Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಎದೆಹಾಲು ಉತ್ಪತ್ತಿ ಹೆಚ್ಚಿಸುವ ಈ ಆಹಾರಗಳನ್ನು ಬಾಣಂತಿಯರು ತಪ್ಪದೇ ಸೇವಿಸಿ
ನವಜಾತ ಶಿಶುವಿಗೆ ತಾಯಿಯ ಎದೆಹಾಲೇ ಅಮೃತ. ಕೆಲಸಮಯದವರೆಗೆ ಎದೆಹಾಲು ಹೊರತುಪಡಿಸಿ, ಬೇರೆನನ್ನೂ ಮಗುವಿಗೆ ನೀಡದಂತೆ, ವೈದ್ಯರು ಶಿಫಾರಸ್ಸು ಮಾಡುತ್ತಾರೆ. ಆದರೆ, ಹೆಚ್ಚಿನ ಬಾಣಂತಿಯರಲ್ಲಿ ಮಗುವಿಗೆ ಅಗತ್ಯವಿರುವಷ್ಟು ಎದೆಹಾಲು ಉತ್ಪತ್ತಿ ಆಗುವುದಿಲ್ಲ. ಇದು ಮಗುವಿನ ಮೇಲೆ ನೇರ ಪರಿಣಾಮ ಬೀರುತ್ತದೆ, ಏಕೆಂದರೆ ನವಜಾತ ಶಿಶುಗಳು ಸಂಪೂರ್ಣವಾಗಿ ತಾಯಿಯ ಹಾಲಿನ ಮೇಲೆ ಅವಲಂಬಿತವಾಗಿದೆ.
ಆದ್ದರಿಂದ, ಮಗುವಿಗೆ ಸಾಕಷ್ಟು ಹಾಲು ಪೂರೈಕೆಯಾಗಬೇಕಾದರೆ, ಮಹಿಳೆಯರು ತಮ್ಮ ಆಹಾರದಲ್ಲಿ ಹಣ್ಣುಗಳು, ಬೀಜಗಳು ಮತ್ತು ಕೆಲವು ರೀತಿಯ ಮಸಾಲೆಗಳನ್ನು ಸೇರಿಸಬೇಕು. ಹಣ್ಣುಗಳನ್ನು ವಿಶೇಷವಾಗಿ ಸಿಟ್ರಸ್ ಹಣ್ಣುಗಳನ್ನು ಹಾಲುಣಿಸುವ ಮಹಿಳೆಯರು ತಿನ್ನಬಾರದು ಎಂದು ಹೇಳುವುದನ್ನು ಕೇಳಿರಬಹುದು, ಆದರೆ ಇದು ಸಂಪೂರ್ಣವಾಗಿ ಒಪ್ಪಿಕೊಳ್ಳುವಂತದ್ದಲ್ಲ. ಈ ಹಣ್ಣುಗಳು ಬಹಳಷ್ಟು ನೀರನ್ನು ಹೊಂದಿರುತ್ತವೆ. ಇದನ್ನು ಸೀಮಿತ ಪ್ರಮಾಣದಲ್ಲಿ ಸೇವಿಸುವ ಮೂಲಕ ದೇಹವನ್ನು ಹೈಡ್ರೇಟ್ ಮಾಡಿ, ಹಾಲು ಉತ್ಪಾದನೆಯಲ್ಲಿ ಸ್ವಲ್ಪ ಸಹಾಯ ಮಾಡುತ್ತದೆ. ಅದೇ ರೀತಿ ಹಾಲುಣಿಸುವ ತಾಯಂದಿರು ಯಾವ ಯಾವ ಆಹಾರಗಳನ್ನು ಸೇವಿಸಬೇಕು ಎಂಬುದನ್ನು ತಿಳಿಯೋಣ.

1. ನಿಂಬೆ-ಪುದೀನಾ ಪಾನೀಯ:
ಅದು ಬೇಸಿಗೆಕಾಲವಾಗಿರಲಿ ಅಥವಾ ಚಳಿಗಾಲವಾಗಿರಲಿ, ನಿಂಬೆ-ಪುದೀನಾದಿಂದ ತಯಾರಿಸಿದ ಪಾನೀಯವು ಪ್ರತಿ ಋತುವಿನಲ್ಲಿಯೂ ನಿಮ್ಮನ್ನು ತಾಜಾವಾಗಿರಿಸುತ್ತದೆ. ಪ್ರತಿದಿನ ಈ ಪಾನೀಯವನ್ನು ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯು ತನ್ನ ಕೆಲಸವನ್ನು ಸರಾಗವಾಗಿ ಮಾಡುತ್ತದೆ. ಇದು ಗ್ಯಾಸ್, ಉಬ್ಬುವುದು, ಆಮ್ಲೀಯತೆಯ ಸಮಸ್ಯೆಗಳನ್ನು ಉಂಟುಮಾಡುವುದಿಲ್ಲ. ಈ ಪಾನೀಯವು ದೇಹವನ್ನು ಹೈಡ್ರೀಕರಿಸುತ್ತದೆ, ಇದರಿಂದ ಮಗುವಿಗೆ ಸಾಕಷ್ಟು ಹಾಲು ಸಿಗುತ್ತದೆ.

