Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧದ ಗೌಪ್ಯತೆ ಕಾಪಾಡಿಕೊಳ್ಳಿ: ದಂಪತಿಗಳಿಗಾಗಿ 7 ಪ್ರಮುಖ ನಿಯಮಗಳು -
ಬೆಂಗಳೂರು ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ 20 ನಿಮಿಷದ ಕೆಲಸ ಮಾಡಿ -
ವಿಶ್ವ ಮೊಟ್ಟೆ ದಿನ: ಕೇವಲ ₹20ರಲ್ಲಿ ಪ್ರೋಟೀನ್ ಪಡೆಯುವ ಅದ್ಭುತ ಹ್ಯಾಕ್ಸ್! -
ಮೈಸೂರು ದಸರಾ 2026: ಅಂಬಾರಿ ಹೊರುವ ಆನೆ ಯಾರು? ಟಿಕೆಟ್, ರೂಟ್ ಮತ್ತು ಸಂಪೂರ್ಣ ಮಾಹಿತಿ ಇಲ್ಲಿದೆ -
ನವರಾತ್ರಿ ಗರ್ಬಾ: ಕಾಲು ನೋವು, ಸುಸ್ತು ಇಲ್ಲದೆ ಗಂಟೆಗಟ್ಟಲೆ ಡ್ಯಾನ್ಸ್ ಮಾಡಲು ಈ 12 ನಿಮಿಷದ ಟ್ರಿಕ್ ಫಾಲೋ ಮಾಡಿ! -
ದೆಹಲಿ ಮಾಲಿನ್ಯದ ಆತಂಕ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ದಂಪತಿಗಳಿಗೆ ಇಲ್ಲಿದೆ ಸರಳ ಟಿಪ್ಸ್ -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ₹1,999ರೊಳಗೆ ಸಿಗುವ 12 ಬೆಸ್ಟ್ ಹೋಮ್ ಆಕ್ಸೆಸರೀಸ್ ಇವೇ ನೋಡಿ! -
ಬೇಳೆಕಾಳು ಬೆಲೆ ಏರಿಕೆ: ₹20ಕ್ಕಿಂತ ಕಡಿಮೆ ವೆಚ್ಚದಲ್ಲಿ ಪ್ರೋಟೀನ್ ಪಡೆಯುವುದು ಹೇಗೆ? -
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ -
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ
ಮಗುವಿಗೆ ಹಲ್ಲು ಬರುವಾಗ ಈ ರೀತಿ ಮಾಡಿ!
ಮಗುವಿಗೆ 8-9 ತಿಂಗಳಾಗುವಾಗ ಹಲ್ಲು ಬರಲಾರಂಭಿಸುತ್ತದೆ. ಇದನ್ನು ಹಾಲು ಹಲ್ಲು ಎಂದು ಕರೆಯುತ್ತಾರೆ. ಕೆಲ ಮಕ್ಕಳಿಗೆ ಈ ಹಲ್ಲು ಸ್ವಲ್ಪ ನಿಧಾನಕ್ಕೆ ಅಂದರೆ 1 ವರ್ಷದ ಬಳಿಕ ಮೂಡುತ್ತದೆ. ಈ ರೀತಿಯ ಹಲ್ಲು ಬರುವಾಗ ಮಗು ಕೈಗೆ ಸಿಕ್ಕ ವಸ್ತುಗಳನ್ನು ಕಚ್ಚಲು ನೋಡುತ್ತದೆ.
ಮಕ್ಕಳಲ್ಲಿ ಈ ರೀತಿ ಹಾಲು ಹಲ್ಲು ಬರುವಾಗ ನೋವು, ಹಲ್ಲಿನಲ್ಲಿ ತುರಿಕೆ ಕಂಡು ಬರುತ್ತದೆ. ಇದರಿಂದಾಗಿ ಕೆಲ ಮಕ್ಕಳಿಗೆ ಬೇಧಿ ಕೂಡ ಉಂಟಾಗುವುದು. ಮಗುವಿಗೆ ಕಚ್ಚಲು ಏನಾದರೂ ಸಿಕ್ಕಿದರೆ ಸ್ವಲ್ಪ ಸುಮ್ಮೆನಿರುತ್ತದೆ, ಇಲ್ಲದಿದ್ದರೆ ಅಳಲು ಪ್ರಾರಂಭಿಸುತ್ತದೆ. ಇಂಥ ಸಂದರ್ಭದಲ್ಲಿ ಹೆಚ್ಚಿನ ಪೋಷಕರು, ಪ್ಲಾಸ್ಟಿಕ್ ನಿಪ್ಪಲ್ ಕೊಡುತ್ತಾರೆ.
ಆದರೆ ಈ ಸಮಯದಲ್ಲಿ ಪೋಷಕರು ಪ್ಲಾಸ್ಟಿಕ್ ನಿಪ್ಪಲ್ ಕೊಡುವ ಬದಲು ಇಲ್ಲಿ ಹೇಳಿರುವ ಆಹಾರಗಳನ್ನು ಕೊಡುವುದು ಒಳ್ಳೆಯದು. ಈ ಆಹಾರಗಳನ್ನು ಮಗು ಜಗಿದರೆ ಮಗುವಿಗೆ ಹಲ್ಲಿನಿಂದ ಉಂಟಾಗುವ ಕಿರಿಕಿರಿ ಕಮ್ಮಿಯಾಗಿ ಅಳುವುದನ್ನು ನಿಲ್ಲಿಸುತ್ತದೆ, ಈ ಆಹಾರಗಳನ್ನು ಜಗಿಯಲು ಕೊಟ್ಟರೆ ಮಗು ಇದನ್ನು ಜಗಿಯುತ್ತಾ ಆಟವಾಡುವುದು, ಅಲ್ಲದೆ ಈ ಆಹಾರಗಳನ್ನು ಮಗು ನುಂಗಿದರೆ ಗಂಟಲಿಗೆ ಸಿಕ್ಕಿ ಹಾಕಿ ಕೊಳ್ಳುತ್ತದೆ ಎಂಬ ಭಯ ಕೂಡ ಇಲ್ಲ, ಮಗುವಿನ ಆರೋಗ್ಯಕ್ಕೂ ಒಳ್ಳೆಯದು.

