Latest Updates
-
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ!
ವಿಶ್ವದಲ್ಲಿಯೇ ಮೊದಲ ಬಾರಿಗೆ 16 ವರ್ಷ ಕೆಳಗಿನವರಿಗೆ ಸೋಷಿಯಲ್ ಮೀಡಿಯಾ ಮಾಡಿದೆ ಈ ರಾಷ್ಟ್ರ
ವಿಶ್ವದಲ್ಲಿಯೇ ಮೊದಲ ಬಾರಿಗೆ 16 ವರ್ಷದ ಕೆಳಗಿನವರಿಗೆ ಸೋಷಿಯಲ್ ಮೀಡಿಯಾ ಬ್ಯಾನ್ ಕಾನೂನು ಆಸ್ಟ್ರೇಲಿಯಾದಲ್ಲಿ ಜಾರಿಗೆ ಬಂದಿದೆ. ಗುರುವಾರ ಇಂಥ ಕಾನೂನು ಜಾರಿಗೆ ತಂದಿದ್ದು ಟಿಕ್‌ಟಾಕ್, ಫೇಸ್‌ಬುಕ್, ಸ್ನ್ಯಾಪ್‌ಚಾಟ್, ರೆಡ್‌ಇಟ್, ಟ್ವಿಟರ್, ಇನ್‌ಸ್ಟಾಗ್ರಾಮ್ ಈ ರೀತಿಯ ಸೋಷಿಯಲ್ ಫ್ಲ್ಯಾಟ್‌ಫಾರಂ ಬಳಸದಂಥ ಕಾನೂನು ಜಾರಿಗೆ ತಂದಿದೆ. ಈ ಕಾನೂನು ಉಲ್ಲಂಘನೆ ಮಾಡಿದರೆ 50 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ ದಂಡ ಕಟ್ಟಬೇಕಾಗುತ್ತದೆ.

ಈ ಬ್ಯಾನ್ ಅನ್ನು ತುಂಬಾ ಜನ ಸ್ವಾಗತಿಸಿದರೆ, ಮಕ್ಕಳ ಅಭಿವೃದ್ಧಿ ಮತ್ತು ಮಾನಸಿಕ ಆರೋಗ್ಯ ಅಡ್ವಕೇಟ್ಸ್ ಆಗಿರುವ ಅನೇಕರು ಇದು ಮಕ್ಕಳ ಮೇಲೆ ಪರಿಣಾಮ ಬೀರಬಹುದು, ಸೋಷಿಯಲ್ ಮೀಡಿಯಾ ಬಳಸುತ್ತಿದ್ದ ಬಹುತೇಕ ಮಕ್ಕಳಿಗೆ ಒಂಟಿಯಾದಂತೆ ಅನಿಸಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಸೋಷಿಯಲ್ ಮೀಡಿಯಾ ಬ್ಯಾನ್ ಮಕ್ಕಳ ಮೇಲೆ ಪರಿಣಾಮ ಬೀರುವುದೇ?
ಆಸ್ಟ್ರೇಲಿಯಾದಲ್ಲಿ 16 ವರ್ಷದ ಕೆಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬ್ಯಾನ್ ಆಗಿರುವುದು ಒಳ್ಳೆಯದೇ, ಇದೇ ರೀತಿಯ ಕಾನೂನು ಇತರ ಕಡೆಯೂ ಬರಬೇಕು ಎಂದು ಹೇಳುತ್ತಿದ್ದಾರೆ. ಇಂದು ಸೋಷಿಯಲ್ ಮೀಡಿಯಾ ಬಳಸದ ಮಕ್ಕಳೇ ವಿರಳ, ಕೆಲವರು ತಮ್ಮದೇ ಆದ ಖಾತೆ ಹೊಂದಿದ್ದಾರೆ, ಇನ್ನು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಸ್ಟಾರ್ ಆಗಿದ್ದಾರೆ. ಎಷ್ಟೋ ಮಕ್ಕಳ ಓದು, ಆಲೋಚನೆ ಶಕ್ತಿ ಮೇಲೆ ಈ ಸೋಷಿಯಲ್ ಮೀಡಿಯಾ ಎಂಬುವುದು ತುಂಬಾನೇ ಪ್ರಭಾವ ಬೀರುತ್ತಿದೆ.
ಸೋಷಿಯಲ್ ಮೀಡಿಯಾ ಮಕ್ಕಳ ಮೇಲೆ ಬೀರುತ್ತಿರುವ ಋಣಾತ್ಮಕ ಪ್ರಭಾವಗಳು
- ಸೋಷಿಯಲ್ ಮೀಡಿಯಾ ಬಹುತೇಕ ಮಕ್ಕಳ ಮೇಲೆ ತುಂಬಾನೇ ಋಣಾತ್ಮಕ ಪ್ರಭಾವ ಬೀರುತ್ತಿದೆ, ಮಕ್ಕಳಲ್ಲಿ ಓದಿನ ಕಡೆ ಇರುವ ಆಸಕ್ತಿ ಕಡಿಮೆಯಾಗಿ, ಸೋಷಿಯಲ್ ಮೀಡಿಯಾದ ಕಡೆ ಆಸಕ್ತಿ ಹೆಚ್ಚಾಗುತ್ತಿದೆ.
