Latest Updates
-
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ -
ರಣವೀರ್-ದೀಪಿಕಾ ದಂಪತಿಗೆ ಹೆಣ್ಣು ಮಗು: ಹೊಸ ಪೋಷಕರಿಗೆ ಸಂಬಂಧಿಕರು ನೀಡಬೇಕಾದ ಗೌರವಯುತ ಬೆಂಬಲವೇನು? -
ಬೆಂಗಳೂರಿನಲ್ಲಿ ಇಂದು 6 ಗಂಟೆಗಳ ಕಾಲ ನೀರಿನ ವ್ಯತ್ಯಯ: ಈ ಪ್ರದೇಶಗಳ ನಿವಾಸಿಗಳು ಎಚ್ಚರ! -
ಗಣೇಶ ಹಬ್ಬದ ಸಂಭ್ರಮ: ಮಧುಮೇಹಿಗಳಿಗೂ ಸುರಕ್ಷಿತವಾದ ಆರೋಗ್ಯಕರ 'ಉಕಡಿಚೆ ಮೋದಕ' ತಯಾರಿಸುವುದು ಹೇಗೆ? -
ಸೆಪ್ಟೆಂಬರ್ ಇಕ್ವಿನಾಕ್ಸ್: ನಿಮ್ಮ ಕ್ಯಾಮೆರಾದಲ್ಲಿ ಸೂರ್ಯೋದಯ-ಸೂರ್ಯಾಸ್ತದ ಅದ್ಭುತ ದೃಶ್ಯ ಸೆರೆಹಿಡಿಯಿರಿ! -
ವಿಶ್ವ ಕಾರ್-ಫ್ರೀ ಡೇ: ಟ್ರಾಫಿಕ್ ಬಿಟ್ಟು 20 ನಿಮಿಷದ ಈ ಸಿಂಪಲ್ ರೂಟೀನ್ ಫಾಲೋ ಮಾಡಿ!
ಮದುವೆಯಾದ ಕೆಲವೇ ತಿಂಗಳಿನಲ್ಲಿ ತಾಯಿಯಾದ ನಟಿಮಣಿಗಳಿವರು!
ಸೆಲೆಬ್ರಿಟಿಗಳು ಅಂದ್ರೆ ಹಾಗೆನೇ ಪ್ರತಿ ಸಾರಿ ಅವರು ಒಂದಲ್ಲ ಒಂದು ವಿಚಾರಕ್ಕೆ ಸುದ್ಧಿಯಲ್ಲಿರ್ತಾರೆ. ಸಾಮಾನ್ಯ ಜನರಿಗೆ ತಮ್ಮ ಫೇವರೇಟ್ ಸೆಲೆಬ್ರಿಟಿಗಳ ಜೀವನದಲ್ಲಿ ಏನಾಗುತ್ತಿದೆ ಅನ್ನೋದನ್ನು ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಹೀಗಾಗಿ ಸೆಲೆಬ್ರಿಟಿಗಳು ಮದುವೆಯಾದ್ರು, ಪ್ರೆಗ್ನೆಂಟ್ ಆದ್ರೂ, ಮಕ್ಕಳಾದ್ರು ಕೂಡ ದೊಡ್ಡದಾಗಿ ಸುದ್ದಿಯಾಗುತ್ತೆ.
ಅದ್ರಲ್ಲೂ ಮದುವೆಯಾದ ತಕ್ಷಣ ಮಕ್ಕಳು ಮಾಡಿಕೊಂಡ್ರೆ ಸುದ್ದಿಯಾಗದೇ ಇರುತ್ತಾ? ಈ ರೀತಿ ಕೆಲ ಸೆಲೆಬ್ರಿಟಿಗಳು ಮದುವೆಯಾದ ಕೆಲವೇ ತಿಂಗಳಲ್ಲಿ ತಾಯಿಯಾಗುತ್ತಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಅಷ್ಟಕ್ಕು ಯಾವೆಲ್ಲಾ ಸೆಲೆಬ್ರಿಟಗಳು ಮದುಯಾದ ತಕ್ಷಣ ಮಕ್ಕಳು ಮಾಡಿಕೊಂಡಿದ್ದಾರೆ ಅನ್ನೋದನ್ನು ತಿಳಿಯೋಣ.

