Latest Updates
-
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ?
ನೋವಿರುವ ಅಥವಾ ನೋವಿಲ್ಲದ ಲಸಿಕೆಯಲ್ಲಿ ಮಗುವಿಗೆ ಯಾವುದು ಉತ್ತಮ?
ಲಸಿಕೆ (ಇಂಜೆಕ್ಷನ್) ಹಾಕಿಸಿಕೊಳ್ಳುವುದು ಎಂದರೆ ನಮಗೆ ಈಗಲೂ ಮೈ ಝಮ್ಮೆನಿಸುವುದು. ಯಾಕೆಂದರೆ ಅದರ ನೋವು ಕಡಿಮೆ ಆಗಿದ್ದರೂ ಕೆಲವೊಂದು ಸಲ ಅದು ಕೆಲವು ದಿನಗಳ ಕಾಲ ನೋವು ನೀಡುವುದು ಇದೆ. ಇಂತಹ ಸಂದರ್ಭ ಬಂದರೆ ಮುಂದೆ ಲಸಿಕೆ ಹಾಕಿಸಿಕೊಳ್ಳುವುದೇ ಬೇಡ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗುವುದು. ಹೀಗಾಗಿ ನಾವು ಲಸಿಕೆಗೆ ಹಿಂಜರಿಯುತ್ತೇವೆ. ಆದರೆ ಸಣ್ಣ ಮಕ್ಕಳಿಗೆ ಲಸಿಕೆ ಹಾಕುವಾಗಲೂ ಪೋಷಕರಿಗೂ ನೋವಾಗುವುದು. ಯಾಕೆಂದರೆ ಮಗು ಇಡೀ ದಿನ ಅಳುತ್ತಾ ಇರುತ್ತದೆ. ಹೀಗಾಗಿ ಮಗುವಿಗೆ ಲಸಿಕೆ ತುಂಬಾ ನೋವು ನೀಡುವುದು.

ಪೋಷಕರು ಮಗುವಿನ ನೋವನ್ನು ನೋಡಿ ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯುವರು. ಅದೇ ರೀತಿಯಾಗಿ ನೋವು ಇಲ್ಲದೆ ಇರುವಂತಹ ಲಸಿಕೆ ತಯಾರು ಮಾಡಬೇಕೆಂದು ಹೆಚ್ಚಿನ ಜನರು ಅಭಿಪ್ರಾಯಪಡುತ್ತಾರೆ. ನೋವು ಇಲ್ಲದೆ ಇರುವಂತಹ ಲಸಿಕೆಗಳು ಆತಂಕ ಕೂಡ ಕಡಿಮೆ ಮಾಡುವುದು. ನೋವಿಲ್ಲದೆ ಇರುವ ಲಸಿಕೆಯ ಬಗ್ಗೆ, ಅದರ ಸುರಕ್ಷತೆ, ಪರಿಣಾಮ, ಅನುಕೂಲ ಮತ್ತು ಅನಾನುಕೂಲಗಳ ಬಗ್ಗೆ ತಿಳಿಯುವ.

ನೋವಿಲ್ಲದ ಲಸಿಕೆ ಎಂದರೇನು?
ಲಸಿಕೆ ಕೊಡುವ ವೇಳೆ ಅಥವಾ ಇದರ ಬಳಿಕದ ಪ್ರತಿಕ್ರಿಯೆಯಿಂದಾಗಿ ನೋವು ಉಂಟು ಮಾಡಬಹುದು. ಸಾಂಪ್ರದಾಯಿಕ ಲಸಿಕೆ ಕೊಡುವ ವೇಳೆ ಇಂಜೆಕ್ಷನ್ ಬಳಕೆ ಮಾಡಲಾಗುವುದು. ಇದು ಕೊಡುವ ಜಾಗದಲ್ಲಿ ನೋವು ಉಂಟು ಮಾಡುವುದು. ಲಸಿಕೆ ಚುಚ್ಚುವ ವೇಳೆ ನೋವು ತುಂಬಾ ಕಡಿಮೆ ಇದ್ದರೂ ಕೆಲವೊಂದು ಸಲ ಇದರ ಪ್ರತಿಕ್ರಿಯೆಯಿಂದಾಗಿ ಬಳಿಕದ ನೋವು ಹೆಚ್ಚಾಗಬಹುದು.