- ಸೋಷಿಯಲ್ ಮೀಡಿಯಾ ಪ್ರೆಷರ್‌ನಿಂದ ಮನೆಯಲ್ಲಿ ಪೋಷಕರ ಜೊತೆ ದುಬಾರಿ ಬೆಲೆಯ ಫೋನ್‌ಗಾಗಿ ಬೇಡಿಕೆ ಇಟ್ಟು ಜಗಳ ಮಾಡುತ್ತಾರೆ
- ಲೈಕ್ಸ್, ಶೇರ್ ಇದರ ಬಗ್ಗೆ ತುಂಬಾ ತಲೆಕೆಡಿಸಿಕೊಂಡು ಖಿನ್ನತೆಗೆ ಜಾರುವ ಸಾಧ್ಯತೆಯೂ ಇದೆ.
- ಮಕ್ಕಳ ದೈಹಿಕ ಆರೋಗ್ಯದ ಮೇಲೆ ಕಟ್ಟ ಪರಿಣಾಮ ಬೀರುವುದು: ಮಕ್ಕಳು ಆಟವಾಡದೆ ಮೊಬೈಲ್‌ನಲ್ಲಿಯೇ ಹೆಚ್ಚು ಸಮಯ ಕಳೆಯುವುದರಿಂದ ಅದು ಅವರ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ, ಚಿಕ್ಕ ಪ್ರಾಯದಲ್ಲಿಯೇ ಒಬೆಸಿಟಿ ಸಮಸ್ಯೆ ಕಾಡುತ್ತಿದೆ.
- ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ: ಮಕ್ಕಳು ತುಂಬಾ ಸಮಯ ಮೊಬೈಲ್‌ನಲ್ಲಿ ಕಳೆಯುವುದರಿಂದ ಅದು ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ, ಮಕ್ಕಳು ಯಾರ ಜೊತೆ ಬೆರೆಯುತ್ತಿಲ್ಲ, ಹೆಚ್ಚು ಹೊತ್ತು ಮೊಬೈಲ್‌ನಲ್ಲಿಯೇ ಕಳೆಯುವುದು ಇವೆಲ್ಲಾ ಅವರ ಮೇಲೆ ತುಂಬಾನೇ ನೆಗೆಟಿವ್ ಪರಿಣಾಮ ಬೀರುತ್ತಿದೆ.
ಸೋಷಿಯಲ್ ಮೀಡಿಯಾ ಮಕ್ಕಳಿಗೆ ಒಳಿತನ್ನೂ ಮಾಡಿದೆ
- ಕೆಲ ಮಕ್ಕಳು ಸೋಷಿಯಲ್ ಮೀಡಿಯಾ ತುಂಬಾ ಉತ್ತಮವಾಗಿ ಬಳಸಿಕೊಳ್ಳುತ್ತಿದ್ದಾರೆ, ತಮ್ಮಲ್ಲಿರುವ ಕೌಶಲ್ಯ ಪ್ರದರ್ಶನ ಮಾಡಲು ಒಂದು ವೇದಿಕೆಯಾಗಿದೆ, ಈ ಮೂಲಕ ಅವರು ಬಹುತೇಕ ಜನರನ್ನು ತಲುಪಿ ಜೀವನದಲ್ಲಿ ಎತ್ತರಕ್ಕೆ ಬೆಳೆಯಲು ಸಾಧ್ಯವಾಗುತ್ತಿದೆ.
- ಆರ್ಥಿಕ ಸಹಾಯವಾಗುತ್ತಿದೆ: ತುಂಬಾ ಮಕ್ಕಳು ಸೋಷಿಯಲ್ ಮೀಡಿಯಾ ಬಳಸಿ ಹಣ ಗಳಿಸು ಆರ್ಥಿಕವಾಗಿ ತಮ್ಮ ಮನೆಯವರಿಗೆ ನೆರವಾಗುತ್ತಿದ್ದಾರೆ
- ಮಕ್ಕಳಲ್ಲಿನ ಒಂಟಿತನ ಹೋಗಲಾಡಿಸುವುದು: ಸೋಷಿಯಲ್ ಮೀಡಿಯಾ ಬಳಕೆ ಮಾಡುವ ಮಕ್ಕಳು ಸೋಷಿಯಲ್ ಮೀಡಿಯಾ ಫ್ರೆಂಡ್ಸ್ ಸರ್ಕಲ್ ಬೆಳೆಸಿಕೊಳ್ಳುತ್ತಾರೆ, ತಮ್ಮ ಆಸಕ್ತಿಯ ವಿಷಯಗಳನ್ನು ಕಲಿಯುತ್ತಾರೆ, ಹೀಗಾಗಿ ಅವರಲ್ಲಿ ಒಂಟಿತನ ದೂರಾಗುವುದು.
ಹೀಗೆ ಈ ಸೋಷಿಯಲ್ ಮೀಡಿಯಾ ಎಂಬುವುದು ಮಕ್ಕಳಿಗೆ ಹಾನಿಯೂ ಹೌದು, ಒಳ್ಳೆಯದೂ ಮಾಡುತ್ತಿದೆ,ಇದನ್ನು ಹೇಗೆ ಬಳಕೆ ಮಾಡಬೇಕೆಂಬುವುದು ಬಳಸುವವರ ಕೈಯಲ್ಲಿದೆ ಅಷ್ಟೇ...



Click it and Unblock the Notifications
