Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಿಮ್ಮ ಮುದ್ದಾದ ಮಗನಿಗೆ ಇಲ್ಲಿದೆ ಶ್ರೀರಾಮನ ಹೆಸರುಗಳು!
ನಾವು ಹುಟ್ಟುವ ಬಗ್ಗೆ ಮಗುವಿನ ನೂರಾರು ಆಸೆ, ಕನಸುಗಳನ್ನು ಇಟ್ಟುಕೊಂಡಿರ್ತೀವಿ. ಮಗು ದೊಡ್ಡವನಾದ ಮೇಲೆ ಯಾವ ಶಾಲೆಗೆ ಹೋಗಬೇಕು, ಯಾವ ರೀತಿ ಬಟ್ಟೆ ಹಾಕಬೇಕು, ಹೆಸರನ್ನು ಕೂಡ ಮಕ್ಕಳು ಹುಟ್ಟುವ ಮುನ್ನವೇ ನಿರ್ಧಾರ ಮಾಡುತ್ತೇವೆ. ಈಗಂತೂ ಫ್ಯಾಷನ್ ಹಿಂದೆ ಬಿದ್ದ ಜನ ಏನೇನೋ ಹೆಸರುಗಳನ್ನು ಮಕ್ಕಳಿಗೆ ಇಡ್ತಿದ್ದಾರೆ. ಇದರ ಬದಲಾಗಿ ಅರ್ಥ ಪೂರ್ಣವಾಗಿರುವ ದೇವರ ಹೆಸರನ್ನು ನಿಮ್ಮ ಮಕ್ಕಳಿಗೆ ಇಟ್ಟರೆ ಒಳ್ಳೆಯದು.
ಶ್ರೀರಾಮನನ್ನು ವಿಷ್ಣುವಿನ ಏಳನೇ ಅವತಾರ ಎಂದು ಹೇಳಲಾಗುತ್ತದೆ. ಏಕಪತ್ನಿ ವ್ರತಸ್ಥನಾದ ಶ್ರೀರಾಮನ ಮಹಿಮೆ ಅಪಾರ. ಶ್ರೀರಾಮ ಚಂದ್ರನನ್ನು ಒಳಿತಿನ ರಕ್ಷಕ ಹಾಗೂ ಕೆಡುಕಿನ ನಾಶಕ ಎಂದು ಕರೆಯಲಾಗುತ್ತದೆ. ಶ್ರೀರಾಮನು ತನ್ನ ಪ್ರಾಮಾಣಿಕತೆ, ಸದ್ಗುಣ, ಶಕ್ತಿ, ಬುದ್ಧಿವಂತಿಕೆ ಮತ್ತು ಕೌಶಲ್ಯಕ್ಕೆ ಹೆಸರುವಾಸಿಯಾಗಿದ್ದಾನೆ. ನೀವೇನಾದರೂ ಶ್ರೀರಾಮನ ಭಕ್ತರಾಗಿದ್ದು, ನಿಮ್ಮ ಮಗನಿಗೆ ಶ್ರೀರಾಮನ ಹೆಸರನ್ನು ಇಡೋದಕ್ಕೆ ಬಯಸಿದರೆ ಇಲ್ಲಿದೆ ಆಕರ್ಷಕ ಹೆಸರುಗಳು.

ಅಭಿರಾಮ್ : ಭಗವಾನ್ ರಾಮನ ಇನ್ನೊಂದು ಹೆಸರು
ಅಭಿವಂಧ್ಯ : ಪೂಜೆಗೆ ಯೋಗ್ಯ ಎಂದರ್ಥ
ಅಗ್ರಗಣ್ಯ : ಮೊದಲ ಸ್ಥಾನ ಪಡೆದವನು
ಅನಂತಗುಣ : ಅಂತ್ಯವಿಲ್ಲದ ಒಳ್ಳೆಯ ಗುಣಗಳಿಂದ ಆಶೀರ್ವದಿಸಲ್ಪಟ್ಟವನು
ಅವ್ಯವ್ : ಅವಿನಾಶಿ
ಧನುರ್ಧರ : ಬಿಲ್ಲುಗಾರ
ಧನ್ವಿನ್ : ಧನುಸ್ಸನ್ನು ಹೊತ್ತವನು
ದಾಶರಥಿ : ರಾಜ ದಶರಥನ ಹಿರಿಯ ಮಗ ಭಗವಾನ್ ರಾಮನ ಹೆಸರು
ಘನಶ್ಯಾಮ್ : ಕಪ್ಪು ಮೋಡದ ಬಣ್ಣ
ಹರಿರಾಮ್ : ರಾಮನ ಇನ್ನೊಂದು ಹೆಸರು
ಜೈತ್ರಾ : ವಿಜಯಶಾಲಿ
ಜೈರಾಮ್ : ವಿಜಯಶಾಲಿಯಾದ ರಾಮ
ಜನೇಶ್ವರ : ಒಬ್ಬ ರಾಜ
ಜಾನಕಿನಾಥ : ಸೀತೆಯ ಪತಿ
ಕೌಶಲೆ : ಕೌಶಲ್ಯೆಯ ಮಗ
ಕೋದಂಡರಾಮ : ರಾಮನ ಇನ್ನೊಂದು ಹೆಸರು
ಕುಶ : ಭಗವಾನ್ ರಾಮನ ಮಗ
ಲವ : ಭಗವಾನ್ ರಾಮನ ಮಗ
ಮಹಾದೇವ : ಅತ್ಯಂತ ಶಕ್ತಿಶಾಲಿ
ಪರೇಶ್ : ಪರಮ ಚೇತನ
ಪ್ರತಾಪವತ್ : ವೈಭವಯುತ
ಪುರುಷೋತ್ತಮ : ಅತ್ಯುನ್ನತ ಜೀವಿ
