Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ನಿಮ್ಮ ಮಗುವಿನ ಮೃದು ಕೂದಲ ಪೋಷಣೆ ಹೀಗಿರಲಿ

ಮಗುವಿನ ಕೂದಲಿನ ಪೋಷಣೆ ಹೀಗಿರಲಿ:
1. ನಿಮ್ಮ ಮಗುವಿಗೆ ಕಡಿಮೆ ಕೂದಲು ಅಥವಾ ಕೂದಲು ಇಲ್ಲದಿದ್ದರೆ, ವಾರದಲ್ಲಿ ಎರಡು ಬಾರಿ ಶಾಂಪೂ ಬಳಸಿ ತಲೆಗೆ ಸ್ನಾನ ಮಾಡಿಸಿ. 3-4 ಬಾರಿ ತಲೆಗೆ ಸ್ನಾನ ಮಾಡಿಸಿದರೆ ಚರ್ಮ ಒಣಗಬಹುದು. ಹೊರಗೆ ಹೋಗುವಾಗ ತಲೆಗೆ ಟೊಪ್ಪಿ ಅಥವಾ ಮೃದುವಾದ ಸ್ಕಾರ್ಫ್ ಧರಿಸುವುದನ್ನು ಮರೆಯಬೇಡಿ.
2. ನಿಮ್ಮ ಮಗುವಿನ ಕೂದಲಲ್ಲಿ ಹೊಟ್ಟು ಅಥವಾ ಧೂಳು ಕಾಣಿಸಿಕೊಂಡರೆ ತಲೆ ಸ್ನಾನ ಮಾಡಿಸುವ ಮುನ್ನ ಸ್ವಲ್ಪ ಆಲಿವ್ ಎಣ್ಣೆಯಿಂದ ಮೃದುವಾಗಿ ಮಸಾಜ್ ಮಾಡಿ.
3. ಮಕ್ಕಳಿಗೆಂದೇ ಇರುವ ಶಾಂಪುಗಳನ್ನು ಮಾತ್ರ ಬಳಕೆ ಮಾಡಿ. ಇದರಲ್ಲಿ ಯಾವುದೇ ಕೆಮಿಕಲ್ ಇರುವುದಿಲ್ಲ ಮತ್ತು ಮಗುವಿನ ಕಣ್ಣುಗಳು ಸ್ನಾನ ಮಾಡುವಾಗ ಉರಿಯದಂತಿರಲು ಟಿಯರ್ ಫ್ರೀ ಶಾಂಪು ಬಳಸಿರಿ.
4. ತಲೆಗೆ ಸ್ನಾನ ಮಾಡಿಸಿದ ನಂತರ ದೊಡ್ಡ ಹಲ್ಲನ್ನು ಹೊಂದಿರುವ ಬಾಚಣಿಕೆಯಲ್ಲಿ ಮೃದುವಾಗಿ ಬಾಚಬೇಕು. ಮಗುವಿಗೆಂದೇ ಪ್ರತ್ಯೇಕ ಬಾಚಣಿಕೆ ಇರಲಿ.
5. ಮಗುವಿನ ತಲೆಯ ಚರ್ಮ ತುಂಬಾ ಮೃದು ಮತ್ತು ಸೂಕ್ಷ್ಮ. ತಲೆ ಉಜ್ಜುವಾಗ ಮತ್ತು ಬಾಚುವಾಗ ಆದಷ್ಟು ಜಾಗರೂಕತೆಯಿಂದ, ಮೃದುವಾಗಿ ಉಜ್ಜಬೇಕು.
6. ಮಗುವಿನ ಕೂದಲಿನ ಸಿಕ್ಕನ್ನು ನಿಮ್ಮ ಬೆರಳುಗಳಿಂದಲೇ ಮೃದುವಾಗಿ ಬಿಡಿಸಿ. ಇದರಿಂದ ಮಗುವಿಗೆ ನೋವಾಗುವುದನ್ನು ತಪ್ಪಿಸಬಹುದು. ಸ್ವಲ್ಪ ಎಣ್ಣೆ ಅಥವಾ ಮಗುವಿನ ಕೂದಲಿಗೆಂದೇ ಇರುವ ಮಾಯಿಶ್ಚರೈಸರ್ ಅನ್ನು ಸಿಕ್ಕು ಬಿಡಿಸಲು ಉಪಯೊಗಿಸಬಹುದು.
7. ಮೊದಲು ಮಗುವಿನ ತಲೆಯ ಹಿಂಭಾಗ ಬಾಚಿ ನಂತರ ಮುಂಭಾಗವನ್ನು ಬಾಚಬೇಕು.
8. ಮಗುವಿನ ತೆಳುಗೂದಲನ್ನು ಆಗಾಗ್ಗೆ ಬಾಚುತ್ತಿರಿ. ಕೂದಲು ಸ್ವಲ್ಪ ತೇವವಿದ್ದಂತೆಯೇ ಸಿಕ್ಕು ಬಿಡಿಸುವುದು ಉತ್ತಮ. ಒಣಗಿದ ನಂತರ ಸಿಕ್ಕು ಬಿಡಿಸಿದರೆ ಕಷ್ಟವೆನಿಸಬಹುದು.
9. ಕೂದಲು ದಟ್ಟವಾಗಿ ಬೆಳೆಯಬೇಕೆಂದರೆ ಬೇಬಿ ಆಯಿಲ್ ನಿಂದ ಚೆನ್ನಾಗಿ ಮಸಾಜ್ ಮಾಡಬೇಕು. ಮಸಾಜ್ ಮಾಡಿದ ನಂತರ ಬುಡದಿಂದ ತುದಿಯವರೆಗೂ ಕೂದಲನ್ನು ಮೃದುವಾಗಿ ಬಾಚಬೇಕು. ಕೂದಲನ್ನು ಆಗಾಗ್ಗೆ ಸ್ವಲ್ಪ ಕತ್ತರಿಸುವುದೂ ಕೂದಲು ಬೆಳೆಯಲು ಸಹಾಯ ಮಾಡುತ್ತದೆ.



Click it and Unblock the Notifications
