Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಚಳಿಗಾಲದಲ್ಲಿ ಪುಟ್ಟ ಕಂದಮ್ಮನ ಆರೋಗ್ಯ ಕಾಳಜಿ....
ಚಳಿಗಾಲವೆಂದರೆ ಭಾರೀ ಸವಾಲಿನದ್ದಾಗಿರುತ್ತದೆ. ಯಾಕೆಂದರೆ ನಮ್ಮ ಆರೋಗ್ಯ ಹಾಗೂ ತ್ವಚೆಯನ್ನು ಕಾಪಾಡಿಕೊಳ್ಳುವುದು ತುಂಬಾ ಕಠಿಣ ಸವಾಲು. ಸಣ್ಣ ಮಕ್ಕಳು ಇದ್ದರೆ ಅವರ ಆರೈಕೆ ಮಾಡುವುದು ಕಷ್ಟ.
ಅದರಲ್ಲೂ ಒಂದು ವರ್ಷಕ್ಕಿಂತ ಸಣ್ಣ ಮಕ್ಕಳು ಇದ್ದರೆ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ಮಕ್ಕಳಲ್ಲಿನ ಪ್ರತಿರೋಧಕ ವ್ಯವಸ್ಥೆಯು ಚಳಿಗಾಲದಲ್ಲಿ ಕಾಡುವಂತಹ ಸೋಂಕುಗಳನ್ನು ನಿವಾರಿಸುವಷ್ಟು ಬಲಿಷ್ಠವಾಗಿರುವುದಿಲ್ಲ. ಶಿಶುಗಳಿಗೆ ಈ ಹವಾಮಾನವು ತುಂಬಾ ಅಹಿತಕರವಾಗಿರುತ್ತದೆ ಮತ್ತು ಮೊದಲ ಸಲ ಇಂತಹ ಹವಾಮಾನಕ್ಕೆ ಅವುಗಳು ಹೊಂದಿಕೊಳ್ಳಲು ಪ್ರಯತ್ನಿಸುತ್ತವೆ. ಕಂದಮ್ಮನ ನಿದ್ದೆಯ ಅವಧಿ ಹೇಗಿರಬೇಕು? ಇತ್ತ ಗಮನಿಸಿ...

ಅದರಲ್ಲೂ ಸಣ್ಣ ಮಕ್ಕಳ ಚರ್ಮ ಕೂಡ ಚಳಿಗೆ ಹೊಂದಿಕೊಳ್ಳಲು ಕಷ್ಟಪಡುತ್ತದೆ. ಇದರಿಂದ ಶಿಶುಗಳನ್ನು ಚಳಿಗಾಲದಲ್ಲಿ ಯಾವ ರೀತಿ ಆರೈಕೆ ಮಾಡಬಹುದು ಎನ್ನುವ ಬಗ್ಗೆ ಇಲ್ಲಿ ಕೆಲವೊಂದು ಸಲಹೆಗಳನ್ನು ನೀಡಲಾಗಿದೆ. ಇದನ್ನು ಪಾಲಿಸಿಕೊಂಡು ಹೋಗಿ. ಚಳಿಗಾಲದಲ್ಲಿ ಶಿಶುಗಳ ಆರೈಕೆ ಮಾಡಿ.
ಬಿಸಿ ಬಟ್ಟೆ
ದೊಡ್ಡವರಿಗಿಂತ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ. ಇದಕ್ಕೆ ಮಕ್ಕಳನ್ನು ಹೆಚ್ಚಿನ ಬಟ್ಟೆಯಿಂದ ಸುತ್ತಿಡಬೇಕು. ಕೋಣೆಯಲ್ಲಿ ತಾಪಮಾನವನ್ನು ಪರೀಕ್ಷಿಸಿ ಅದಕ್ಕೆ ತಕ್ಕಂತೆ ಮಗುವಿಗೆ ಬಟ್ಟೆ ಧರಿಸಿ. ಮನೆಯಿಂದ ಹೊರಗಡೆ ಮಗುವನ್ನು ಕರೆದುಕೊಂಡು ಹೋಗುವಾಗ ಹೆಚ್ಚಿನ ಬಟ್ಟೆಯಿಂದ ಮಗುವನ್ನು ಮುಚ್ಚಿಕೊಳ್ಳಿ. ಇದರಿಂದ ಮಗುವಿಗೆ ಚಳಿಯಾಗುವುದು ತಪ್ಪುತ್ತದೆ. ಚಳಿಗಾಲದಲ್ಲಿ ಕಾಲ್ಚೀಲ ಮತ್ತು ಕೈಗವಸು ಧರಿಸುವುದು ಅತ್ಯಗತ್ಯ. ಹಸು ಗೂಸುಗಳಿಗೆ ಸಾಮಾನ್ಯವಾಗಿ ಕಾಡುವ 8 ತ್ವಚೆಯ ಸಮಸ್ಯೆಗಳು
ಭಾರವಾದ ಕಂಬಳಿ ಬೇಡ
ಹೆಚ್ಚಾಗಿ ಪೋಷಕರು ಸಣ್ಣ ಮಗುವಿಗೆ ರಾತ್ರಿ ವೇಳೆ ಭಾರವಾದ ಕಂಬಳಿಯನ್ನು ಹೊದಿಸುತ್ತಾರೆ. ಅದಾಗ್ಯೂ ಹೀಗೆ ಮಾಡುವುದರಿಂದ ಮಗು ಹಠಾತ್ ಆಗಿ ಸಾವನ್ನಪ್ಪುವ ಸಾಧ್ಯತೆ ಹೆಚ್ಚಿದೆ. ಬಿಸಿ ಬಟ್ಟೆಯನ್ನು ಮಗುವಿಗೆ ಸುತ್ತಿ. ಭಾರವಾದ ಕಂಬಳಿ ಮಗುವಿನ ಮೇಲೆ ಹಾಕಬೇಡಿ.
