Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಮಗುವಿಗೆ ಎಣ್ಣೆ ಮಸಾಜ್ ಒಳ್ಳೆಯದೇ?
ಒಂಬತ್ತು ತಿಂಗಳ ನಂತರ ಪ್ರಪಂಚಕ್ಕೆ ಕಾಲಿಡುವ ಆ ನವಜಾತ ಶಿಶು ನಿಮ್ಮ ಸಂತೋಷದ ಹುಟ್ಟಿಗೆ ಕಾರಣವಾಗುತ್ತದೆ. ಆಗತಾನೇ ಜನಿಸಿದ ಆ ಮಗುವಿನ ಮೃದುವಾದ ತ್ಚಚೆ ಹೊಸ ಅನುಭವವನ್ನು ನೀಡುತ್ತದೆ. ಮಹಿಳೆ, ತಾಯಿಯಾದ ಸಾರ್ಥಕ್ಯವನ್ನು ಇಲ್ಲಿ ಕಾಣುತ್ತಾಳೆ.
ಇಂತಹ ಅಭೂತಪೂರ್ವ ನವಜಾತ ಶಿಶುವಿನ ಮೃದುವಾದ ತ್ಚಚೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ತಾಯಿಯಾದವಳು ನೋಡಿಕೊಳ್ಳುತ್ತಾಳೆ. ಆದರೆ ಕೆಲವು ಭಾರತೀಯ ಸಂಪ್ರದಾಯದ ಪ್ರಕಾರ ಮಾಡುವ ಮಗುವಿನ ಆರೈಕೆ, ಆ ಮಗುವಿಗೆ ಅಗತ್ಯವಿಲ್ಲದೇ ಇರಬಹುದು ಅದೇ ನವಜಾತ ಶಿಶುವಿಗೆ ಮಾಡುವ ಮಸಾಜ್ / ಅಂಗವರ್ಧನ!

ನಿಮ್ಮ ಹಿಂದಿನವರು ಮಗುವಿನ ಬೆಳವಣಿಗೆಗೆ ಮಸಾಜ್ ಸಹಾಯಕ ಎಂದಿರುವ ಕಾರಣಕ್ಕೆ, ನೀವು ಸಹ ನಿಮ್ಮ ಮಗುವಿಗೆ ನೀವೇ ಸ್ವತಃ ಮಸಾಜ್ ಮಾಡುವ ಪ್ರಕ್ರಿಯೆಯಲ್ಲಿ ತೊಡಗಬಹುದು. ಆದರೆ ನಾವು ಕೆಲವು ವೈದ್ಯರು ಮತ್ತು ಮಕ್ಕಳ ತಜ್ಞರ ಬಳಿ ನವಜಾತ ಶಿಶುವಿಗೆ ಮಸಾಜ್ ಮಾಡುವ ಅಗತ್ಯಗಳನ್ನು ಪ್ರಶ್ನಿಸಿದಾಗ ಅವರು ಉತ್ತರಿಸಿದ್ದು ಹೀಗೆ.
ನಿಜವಾಗಿಯೂ ನವಜಾತ ಶಿಶುವಿಗೆ ಮಸಾಜ್ ನ ಅಗತ್ಯವಿದೆಯೇ? ಈ ಪದ್ಧತಿ ಎಷ್ಟು ಮುಖ್ಯ?
ಮಸಾಜ್ ಎನ್ನುವುದು ವಯಕ್ತಿಕ ನಿರ್ಧಾರ. ಆದರೆ ವೈಜ್ಞಾನಿಕ ಸಂಶೋಧನೆಗಳ ಪ್ರಕಾರ ಈ ಮಸಾಜ್ ನವಜಾತ ಶಿಶುವಿಗೆ ಅಗತ್ಯವಿಲ್ಲ. ಇದು ಕೇವಲ ಭಾರತ ಮತ್ತು ಏಷ್ಯಾದ ಇತರ ರಾಷ್ಟ್ರಗಳಲ್ಲಿರುವ ಸಂಪ್ರದಾಯವಷ್ಟೇ!
