Latest Updates
-
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು!
ಮಕ್ಕಳಿಗೆ ಬಾಳೆಹಣ್ಣು ಕೊಡುತ್ತಿದ್ದೀರಾ? ಹಾಗಾದ್ರೆ ಈ ವಿಚಾರ ಗೊತ್ತಿರಲಿ
ಬಾಳೆಹಣ್ಣು ಪೋಷಕಾಂಶಯುಕ್ತ ಒಂದು ಹಣ್ಣಾಗಿದೆ. ಮಕ್ಕಳು ಘನ ಆಹಾರ ಸೇವಿಸಲು ಶುರು ಮಾಡಿದ ತಕ್ಷಣ ಬಾಳೆಹಣ್ಣನ್ನು ಕೂಡ ಮಕ್ಕಳಿಗೆ ನೀಡಲಾಗುತ್ತದೆ. ಇದರಲ್ಲಿರುವ ಅಧಿಕ ಪೋಷಕಾಂಶಗಳು ಮಕ್ಕಳ ಬೆಳವಣಿಗೆಗೆ ಸಹಾಯಕಾರಿಯಾಗಿದೆ.
ಅಷ್ಟಕ್ಕೂ ಮಕ್ಕಳಿಗೆ ಬಾಳೆಹಣ್ಣು ನೀಡುವುದು ಉತ್ತಮನಾ? ಯಾವ ವಯಸ್ಸಿನಲ್ಲಿ ಮಗುವಿಗೆ ಬಾಳೆಹಣ್ಣು ನೀಡಬೇಕು? ಇದರಿಂದ ಆಗುವ ಉಪಯೋಗಗಳ ಬಗ್ಗೆ ತಿಳಿದುಕೊಳ್ಳೋಣ.

ಪೋಷಕಾಂಶಗಳು
ಬಾಳೆಹಣ್ಣಿನಲ್ಲಿ ಕಾರ್ಬೋಹೈಡ್ರೇಟ್ಸ್, ಫೈಬರ್, ಬಯೋಕ್ಡಿವ್ ಫೈಟೋಕೆಮಿಕಲ್ಸ್, ಪೊಟಾಶಿಯಂ ಮತ್ತು ಮೈಕ್ರೋ ನ್ಯೂಟ್ರಿಯೆಂಟ್‌ನಂತಹ ಅಧಿಕ ಪೋಷಕಾಂಶಗಳಿದೆ. ಇದು ಮಕ್ಕಳ ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು.
ಯಾವ ವಯಸ್ಸಿನಲ್ಲಿ ಮಕ್ಕಳಿಗೆ ಬಾಳೆಹಣ್ಣು ಕೊಡಬಹುದು?
ಸಾಧಾರಣವಾಗಿ ಮಕ್ಕಳಿಗೆ ಆರು ತಿಂಗಳು ತುಂಬಿದ ನಂತರ ತಾಯಿ ಹಾಲಿನ ಜೊತೆಗೆ ಇತರ ಕೆಲವು ಪದಾರ್ಥಗಳನ್ನು ಕೊಡೋದಿಕ್ಕೆ ಶುರು ಮಾಡ್ತಾರೆ. ಬಾಳೆಹಣ್ಣನ್ನು ಕೂಡ ಮಕ್ಕಳಿಗೆ ಆರು ತಿಂಗಳಾದ ಮೇಲೆ ಕೊಡಬಹುದು. ಒಂದು ಚಿಕ್ಕ ಬಾಳೆಹಣ್ಣನ್ನು ನಿತ್ಯವು ನೀಡಿದರೆ ಸಮಸ್ಯೆಯಿಲ್ಲ. ಆದರೆ ಮೊಟ್ಟ ಮೊದಲಿಗೆ ಭಾಳೆಹಣ್ಣು ನೀಡುವಾಗ ಅದನ್ನು ಕಿವುಚಿ ಚಮಚದ ಸಹಾಯದಿಂದ ಕೊಟ್ಟರೆ ಒಳ್ಳೆಯದು.
ಕಫಾ ಇರುವ ಸಂದರ್ಭದಲ್ಲಿ ಬಾಳೆಹಣ್ಣು ಕೊಡಬಹುದಾ?
ಮಕ್ಕಳಿಗೆ ಕಫಾ ಇರುವ ಸಂದರ್ಭದಲ್ಲಿ ಆದಷ್ಟು ಬಾಳೆಹಣ್ಣು ನೀಡುವುದನ್ನು ಕಡಿಮೆ ಮಾಡಿ ಯಾಕಂದ್ರೆ ಕಫಾದ ಅಂಶ ಮತ್ತಷ್ಟು ಹೆಚ್ಚಾಗುತ್ತದೆ. ಇದಿಷ್ಟೇ ಅಲ್ಲ, ಕೆಲವು ಮಕ್ಕಳಿಗೆ ಬಾಳೆಹಣ್ಣು ತಿಂದರೆ ಅಲರ್ಜಿಯಂತಹ ಸಮಸ್ಯೆ ಉಂಟಾಗುತ್ತದೆ. ಅಂತವರಿಗೆ ಬಾಳೆಹಣ್ಣು ಕೊಡಲೇಬೇಡಿ.
ಬಾಳೆಹಣ್ಣು ತಿಂದರೆ ಮಗುವಿಗೆ ತೊಂದರೆಯಾಗುತ್ತಾ?
