Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ಮಗುವಿನ ಹೊಟ್ಟೆ ನೋವಿನ ಶಮನಕ್ಕೆ ಮನೆ ಮದ್ದು
ಮಗುವಿಗೆ ಎರಡು ವರ್ಷ ತುಂಬುವವರೆಗೆ ಹೊಟ್ಟೆ ನೋವು, ತಲೆ ನೋವು ಕಾಣಿಸಿಕೊಂಡರೆ ತುಂಬಾ ಕಷ್ಟ. ಮಗು ಏಕೆ ಅಳುತ್ತಿದೆ ಎಂದೇ ಗೊತ್ತಾಗುವುದು ಇಲ್ಲ. ಅದರಲ್ಲೂ ಹೊಟ್ಟೆ ನೋವಿನ ಸಮಸ್ಯೆ ಕಂಡು ಬರುವುದು ಹೆಚ್ಚು.
ಮಗುವಿಗೆ ಹೊಟ್ಟೆ ನೋವು ಕಾಣಿಸಿದಾಗ ಯಾವುದೇ ಮಾತ್ರೆಯನ್ನು ಕೊಡಲು ಸಾಧ್ಯವಿಲ್ಲ. ಯಾವುದೇ ಅಡ್ಡ ಪರಿಣಾಮವಿಲ್ಲದ ಮನೆ ಮದ್ದಗಳು ಮಗುವಿನ ಹೊಟ್ಟೆ ನೋವು ಪರಿಹರಿಸುವಲ್ಲಿ ಸಹಕಾರಿ. ಗ್ರೈಪ್ ವಾಟರ್ (grip water) ಮಗುವಿಗೆ ಹೊಟ್ಟೆ ನೋವು ಕಾಣಿಸಿಕೊಂಡಾಗ ಕೊಡಲು ಸೂಕ್ತವಾದ ಔಷಧಿಯಾಗಿದೆ.
ಅದಲ್ಲದೆ ಈ ಕೆಳಗಿನ ಮನೆ ಮದ್ದುಗಳು ಮಗುವಿನ ಹೊಟ್ಟೆ ನೋವು ನಿವಾರಿಸುವಲ್ಲಿ ಸಹಕಾರಿಯಾಗಿವೆ:

ಹಾಗಾಲಕಾಯಿ ಎಲೆಯ ರಸ
ವಾರಕ್ಕೊಮ್ಮೆ ಅರ್ಧ ಚಮಚ ಹಾಗಾಲಕಾಯಿಯ ಎಳೆ ಎಲೆಯನ್ನು ಕಿತ್ತು ರಸ ಹಿಂಡಿ ಮಗುವಿಗೆ ಕೊಡುವುದು ಒಳ್ಳೆಯದು. ಈ ರೀತಿ ಮಾಡಿದರೆ ಮಗುವಿನ ಹೊಟ್ಟೆ ಶುದ್ಧವಾಗಿರುವುದು, ಹೊಟ್ಟೆ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆ. ಅಜೀರ್ಣ ಸಮಸ್ಯೆಯೂ ಉಂಟಾಗುವುದಿಲ್ಲ.

ಇಂಗು
ಚಿಟಿಕೆಯಷ್ಟು ಇಂಗನ್ನು ಒಂದು ಚಮಚ ಬಿಸಿ ನೀರಿನಲ್ಲಿ ಕಲೆಸಿ ಮಗುವಿಗೆ ಕೊಟ್ಟರೆ ಹೊಟ್ಟೆ ನೋವು ತಕ್ಷಣ ನಿಂತು ಹೋಗುವುದು.

ಸೋಂಪು
ಸ್ವಲ್ಪ ಸೋಂಪನ್ನು ಹುರಿದು ನುಣ್ಣನೆ ಪುಡಿ ಮಾಡಿ, ನೀರಿನಲ್ಲಿ ಕಲೆಸಿ ಕೊಟ್ಟರೆ ಹೊಟ್ಟೆ ನೋವು ಕಡಿಮೆಯಾಗುವುದು.

ತುಳಸಿ
ಅರ್ಧ ಚಮಚ ತುಳಸಿ ರಸ ಕುಡಿಸಿದರೆ ಹೊಟ್ಟೆ ನೋವು ಕಡಿಮೆಯಾಗುವುದು. ಈ ರಸವನ್ನು ವಾರದಲ್ಲಿ ಒಮ್ಮೆಯಾದರೂ ಕುಡಿಸಿದರೆ ಮಗುವಿಗೆ ಗಂಟಲು ಕೆರತ, ಶೀತ ಈ ರೀತಿಯ ಸಮಸ್ಯೆಗಳು ಕಂಡು ಬರುವ ಸಾಧ್ಯತೆ ಕಡಿಮೆ.

ಏಲಕ್ಕಿ
2-3 ಮಣಿ ಏಲಕ್ಕಿ ತೆಗೆದು ಪುಡಿ ಮಾಡಿ, ಬಿಸಿ ನೀರಿನಲ್ಲಿ ಕಲೆಸಿ ಹೊಟ್ಟೆ ನೋವು ಕಡಿಮೆಯಾಗುವುದು.

ಪುದೀನಾ
ಹಸುಳೆಗೆ ಅರ್ಧ ಚಮಚ ಪುದೀನಾ ರಸ ಕೊಟ್ಟರೆ ಹೊಟ್ಟೆ ನೋವು ತಕ್ಷಣ ಕಡಿಮೆಯಾಗುವುದು.

ಎದೆಹಾಲು
ಮಗುವಿಗೆ ಹೊಟ್ಟೆ ನೋವು ಕಾಣಿಸಿದೆಯೆಂದು ಎದೆ ಹಾಲು ಕೊಡದೆ ಇರಬೇಡಿ. ಮಗುವಿಗೆ ಆಗಾಗ ಸ್ವಲ್ಪ-ಸ್ವಲ್ಪ ಎದೆ ಹಾಲು ಕುಡಿಸಿ, ಹೀಗೆ ಮಾಡಿದರೆ ಮಗುವಿನ ನೋವು ತನ್ನಷ್ಟಕ್ಕೇ ಕಡಿಮೆಯಾಗುವುದು.

ಹರಿಯುವ ನೀರು
ಮಗುವಿಗೆ ಹೊಟ್ಟೆ ನೋವು ಕಾಣಿಸಿದಾಗ ಅದರ ಹೊಟ್ಟೆಗೆ ಮೆಲ್ಲನೆ ನೀರು ಹಾಕಿ, ತುಂಬಾ ಬಲವಾಗಿ ಹಾಕಬೇಡಿ, ನಿಧಾನಕ್ಕೆ ನೀರು ಬಿಡಿ. ಈ ರೀತಿ ಮಾಡಿದರೆ ಹೊಟ್ಟೆ ನೋವು ಕಡಿಮೆಯಾಗುವುದು.

ನಿದ್ದೆ
ಮಗುವಿಗೆ ಹೊಟ್ಟೆ ನೋವು ಕಾಣಿಸಿದರೆ ಮನೆ ಮದ್ದು ಕೊಟ್ಟು ನಿದ್ದೆ ಮಾಡಿಸಿ, ನಿದ್ದೆ ಮಾಡಿ ಎದ್ದಾಗ ಹೊಟ್ಟೆ ನೋವು ಇರುವುದಿಲ್ಲ.



Click it and Unblock the Notifications
