Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ಪೋಷಕರೇ ಹುಷಾರ್! ಮಕ್ಕಳು ನಿಮ್ಮಿಂದ ಈ ಕೆಟ್ಟ ಗುಣಗಳನ್ನು ಕಲಿಯುತ್ತಾರೆ!
ಮಕ್ಕಳಲ್ಲಿ ಒಳ್ಳೆಯ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕೆಂದು ಪ್ರತಿಯೊಬ್ಬ ತಂದೆ- ತಾಯಿಯೂ ಕೂಡ ಇಚ್ಛಿಸುತ್ತಾರೆ. ಅನೇಕ ಪೋಷಕರು ಚಿಕ್ಕ ವಯಸ್ಸಿನಲ್ಲೇ ಮಕ್ಕಳಲ್ಲಿ ಉತ್ತಮ ಜೀವನ ಮೌಲ್ಯಗಳನ್ನು ರೂಢಿಸಿಕೊಳ್ಳಲು ಪ್ರೇರೇಪಿಸುತ್ತಾರೆ. ನಾವು ಮಕ್ಕಳಲ್ಲಿ ಹೇಗೆ ಒಳ್ಳೆಯ ಗುಣಗಳು ಇರಬೇಕು ಎಂದು ಬಯಸುತ್ತೇವೆಯೋ ಅದೇ ರೀತಿ ನಮ್ಮಲ್ಲಿ ಒಳ್ಳೆಯ ಗುಣಗಳು ಇದ್ದಾಗ ಮಾತ್ರ ಮಕ್ಕಳು ಅದನ್ನು ಕಲಿತುಕೊಳ್ಳುತ್ತಾರೆ. ನಮ್ಮಲ್ಲಿ ಕೆಟ್ಟ ಗುಣಗಳಿದ್ದರೆ ಮಕ್ಕಳು ಕೂಡ ಅದನ್ನು ಕಲಿಯುತ್ತಾರೆ. ಹಾಗಾದ್ರೆ ಮಕ್ಕಳು ಪೋಷಕರಿಂದ ಕಲಿಯುವ ಕೆಟ್ಟ ಗುಣಗಳು ಯಾವುದು ಅನ್ನೋದನ್ನು ತಿಳಿಯೋಣ.
1. ಶಾಪ ಹಾಕುವುದು
ಸಾಮಾನ್ಯವಾಗಿ ನಾವು ಮನೆಯಲ್ಲಿ ಇರಬೇಕಾದರೆ ನಮ್ಮ ಶತ್ರುಗಳಿಗೆ, ನಮಗೆ ಆಗದವರಿಗೆ ಶಾಪ ಹಾಕುತ್ತೇವೆ. ಟಿವಿ ನೋಡುವಾಗ, ಅಥವಾ ಯಾರ ಜೊತೆಗಾದರು ಮಾತನಾಡುವಾಗ, ಡ್ರೈವಿಂಗ್ ಮಾಡುವ ಸಂದರ್ಭದಲ್ಲಿ ಬೇರೆಯವರಿಗೆ ಕೆಟ್ಟ ಪದಗಳಿಂದ ಬೈಯುವುದು, ಶಾಪ ಹಾಕುವುದು ಸಾಮಾನ್ಯ. ಆದರೆ ಆ ರೀತಿ ಪದ ಬಳಕೆ ಮಾಡುವ ಮೊದಲು ನಿಮ್ಮ ಹತ್ತಿರ ಯಾರಿದ್ದಾರೆ ಅನ್ನೋದನ್ನು ನೋಡಿಕೊಳ್ಳಿ. ಮಕ್ಕಳು ನಿಮ್ಮ ಹತ್ತಿರ ಇದ್ದಾಗ ನಿಮ್ಮ ಬಾಯಿಯಿಂದ ಅಂತಹ ಮಾತುಗಳು ಬರಲೇಬಾರದು. ಮಕ್ಕಳು ಕೂಡ ಅದನ್ನೇ ಕಲಿಯುತ್ತಾರೆ.

