Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
Superfetation:ಗರ್ಭಿಣಿಯಾಗಿದ್ದಾಗಲೇ ಮತ್ತೆ ಗರ್ಭಧರಿಸಿದಳು ಈ ಮಹಿಳೆ!
ಮೂವತ್ತು ವರ್ಷದ ಮಹಿಳೆ ಎರಡನೇ ಬಾರಿ ಗರ್ಭಧರಿಸಿದ್ದರು, ಆದರೆ ಗರ್ಭಧಾರಣೆಯಾಗಿ 7 ವಾರಗಳು ಕಳೆದ ಬಳಿಕ ಮತ್ತೊಮ್ಮೆ ಗರ್ಭಧಾರಣೆಯಾಗಿರುವುದು ಅಲ್ಟ್ರಾಸೌಂಡ್‌ನಲ್ಲಿ ಕಂಡು ಬಂದಿದೆ. ಇದು ಅಪರೂಪದಲ್ಲಿ ಅಪರೂಪದ ಘಟನೆಯಾಗಿದ್ದು ವೈದ್ಯಕೀಯ ಭಾಷೆಯಲ್ಲಿ ಇದಕ್ಕೆ ಸೂಪರ್‌ಫೆಟೇಷನ್ ಎಂದು ಕರೆಯಲಾಗುವುದು.

ವಿಶ್ವದಲ್ಲಿ ಈ ರೀತಿ ಶೇ. 0.3ರಷ್ಟು ಮಹಿಳೆಯರಿಗೆ ಉಂಟಾಗುತ್ತದೆ, ತುಂಬಾ ಕೇಸ್‌ಗಳಲ್ಲಿ ಈ ರೀತಿಯಾದರೆ ಎರಡನೇ ಮಗು ಸಾವನ್ನಪ್ಪುವ ಸಾಧ್ಯತೆ ಹೆಚ್ಚು, ಅದೃಷ್ಟವಶಾತ್ ಈ ಮಹಿಳೆಯ ಎರಡೂ ಮಕ್ಕಳು ಆರೋಗ್ಯವಂತರಾಗಿದ್ದಾರೆ.
ಸೂಪರ್‌ಫಿಟೇಷನ್ ಗರ್ಭ ಧರಿಸಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆಯ ಹೆಸರು ಕಾರಾ ವಿನ್‌ಹೋಲ್ಡ್. ಇವರಿಗೆ ಈ ಗರ್ಭಧಾರಣೆಯ ಮೊದಲು ಎರಡು ಬಾರಿ ಗರ್ಭಪಾತವಾಗಿತ್ತು.
ಇದರಿಂದ ಅವರು ತುಂಬಾ ನೋವು ಅನುಭವಿಸಿದ್ದರು, ಈಗ ದೇವರು ಡಬಲ್ ಖುಷಿ ಒಟ್ಟಾಗಿ ನೀಡಿದ್ದಾನೆ.
ಕಾರಾ ಮೊದಲ ಮಗುವಿಗೆ 2018ರಲ್ಲಿ ಜನ್ಮ ನೀಡಿದರು. ಅದಾಗಿ ಮತ್ತೆ ಮಗು ಬೇಕೆಂದು ಬಯಸಿ ಪ್ರಯತ್ನಿಸಿದಾಗ ಎರಡು ಬಾರಿ ಗರ್ಭಪಾತವಾಗಿತ್ತು. ಆದರೂ ತನ್ನ ನಂಬಿಕೆ ಕಳೆದುಕೊಂಡಿರಲಿಲ್ಲ. ಅವರ ನಂಬಿಕೆಯಂತೆಯೇ ಮತ್ತೆ ಗರ್ಭಧರಿಸಿದರು. ವೈದ್ಯರ ಬಳಿ ಹೋಗಿ ಪರೀಕ್ಷೆ ಮಾಡಿದಾಗ ಒಂದು ಮಗುವಿತ್ತು, ಆದರೆ 7 ವಾರಗಳ ಬಳಿಕ ಪರೀಕ್ಷೆ ಮಾಡಿದಾಗ ಅವಳಿ ಮಕ್ಕಳು ಅವರು ಗರ್ಭದಲ್ಲಿದ್ದೆವು.
ವೈದ್ಯರ ಪ್ರಕಾರ ಆಕೆಗೆ ಎರಡು ಬಾರಿ ಅಂಡಾಣು ಉತ್ಪತ್ತಿಯಾಗಿರಬಹುದು, ಈ ಕಾರಣದಿಂದಾಗಿ ಮತ್ತೆ ಗರ್ಭಧರಿಸಿರಬಹುದು ಎಂದು ಹೇಳಿದ್ದಾರೆ. ಕಾರಾ ಇದು ಮಾತ್ರ ಶೇ. 100ರಷ್ಟು ಅಚ್ಚರಿಯ ಸಂಗತಿಯಾಗಿದೆ, ಅದು ನನಗಾಗಿರುವುದು ಖುಷಿಯಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.



Click it and Unblock the Notifications