ನೋವಿಲ್ಲದೆ ಇರುವಂತಹ ಕೆಲವೊಂದು ಲಸಿಕೆಗಳು ಕೂಡ ಇವೆ. ಇದನ್ನು ಬಾಯಿ ಅಥವಾ ಮೂಗಿನ ಮುಲಕ ನೀಡಬಹುದಾಗಿದೆ. ನೋವಿಲ್ಲದ ಲಸಿಕೆಗಳಿಂದ ಲಾಭಗಳು ಇದ್ದರೂ ಇಂದಿನ ತನಕ ಹೆಚ್ಚಿನ ಲಸಿಕೆಗಳು ಇಂಜೆಕ್ಷನ್ ಮೂಲಕವೇ ನೀಡಲಾಗುತ್ತಿದೆ.

ನೋವಿಲ್ಲದ ಲಸಿಕೆಗಳು
ಪೊಲಿಯೋ ಲಸಿಕೆ ಹೆಚ್ಚಾಗಿ ಮಕ್ಕಳಿಗೆ ಬಾಯಿ ಮೂಲಕ ಕೊಡಲಾಗುತ್ತದೆ. ಇದು ತುಂಬಾ ಪರಿಣಾಮಕಾರಿ ಲಸಿಕೆ ಆಗಿದೆ ಮತ್ತು ಯಶಸ್ಸು ಕೂಡ ಪಡೆದಿದೆ. ಇಂಜೆಕ್ಷನ್ ಗೆ ಹೋಲಿಕೆ ಮಾಡಿದರೆ ಈ ಲಸಿಕೆಗಳು ತುಂಬಾ ಅಗ್ಗವಾಗಿರುವುದು ಮತ್ತು ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಕ್ಕೆ ತುಂಬಾ ಒಳ್ಳೆಯದು.
ಇನ್ಫ್ಲುಯೆನ್ಸ ವೈರಸ್ ಗೆ ಮಕ್ಕಳಿಗೆ ಮೂಗಿನ ಮೂಲಕ ಕೊಡುವ ಫ್ಲಮಿಸ್ಟ್ ಮತ್ತು ಕೊಲೆರಾಗೆ ಕೊಡುವಂತಹ ಡುಕೊರಾಲ್, ರೊಟಾ ವೈರಸ್ ವಿರುದ್ಧ ನೀಡುವಂತಹ ರೊಟಾರಿಕ್ಸ್ ಮತ್ತು ರೊಟಾ ಟೆಕ್, ಟೈಪಾಯ್ಡ್ ಜ್ವರದ ವಿರುದ್ಧದ ವಿವೊಟಿಫ್ ಮತ್ತು ಒಪಿವಿ ಕೆಲವು ಅಧಿಕೃತ ಬಾಯಿಯ ಮೂಲಕ ನೀಡುವಂತಹ ಲಸಿಕೆಗಳು.
ಈ ಲಸಿಕೆಗಳನ್ನು ನಿರ್ವಹಿಸುವುದು ತುಂಬಾ ಸುಲಭ, ಸುರಕ್ಷಿತ ಮತ್ತು ಇದರಲ್ಲಿ ಕೆಲವೊಂದು ಲಸಿಕೆಗಳಿಗೆ ಶೀತಲೀಕರಣದಲ್ಲಿ ಶೇಖರಣೆ ಮಾಡಿ ಇಡಬೇಕಾಗಿಲ್ಲ. ಆದರೆ ಇಂಜೆಕ್ಷನ್ ಮೂಲಕ ನೀಡುವಂತಹ ಲಸಿಕೆಗೆ ಉತ್ಪಾದನೆ, ಶೇಖರಣೆ ಮತ್ತು ವಿತರಣೆ ವೇಳೆ ಶೀತಲೀಕರಣದಲ್ಲಿ ಇಡಬೇಕಾಗುತ್ತದೆ.