2. ಉದಾಸೀನ
ಉದಾಸೀನ ಅನ್ನೋದು ಪ್ರತಿಯೊಬ್ಬ ಮನುಷ್ಯನಿಗೂ ಇದ್ದೇ ಇರುತ್ತದೆ. ಹಾಗಂತ ಅದನ್ನೇ ಮೈಗೂಡಿಸಿಕೊಳ್ಳುವುದು ತಪ್ಪು. ನಿಮ್ಮನ್ನೇ ನೋಡಿಕೊಂಡು ಬೆಳೆಯುವ ನಿಮ್ಮ ಮಕ್ಕಳು ಕೂಡ ನಿಮ್ಮಂತೆ ಆಡೋದಕ್ಕೆ ಶುರು ಮಾಡುತ್ತಾರೆ. ಇದು ಅವರ ಭವಿಷ್ಯಕ್ಕೆ ಅಪಾಯವನ್ನು ತಂದೊಡ್ಡಲಿದೆ. ಹೀಗಾಗಿ ನಿಮಗೆ ಕೊಂಚ ಉದಾಸೀನ ಅನ್ನಿಸಿದರೂ ಕೂಡ ಮಕ್ಕಳ ಎದುರಿಗೆ ಅದನ್ನು ತೋರಿಸೋದಕ್ಕೆ ಹೋಗಬೇಡಿ.
3. ಮೂಗಿಗೆ ಬೆರಳು ಹಾಕುವುದು
ಪೋಷಕರು ಹೊತ್ತಲ್ಲದ ಹೊತ್ತಿನಲ್ಲಿ ಮೂಗಿಗೆ ಬೆರಳು ಹಾಕಬಾರದು. ಅದು ಕೂಡ ನಿಮ್ಮ ಮಕ್ಕಳ ಎದುರಿನಲ್ಲಿ ಈ ರೀತಿ ಮಾಡಲೇಬಾರದು. ಇದು ನೈರ್ಮಲ್ಯವಲ್ಲ. ಅಷ್ಟೇ ಅಲ್ಲದೇ ಮಕ್ಕಳು ಈ ಕೆಟ್ಟ ಅಭ್ಯಾಸಗಳನ್ನು ಬೇಗನೇ ಕಲಿತುಕೊಂಡು ಬಿಡುತ್ತಾರೆ. ಹೀಗಾಗಿ ಸ್ನಾನದ ಸಮಯದಲ್ಲೋ ಅಥವಾ ಮುಖ ತೊಳೆಯುವಾಗಲೋ ಈ ಎಲ್ಲಾ ಸ್ವಚ್ಛತಾ ಕೆಲಸಗಳನ್ನು ಮಾಡಿಕೊಳ್ಳಿ.
4. ಮಧ್ಯಪಾನ, ಧೂಮಪಾನ ಮಾಡಬೇಡಿ
ಸಾಮಾನ್ಯವಾಗಿ ಹೆಚ್ಚಿನವರಿಗೆ ಮಧ್ಯಪಾನ ಮತ್ತು ಧೂಮಪಾನ ಮಾಡುವ ಅಭ್ಯಾಸ ಇರುತ್ತದೆ. ಮನೆಯಲ್ಲಿ ಮಕ್ಕಳು ಇದ್ದಾರೆ ಅನ್ನೋದನ್ನು ಕೇರ್ ಮಾಡದೇ ಮಧ್ಯಪಾನ, ದೂಮಾಪಾನ ಮಾಡುತ್ತಾರೆ. ನಿಮಗೊತ್ತಾ ಒಂದು ಅಧ್ಯಯನಗಳ ಪ್ರಕಾರ ಪೋಷಕರಿಗೆ ಈ ರೀತಿಯ ಚಟಗಳು ಇದ್ದರೆ ಮಕ್ಕಳು ತಮ್ಮ ಹದಿ ಹರೆಯದ ವಯಸ್ಸಿನಲ್ಲೇ ಈ ಅಭ್ಯಾಸಗಳ ದಾಸರಾಗುವ ಸಾಧ್ಯತೆ ಇದ್ಯಂತೆ.