ಅಲಿಯಾ ಭಟ್
ನಟಿ ಆಲಿಯಾ ಭಟ್ ಅವರು ನಟ ರಣಬೀರ್ ಕಪೂರ್ ಅವರನ್ನು ಮದುವೆಯಾಗಿ ಒಂದೇ ತಿಂಗಳೊಳಗೆ ತಾವು ಗರ್ಭಿಣಿಯಾಗಿರೋ ವಿಚಾರವನ್ನು ಹಂಚಿಕೊಂಡಿದ್ರು. ಸದ್ಯ ಹೆಣ್ಣು ಮಗುವಿಗೆ ಪೋಷಕರಾಗಿದ್ದಾರೆ. ಈ ಜೋಡಿ ಬರೋಬ್ಬರಿ ಐದು ವರ್ಷಗಳ ತನಕ ಡೇಟಿಂಗ್ ಮಾಡಿ ನಂತರ ಮದುವೆಯಾಗಿದ್ರು. ಆಶ್ಚರ್ಯಕರ ವಿಚಾರ ಅಂದ್ರೆ ಮಗು ಆದ ಒಂದೇ ವರ್ಷದೊಳಗಡೆ ಅಲಿಯಾ ತೂಕ ಇಳಿಸಿಕೊಂಡು ತಮ್ಮ ಮೊದಲಿನ ಆಕಾರಕ್ಕೆ ಮರಳಿದ್ದಾರೆ.
ಆಲಿಯಾ ಕೈಯಲ್ಲಿ ಈಗಾಗಲೇ ಸಾಕಷ್ಟು ಸಿನಿಮಾಗಳಿದ್ದು, ಆ ಸಿನಿಮಾಗಳನ್ನು ಪೂರ್ಣಗೊಳಿಸೋ ಜವಾಬ್ದಾರಿ ಇರೋದ್ರಿಂದ ಆಲಿಯಾ ಫಿಟ್ ನೆಸ್ ಗೂ ಹೆಚ್ಚಿನ ಒತ್ತು ಕೊಟ್ಟು ವರ್ಕ್ ಔಟ್ ಗೆ ಹೆಚ್ಚಿನ ಸಮಯ ಮೀಸಲಿಡುತ್ತಿದ್ದಾರಂತೆ.
ನೇಹಾ ಧೂಪಿಯಾ
ನೇಹಾ ಧೂಪಿಯಾ ಮದುವೆಯಾಗುವ ಮೊದಲೇ 3 ತಿಂಗಳ ಗರ್ಭಿಣಿಯಾಗಿದ್ರು. ಹೀಗಾಗಿ ಆತುರ ಆತುರವಾಗಿ ವೈಯಕ್ತಿಕ ಕಾರ್ಯಕ್ರಮವೊಂದಿರಲ್ಲಿ ನೇಹಾ ಹಾಗೂ ನಟ ಅಂಗದ್ ಭೇಟಿ ವಿವಾಹ ನೆರವೇರಿತ್ತು. ಇದೀಗ ಈ ಜೋಡಿ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಇನ್ನೂ ನೇಹಾ ಕೂಡ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ತಾಯಿಯಾಗಿದ್ದಾಗ ಕೂಡ ಸಿನಿಮಾಕ್ಕಾಗಿ ಕೆಲಸ ಮಾಡ್ತಿದ್ದರು. ಇನ್ನೂ ನೇಹ ತಮ್ಮ ಫಿಟ್ ನೆಸ್ ವಿಚಾರಕ್ಕೂ ಕೂಡ ಆಗಾಗ್ಗೆ ಸುದ್ದಿಯಲ್ಲಿರ್ತಾರೆ.