2. ದ್ರಾಕ್ಷಿಗಳು- ಕಿವಿ ಸಲಾಡ್:
ವಿಟಮಿನ್ ಸಿ ಮತ್ತು ಫೈಬರ್ ಎರಡೂ ಹಣ್ಣುಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತವೆ. ಇದು ಇತ್ತೀಚೆಗೆ ಗರ್ಭಿಣಿಯಾಗಿರುವ ಮಹಿಳೆಯರಿಗೆ ಹಲವು ವಿಧಗಳಲ್ಲಿ ಅಗತ್ಯವಾಗಿರುತ್ತದೆ. ಈ ಸಲಾಡ್ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಈ ಕಾರಣದಿಂದಾಗಿ ಚಯಾಪಚಯವು ಆರೋಗ್ಯಕರವಾಗಿರುತ್ತದೆ ಮತ್ತು ಮುಖ್ಯವಾಗಿ, ಗಾಯಗಳು ತ್ವರಿತವಾಗಿ ಗುಣವಾಗುತ್ತವೆ. ಇದು ಹಾಲು ಉತ್ಪಾದಿಸಲು ಸಹ ಸಹಾಯ ಮಾಡುತ್ತದೆ.

3. ಟೊಮೇಟೊ ಸೂಪ್:
ನಿಮ್ಮ ಆಹಾರದಲ್ಲಿ ಟೊಮೆಟೊವನ್ನು ವಿವಿಧ ರೀತಿಯಲ್ಲಿ ಸೇರಿಸಿಕೊಳ್ಳಬಹುದು. ಸಲಾಡ್, ಸೂಪ್, ರಸಂ ಮುಂತಾದ ಹಲವು ಆಯ್ಕೆಗಳಿವೆ. ಟೊಮ್ಯಾಟೊದಲ್ಲಿ ಆಹಾರದ ಫೈಬರ್ ಇರುತ್ತದೆ, ಇದರಿಂದಾಗಿ ಕರುಳುಗಳು ಆರೋಗ್ಯಕರವಾಗಿರುತ್ತವೆ. ಇದರೊಂದಿಗೆ, ಎದೆ ಹಾಲು ಕಡಿಮೆಯಾಗಿದ್ದರೆ, ಖಂಡಿತವಾಗಿಯೂ ಅದನ್ನು ತಿನ್ನಬೇಕು.

4. ಕಿತ್ತಳೆ / ಕಿವಿ / ಮೋಸಂಬಿ ಸ್ಮೂಥಿ:
ಈ ಮೂರು ಹಣ್ಣುಗಳಿಂದ ತಯಾರಿಸಿದ ಸ್ಮೂಥಿಗಳು ಕುಡಿಯಲು ರುಚಿಕರ ಮಾತ್ರವಲ್ಲದೇ, ಬಾಣಂತಿಯರ ಎದೆ ಹಾಲು ಉತ್ಪಾದನೆಯಲ್ಲಿಯೂ ಸಹ ಸಹಕಾರಿಯಾಗಿವೆ. ಆದ್ದರಿಂದ ಇವುಗಳಲ್ಲಿ ಯಾವುದಾದರೂ ಹಣ್ಣಿನ ಸ್ಮೂಥಿ ತಯಾರಿಸಿ ಸೇವಿಸಬಹುದು.

5. ಮೆಂತ್ಯೆ ಗಂಜಿ:
ಮೆಂತ್ಯೆ ಕಾಳಿನಲ್ಲಿ ಗ್ಯಾಲಕ್ಟೋಗೊಗ್ಸ್ ಎನ್ನುವ ಅಂಶವಿದ್ದು, ಇದು ಎದೆಹಾಲು ಉತ್ಪತ್ತಿ ಹೆಚ್ಚು ಮಾಡುವುದು. ಬಾಣಂತಿಯರು ಮೆಂತ್ಯೆಕಾಳನ್ನು ತಮ್ಮ ಆಹಾರ ಕ್ರಮದಲ್ಲಿ ಸೇರಿಸಬೇಕು. ಆದ್ದರಿಂದ ಇದರ ಗಂಜಿ ಮಾಡಿ ಸೇವಿಸುವುದು ಸಹಕಾರಿ, ಇದಲ್ಲದೇ, ತರಕಾರಿ ಮೇಲೆ ಮೆಂತ್ಯೆ ಕಾಳಿನ ಹುಡಿ ಸಿಂಪಡಣೆ ಮಾಡಿ ಅಥವಾ ಮೆಂತ್ಯೆ ಕಾಳನ್ನು ಹಾಗೆ ರಾತ್ರಿ ವೇಳೆ ನೀರಿನಲ್ಲಿ ನೆನೆಯಲು ಹಾಕಿ ಮತ್ತು ಬೆಳಗ್ಗೆ ಎದ್ದು ಕುಡಿಯಿರಿ. ಜೊತೆಗೆ ನೀರಿನಲ್ಲಿ ಮೆಂತ್ಯೆ ಕಾಳನ್ನು ಹಾಗೆ ಕುದಿಸಿ ಮತ್ತು ಇದನ್ನು ಸೋಸಿಕೊಂಡು ಅದರ ಬಳಿಕ ಕುಡಿಯಬಹುದು.



Click it and Unblock the Notifications