ಬಾಯಿ ಮೂಲಕ ನೀಡುವಂತಹ ಪೊಲಿಯೋ ಲಸಿಕೆಯು ತುಂಬಾ ಜನಪ್ರಿಯವಾಗಿದೆ ಮತ್ತು ಇದು ಭಾರತದಂತಹ ರಾಷ್ಟ್ರಗಳಲ್ಲಿ ಪೊಲಿಯೋ ನಿರ್ಮೂಲನದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಪೊಲಿಯೋ ನಿವಾರಣೆ ಮಾಡಲು ತುಂಬಾ ಕಠಿಣ ದೇಶವೆಂದು ಪಟ್ಟಿ ಮಾಡಲ್ಪಟ್ಟಿದ್ದ ದೇಶದಲ್ಲಿ ಭಾರತವಿತ್ತು.
ಮೂಗು ಮತ್ತು ಬಾಯಿಯ ಮೂಲಕವಾಗಿ ನೋವಿಲ್ಲದೆ ಲಸಿಕೆ ನೀಡಬಹುದು. ಆದರೆ ಹೆಚ್ಚಿನವರು ನೋವಿಲ್ಲದ ಲಸಿಕೆ ಎಂದರೆ ಅದು ಇಂಜೆಕ್ಷನ್ ಮೂಲಕವೇ ನೋವಿಲ್ಲದೆ ನೀಡುವ ಲಸಿಕೆ ಎಂದು ಭಾವಿಸಿರುವರು.

ನೋವಿಲ್ಲದೆ ಇರುವ ಲಸಿಕೆಗಳು ಯಾವುದು?
ಇತರ ಜೀವಕೋಶೀಯ ಲಸಿಕೆಯನ್ನು ನೋವಿಲ್ಲದ ಲಸಿಕೆ ಎಂಧು ಕರೆಯಲಾಗುತ್ತದೆ. ಈ ರೀತಿಯ ಲಸಿಕೆಯಲ್ಲಿ ಜೀವಕೋಶದ ಒಂದು ಭಾಗವು ಇರುವುದು. ಥೀಸೆಲ್ಯುಲಾರ್ ಲಸಿಕೆಯನ್ನು ನೋವಿಲ್ಲದೆ ಇರುವುದು ಎಂದು ಪರಿಗಣಿಸಲಾಗಿದೆ. ಇದನ್ನು ನೀಡಿದ ಬಳಿಕ ಪ್ರತಿರೋಧಕವು ತುಂಬಾ ಕಡಿಮೆ ಪ್ರತಿಕ್ರಿಯಿಸುವುದು. ಸಂಪೂರ್ಣ ಜೀವಕೋಶದ ಲಸಿಕೆಗೆ ದೇಹವು ನೀಡುವಂತಹ ಪ್ರತಿಕ್ರಿಯೆಯು ಇದಕ್ಕಿಂತಲೂ ಹೆಚ್ಚಾಗಿರುವುದು.
ನೋವಿಲ್ಲದೆ ಇರುವ ಲಸಿಕೆ ಎಂದರೆ ಅದು ನೋವು ಉಂಟು ಮಾಡುವುದಿಲ್ಲ ಎಂದಲ್ಲ. ಇದು ಮಗುವಿಗೆ ಇಂಜೆಕ್ಷನ್ ಚುಚ್ಚಿದ ವೇಳೆ ನೋವು ಉಂಟು ಮಾಡುವುದು. ಲಸಿಕೆ ನೀಡಿದ ಬಳಿಕ ಮಕ್ಕಳು ಅಳುತ್ತಾರೆಯಾ ಎನ್ನುವುದನ್ನು ಇಲ್ಲಿ ಗಮನಿಸಲಾಗುತ್ತದೆ.
ಮಕ್ಕಳಿಗೆ ನೀಡುವಂತಹ ನೋವಿಲ್ಲದೆ ಇರುವಂತಹ ಲಸಿಕೆ ಎಂದರೆ ಡಿಟಿಎಪಿ. ಇದರಲ್ಲಿ ಡಿಫ್ತಿರಿಯಾ ಮತ್ತು ಟೆಟನಸ್ ಟಾಕ್ಸಾಯ್ಡ್ ಗಳು ಇವೆ.

ಮಗುವಿಗೆ ನೋವಿಲ್ಲದೆ ಇರುವ ಲಸಿಕೆ ನೀಡುವುದು ಸುರಕ್ಷಿತವೇ?
