Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮಗುವಿಗೆ ಹಾಲುಣಿಸಲೇಬೇಕಾದ ಐದು ಕಾರಣ ಇಲ್ಲಿದೆ

ಮಗುವಿಗೆ ಸ್ತನ್ಯಪಾನ ಮಾಡಿಸಬೇಕಾದ ಐದು ಕಾರಣಗಳು:
1. ಆರೋಗ್ಯದ ಬಗ್ಗೆ ಚಿಂತಿಸಬೇಕಿಲ್ಲ: ಸ್ತನ್ಯಪಾನ ಮಾಡಿಸುವ ಮಹಿಳೆಯರು ಮಗುವಿನ ಆಹಾರದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಎದೆಹಾಲನ್ನು ಬಿಡಿಸಿದರೆ ಅದಕ್ಕೆ ಪೂರಕವಾಗಿ ಇನ್ನಿತರ ಆಹಾರವನ್ನು ಮಗುವಿಗೆ ನೀಡುವ ಗೋಜಲೂ ತಪ್ಪುತ್ತದೆ ಮತ್ತು ಮಗು ಆರೋಗ್ಯವಂತವಾಗಿರಲೂ ಸಹಾಯ ಮಾಡುತ್ತದೆ. ಮಗು ಮಧ್ಯರಾತ್ರಿ ಎದ್ದರೂ ಆಹಾರಕ್ಕೆ ಪರದಾಡುವುದು ತಪ್ಪುತ್ತದೆ.
2. ಹಸಿವು ನೀಗಿಸುತ್ತದೆ: ಮಗುವಿನ ಹಸಿವನ್ನು ನೀಗಿಸುವ ಸುಲಭ ವಿಧಾನವೆಂದರೆ ಎದೆ ಹಾಲು ನೀಡುವುದು. ಬೇರೆ ಆಹಾರಕ್ಕೆ ಹೋಲಿಸಿದರೆ ಎದೆಹಾಲಿನಿಂದ ಮಗುವಿನ ಹಸಿವು ಬೇಗ ನೀಗುತ್ತದೆ. ಇದರೊಂದಿಗೆ ಅವಶ್ಯಕ ಪೋಷಕಾಂಶವೂ ದೊರೆಯುತ್ತದೆ. ಹಸಿವಿನಿಂದ ಮಗು ಅತ್ತು ಕಂಗಾಲಾಗುವುದೂ ತಪ್ಪುತ್ತದೆ. ಎದೆಹಾಲನ್ನು ನೀಡುವುದರಿಂದ ಮಗುವು ಅನಾಯಾಸವಾಗಿ ನಿದ್ದೆ ಮಾಡಲು ಅವಶ್ಯವಿರುವ ಪೋಷಕಾಂಶವನ್ನೂ ನೀಡುತ್ತದೆ.
3. ಪೋಷಕ ಆಹಾರ: ಮಗುವಿಗೆ ಎದೆ ಹಾಲಿನ ಹೊರತಾಗಿ ಬೇರೆ ಪೋಷಕ ಆಹಾರ ನೀಡಬೇಕೆಂದರೆ ಸಾಕಷ್ಟು ಒದ್ದಾಡಬೇಕು. ಅದು ಸರಿಯಾಗಿ ತಿನ್ನದಿದ್ದರೆ ಅದರೆಡೆಗೂ ಹೆಚ್ಚು ತಲೆಕೆಡಿಸಿಕೊಳ್ಳಬೇಕು. ಆದರೆ ಮಗು ಒಂದು ಹಂತ ತಲುಪುವವರೆಗೆ ಎದೆಹಾಲು ನೀಡುವುದರಿಂದ ಈ ರೀತಿಯ ಒದ್ದಾಟ, ಗೋಜಲುಗಳು ಕಡಿಮೆಯಿರುತ್ತವೆ. ಮಗು ತಿನ್ನುವಂತೆ ಮಾಡಲು ಪರದಾಡುವುದೂ ಕಡಿಮೆಯಿರುತ್ತದೆ.
4. ತಾಯಿಗೂ ಅತ್ಯಗತ್ಯ: ತಾಯಂದಿರು ತಮ್ಮ ದೇಹದ ಬಗ್ಗೆ ನಿಜವಾಗಿಯೂ ಕಾಳಜಿ ಹೊಂದಿದ್ದರೆ, ಬೊಜ್ಜನ್ನು ಕರಗಿಸುವತ್ತ ಚಿಂತಿಸುತ್ತಿದ್ದರೆ, ಎದೆಹಾಲನ್ನು ಮಗುವಿಗೆ ನೀಡಲೇಬೇಕಾಗುತ್ತದೆ. ದೇಹದಲ್ಲಿ ಸೇರಿಕೊಂಡ ಹೆಚ್ಚು ಪೌಂಡ್ಸ್ ಗಳನ್ನು ಕರಗಿಸುವ ಸುಲಭ ವಿಧಾನವೆಂದರೆ, ಎದೆಹಾಲು ನೀಡುವುದು. ಎದೆಹಾಲು ನೀಡುವ ಮಹಿಳೆ ಸುಮಾರು 500 ಕ್ಯಾಲೊರಿ ಬೊಜ್ಜನ್ನು ಕಳೆದುಕೊಳ್ಳುವರು ಎನ್ನಲಾಗಿದೆ. ಅದೂ ಅಲ್ಲದೆ ಹೊಟ್ಟೆ ಸುತ್ತ ಸೇರಿಕೊಳ್ಳುವ ಬೊಜ್ಜೂ ಕೂಡ ಇದರಿಂದ ಕರಗುತ್ತದೆ ಎನ್ನಲಾಗಿದೆ.
5. ಮಗುವಿನ ಸ್ವಾಸ್ಥ್ಯ ಇಲ್ಲಿ ಅಡಗಿದೆ: ನಿಮ್ಮ ಮಗು ಆರೋಗ್ಯವಂತವಾಗಿರಬೇಕೆಂದು ನೀವು ಬಯಸುತ್ತೀರ ಎಂದಾದರೆ ಮಗುವಿಗೆ ಸ್ತನ್ಯಪಾನ ಮಾಡಿಸಲೇಬೇಕಾಗುತ್ತದೆ. ಇದು ಮಗುವಿಗೆ ತುಂಬಾ ಅವಶ್ಯಕ. ಎದೆಹಾಲನ್ನು ಮಗುವಿಗೆ ನೀಡುವುದರಿಂದ ಬ್ಯಾಕ್ಟೀರಿಯಾದಿಂದ ಮಗುವನ್ನು ದೂರವಿರಿಸಬಹುದು. ಎದೆಹಾಲು ಮಗುವಿನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಮುಂದೆ ಮಗು ಮಾತುಗಳನ್ನು ಸ್ಪಷ್ಟವಾಗಿ ಆಡಲು ಸಹಾಯ ಮಾಡುತ್ತದೆ.



Click it and Unblock the Notifications
