Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
ಇದೇ ಕಾರಣಕ್ಕೆ ಅಕ್ಕನನ್ನು ಎರಡನೇ ತಾಯಿ ಅಂತ ಹೇಳೋದು!
ಅಮ್ಮನ ಸ್ಥಾನವನ್ನು ಹಾಗೂ ಅಮ್ಮ ಕೊಡೋ ಪ್ರೀತಿಯನ್ನು ಜಗತ್ತಿನಲ್ಲಿ ಯಾರಿಂದಲೂ ತುಂಬೋದಕ್ಕೆ ಸಾಧ್ಯವಿಲ್ಲ ಎನ್ನುತ್ತಾರೆ. ಅದೇ ರೀತಿ ಅಕ್ಕನ ಸ್ಥಾನವನ್ನು ಕೂಡ ಬಹುಶಃ ಈ ಜಗತ್ತಿನಲ್ಲಿ ಯಾರಿಂದಲೂ ತುಂಬೋದಕ್ಕೆ ಸಾಧ್ಯವಿಲ್ಲ ಅನ್ಸುತ್ತೆ. ಯಾಕಂದ್ರೆ ಅಕ್ಕ ಎಂದರೆ ಆಕೆ ಅಮ್ಮನಂತೆ. ಮನೆಯಲ್ಲಿ ಅಮ್ಮ ಇಲ್ಲದಿದ್ದಾಗ ತಮ್ಮ/ತಂಗಿಯರ ಪಾಲನೆ-ಪೋಷಣೆ ಮಾಡುವ ಮಾತೃ ಹೃದಯಿ ಅಕ್ಕ.
ಅಕ್ಕನಿಗೂ ಕೂಡ ಅಮ್ಮನ ಗುಣಗಳೇ ಬಳವಳಿಯಾಗಿ ಬಂದಿರುತ್ತದೆ. ಅಕ್ಕ ನಮಗೆಲ್ಲಾ ಎರಡನೇ ತಾಯಿ ಇದ್ದ ಹಾಗೆ. ಆಕೆ ತಮ್ಮ/ತಂಗಿಯರನ್ನು ಓದಿಸುತ್ತಾಳೆ, ಬರೆಸುತ್ತಾಳೆ. ಅವರ ಬೇಕು-ಬೇಡ ವಿಚಾರಿಸುತ್ತಾಳೆ. ಅಮ್ಮನಷ್ಟೇ ಪ್ರೀತಿ, ಕಾಳಜಿಯನ್ನು ತೋರುತ್ತಾಳೆ. ಅಷ್ಟಕ್ಕು ಅಕ್ಕನನ್ನು ಎರಡನೇ ತಾಯಿ ಎಂದು ಕರೆಯೋದು ಯಾಕೆ? ಆಕೆ ನಿಭಾಯಿಸುವ ಕರ್ತವ್ಯಗಳು ಯಾವುದು ಅನ್ನೋದನ್ನು ತಿಳಿಯೋಣ.

1. ಆಕೆಯ ಪ್ರೀತಿ ನಿರಂತರ
ಮನೆಯಲ್ಲಿ ಪೋಷಕರು ಎಲ್ಲಾ ಮಕ್ಕಳ ರಕ್ಷಣೆ ಮಾಡಿದ್ರೆ, ಮನೆಯಿಂದ ಹೊರಗೆ ಬಂದಾಗ ತಮ್ಮ/ತಂಗಿಯ ರಕ್ಷಣೆಯ ಹೊಣೆಯನ್ನು ಹೊತ್ತುಕೊಳ್ಳುವವಳು ಅಕ್ಕ. ಶಾಲೆಗೆ ಕೈ ಹಿಡಿದು ಹುಷಾರಾಗಿ ಕರೆದುಕೊಂಡು ಹೋಗುತ್ತಾಳೆ. ಶಾಲೆಯಲ್ಲಿ ಏನಾದರೂ ಸಮಸ್ಯೆ ಆದರೆ ಅವಳ ತರಗತಿಯಿಂದ ನಮ್ಮ ತರಗತಿಗೆ ಓಡಿ ಬರುತ್ತಾಳೆ.
ಇನ್ನೂ ನಾವು ಬೆಳೆದು ದೊಡ್ಡವರಾದ ಮೇಲೆಯೂ ಕೂಡ ಆಕೆಯ ಜೀವನದಲ್ಲಿ ಏನೇ ಸಮಸ್ಯೆಗಳಿದ್ದರೂ ಕೂಡ ಅವಳು ನಮ್ಮ ಸಮಸ್ಯೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಾಳೆ. ಆಕೆ ನಮ್ಮನ್ನು ಪ್ರೀತಿ ಮಾಡುತ್ತಾಳೆ, ಪೋಷಿಸುತ್ತಾಳೆ, ಅತೀವ ಕಾಳಜಿ ಮಾಡುತ್ತಾಳೆ. ಕಷ್ಟ ಬಂದಾಗ ನಮ್ಮ ಜೊತೆಗೆ ನಿಲ್ಲುವ ಕರುಣಾಮಯಿ ನಮ್ಮಕ್ಕ. ಸಂಕಷ್ಟದಲ್ಲಿ ನಮಗೆ ಸಹಾಯ ಮಾಡುತ್ತಾ, ಮಾರ್ಗದರ್ಶನ ನೀಡುತ್ತಾಳೆ.
