ದೊಡ್ಡವರಾದ ಮೇಲೆ ನಿಮ್ಮ ಮೇಲೆ ಅವಲಂಬಿತರಾಗೋದಿಲ್ಲ. ಹೀಗಾದಾಗ ಅವರ ಅಲೋಚನೆ, ನಿರ್ಧಾರ, ಆಯ್ಕೆಗಳನ್ನು ಅವರು ಇಷ್ಟಪಡುತ್ತಾರೆ.

3. ನಿರ್ಧಾರ ತೆಗೆದುಕೊಳ್ಳಲು ಅವಕಾಶ ನೀಡಿ

3. ನಿರ್ಧಾರ ತೆಗೆದುಕೊಳ್ಳಲು ಅವಕಾಶ ನೀಡಿ

ಮಕ್ಕಳಿಗೆ ಯಾವುದಾದರೂ ವಿಚಾರದ ಬಗ್ಗೆ ಖುಷಿ ಆಗದಿದ್ದರೆ ಅವರು ಅದನ್ನು ಒಪ್ಪಿಕೊಳ್ಳಬೇಕಾಗಿಲ್ಲ. ಬದಲಾಗಿ ಇಷ್ಟವಿಲ್ಲ ಎಂದು ಹೇಳಬಹುದು. ಅದೇ ರೀತಿ ಎಲ್ಲಿಗಾದರೂ ಹೋಗಬೇಕಾದರೂ ಕೂಡ ಹಾಗೆ ಅವರಿಗೆ ಇಷ್ಟವಿಲ್ಲ ಎಂದ ಮೇಲೆ ಒತ್ತಾಯ ಮಾಡಲೇಬೇಡಿ. ಅವರ ನಿರ್ಧಾರಗಳನ್ನು ಅವರಿಗೆ ಬಿಟ್ಟು ಬಿಡಿ.

4. ಬೇರೆ ಮಕ್ಕಳೊಂದಿಗೆ ಹೋಲಿಕೆ ಮಾಡಬೇಡಿ

4. ಬೇರೆ ಮಕ್ಕಳೊಂದಿಗೆ ಹೋಲಿಕೆ ಮಾಡಬೇಡಿ

ನಿಮ್ಮ ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಹೋಲಿಕೆ ಮಾಡಬೇಡಿ. ನಿಮ್ಮ ಮಗುವಿನಲ್ಲಿ ವಿಶೇಷ ಗುಣಗಳಿರಬಹುದು ಅದನ್ನು ಪ್ರೋತ್ಸಾಹಿಸಿ. ಅದನ್ನು ಬಿಟ್ಟು ಬೇರೆಯವರೊಂದಿಗೆ ಹೋಲಿಕೆ ಬೇಡ. ಪ್ರತಿಯೊಂದು ಮಗುವು ವಿಭಿನ್ನ ಹಾಗೂ ಆ ಮಗುವಿಗೆ ಅದರದ್ದೇ ಆದ ಗುಣಗಳಿದೆ. ನಿಮ್ಮ ಮಗುವಿಗೆ ಬೇರೆ ಯಾವ ಸ್ಪರ್ಧಿಯೂ ಇಲ್ಲ ಅವನಿಗೆ ಅವನ ಜೊತೆಗೆ ಸ್ಪರ್ಧಿಸಲು ಹೇಳಿ. ಹಾಗೂ ಪ್ರತಿದಿನ ಸುಧಾರಿಸಿಕೊಳ್ಳಲು ಹೇಳಿ. ನಿಮ್ಮ ಮಗುವಿನ ಸಾಮರ್ಥ್ಯ ಹಾಗೂ ದೌರ್ಬಲ್ಯವನ್ನು ಆತನಿಗೆ ಅರ್ಥೈಸಿ.

5. ಶಿಕ್ಷಣದ ವಿಚಾರದಲ್ಲಿ ಒತ್ತಡ ಹೇರಬೇಡಿ

5. ಶಿಕ್ಷಣದ ವಿಚಾರದಲ್ಲಿ ಒತ್ತಡ ಹೇರಬೇಡಿ

ಮಕ್ಕಳಿಗೆ ಇಷ್ಟೇ ಅಂಕ ತೆಗೆಯಬೇಕು ಎಂದು ಒತ್ತಡ ಹೇರಬೇಡಿ. ಒತ್ತಡ ಹೇರೋದ್ರೀಂದ ಅವರು ಮಾನಸಿಕ ಖಿನ್ನತೆಗೆ ಒಳಗಾಗಬಹುದು. ಹೀಗಾಗಿ ಅವರು ಯಾವ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ ಎಂಬುವುದನ್ನು ನೋಡಿ ಅವರಿಗೆ ಪ್ರೋತ್ಸಾಹಿಸಿ. ಪ್ರೇರಣೆದಾಯಕ ವಿಡಿಯೋಗಳನ್ನು ತೋರಿಸಿ. ಮಕ್ಕಳಿಗೆ ದೈರ್ಯವನ್ನು ತುಂಬಿ, ಜೀವನದಲ್ಲಿ ಕಷ್ಟಗಳನ್ನು ಎದುರಿಸಿ ತಮ್ಮನ್ನು ತಾವು ಇಷ್ಟ ಪಡೋದು ಹೇಗೆ ಎಂಬುದನ್ನು ಕಲಿಸಿ.

ಮಕ್ಕಳ ಸಂತೋಷಕ್ಕಾಗಿ ಕಷ್ಟ ಪಟ್ಟು ದುಡಿಯೋ ಪೋಷಕರು ಇಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ಗಮನ ಕೊಡೋದು ತುಂಬಾನೇ ಮುಖ್ಯ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಗಾದೆ ಮಾತಿನಂತೆ ಚಿಕ್ಕಂದಿನಲ್ಲೇ ಮಕ್ಕಳಿಗೆ ಉತ್ತಮ ಮೌಲ್ಯ ಕೊಟ್ಟು ಬೆಳೆಸಿ.

English summary

Best Way to Teach Self Love To Your Kids in Kannada

Here are the best way to teach self love to your Kids.
X
Desktop Bottom Promotion