ಸೌತೆಕಾಯಿ
ಸೌತೆಕಾಯಿ ಸಿಪ್ಪೆ ಸುಲಿದು, ಅದರ ಬೀಜ ತೆಗೆದು ಮಗುವಿನ ತಿನ್ನಲು ಕೊಡಬಹುದು.

ಬಾಳೆ ಹಣ್ಣು
ಬಾಳೆ ಹಣ್ಣಿನ ಒಂದು ಚಿಕ್ಕ ಪೀಸ್ ಅನ್ನು ಕೂಡ ಕೊಡಬಹುದು. ಈ ರೀತಿಯ ಆಹಾರಗಳನ್ನು ಕೊಟ್ಟರೆ ಮಗು ಅದನ್ನು ನುಂಗಿದರೂ ಯಾವುದೇ ಭಯವಿಲ್ಲ.

ಬೆಣ್ಣೆ ಹಣ್ಣು
ಬೆಣ್ಣೆ ಹಣ್ಣಿನ ಒಂದು ಚಿಕ್ಕ ಪೀಸ್ ಅನ್ನು ಮಗುವಿನ ಬಾಯಿಗೆ ಹಾಕಿ ಅದನ್ನು ಜಗಿಯುತ್ತಾ ಅದರ ಪಾಡಿಗೆ ಆಟವಾಡುವುದು.

ಕಾಳುಗಳು
ಕಾಳುಗಳನ್ನು ಬೇಯಿಸಿ, ಅವುಗಳನ್ನು ಕೂಡ ಜಗಿಯಲು ಕೊಡಬಹುದು. ಮಗು ಈ ಆಹಾರಗಳನ್ನು ಜಗಿಯುವುದರಿಂದ ಬೇಗನೆ ಹಲ್ಲು ಬರಲು ಸಹಾಯಕಾರಿ ಕೂಡ.

ಕ್ಯಾರೆಟ್
ಕ್ಯಾರೆಟ್ ಅನ್ನು ಬೇಯಿಸಿ, ಚಿಕ್ಕ ಒಂದು ತುಂಡನ್ನು ಮಗುವಿಗೆ ಜಗಿಯಲು ಕೊಡಬಹುದು.

ಚೀಸ್
ಚೀಸ್ ಅನ್ನು ಕಟ್ ಮಾಡಿ ಒಂದು ಪೀಸ್ ಅನ್ನು ಮಗುವಿನ ಬಾಯಿಗೆ ಹಾಕಿ ಕೊಡಿ, ಮಗು ಚೀಸ್ ಅನ್ನು ಜಗಿಯಲಾರಂಭಿಸುತ್ತದೆ, ಇದು ಮಗುವಿನ ದವಡೆ ನೋವನ್ನು ಕಡಿಮೆ ಮಾಡುವುದು.

ಚಿಕನ್
ಸ್ವಲ್ಪ ಉಪ್ಪು ಮಾತ್ರ ಹಾಕಿ ಬೇಯಿಸಿದ ಚಿಕನ್ ನ ಒಂದು ಚಿಕ್ಕ ಪೀಸ್ ಅನ್ನು ಜಗಿಯಲು ಕೊಟ್ಟರೆ, ಹಲ್ಲು ಬರುವುದರ ಕಿರಿಕಿರಿ ಮರೆತು ಇದನ್ನು ಜಗಿಯುತ್ತಾ ಆಟವಾಡುವುದು.



Click it and Unblock the Notifications