2. ನಮ್ಮ ಬಗ್ಗೆ ಎಲ್ಲಾ ವಿಚಾರಗಳನ್ನು ತಿಳಿದುಕೊಂಡಿರುತ್ತಾಳೆ
ಅಮ್ಮನು ನಾವು ಏನನ್ನೂ ಹೇಳದಿದ್ದರೂ ನಮ್ಮ ಮನಸ್ಸಿನ ಮಾತನ್ನು ಅರ್ಥ ಮಾಡಿಕೊಳ್ಳುತ್ತಾಳಂತೆ. ಆದರೆ ಅಕ್ಕನೂ ಕೂಡ ನಮ್ಮ ಮನಸ್ಸನ್ನು ಚೆನ್ನಾಗಿಯೇ ಅರ್ಥ ಮಾಡಿಕೊಳ್ಳುತ್ತಾಳೆ. ಹೀಗಾಗಿ ಅಕ್ಕ ಇದ್ದರೆ ಏನು ಲಾಭ ಅಂದ್ರೆ ನಾವು ನಮ್ಮನ್ನು ಅರ್ಥ ಮಾಡಿಕೊಂಡಿರೋದಕ್ಕಿಂತ ಹೆಚ್ಚಾಗಿ ಆಕೆ ನಮ್ಮನ್ನು ಅರ್ಥ ಮಾಡಿಕೊಂಡಿರುತ್ತಾಳೆ. ಜೀವನದಲ್ಲಿ ನಾವು ಕಷ್ಟಗಳನ್ನು ಎದುರಿಸುತ್ತಿದ್ದರೆ ನಮ್ಮ ಮುಖ ನೋಡಿದ ತಕ್ಷಣ ಆಕೆಗೆ ತಿಳಿಯುತ್ತದೆ.
3. ನಿಮಗೆ ಬೇಕಾದುದ್ದನ್ನು ಖರೀದಿಸಿ ಕೊಡುತ್ತಾಳೆ
ಅಕ್ಕನಿಗೆ ತಮ್ಮ/ತಂಗಿಯ ಸಂತೋಷಕ್ಕಿಂತ ಮಿಗಿಲಾದ ಸಂತೋಷ ಮತ್ತೊಂದಿಲ್ಲ. ಆಕೆ ನಿಮಗೆ ತಪ್ಪು ಮಾಡಿದಾಗ ಎಷ್ಟೇ ಬೈದರೂ ಕೂಡ ಆಕೆಗೆ ನಿಮ್ಮ ಮೇಲಿರುವ ಪ್ರೀತಿ ಕಡಿಮೆಯಾಗೋದಿಲ್ಲ. ನಿಮ್ಮ ಹುಟ್ಟು ಹಬ್ಬವನ್ನು ಆಕೆ ಸ್ಪೆಷಲ್ ಆಗಿ ಆಚರಿಸುತ್ತಾಳೆ. ನೀವು ಆಸೆ ಪಟ್ಟ ವಸ್ತುವನ್ನೇ ಉಡುಗೊರೆಯಾಗಿ ನೀಡುತ್ತಾಳೆ.
4. ನಮ್ಮ ಬೇಡಿಕೆಗಳನ್ನು ಮೊದಲು ಅಕ್ಕನ ಮುಂದಿಡುತ್ತೇವೆ
ನಮಗೆ ಹತ್ತು ಹಲವಾರು ಬೇಡಿಕೆಗಳು ಇರುತ್ತದೆ. ಹಾಗಂತ ಅದನ್ನು ನೇರವಾಗಿ ಪೋಷಕರ ಬಳಿ ಕೇಳೋದಕ್ಕೆ ಆಗೋದಿಲ್ಲ. ಹೀಗಾಗಿ ನಾವು ಮೊದಲು ಆ ವಿಚಾರಗಳನ್ನು ಹೇಳುವುದೇ ಅಕ್ಕನ ಬಳಿ. ಅಕ್ಕ ಒಪ್ಪಿದ ನಂತರ ಅಮ್ಮ ಅಥವಾ ಅಪ್ಪನ ಬಳಿ ಆ ವಿಚಾರ ತಿಳಿಸುವಂತೆ ಆಕೆಯ ಮೇಲೆ ಒತ್ತಡ ಹಾಕುತ್ತೇವೆ.