ಇದು ಮಕ್ಕಳ ದೇಹಕ್ಕೆ ತೊಂದರೆಮಾಡಬಲ್ಲದೇ?
ಮಕ್ಕಳಿಗೆ ಮಸಾಜ್ ಮಾಡುವ ಆಯಾ ಅಥವಾ ಸಹಾಯಕಿಯರು ಕೇವಲ ಹಣಕ್ಕಾಗಿಯೇ ಈ ಕೆಲಸಮಾಡುವವರಾಗಿದ್ದರೆ ಅವರು ನಿಮ್ಮ ಮಗುವಿನ ಮಸಾಜ್ ಸರಿಯಾಗಿ ಮಾಡದೇ ಇದರಿಂದ ಮಗುವಿಗೆ ನೋವನ್ನುಂಟು ಮಾಡಬಹುದು. ಅಲ್ಲದೇ ಅವರು ಸಾಕಷ್ಟು ಮನೆಗಳಲ್ಲಿ ಕೆಲಸ ಮಾಡುವುದರಿಂದ ಸೋಂಕು ಉಂಟಾಗುವ ಸಾಧ್ಯತೆಗಳೂ ಹೆಚ್ಚು. ಆದರಿಂದ ಈ ವಿಷಯದಲ್ಲಿ ಸಾಕಷ್ಟು ಮುಂಜಾಗ್ರತೆವಹಿಸಬೇಕು.
ಮಗುವಿಗೆ ಮಸಾಜ್ ಯಾರು ಮಾಡಬೇಕು?
ಮಸಾಜ್ ಮಾಡುವುದು ಮಗುವಿನ ದೇಹದ ವಿಶ್ರಾಂತಿಗಾಗಿ. ಆದ್ದರಿಂದ ಮಕ್ಕಳ ಬಗ್ಗೆ ಮಾನಸಿಕ ಬಾಂಧವ್ಯವನ್ನು ಬೆಳೆಸಿಕೊಂಡಿರುವ ಪಾಲಕರೇ ಮಸಾಜ್ ನ್ನು ಮಾಡಬೇಕು.
ಮಸಾಜ್ ಮಾಡಲು ಸರಿಯಾದ ಕ್ರಮ ಯಾವುದು?
ಮಕ್ಕಳಿಗೆ ಮಸಾಜ್ ಮಾಡುವಾಗ ಹೆಚ್ಚು ಒತ್ತಡವನ್ನು ಹಾಕಬಾರದು. ಅಥವಾ ಅಲಂಕಾರಿಕ ಎಣ್ಣೆಗಳು ಅಥವಾ ಹಿಟ್ಟಿನ ಅಗತ್ಯವಿಲ್ಲ. ನಿಮ್ಮ ಬೆರಳುಗಳ ಮೂಲಕ ಮೃದುವಾಗಿ ಮಗುವಿನ ಮಸಾಜ್ ಮಾಡಿ.
ಮಗುವಿಗೆ ಎಷ್ಟು ವರ್ಷದವರೆಗೆ ಮಸಾಜ್ ಮಾಡಬೇಕು?
ನಿಮ್ಮ ಮಗು ಮಸಾಜ್ ನ್ನು ಇಷ್ಟಪಡುವಷ್ಟು ವರ್ಷ ಅವರಿಗೆ ಮಸಾಜ್ ಮಾಡಬಹುದು. ಅಥವಾ ಮಸಾಜ್ ನಿಮ್ಮ ಮಗುವಿಗೆ ಇಷ್ಟವಾಗದಿದ್ದರೆ ಕೆಲವೇ ದಿನಗಳಲ್ಲಿ ಮಸಾಜ್ ಮಾಡುವುದನ್ನು ನಿಲ್ಲಿಸಬಹುದು.



Click it and Unblock the Notifications