ಲೈಸನ್ಸ್ ಹೊಂಧಿರುವ ಮತ್ತು ಪರಿಣಾಮಕಾರಿ ಆಗಿರುವಂತಹ ನೋವಿಲ್ಲದ ಲಸಿಕೆಗಳನ್ನು ತುಂಬಾ ಸುರಕ್ಷಿತ ವಿಧಾನದಿಂದ ತಯಾರಿಸುವ ಕಾರಣದಿಂದಾಗಿ ಇವುಗಳು ತುಂಬಾ ಸುರಕ್ಷಿತ. ಲಸಿಕೆಗಳಿಗೆ ಆಹಾರ ಮತ್ತು ಔಷಧಿ ಆಡಳಿತ (ಎಫ್ ಡಿಎ) ಅನುಮತಿ ನೀಡಲಾಗುತ್ತದೆ ಮತ್ತು ಅಮೆರಿಕಾದ ರೋಗ ನಿಯಂತ್ರಕ ಹಾಗೂ ತಡೆ ಕೇಂದ್ರ(ಸಿಡಿಸಿ) ಇದನ್ನು ಹಲವಾರು ವರ್ಷಗಳ ಸುರಕ್ಷತೆ ಪರೀಕ್ಷೆ ಬಳಿಕ ಅನುಮೋದಿಸುವುದು. ಇಂತಹ ಲಸಿಕೆಗಳು ಬಳಕೆಗೆ ಸಿಗುವ ಮೊದಲು ಹಲವಾರು ರೀತಿಯ ಗುಣಮಟ್ಟ ನಿಯಂತ್ರಣ ಪರೀಕ್ಷೆಗೆ ಒಳಪಡುವುದು.
ಯಾವುದೇ ದೇಶದ ರೋಗನಿರೋಧಕ ಲಸಿಕೆ ಪಟ್ಟಿಯಲ್ಲಿಅಸೆಲ್ಯುಲಾರ್ ಒಳಗೊಂಡಿದ್ದರೆ ಆಗ ಮಕ್ಕಳ ತಜ್ಞರ ಸಲಹೆ ಬಳಿಕವಷ್ಟೇ ಇದನ್ನು ನೀಡಬಹುದಾಗಿದೆ. ರೋಗಕ್ಕೆ ಮಗುವಿಗೆ ಲಸಿಕೆ ನೀಡುವುದು ತುಂಬಾ ಮುಖ್ಯ. ಮಗು ಇಲ್ಲಿ ಅಳುತ್ತಿದೆಯಾ ಅಥವಾ ಇಲ್ಲವಾ ಎನ್ನುವುದನ್ನು ನೀವು ಹೆಚ್ಚಾಗಿ ಗಮನಿಸಬಾರದು.

ನೋವಿಲ್ಲದೆ ಇರುವುದು ಅಥವಾ ನೋವಿರುವುದು? ಯಾವುದು ಉತ್ತಮ ಆಯ್ಕೆ?
ಲೈಸನ್ಸ್ ಹೊಂದಿರುವ ಮತ್ತು ಅನುಮೋದಿತ ಲಸಿಕೆಗಳು ಪರಿಣಾಮಕಾರಿ. ಆದರೆ ನೋವಿಲ್ಲದೆ ಇರುವುದು ಮತ್ತು ನೋವಿರುವುದರ ಬಗ್ಗೆ ಇರುವ ಕೆಲವೊಂದು ಅಂಶಗಳನ್ನು ನೀವು ಗಮನಿಸಬೇಕಾಗಿದೆ.
ಅಸೆಲ್ಯುಲಾರ್ ಲಸಿಕೆ ಬಗ್ಗೆ ಮಾಡಿರುವಂತಹ ಅಧ್ಯಯನ ಪ್ರಕಾರ ಇದು ಸಂಪೂರ್ಣ ಕೋಶದ ಲಸಿಕೆಯಂತೆ ತುಂಬಾ ಪರಿಣಾಮಕಾರಿ.