ರಾಘವ್ : ರಾಮನ ಇನ್ನೊಂದು ಹೆಸರು
ರಾಘವೇಂದ್ರ : ರಾಮನಿಗೆ ಇನ್ನೊಂದು ಹೆಸರು
ರಘುಕುಮಾರ್ : ರಾಮನ ಇನ್ನೊಂದು ಹೆಸರು
ರಘುನಂದನ್ : ರಘುವಿನ ವಂಶಸ್ಥ
ರಘುನಾಥ : ರಾಮನಿಗೆ ಇನ್ನೊಂದು ಹೆಸರು
ರಘುನಾಯಕ್ : ರಘು ವಂಶದ ಮುಖ್ಯಸ್ಥ
ರಘುವತಿ : ರಘು ವಂಶದ ಮುಖ್ಯಸ್ಥ
ರಘುರಾಮ್ : ರಾಮನಿಗೆ ಇನ್ನೊಂದು ಹೆಸರು
ರಘುಸ್ವಾಮಿನ್ : ರಾಮನಿಗೆ ಇನ್ನೊಂದು ಹೆಸರು
ರಘುವೀರ್ : ಧೈರ್ಯಶಾಲಿಗಳಲ್ಲೇ ಧೈರ್ಯಶಾಲಿ
ರಾಜೀವ್ಲೋಚನ್ : ಕಮಲದ ಕಣ್ಣುಗಳು ಉಳ್ಳವನು
ರಾಮಚಂದ್ರ : ರಾಮನಿಗೆ ಇನ್ನೊಂದು ಹೆಸರು
ರಾಮಭದ್ರ : ಮಂಗಳಕರ
ರಾಮ್ : ಆಹ್ಲಾದಕರ, ಸರ್ವೋಚ್ಚ
ರಾಮಯ್ಯ : ಸರ್ವಶಕ್ತ ರಾಮ
ರಾಮದಾಸ್ : ರಾಮನ ಭಕ್ತ ಮತ್ತು ಸೇವಕ
ರಾಮಮೂರ್ತಿ : ಭಗವಾನ್ ರಾಮನ ಪ್ರತಿರೂಪ
ರಾಮಾನುಜ : ರಾಮನ ಸಹೋದರ
ರಾಮರತ್ನ : ರಾಮನ ಆಭರಣ
ರಾಮಾವತಾರ : ಭಗವಾನ್ ರಾಮನ ಪುನರ್ಜನ್ಮ
ರಾಮಚರಣ್ : ರಾಮನ ಪಾದಗಳು
ರಾಮಕಿಶೋರ್ : ನವಯುವಕ ರಾಮ
ರಾಮಪ್ರತಿಜ್ಞೆ : ರಾಮನ ವಾಗ್ದಾನ
ರಾಮಸ್ವರೂಪ : ರಾಮನಂತಿರುವವನು
ಸತ್ಯವಿಕ್ರಮ್ : ನಿಜವಾದ ಶೌರ್ಯ ಮತ್ತು ಶಕ್ತಿ ಉಳ್ಳವನು
ಸರ್ವೇಶ ಪ್ರಭು : ಎಲ್ಲದರ ತಂದೆ
ಸಯಂತ್ : ಸ್ವಯಂ ನಿಯಂತ್ರಣ ಹೊಂದಿರುವವನು
ಸತ್ಯವಾಚೇ : ಪ್ರಾಮಾಣಿಕ ಮತ್ತು ಸತ್ಯವಾದ
ಸತ್ಯವ್ರತ್ : ಸತ್ಯನಿಷ್ಠೆಯ ಪ್ರತಿಜ್ಞೆ ಮಾಡಿದವನು
ಸೀತಾರಾಮ್ : ಭಗವಾನ್ ರಾಮ ಮತ್ತು ಸೀತಾ ದೇವಿಯ ಸಂಯೋಜನೆಯ ಹೆಸರು
ಶಾಶ್ವತ : ಸರ್ವೋಚ್ಚ ಜೀವಿ
ಶತ್ರುಜಿತ್ : ಶತ್ರುಗಳ ವಿಜಯಶಾಲಿ
ಶ್ರೀಧರ್ : ಅದೃಷ್ಟವನ್ನು ಹೊಂದಿರುವವರು
ಶ್ರೀಮತ್ : ಮಹಿಮಾನ್ವಿತ ಮತ್ತು ಸರ್ವಜ್ಞ
ಸೀತಾಕಾಂತ : ಸೀತಾದೇವಿಗೆ ಪ್ರಿಯನಾದವನು
ಶ್ರೀರಾಮ : ದೈವಿಕ ಶಕ್ತಿಯುಳ್ಳವನು
ಶ್ರೀವಾಸ್ತ : ವಿಶ್ವಶಕ್ತಿ
ಸೂರ್ಯವಂಶಿ : ಭಗವಾನ್ ರಾಮನ ರಾಜವಂಶ
ತ್ರಿವಿಕ್ರಮ : ಮೂರು ಲೋಕಗಳನ್ನು ಗೆದ್ದವನು
ವರದಾಯ : ವರಗಳನ್ನು ನೀಡುವವನು
ವೇದಾಂತಸಾರ : ವೇದಾಂತ ತತ್ವಶಾಸ್ತ್ರದ ಸಾರ
ವ್ರತಧಾರಿ : ಪವಿತ್ರ ಸಂಸ್ಕಾರಗಳನ್ನು ಎತ್ತಿ ಹಿಡಿದವರು
ಯಜ್ಞೇಶ : ಅರ್ಪಣೆ ಮತ್ತು ತ್ಯಾಗದ ಪ್ರಭು



Click it and Unblock the Notifications