ಕೋಣೆಯ ತಾಪಮಾನ
ಮನೆಯ ಹೊರಗಡೆ ತಾಪಮಾನವು ಕಡಿಮೆಯಾಗುತ್ತಿರುವಾಗ ಕೋಣೆಯಲ್ಲಿ ಮಗುವಿಗೆ ಬೇಕಾದಂತೆ ತಾಪಮಾನವನ್ನು ಕಾಪಾಡುವುದು ತುಂಬಾ ಮುಖ್ಯ. ರಾತ್ರಿ ವೇಳೆ ಕೋಣೆಯ ಎಲ್ಲಾ ಕಿಟಕಿ ಬಾಗಿಲು ಹಾಗೂ ಬಾಗಿಲು ಮುಚ್ಚಿ ತಣ್ಣಗಿನ ಗಾಳಿ ಒಳಗೆ ಬರದಂತೆ ನೋಡಿಕೊಳ್ಳಬೇಕು.
ಮಸಾಜ್
ಹಿಂದಿನಿಂದಲೂ ಚಳಿಗಾಲದಲ್ಲಿ ಮಕ್ಕಳಿಗೆ ಮಸಾಜ್ ಮಾಡಿಕೊಂಡು ಬರುವುದು ರೂಢಿಯಾಗಿದೆ. ಒಳ್ಳೆಯ ಮಸಾಜ್ ಮಾಡಿದರೆ ಮಕ್ಕಳ ದೇಹವು ಬಿಸಿಯಾಗಿರುತ್ತದೆ. ಬಾದಾಮಿ ಎಣ್ಣೆ ಅಥವಾ ತೆಂಗಿನ ಎಣ್ಣೆಯನ್ನು ಬಳಸಿ. ಇದರಿಂದ ಚರ್ಮವು ಆರೋಗ್ಯಕರವಾಗಿರುವುದು. ಮಗುವಿಗೆ ಮಸಾಜ್ ಮಾಡಲು ಸೂಕ್ತವಾದ ಎಣ್ಣೆ ಯಾವುದು?
ಅತಿಯಾಗಿ ಮಕ್ಕಳ ಉತ್ಪನ್ನಗಳ ಬಳಕೆ ಮಾಡಬೇಡಿ
ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಅತಿಯಾಗಿ ಮಕ್ಕಳ ಉತ್ಪನ್ನಗಳನ್ನು ಬಳಕೆ ಮಾಡುವುದು ದೇಹಕ್ಕೆ ಒಳ್ಳೆಯದಲ್ಲ. ಕೆಲವರು ಶಾಂಪೂ, ಸೋಪು, ಲೋಷನ್ ಇತ್ಯಾದಿಗಳನ್ನು ಬಳಸುತ್ತಾರೆ. ಇದು ಮಕ್ಕಳಿಗೆ ತುಂಬಾ ಅಪಾಯಕಾರಿ. ಮಕ್ಕಳಿಗೆ ಹಗುರ ಸೋಪು ಅಥವಾ ಶಾಂಪೂ ಬಳಸಿದರೆ ಒಳ್ಳೆಯದು. ಪೋಷಕರೇ ನೆನಪಿರಲಿ ಬೇಬಿ ಪೌಡರ್ ತುಂಬಾ ಅಪಾಯಕಾರಿ!



Click it and Unblock the Notifications