ಅತಿಯಾದ್ರೆ ಅಮೃತವು ವಿಷ ಅಂತಾರಲ್ಲ ಹಾಗೆ ಬಾಳೆಹಣ್ಣು ಆರೋಗ್ಯಕ್ಕೆ ಒಳ್ಳೆಯದು ಅಂತ ಸಿಕ್ಕಾಪಟ್ಟೆ ಬಾಳೆಹಣ್ಣು ಮಕ್ಕಳಿಗೆ ಕೊಡಬೇಡಿ. ಅವರ ವಯಸ್ಸಿಗೆ ತಕ್ಕ ಹಾಗೆ ಬಾಳೆಹಣ್ಣು ನೀಡಿ.
ಬಾಳೆಹಣ್ಣಿನಿಂದ ಆಗುವ ಆರೋಗ್ಯಕರ ಲಾಭಗಳು
1. ರಕ್ತ ಹೀನತೆ, ಕಣ್ಣಿನ ದೃಷ್ಟಿ ಸುಧಾರಿಸುತ್ತದೆ
ಮಾಗಿದ ಬಾಳೆಹಣ್ಣುಗಳು ಕಾರ್ಬೋಹೈಡ್ರೇಟ್‌ಗಳಿಂದ ಸಮೃದ್ಧವಾಗಿವೆ, ಇದು ಮಗುವಿನ ಸಾಕಷ್ಟು ಶಕ್ತಿಯನ್ನು ನೀಡುತ್ತದೆ. ಇದು ದೇಹದ ಒಟ್ಟಾರೆ ಆರೋಗ್ಯಕರ ಬೆಳವಣಿಗೆಗೆ ಸಹಾಯಕವಾಗಿದೆ. ಇದು ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ವಿಟಮಿನ್ ಬಿ ಅನ್ನು ಕೂಡ ಒಳಗೊಂಡಿದೆ. ಬಾಳೆಹಣ್ಣಿನಲ್ಲಿರುವ ಕಬ್ಬಿಣದ ಅಂಶವು ರಕ್ತಹೀನತೆಯನ್ನು ತಡೆಯಲು ಸಹಾಯ ಮಾಡುತ್ತದೆ. ಇನ್ನೂ ವಿಟಮಿನ್ ಎ ದೃಷ್ಟಿ ಸುಧಾರಿಸಲು ಸಹಾಯ ಮಾಡುತ್ತದೆ.
2. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಬಾಳೆಹಣ್ಣುಗಳು ಸಣ್ಣ ಪ್ರಮಾಣದ ವಿಟಮಿನ್ ಸಿ ಮತ್ತು ಜೈವಿಕ ಸಕ್ರಿಯ ಸಂಯುಕ್ತಗಳನ್ನು ಹೊಂದಿದೆ. ಉದಾಹರಣೆಗೆ ಕ್ಯಾರೊಟಿನಾಯ್ಡ್, ಇದು ಉತ್ಕರ್ಷಣ ನಿರೋಧಕ ಪರಿಣಾಮಗಳನ್ನು ಹೊಂದಿರುತ್ತದೆ. ಈ ಸಂಯುಕ್ತಗಳು ಪ್ರತಿರಕ್ಷಣಾ ಆರೋಗ್ಯವನ್ನು ಬೆಂಬಲಿಸುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತವೆ. ಮತ್ತು ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ.
3. ಮೂಳೆಯ ಆರೋಗ್ಯಕ್ಕೆ ಉತ್ತಮ
ಬಾಳೆಹಣ್ಣಿನಲ್ಲಿ ಅಧಿಕ ಪ್ರಮಾಣದ ಕ್ಯಾಲ್ಸಿಯಂ ಹಾಗೂ ಪಾಸ್ಫರಸ್ ಇದೆ. ಈ ಪೋಷಕಾಂಶಗಳು ಮಗುವಿನ ಮೂಳೆಯ ಆರೋಗ್ಯಕ್ಕೆ ತುಂಬಾನೇ ಉತ್ತಮ.
4. ಜೀರ್ಣಕ್ರಿಯೆಗೆ ಸಹಾಯಕಾರಿ
ಬಾಳೆಹಣ್ಣು ಅಧಿಕ ಫೈಬರ್ ಅಂಶವನ್ನು ಹೊಂದಿದೆ. ಇದು ಜೀರ್ಣ ಕ್ರಿಯೆಗೆ ಸಹಾಯ ಮಾಡುತ್ತದೆ. ಮಾಗಿದ ಮೃದುವಾದ ಬಾಳೆಹಣ್ಣಿನಲ್ಲಿ 75 ರಷ್ಟು ನೀರಿನ ಅಂಶವಿದೆ. ಕರುಳಿನ ಆರೋಗ್ಯಕ್ಕೆ ಬಾಳೆಹಣ್ಣು ಉತ್ತಮ ಆಹಾರ.
ಬಾಳೆಹಣ್ಣು ಮಕ್ಕಳಿಂದ ಹಿಡಿದು ದೊಡ್ಡವರಿಗೂ ತುಂಬಾನೇ ಉಪಯುಕ್ತ. ಆದರೆ ಮಕ್ಕಳಿಗೆ ಬಾಳೆಹಣ್ಣು ನೀಡುವಾಗ ಕೆಲವೊಂದು ಕ್ರಮಗಳನ್ನು ಕೈಗೊಂಡರೆ ಉತ್ತಮ.



Click it and Unblock the Notifications





