Latest Updates
-
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ!
ಮಗು ಸ್ತನ್ಯಪಾನ ತ್ಯಜಿಸಲು ಅನುಸರಿಸಬೇಕಾದ ವಿಧಾನಗಳು
ನಿಮ್ಮ ಮಗು ಸ್ತನ್ಯಪಾನ ಮಾಡುತ್ತಿರುವಾಗ ಅದನ್ನು ತ್ಯಜಿಸುವಂತೆ ಮಾಡುವುದು ಕಷ್ಟದದ ಕೆಲಸವೇ. ಆರು ತಿಂಗಳವರೆಗೆ ನಿಮ್ಮ ಮಗು ಮೊಲೆಹಾಲು ಉಣ್ಣುತ್ತದೆ. ನಂತರವೂ ಕೂಡ ಮಕ್ಕಳು ತಾಯಿಯ ಹಾಲನ್ನು ಆಶ್ರಯಿಸುತ್ತವೆ.
ಅವರಿಗೆ ಹಸಿವಾಗಿರಲಿ ಆಗದೇ ಇರಲಿ ಎದೆ ಹಾಲು ಕುಡಿಯುವುದು ಅವರಿಗೆ ಒಂದು ಅಭ್ಯಾಸವಾಗಿಬಿಟ್ಟಿರುತ್ತದೆ. ಹಾಗಿದ್ದರೆ ನಿಮ್ಮ ಮಗು ಮೊಲೆ ಹಾಲನ್ನು ತ್ಯಜಿಸಿ ಬೇರೆ ಆಹಾರಗಳನ್ನು ತಿನ್ನುವಂತೆ ಮಾಡಲು ಅನುಸರಿಸಬೇಕಾದ ಕ್ರಮಗಳೇನು ಎಂಬುದನ್ನು ಈ ಲೇಖನದಲ್ಲಿ ಅರಿಯೋಣ.
ಹೆರಿಗೆಯ ನಂತರ ಕಾಡುವ ಎಮೋಷನಲ್ ಪ್ರಾಬ್ಲಂ

ಬೇಯಿಸಿದ ಸೇಬು:
ಸೇಬನ್ನು ಸ್ವಲ್ಪ ನೀರು ಹಾಕಿ ಕುಕ್ಕರ್‌ನಲ್ಲಿ 2-3 ವಿಶಲ್ ಬರುವವರೆಗೆ ಬೇಯಿಸಿ. ಸಿಪ್ಪೆ ತೆಗೆದು ಉಳಿದ ಬೆಂದ ಹಣ್ಣನ್ನು ಮಗುವಿಗೆ ನೀಡಿ. ಇದು ಸ್ವಲ್ಪ ಸಿಹಿ ಮತ್ತು ಸಪ್ಪೆಯಾಗಿರುತ್ತದೆ. ಖಂಡಿತ ಮಕ್ಕಳು ಇದನ್ನು ಇಷ್ಟಪಡುತ್ತಾರೆ.

ನುರಿದ ಅನ್ನ:
ಅನ್ನವನ್ನು ಚೆನ್ನಾಗಿ ಬೇಯಿಸಿಕೊಳ್ಳಿ ಹಾಗೂ ಉಪ್ಪು ಹಾಕದ ಮೊಸರಿನೊಂದಿಗೆ ಮಿಶ್ರ ಮಾಡಿ. ಮಗುವಿಗೆ ನೀಡುವ ಅನ್ನವು ಚೆನ್ನಾಗಿ ಮ್ಯಾಶ್ ಮಾಡಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ನೀವು ಇದನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಿ ಕೊಳ್ಳಬಹುದು. ದಿನಾ ಇದನ್ನು ಮಗುವಿಗೆ ನೀಡಿದರೆ ಅವರು ಆರೋಗ್ಯವಂತರಾಗಿರುತ್ತಾರೆ.

ಬೇಯಿಸಿದ ಆಲೂಗಡ್ಡೆ:
ಬೇಯಿಸಿ ಮ್ಯಾಶ್ ಮಾಡಿದ ಆಲೂಗಡ್ಡೆ ಕೂಡ ಮಗುವಿಗೆ ಉತ್ತಮ ಆಹಾರವಾಗಿದೆ. ಇದಕ್ಕೆ ಸ್ವಲ್ಪ ಹಾಲನ್ನು ಹಾಕಿ ಕೂಡ ನೀವು ಅವರಿಗೆ ನೀಡಬಹುದು.

ಮ್ಯಾಶ್ ಮಾಡಲಾಗಿರುವ ಬಾಳೆಹಣ್ಣು:
ಬೀಜವಿಲ್ಲದ ಬಾಳೆಹಣ್ಣನ್ನು ನಿಮ್ಮ ಮಗುವಿಗೆ ನೀಡಿ ಮತ್ತು ಇದನ್ನು ಬೇಯಿಸಿ ಹಿಸುಕಿ ನಿಮ್ಮ ಕೈಯಿಂದಲೇ ಮಗುವಿಗೆ ತಿನ್ನಿಸಿ.

ಬೇಯಿಸಿದ ಬೇಳೆ ನೀರು:
ಬೇಯಿಸಿದ ಬೇಳೆಯ ನೀರು ನಿಮ್ಮ ಮಗುವಿಗೆ ಬೇಕಾದ ಉತ್ತಮ ಪೋಷಕಾಂಶಗಳನ್ನು ನೀಡುತ್ತದೆ. ಇದನ್ನು ಬಾಟಲಿಯಲ್ಲಿ ಹಾಕಿ ಮಗುವಿಗೆ ನೀವು ಸುಲಭವಾಗಿ ನೀಡಬಹುದು.

ಗ್ರೈಂಡ್ ಮಾಡಿದ ಕಿಚಿಡಿ:
ಅನ್ನ ಮತ್ತು ದಾಲನ್ನು ಚೆನ್ನಾಗಿ ಬೇಯಿಸಿ ನಂತರ ಇದನ್ನು ಮಿಕ್ಸರ್‌ನಲ್ಲಿ ಗ್ರೈಂಡ್ ಮಾಡಿ. ಇದು ನುಣ್ಣನೆ ಜ್ಯೂಸ್ ಆದ ನಂತರ ಮಗುವಿಗೆ ಇದನ್ನು ನೀಡಿ.

ನೀರು:
ನಿಮ್ಮ ಮಗುವಿಗೆ ನಿಮ್ಮ ಎದೆಹಾಲು ಕೊಡುವುದನ್ನು ನೀವು ನಿಲ್ಲಿಸುವಾಗ ಮುಖ್ಯವಾಗಿ ಗಮನ ಕೊಡಬೇಕಾಗಿರುವುದು ಮಗು ಕುಡಿಯುವ ನೀರಿಗೆ. ಎದೆಹಾಲಿನಿಂದ ಅದು ಸಾಕಷ್ಟು ನೀರನ್ನು ಕುಡಿಯುತ್ತಿತ್ತು. ನೀವು ಹಾಲು ನಿಲ್ಲಿಸಿದಾಗ ಅದಕ್ಕೆ ನೀರಿನ ಪ್ರಮಾಣ ಕಡಿಮೆಯಾಗುತ್ತದೆ.



Click it and Unblock the Notifications