ಮೂರು ಹನಿ ಅಸೆಲ್ಯುಲಾರ್ ಲಸಿಕೆಯು ಸಂಪೂರ್ಣ ಜೀವಕೋಶದ ಲಸಿಕೆಯಂತೆ ಮಧ್ಯಮ ಮತ್ತು ತೀವ್ರ ರೋಗಗಳಿಂದ ಪರಿಹಾರ ನೀಡುವುದು. ನೋವು, ಊತ, ಕೆಂಪಾಗುವುದು ಮತ್ತು ಜ್ವರ ಅಸೆಲ್ಯುಲಾರ್ ಲಸಿಕೆಯಲ್ಲಿ ತುಂಬಾ ಕಡಿಮೆ ಇರುವುದು.
ಡಿಟಿಎಪಿ ಲಸಿಕೆ ಪಡೆದ ಮಕ್ಕಳಲ್ಲಿ ಅಧಿಕ ಜ್ವರ, ಹೈಪೊಟೋನಿಕ್ ಮತ್ತು ಹೈಪೋರೆಸ್ಪಾನ್ಸಿವ್ ಇತ್ಯಾದಿಗಳು ಸಾಮಾನ್ಯವಾಗಿರುತ್ತದೆ.

ನೋವಿಲ್ಲದೆ ಇರುವ ಲಸಿಕೆ ಮಿತಿಗಳು
2009 ಮತ್ತು 2010ರಲ್ಲಿ ನಾಯಿ ಕೆಮ್ಮಿಗೆ ಡಿಟಿಎಪಿ ತೆಗೆದುಕೊಂಡು ಮಕ್ಕಳಲ್ಲಿ ಸಂಪೂರ್ಣ ಕೋಶ ಲಸಿಕೆ ತೆಗೆದುಕೊಂಡು ಮಕ್ಕಳಿಗಿಂತ ರೋಗದ ಸಮಸ್ಯೆಯು ಹೆಚ್ಚಾಗಿತ್ತು. ನಾಯಿಕೆಮ್ಮಿಗೆ ಅಸೆಲ್ಯುಲಾರ್ ಲಸಿಕೆ ತೆಗೆದುಕೊಂಡ ಬಳಿಕವೂ ಮಕ್ಕಳಲ್ಲಿ ಇದು ಕಾಣಿಸಿಕೊಂಡಿರುವುದು ಕೆಲವೊಂದು ರಾಷ್ಟ್ರಗಳಲ್ಲಿ ವರದಿ ಆಗಿದೆ. ಭಾರತೀಯ ಮಕ್ಕಳ ತಜ್ಞರ ಅಕಾಡಮಿಯು ಪ್ರಾಥಮಿಕವಾಗಿ ಸಂಪೂರ್ಣ ಕೋಶದ ಲಸಿಕೆ ನೀಡಲಾಗುತ್ತದೆ ಮತ್ತು ಅಸೆಲ್ಯುಲಾರ್ ಲಸಿಕೆಯನ್ನು ವಿಶೇಷ ಸಂದರ್ಭಧಲ್ಲಿ ಮಾತ್ರ ನೀಡಲಾಗುವುದು.
ಕೈಗಾರಿಕರಣಗೊಂಡ ಹೆಚ್ಚಿನ ದೇಶಗಳು ಅಸೆಲ್ಯುಲಾರ್ ಲಸಿಕೆಯನ್ನು ಬಳಕೆ ಮಾಡುತ್ತಲಿವೆ. ಮಕ್ಕಳಲ್ಲಿ ಪ್ರತಿರೋಧ ಮತ್ತು ಇದನ್ನು ಇನ್ನಷ್ಟು ಹೆಚ್ಚು ಶಕ್ತಿಯಾಗಿ ಬಳಸಲು ಅಧ್ಯಯನಗಳ ಅಗತ್ಯವಿದೆ. ಮಕ್ಕಳ ತಜ್ಞರು ನೋವಿಲ್ಲದೆ ಇರುವ ಲಸಿಕೆಯು ಆಯಾಯ ರಾಷ್ಟ್ರದಲ್ಲಿ ನಿಷೇಧಿಸಲ್ಪಟ್ಟಿದೆಯಾ ಎನ್ನುವ ಬಗ್ಗೆ ಕೂಡ ವರದಿ ನೀಡುವರು.