ಕೊನ್ಕೋನಾ ಸೇನ್ ಶರ್ಮಾ
ಬಾಲಿವುಡ್ ನಟಿ ಕೊನ್ಕೋನಾ ಸೇನ್ ಶರ್ಮಾ ಆಕೆಯ ಕೋ ಆಕ್ಟರ್ ರಣವೀರ್ ಶೋರೆ ಅವರನ್ನು 2007 ರಿಂದ ಡೇಟ್ ಮಾಡ್ತಿದ್ರು. 2010 ರಲ್ಲಿ ಈ ಜೋಡಿ ವಿವಾಹವಾಗಿದ್ರು. ಇನ್ನೂ 2011 ರಲ್ಲಿ ಆಕೆ ಪ್ರೆಗ್ನೆನ್ಸಿ ಬಗ್ಗೆ ಅನೌನ್ಸ್ ಕೂಡ ಮಾಡಿದ್ರು. ಇನ್ನೂ ಮಗುವಾದ ನಂತರ ಮತ್ತೆ ಆಕ್ಟಿಂಗ್ ಗೆ ಮರಳಿರುವ ನಟಿ ಈಗಲೂ ಕೂಡ ತಮ್ಮ ಫಿಟ್ ನೆಸ್ ಅನ್ನು ಕಾಯ್ದುಕೊಂಡಿದ್ದಾರೆ. ಸದ್ಯ ಕೆಲವು ಸಿನಿಮಾ ಹಾಗೂ ವೆಬ್ ಸಿರೀಸ್ ಗಳಲ್ಲಿ ಕೊನ್ಕೋನಾ ಸೇನ್ ಶರ್ಮಾ ಬ್ಯುಸಿಯಾಗಿದ್ದಾರೆ.
ನತಾಸ ಸ್ಟಾಂಕೋವಿಕ್
ನತಾಸ ಸ್ಟಾಂಕೋವಿಕ್ ಪ್ರಸಿದ್ಧ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಪತ್ನಿ. ಇವರು ತಮ್ಮ ಸಂಬಂಧವನ್ನು ಆಫಿಶಿಯಲ್ ಆಗಿ ಘೋಷಿಸಿದ ಕೆಲವೇ ದಿನಗಳಲ್ಲಿ ಪ್ರೆಗ್ನೆನ್ಸಿ ಬಗ್ಗೆ ಹೇಳಿಕೊಂಡಿದ್ರು. ಆ ನಂತರ ಅವರಿಗೆ ಮದುವೆಯಾಗಿದೆ ಅನ್ನೋ ಫೋಟೋಗಳನ್ನು ಕೂಡ ಹಂಚಿಕೊಂಡಿದ್ರು. ಆದರೆ ಅದ್ಧೂರಿಯಾಗಿ ಮದುವೆ ಕಾರ್ಯಕ್ರಮ ಇಟ್ಟುಕೊಂಡಿರ್ಲಿಲ್ಲ.
ಆದರೆ ಕೆಲವು ತಿಂಗಳುಗಳ ಹಿಂದೆ ಈ ಜೋಡಿ ಅದ್ಧೂರಿಯಾಗಿ ವಿವಾಹವಾಗಿದ್ರು. ಈ ವಿವಾಹ ಕಾರ್ಯಕ್ರಮಕ್ಕೆ ಫೇಮಸ್ ಸೆಲೆಬ್ರಿಟಿಗಳನ್ನು ಕೂಡ ಆಹ್ವಾನಿಸಲಾಗಿತ್ತು. ಇನ್ನೂ ಈ ಜೋಡಿಗೆ ಅಗಸ್ತ್ಯಾ ಎನ್ನುವ ಮುದ್ದಾಗ ಮಗನಿದ್ದು, ಸೋಶಿಯಲ್ ಮಿಡಿಯಾದಲ್ಲಿ ಆಗಸ್ತಾ ಜೊತೆಗೆ ಕಳೆದ ಸುಂದರ ಕ್ಷಣಗಳನ್ನು ಶೇರ್ ಮಾಡುತ್ತಾ ಇರುತ್ತಾರೆ. ನತಾಸ ಈ ಮೊದಲು ಹಿಂದಿ ರಿಯಾಲಿಟಿ ಶೋವೊಂದರಲ್ಲಿ ಕಾಣಿಸಿಕೊಂಡಿದ್ರು. ಇನ್ನೂ ತಾಯಿಯಾದ ಮೇಲೆ ಮತ್ತೆ ಫಿಟ್ ಆಗಿರುವ ನತಾಸ ಜಮ್ ಫೋಟೋಗಳನ್ನು ಪೋಸ್ಟ್ ಮಾಡುತ್ತಾ ಇರುತ್ತಾರೆ.
