Latest Updates
-
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು?
ಮಗುವಿಗೆ ಮಧುಮೇಹ ಬಂದರೆ ಕಂಡುಹಿಡಿಯುವುದು ಹೇಗೆ?

ಇದನ್ನು ಸುಲಭದಲ್ಲಿ ಪತ್ತೆ ಹಚ್ಚುವ ಲಕ್ಷಣಗಳ ಬಗ್ಗೆ ಅರಿವು ಇಲ್ಲದಿದ್ದರೆ ಮಗುವಿನ ಪ್ರಾಣಕ್ಕೆ ಅಪಾಯ ತರಬಹುದು. ಮಕ್ಕಳಲ್ಲಿ ಮಧುಮೇಹ ಇದೆಯೆ ಎಂಬುದನ್ನು ಈ ಕೆಳಗಿನ ಲಕ್ಷಣಗಳಿಂದ ಕಂಡುಹಿಡಿಯಬಹುದಾಗಿದೆ,
1. ಬಾಯಾರಿಕೆ: ಮಗುವಿಗೆ ಬಾಯಾರಿಕೆಯಾದಾಗ ಅದಕ್ಕೆ ಹೇಳಲು ಬರುವುದಿಲ್ಲ, ಆದರೆ ಅದು ಎಷ್ಟು ಬಾಟಲು ಹಾಲು ಕುಡಿಯುತ್ತಿದೆ ಎಂಬುದನ್ನು ಗಮನಿಸಿ ವೈದ್ಯರ ಹತ್ತಿರ ನಿಮ್ಮ ಮಗುವಿನ ವಯಸ್ಸಿನ ಮಗು ಎಷ್ಟು ಕುಡಿಯಬಹುದು ಎಂದು ಕೇಳಿ ತಿಳಿದುಕೊಳ್ಳಬೇಕು, ಆದರೆ ಅವರು ಹೇಳಿದರಲ್ಲಿ ಸ್ವಲ್ಪ ವ್ಯತ್ಯಾಸವಿದ್ದರೆ ಏನೂ ಆಗುವುದಿಲ್ಲ, ತುಂಬಾ ಇದ್ದರೆ ಮುಂದಿನ ಲಕ್ಷಣಗಳನ್ನು ಗಮನಿಸಬೇಕು.
2.ಆಗಾಗ ಮೂತ್ರ ವಿಸರ್ಜನೆ: ಮಗು ಆಗಾಗ ಮೂತ್ರ ವಿಸರ್ಜಮೆಯನ್ನು ಮಾಡುತ್ತಿದ್ದರೆ ಅದನ್ನು ಗಮನದಲ್ಲಿ ಇಡಬೇಕು.
3. ತೂಕ ಕಡಿಮೆಯಾಗುವುದು: ಮಗು ಇದ್ದಕ್ಕಿದ್ದಹಾಗೆ ತೂಕ ಕಡಿಮೆಯಾಗ ತೊಡಗಿದರೆ ಅದನ್ನು ಗಮನಿಸಬೇಕು. ಮಕ್ಕಳು ಸಾಮಾನ್ಯವಾಗಿ ನಡೆಯುವ ಸಮಯದಲ್ಲಿ ತೂಕ ಕಡಿಮೆಯಾಗುತ್ತದೆ. ಆದರೆ ಮಕ್ಕಳು ಯಾವುದೆ ಚಟುವಟಿಕೆಯಿಲ್ಲದೆ ಮಂಕಾಗಿದ್ದರೆ ಅದು ಸಕ್ಕರೆ ಕಾಯಿಲೆಯ ಲಕ್ಷಣವಾಗಿರಬಹುದು.
4. ಸುಸ್ತು: ಮಗು ಹೆಚ್ಚು ನಿದ್ರೆ ಮಾಡುತ್ತಿದ್ದರೆ ಯಾವುದೆ ಚಟುವಟಿಕೆಯನ್ನು ತೋರದೆ ಮಂಕಾಗಿದ್ದರೆ ಅದು ಸಕ್ಕರೆ ಕಾಯಿಲೆ ಆಗಿರಬಹುದು.
5. ಗುಣವಾಗದ ಗಾಯ: ಮಗುವಿಗೆ ಒಂದು ವೇಳೆ ಗಾಯವಾಗಿ ಗುಣವಾಗದಿದ್ದರೆ ಅದು ಮಧುಮೇಹವಾಗಿರಬಹುದು.
ಮಕ್ಕಳಲ್ಲಿ ಈ ರೀತಿಯ ಲಕ್ಷಣ ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿ ಪರೀಕ್ಷೆಗೆ ಒಳಪಡಿಸಬೇಕು. ಆಗ ಮಧುಮೇಹ ಎಂದು ತಿಳಿದುಬಂದರೆ ವೈದ್ಯರ ಸಲಹೆಯನ್ನು ಚಾಚು ತಪ್ಪದೆ ಪಾಲಿಸಬೇಕಾಗುವುದು.



Click it and Unblock the Notifications
