Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಗುವಿನ ಹೊಟ್ಟೆಯೊಳಗೆ ಭ್ರೂಣ, 40 ದಿನಗಳಿಂದ ಬೆಳೆಯುತ್ತಲೇ ಇದೆ!
ವೈದ್ಯಕೀಯ ಜಗತ್ತಿನಲ್ಲಿ ಅಪರೂಪದಲ್ಲಿ ಅಪರೂಪದ ಪ್ರಕರಣ ಹಾಗೂ ಈ ಪ್ರಕರಣ ವೈದ್ಯಕೀಯ ಜಗತ್ತಿಗೆ ಒಂದು ಶಾಕ್ ಕೂಡ. ಹೌದು 40 ದಿನದ ಮಗುವಿನ ಹೊಟ್ಟೆಯೊಳಗೆ ಭ್ರೂಣ ಬೆಳೆಯುತ್ತಿದೆ.

40 ದಿನದ ಮಗುವಿಗೆ ಹೊಟ್ಟೆ ಉಬ್ಬುತ್ತಿದೆ, ಸರಿಯಾಗಿ ಮೂತ್ರ ವಿಸರ್ಜನೆ ಮಾಡುತ್ತಿಲ್ಲ ಎಂದು ಬಿಹಾರದ ಮೋತಿಹರಿಯ ರಹಮಾನಿಯಾ ಮೆಡಿಕಲ್ ಸೆಂಟರ್‌ಗೆ ಕರೆತರಲಾಗಿತ್ತು. ಮಗುವಿಗೆ ಹೊಟ್ಟೆ ಉಬ್ಬಲು ಕಾರಣವೇನು, ಏಕೆ ಮೂತ್ರ ವಿಸರ್ಜನೆ ಸರಿಯಾಗುತ್ತಿಲ್ಲ ಎಂದು ಸಂಪೂರ್ಣ ಪರೀಕ್ಷೆ ಮಾಡಲಾಯಿತು. ನಂತರ ಮಗುವಿನ ಹೊಟ್ಟೆಯನ್ನು ಸ್ಕ್ಯಾನ್ ಮಾಡಲಾಯಿತು ಆಗ ಮಗುವಿನ ಹೊಟ್ಟೆಯೊಳಗೆ ಮತ್ತೊಂದು ಭ್ರೂಣವಿರುವುದು ಪತ್ತೆಯಾಗಿದೆ, ಇದು ನಿಜವಾಗಿಯೂ ನಮ್ಮೆಲ್ಲರಿಗೆ ಶಾಕ್ ಉಂಟು ಮಾಡಿತ್ತು ಎಂದು ಡಾ. ತರ್ಬೇಜ್ ಅಜೀಜ್ , ರಹಮಾನಿಯಾ ಮೆಡಿಕಲ್ ಸೆಂಟರ್ ವೈದ್ಯ ಹೇಳಿದ್ದಾರೆ.
ವೈದ್ಯರ ತಂಡ ಹಲವಾರು ಪರೀಕ್ಷೆಗಳನ್ನು ಮಾಡಲಾಯಿತು ಆಗ ಮಗುವಿನ ಹೊಟ್ಟೆಯೊಳಗೆ ಚಿಕ್ಕ ಭ್ರೂಣ ಪತ್ತೆಯಾಗಿತ್ತು ಮಾತ್ರವಲ್ಲ ಆ ಭ್ರೂಣ ಬೆಳೆಯುತ್ತಿದೆ ಕೂಡ.
ಅಪರೂಪದ ವೈದ್ಯಕೀಯ ಪ್ರಕರಣ
ಐದು ಲಕ್ಷ ಮಕ್ಕಳಲ್ಲಿ ಒಂದು ಮಗುವಿನಲ್ಲಿ ಈ ರೀತಿಯಾಗುವ ಸಾಧ್ಯತೆ ಇದೆ. ಇದು ತುಂಬಾ ಅಪರೂಪದ ಪ್ರಕರಣವಾಗಿದ್ದು ಇದನ್ನು ವೈದ್ಯಕೀಯ ಭಾಷೆಯಲ್ಲಿ fetus-in-fetu ಎಂದು ಕರೆಯಲಾಗುವುದು.
ಈ ಹಿಂದೆಯೂ ಈ ರೀತಿಯ ಪ್ರಕರಣ ನಡೆದಿದೆ. 5 ವರ್ಷದ ಹಿಂದೆ ಹಾಂಗ್‌ಕಾಂಗ್‌ನನಲ್ಲಿ ಇಂಥದ್ದೊಂದು ಪ್ರಕರಣ ದಾಖಲಾಗಿತ್ತು. 2019ರಲ್ಲಿ ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆ ಮಗುವಿನ ಹೊಟ್ಟೆಯೊಳಗೆ ಅವಳಿ ಭ್ರೂಣಗಳಿತ್ತು ಎಂದು ದಿ ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿತ್ತು.



Click it and Unblock the Notifications