ದಿಯಾ ಮಿರ್ಜಾ
ನಟಿ ದಿಯಾ ಮಿರ್ಜಾ ಕೂಡ ವೈಭವ್ ರೇಖಿಯನ್ನು ಮದುವೆಯಾದ ಒಂದೇ ತಿಂಗಳಿನೊಳಗಡೆ ತಮ್ಮ ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ್ರು. ಇನ್ನೂ ಇವರ ಮದುವೆ ಒಂದು ಖಾಸಗಿ ಕಾರ್ಯಕ್ರಮದ ರೀತಿ ನಡೆದಿತ್ತು. ಕೆಲವೇ ಕೆಲವು ಜನರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು.
39 ವರ್ಷದ ನಟಿ ದಿಯಾ ಮಿರ್ಜಾ ತಮ್ಮ ಬೇಬಿ ಬಂಪ್ ಫೋಟೋವನ್ನು ಶೇರ್ ಮಾಡುತ್ತಿದ್ದಂತೆ ಈ ಫೋಟೋ ಸೋಶಿಯಲ್ ಮಿಡಿಯಾದಲ್ಲಿ ಸಾಕಷ್ಟು ವೈರಲ್ ಕೂಡ ಆಗಿತ್ತು. ಇನ್ನೂ ಇವರು ಈ ಮೊದಲು ಸಿನಿಮಾ ನಿರ್ಮಾಪಕ ಸಹಿಲ್ ಸಂಘ ಅವರನ್ನು ಮದುವೆಯಾಗಿ 2019 ರಲ್ಲಿ ಬೇರೆ ಬೇರೆ ಆಗಿದ್ರು.
ನೇಹಾ ಕಕ್ಕರ್
ಬಡತನದಲ್ಲೇ ಹುಟ್ಟಿ ಬೆಳೆದಿದ್ದ ನೇಹಾ ಕಕ್ಕರ್ ತಮ್ಮ ಹಾಡಿನಿಂದಲೇ ಭಾರತದಾದ್ಯಂತ ಖ್ಯಾತಿಯನ್ನು ಗಳಿಸ್ತಾರೆ. ಹಾಗೂ ಸೆಲೆಬ್ರಿಟಿಯಾಗಿ ಮೆರೆಯುತ್ತಾರೆ. ಹಾಡುಗಾರ ರೋಹನ್ ಪ್ರೀತ್ ಸಿಂಗ್ ಅವರನ್ನು ಮದುವೆಯಾದ ನೇಹಾ ಕಕ್ಕರ್ ಮದುವೆಯಾದ ಏಳು ವಾರಗಳಲ್ಲಿ ಪ್ರೆಗ್ನೆನ್ಸಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ರು.
ಈ ನಟಿಯರು ಮದುವೆಗೂ ಮೊದಲೇ ಗರ್ಭಿಣಿಯರಾಗಿದ್ರು ಅನ್ನೋ ಊಹಾಪೋಗಳು ಕೂಡ ಇದೆ. ಇದೇ ಕಾರಣಕ್ಕೆ ಆತುರ ಆತುರವಾಗಿ ವಿವಾಹ ಕಾರ್ಯಕ್ರಮ ಏರ್ಪಾಡು ಮಾಡಲಾಗಿತ್ತು ಅಂತಾನೇ ಹೇಳಲಾಗುತ್ತೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.



Click it and Unblock the Notifications