ಹೀಗಾಗಿ ನಮ್ಮ ಬೇಡಿಕೆಗಳನ್ನು ಪೋಷಕರ ಮುಂದಿಡುವವಳೇ ಅಕ್ಕ. ಆದರೆ ಕೆಲವೊಂದು ಸಲ ಅಕ್ಕ ಬುದ್ಧಿ ಮಾತು ಹೇಳಿದರೆ ನಾವು ಕೇಳೋದಕ್ಕೆ ಸಿದ್ಧರಿರೋದಿಲ್ಲ. ಅಕ್ಕ ಏನೇ ಹೇಳಿದರೂ ನಮ್ಮ ಒಳ್ಳೆಯದಕ್ಕೆ ಹೇಳುತ್ತಾಳೆ. ಹೀಗಾಗಿ ಆಕೆಯ ಮಾತನ್ನು ನಿರ್ಲಕ್ಷ್ಯ ಮಾಡದರಿ.
5. ಅಕ್ಕನೇ ನಮಗೆ ಪ್ರೇರಣೆ
ಪ್ರೀತಿಯ ಅಕ್ಕನಿಂದ ಕಲಿಯೋದು ತುಂಬಾನೇ ಇದೆ. ಆಕೆಯಲ್ಲಿರುವ ತಾಳ್ಮೆ ಬೇರೆ ಯಾರಲ್ಲೂ ಇರೋದಕ್ಕೆ ಸಾಧ್ಯವೇ ಇಲ್ಲ. ಅಪ್ಪ- ಅಮ್ಮನನ್ನು ಬಿಟ್ಟರೆ ಅಕ್ಕನೇ ನಮ್ಮ ಮನೆಯ ರಿಯಲ್ ಹೀರೋ. ತಮ್ಮ/ತಂಗಿಯ ಬೇಡಿಕೆಗಾಗಿ ಅಪ್ಪ- ಅಮ್ಮನೊಂದಿಗೆ ಹೊಡೆದಾಡುವವಳು ಆಕೆ. ಯಾವುದೇ ಪರಿಸ್ಥಿತಿಯಲ್ಲೂ ನಮ್ಮ ಕೈ ಬಿಡೋದಿಲ್ಲ. ನಮ್ಮ ಜೊತೆಗೆ ನಿಂತು ನಮಗೆ ಶಕ್ತಿಯನ್ನು ತುಂಬುತ್ತಾಳೆ.
6. ಒಡಹುಟ್ಟಿದವರ ನಿಜವಾದ ತಾಯಿ "ಅಕ್ಕ"
ನಾವು ಶಾಲೆಗೆ ಹೋಗುವಾಗ ಅಕ್ಕ ನಮ್ಮನ್ನು ಯಾವ ರೀತಿ ರಕ್ಷಣೆ ಮಾಡುತ್ತಿದ್ದಳೋ ಅದೇ ರೀತಿ ದೊಡ್ಡವರಾದ ಮೇಲೆಯೂ ಕೂಡ ರಕ್ಷಣೆ ಮಾಡುತ್ತಾಳೆ. ನಮ್ಮ ಮೇಲೆ ಯಾವಾಗಲೂ ಆಕೆಯ ಕಣ್ಣು ಇದ್ದೇ ಇರುತ್ತದೆ. ನಾವು ದಾರಿ ತಪ್ಪಿದಾಗ ಪೋಷಕರ ಬಳಿ ಹೇಳುವ ಬದಲು ಆಕೆ ಮೊದಲು ನಮ್ಮ ತಿದ್ದಿ ಬುದ್ಧಿ ಹೇಳುತ್ತಾಳೆ. ಆಕೆ ದುಡಿಯುವ ಸಂದರ್ಭದಲ್ಲಿ ನಮ್ಮ ಬೇಡಿಕೆಗಳಿಗೆ ಇಲ್ಲ ಅಂದವಳಲ್ಲ. ಸಮಾಜದಲ್ಲಿ ನಮಗೆ ಉತ್ತಮ ಸ್ಥಾನ- ಮಾನ ದೊರೆಯಬೇಕೆಂದು ಹಾತೊರೆಯುವ ಮನಸ್ಸು ಅವಳದ್ದು.
ಅಕ್ಕ ನಮ್ಮ ಕುಟುಂಬದ ಸಪೋರ್ಟ್ ಸಿಸ್ಟಂ ಇದ್ದ ಹಾಗೆ. ಹಾಗೆಯೇ ಆಕೆ ನಮ್ಮೆಲ್ಲರ ಎರಡನೇ ತಾಯಿ. ಎಲ್ಲಾ ಸಂದರ್ಭದಲ್ಲಿ ನಮ್ಮ ಕೈ ಹಿಡಿದು ನಡೆಸುತ್ತಾಳೆ.



Click it and Unblock the Notifications