ನೋವಿಲ್ಲದ ಮತ್ತು ನೋವಿರುವ ಲಸಿಕೆ ಬಗ್ಗೆ ಹಲವಾರು ರೀತಿಯಲ್ಲಿ ಹೊಂದಾಣಿಕೆ ಮಾಡುತ್ತಲಿದ್ದರೂ ಡಿಟಿಪಿ ಮತ್ತು ಡಿಟಿಎಪಿ ತುಂಬಾ ಪರಿಣಾಮಕಾರಿ ಆಗಿರುವುದು. ಆದರೆ ಇವುಗಳಿಂದ ಕಾಣಿಸಿಕೊಳ್ಳುವಂತಹ ಕೆಲವು ಅಲರ್ಜಿ ಪ್ರತಿಕ್ರಿಯೆ ಮತ್ತು ರಕ್ತದೊತ್ತಡ ಕಡಿಮೆ ಆಗುವಂತಹ ಸಮಸ್ಯೆ ಬಗ್ಗೆ ಇನ್ನಷ್ಟು ಅಧ್ಯಯನಗಳು ನಡೆಯಬೇಕಾಗಿದೆ.

ನೋವಿಲ್ಲದೆ ಇರುವ ಲಸಿಕೆಯ ಅನುಕೂಲಗಳು
ಸಂಪೂರ್ಣ ಜೀವಕೋಶದ ಲಸಿಕೆಗೆ ಹೋಲಿಸಿದರೆ ಅಸೆಲ್ಯುಲಾರ್ ಲಸಿಕೆಯು ತುಂಬಾ ನೋವುಂಟು ಮಾಡುವುದಿಲ್ಲ ಮತ್ತು ಇದು ಲಸಿಕೆ ನೀಡಿದ ಬಳಿಕ ಕೂಡ ಹೆಚ್ಚು ಪ್ರತಿಕ್ರಿಯೆ ನೀಡದು.

ನೋವಿಲ್ಲದ ಲಸಿಕೆಯ ಅನುಕೂಲಗಳು
ದೇಹದ ಪ್ರತಿಕ್ರಿಯೆ ಕಡಿಮೆ, ಇದರಲ್ಲಿ ಜ್ವರ, ಹೈಪೊಟೊನಿಯಾ ಇತ್ಯಾದಿಗಳು.
ಇಂಜೆಕ್ಷನ್ ನೀಡಿದ ಭಾಗದಲ್ಲಿ ತುಂಬಾ ಕಡಿಮೆ ಊತ ಮತ್ತು ಕೆಂಪಾಗುವುದು ಕಂಡುಬರುವುದು.
ಇದು ಹಲವಾರು ರೋಗಗಳ ವಿರುದ್ಧ ಹೋರಾಡುವಂತಹ ಪ್ರತಿರೋಧಕ ಶಕ್ತಿ ಒದಗಿಸುವುದು.
ಮೂಗು ಮತ್ತು ಬಾಯಿ ಮೂಲಕ ನೀಡುವ ಲಸಿಕೆ ನೀಡಲು ತುಂಬಾ ಸುಲಭ ಮತ್ತು ಅಗ್ಗದ್ದಾಗಿರುವುದು.
ಸಂಪೂರ್ಣ ಕೋಶದ ಲಸಿಕೆಗಳಿಗೆ ಹೋಲಿಸಿದರೆ ಅಸೆಲ್ಯೂಲಾರ್ ಲಸಿಕೆಯು ಅಡ್ಡಪರಿಣಾಮ ನೀಡುವುದು ತುಂಬಾ ಕಡಿಮೆ ಎಂದು ಪ್ರಯೋಗಾಲಯದ ಅಧ್ಯಯನಗಳು ಹೇಳಿವೆ. ಇದರಿಂದ ನೋವು ಉಂಟಾಗುವುದು. ಕೆಲವು ಮಕ್ಕಳಲ್ಲಿ ತೀವ್ರ ನೋವಿನಂತಹ ಅಡ್ಡಪರಿಣಾಮಗಳು ಕಂಡುಬರುವುದು ಎಂದು ಅಧ್ಯಯನಗಳು ಹೇಳಿವೆ.



Click it and Unblock the Notifications