5. ಬೇರೆಯವರ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ
ಸಾಮಾನ್ಯವಾಗಿ ಮನೆಯಲ್ಲಿರುವ ಮಹಿಳೆಯರಿಗೆ ಅಕ್ಕ ಪಕ್ಕದ ಮನೆಯವರ ಬಗ್ಗೆ ಮಾತನಾಡುವ ಹವ್ಯಾಸ ಇರುತ್ತದೆ. ಕೆಲವೊಂದು ಸಲ ಅವರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ. ನಿಮ್ಮನ್ನೇ ನೋಡಿಕೊಂಡು ಬೆಳೆದ ಮಕ್ಕಳು ದೊಡ್ಡವರಾದ ಮೇಲೆ ಒಳ್ಳೆಯ ಬುದ್ಧಿಯನ್ನು ಕಲಿಯೋದಕ್ಕೆ ಹೇಗೆ ಸಾಧ್ಯ? ಅವರು ಕೂಡ ಇದೇ ಅಭ್ಯಾಸಗಳನ್ನು ರೂಢಿಸಿಕೊಳ್ಳುತ್ತಾರೆ.
6. ಉಗುರು ಕಡಿಯುವುದು
ಉಗುರು ಕಡಿಯುವುದು ತುಂಬಾನೇ ಕೆಟ್ಟ ಅಭ್ಯಾಸ. ಮಕ್ಕಳಿಂದ ಹಿಡಿದು ದೊಡ್ಡವರು ಕೂಡ ಈ ಅಭ್ಯಾಸಗಳನ್ನು ರೂಢಿಸಿಕೊಂಡು ಇರುತ್ತಾರೆ. ಮಕ್ಕಳ ಮುಂದೆ ನೀವು ಉಗುರು ಕಡಿಯುತ್ತಾ ಇದ್ದರೆ ಮಕ್ಕಳು ನಿಮ್ಮನ್ನು ನೋಡಿ ಆ ಅಭ್ಯಾಸ ಕಲಿಯುತ್ತಾರೆ. ಹಾಗೂ ದೊಡ್ಡವರಾದ ಮೇಲೆ ಆ ಅಭ್ಯಾಸಗಳಿಂದ ಹೊರಬರಲು ತುಂಬಾನೇ ಕಷ್ಟ ಆಗುತ್ತದೆ.
7. ವಿಪರೀತ ಕೋಪ ಮಾಡಿಕೊಳ್ಳುವುದು
ಕೋಪ ಮನುಷ್ಯನ ಸಹಜ ಗುಣ. ಆದರೆ ವಿಪರೀತ ಕೋಪ ಒಳ್ಳೆಯದಲ್ಲ. ಕೋಪವು ಮನುಷ್ಯ ನಿಯಂತ್ರಣವನ್ನು ಕಳೆದುಕೊಳ್ಳುವಂತೆ ಮಾಡಿ ಬಿಡುತ್ತದೆ. ಈ ಸಂದರ್ಭದಲ್ಲಿ ನೀವು ಮನೆಯವನ್ನು ನಿಂದಿಸೋದು, ಕೆಟ್ಟ ಪದಗಳಿಂದ ಬೈಯುವುದನ್ನು ಮಾಡಬಾರದು. ಚಿಕ್ಕವರಿರಬೇಕಾದರೆ ಮಕ್ಕಳು ನಿಮ್ಮ ನೋಡಿ ಹೆದರುತ್ತಾರೆ ಮತ್ತು ದೊಡ್ಡವರಾದ ಮೇಲೆ ಅದನ್ನೇ ಕಲಿತುಕೊಳ್ಳುತ್ತಾರೆ.
ಮಕ್ಕಳು ತುಂಬಾನೇ ಸೂಕ್ಷ್ಮ. ಹೀಗಾಗಿ ಮಕ್ಕಳ ಮುಂದೆ ಎಷ್ಟು ಸಮಾಧಾನವಾಗಿ ವರ್ತಿಸುವುದಕ್ಕೆ ಸಾಧ್ಯವಾಗುತ್ತದೆಯೋ ಅಷ್ಟು ಸಮಾಧಾನವಾಗಿ ಇದ್ದರೆ ಒಳ್ಳೆಯದು. ಜೊತೆಗೆ ಆದಷ್ಟು ಉತ್ತಮ ಮೌಲ್ಯಗಳನ್ನೇ ಮಕ್ಕಳು ರೂಢಿಸಿಕೊಳ್ಳುವಂತೆ ನೋಡಿಕೊಳ್ಳಿ.



Click it and Unblock the Notifications

